Viral Video: ಉಪ್ಪಿನ ಒಂದು ಕಣದಷ್ಟು ಸಣ್ಣ ಕ್ಯಾಮೆರಾ ಬಂದಿದೆ, ಇದು ಸರಿಯಾಗಿ ಉಪಯೋಗವಾದರಷ್ಟೇ ಸಾಕು!

Viral Viedo: ಉಪ್ಪಿನ ಕಾಳಿನ ಗಾತ್ರದ ಕ್ಯಾಮರಾ ವಸ್ತುಗಳನ್ನು ಬೆರಗುಗೊಳಿಸುವ ವಿವರ ಮತ್ತು ಪೂರ್ಣ ಬಣ್ಣದಲ್ಲಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಸಂಶೋಧಕರ ಪ್ರಕಾರ, ಇದು ಸಾಂಪ್ರದಾಯಿಕ ಸಂಯುಕ್ತ ಕ್ಯಾಮೆರಾ ಲೆನ್ಸ್‌ಗೆ ಸಮನಾಗಿರುತ್ತದೆ.

ಉಪ್ಪಿನ ಕಣದ ಕ್ಯಾಮಾರ

ಉಪ್ಪಿನ ಕಣದ ಕ್ಯಾಮಾರ

  • Share this:
ನೀವು ಪೆನ್‌ ಕ್ಯಾಮರಾ (Camera) ಬಗ್ಗೆ ನೋಡಿರುತ್ತೀರಾ.. ಅಥವಾ ಕೇಳಿರುತ್ತೀರಾ.. ಸಾಮಾನ್ಯ ಪೆನ್‌ನಂತೆ (Pen)ಅದು ಕಂಡರೂ ಅದು ಕೇವಲ ಸಾಮಾನ್ಯವಾದ ಪೆನ್‌ ಅಲ್ಲ. ಅದು ಹಲವರನ್ನು ಯಾಮಾರಿಸುತ್ತದೆ. ಸ್ಟಿಂಗ್‌ ಆಪರೇಷನ್‌ಗಳಲ್ಲಿ(Sting operations) ಅದನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಆದರೆ, ಈ ಕ್ಯಾಮರಾ ಹೆಚ್ಚು ಸ್ಪಷ್ಟವಾಗಿರುವುದಿಲ್ಲ. ಅದೇ ರೀತಿ, ಕ್ಯಾಮರಾವನ್ನು ನಿಮ್ಮ ಅಂಗೈಯ (Palm)ಮಧ್ಯಭಾಗದಲ್ಲಿ ಇರಿಸಿದರೂ ಅದನ್ನು ಹುಡುಕಲು ನಿಮಗೆ ಕಷ್ಟವಾಗುವಷ್ಟು ಚಿಕ್ಕದಾಗಿದೆ (small enough)ಎಂದು ಕಲ್ಪಿಸಿಕೊಳ್ಳಿ. ಆದರೂ, ನೀವು ಅದನ್ನು ನಿಮ್ಮ ಬೆರಳಿನ(Finger) ಮೇಲೆ ಇರಿಸಿದರೆ ನೀವು ಅದನ್ನು ಗುರುತಿಸಬಹುದು.

ಉಪ್ಪಿನ ಕಣದ ಗಾತ್ರ
ನಾವು ಎಷ್ಟು ಸಣ್ಣ ಕ್ಯಾಮರಾ ಬಗ್ಗೆ ಮಾತನಾಡುತ್ತಿದ್ದೇವೆ ಅಂತೀರಾ..? ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯ ಮತ್ತು ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಒಂದು ರೀತಿಯ ಕ್ಯಾಮೆರಾವನ್ನು ಆವಿಸ್ಕರಿಸಿದ್ದು, ಇದು ಕೇವಲ ಒಂದು ಉಪ್ಪಿನ ಕಣದ ಗಾತ್ರದಲ್ಲಿದೆ. ಹೌದು, ಕ್ಯಾಮೆರಾ ಉಪ್ಪಿನ ಕಣಕ್ಕಿಂತ ದೊಡ್ಡದಿಲ್ಲ. ಆದರೆ ಇದು ಹತ್ತಿರದಲ್ಲಿರುವ ವಸ್ತುಗಳನ್ನು ಹೆಚ್ಚು ವಿವರವಾಗಿ ಸೆರೆಹಿಡಿಯಬಹುದು.

ಇದನ್ನೂ ಓದಿ: Vlog ಮಾಡ್ತೀರಾ? ಅದಕ್ಕೆಂದೇ ಸೋನಿ ಪರಿಚಯಿಸಿದೆ ZV-E10 ಕ್ಯಾಮೆರಾ

ಗಾತ್ರದಲ್ಲಿ ಆಕರ್ಷಕ
ಈ ಹಿಂದೆ ಬಿಡುಗಡೆಯಾದ ಮೈಕ್ರೋ-ಕ್ಯಾಮೆರಾಗಳು ಗಾತ್ರದಲ್ಲಿ ಆಕರ್ಷಕವಾಗಿವೆ. ಆದರೆ ಫೋಟೋ ಗುಣಮಟ್ಟದ ವಿಚಾರದಲ್ಲಿ ಅವು ಆಕರ್ಷಕವಾಗಿರಲಿಲ್ಲ ಎಂದು ತಜ್ಞರು ಹೇಳಿದ್ದಾರೆ. ಅವರಲ್ಲಿ ಅನೇಕರು ಹತ್ತಿರ ಇರುವ ವಸ್ತುಗಳಲ್ಲೂ ಅಸ್ಪಷ್ಟ ಚಿತ್ರಗಳನ್ನು ತೆಗೆದಿದ್ದಾರೆ. ಜಆದರೆ ಮೇಲೆ ತಿಳಿಸಿದ ಎರಡು ವಿಶ್ವವಿದ್ಯಾಲಯಗಳ ಸಂಶೋಧಕರು ಅಭಿವೃದ್ಧಿಪಡಿಸಿದ ವಿಷಯದಲ್ಲಿ ಹಾಗಲ್ಲ. ಉಪ್ಪಿನ ಕಾಳಿನ ಗಾತ್ರದ ಕ್ಯಾಮರಾ ವಸ್ತುಗಳನ್ನು ಬೆರಗುಗೊಳಿಸುವ ವಿವರ ಮತ್ತು ಪೂರ್ಣ ಬಣ್ಣದಲ್ಲಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಸಂಶೋಧಕರ ಪ್ರಕಾರ, ಇದು ಸಾಂಪ್ರದಾಯಿಕ ಸಂಯುಕ್ತ ಕ್ಯಾಮೆರಾ ಲೆನ್ಸ್‌ಗೆ ಸಮನಾಗಿರುತ್ತದೆ.

ಈ ಕ್ಯಾಮರಾದ ಉಪಯೋಗ ಅಥವಾ ಉದ್ದೇಶವೇನು..?
ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ಪತ್ರಿಕಾ ಪ್ರಕಟಣೆಯು ವೈದ್ಯಕೀಯ ಕ್ಷೇತ್ರದಲ್ಲಿ ಮೈಕ್ರೋ-ಕ್ಯಾಮೆರಾ ಬಳಸಲು ಅವರು ಆಶಿಸುತ್ತಿದ್ದಾರೆ ಎಂದು ಹೇಳಿದರು.

ಈ ವಿಡಿಯೋ ನೋಡಿ:

ಮೆಟಾಸರ್ಫೇಸ್ ತಂತ್ರಜ್ಞಾನ
ಅಧ್ಯಯನದ ಸಂಶೋಧನೆಗಳು ಈಗ ನೇಚರ್ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ ಪ್ರಕಟವಾಗಿವೆ. ಇದು ಕ್ಯಾಮೆರಾದ ರಚನೆಯಲ್ಲಿ ಒಳಗೊಂಡಿರುವ ಹಂತಗಳು ಮತ್ತು ಪ್ರಕ್ರಿಯೆಗಳನ್ನು ವಿವರಿಸುತ್ತದೆ. ಸಾಮಾನ್ಯ ಕ್ಯಾಮೆರಾ, 'ಬೆಳಕಿನ ಕಿರಣಗಳನ್ನು ಫೋಕಸ್ ಆಗಿ ಬಗ್ಗಿಸಲು ಬಾಗಿದ ಗಾಜು ಅಥವಾ ಪ್ಲಾಸ್ಟಿಕ್ ಮಸೂರಗಳ ಸರಣಿಯನ್ನು' ಬಳಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಮೈಕ್ರೋ-ಕ್ಯಾಮೆರಾ 'ಮೆಟಾಸರ್ಫೇಸ್' ಎಂಬ ತಂತ್ರಜ್ಞಾನವನ್ನು ಅವಲಂಬಿಸಿದೆ.

1.6 ಮಿಲಿಯನ್ ಸಿಲಿಂಡರ್‌
ಮೆಟಾಸರ್ಫೇಸ್ ಕೇವಲ ಅರ್ಧ ಮಿಲಿಮೀಟರ್ ಅಗಲವಿದೆ ಮತ್ತು 1.6 ಮಿಲಿಯನ್ ಸಿಲಿಂಡರ್‌ ಆಕಾರದ ಪೋಸ್ಟ್‌ಗಳನ್ನು ಹೊಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.
ನಿಮಗೆ ಬೇಕಾದುದನ್ನು ಮಾಡಲು ಈ ಚಿಕ್ಕ ನ್ಯಾನೋ-ರಚನೆಗಳನ್ನು ವಿನ್ಯಾಸಗೊಳಿಸಲು ಮತ್ತು ಕಾನ್ಫಿಗರ್ ಮಾಡಲು ಇದು ಒಂದು ಸವಾಲಾಗಿದೆ. "RGB ಚಿತ್ರಗಳ ದೊಡ್ಡ ಕ್ಷೇತ್ರವನ್ನು ಸೆರೆಹಿಡಿಯುವ ಈ ನಿರ್ದಿಷ್ಟ ಕಾರ್ಯಕ್ಕಾಗಿ, ಪೋಸ್ಟ್-ಪ್ರೊಸೆಸಿಂಗ್ ಅಲ್ಗಾರಿದಮ್‌ಗಳೊಂದಿಗೆ ಲಕ್ಷಾಂತರ ನ್ಯಾನೋ-ರಚನೆಗಳನ್ನು ಸಹ-ವಿನ್ಯಾಸ ಮಾಡುವುದು ಹೇಗೆ ಎಂಬುದು ಹಿಂದೆ ಅಸ್ಪಷ್ಟವಾಗಿತ್ತು" ಎಂದು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಪಿಎಚ್‌ಡಿ ವಿದ್ಯಾರ್ಥಿ ಎಥಾನ್ ತ್ಸೆಂಗ್ ಹೇಳಿದರು.

ಕ್ಯಾಮಾರ ಇತಿಹಾಸ
ಚಿತ್ರಗಳನ್ನು ದಾಖಲಿಸುವ, ಶೇಖರಿಸುವ ಮತ್ತು ಇನ್ನೊಂದು ಕಡೆಗೆ ವರ್ಗಾಯಿಸಲು ಸಹಾಯ ಮಾಡುವ ಒಂದು ಆಪ್ಟಿಕಲ್ ಸಾಧನ ಬಿಂಬಗ್ರಾಹಿ ಅರ್ಥಾತ್ ಕ್ಯಾಮರ. ಈ ಚಿತ್ರಗಳು ಛಾಯಾಚಿತ್ರಗಳು, ಚಲಿಸುವ ಚಿತ್ರಗಳು ಅಥವಾ ವಿಡಿಯೋಗಳಾಗಿರಬಹುದು. ಕ್ಯಾಮರ ಪದ ಡಾರ್ಕ್ ಚೇಂಬರ್ ಎಂಬ ಲ್ಯಾಟಿನ್ ಪದದಿಂದ ವ್ಯುತ್ಪತ್ತಿಯಾಗಿದೆ. ಕ್ಯಾಮರದ ಕಾರ್ಯನಿರ್ವಹಣೆ ಬಹುಮಟ್ಟಿಗೆ ಮಾನವನ ಕಣ್ಣಿನ ಕೆಲಸವನ್ನು ಹೋಲುತ್ತದೆ. ಕ್ಯಾಮರದ ಇತಿಹಾಸ ಸೂಜಿರಂಧ್ರ ಕ್ಯಾಮರದಿಂದ ಪ್ರಾರಂಭವಾಗುತ್ತದೆ.


ಇದನ್ನೂ ಓದಿ: Viral Video: ಬೆಂಕಿ ಬಿದ್ದರೂ, ಊಟ ಬಿಟ್ಟು ಕದಲಲಿಲ್ಲ ಈ ಅತಿಥಿಗಳು..! ಇಲ್ಲಿದೆ ವೈರಲ್ ವಿಡಿಯೋ

ಇದನ್ನು ಕ್ರಿ.ಶ.೫ನೆಯ ಶತಮಾನದಲ್ಲಿ ಚೈನಾ ದೇಶದಲ್ಲಿ ಆವಿಷ್ಕರಿಸಲಾಯಿತು. ಇದರಲ್ಲಿ ಬೆಳಕು ಒಂದು ಕಪ್ಪು ಪೆಟ್ಟಿಗೆಯನ್ನು ಚಿಕ್ಕ ರಂಧ್ರದ ಮೂಲಕ ಪ್ರವೇಶಿಸುತ್ತದೆ. ಈ ಪೆಟ್ಟಿಗೆಯಲ್ಲಿ ರಂಧ್ರದ ಎದುರು ಭಾಗದ ಗೋಡೆಯಲ್ಲಿ ವಸ್ತು ಅಥವಾ ದೃಶ್ಯದ ತಲೆಕೆಳಗಾದ ಪ್ರತಿಬಿಂಬ ಮೂಡಿಬರುತ್ತದೆ. ನಾಲ್ಕನೆಯ ಶತಮಾನದಲ್ಲಿದ್ದ ಅರಿಸ್ಟಾಟಲ್ ಕೂಡ ಈ ವಿದ್ಯಮಾನವನ್ನು ವಿವರಿಸಿದ್ದಾನೆ.

Published by:vanithasanjevani vanithasanjevani
First published: