Microplastics | ವಯಸ್ಕರಿಗಿಂತ ಮಕ್ಕಳ ದೇಹದಲ್ಲೇ 15 ಪಟ್ಟು ಹೆಚ್ಚು ಮೈಕ್ರೋಪ್ಲಾಸ್ಟಿಕ್‌ ಇರುತ್ತದೆ; ಸಂಶೋಧನೆ

Microplastics Efffects: ಪ್ಲಾಸ್ಟಿಕ್ ವಸ್ತುಗಳನ್ನು ಒಡೆದಾಗಲೂ ಈ ಮೈಕ್ರೋ ಪ್ಲಾಸ್ಟಿಕ್‌ಗಳು ಸೃಷ್ಟಿಯಾಗಬಹುದು. ಸಿಂಥೆಟಿಕ್ ಬಟ್ಟೆಗಳನ್ನು ನಲ್ಲಿಯ ಕೆಳಗೆ ತೊಳೆಯುವಾಗಲೂ ಇದರ ರಚನೆಯಾಗಬಹುದು. ಇನ್ನು, ಬೊಂಬೆಗಳನ್ನು ಬಾಯಿಗೆ ಹಾಕುವ ಮೂಲಕ ಅಥವಾ ತಿನ್ನುವ ಬೊಂಬೆಗಳಂತಹ ವಸ್ತುಗಳಿಂದಲೂ ಮೈಕ್ರೋಪ್ಲಾಸ್ಟಿಕ್‌ಗಳು ಸೃಷ್ಟಿಯಾಗಬಹುದು.

ಪ್ರಾತಿನಿಧಿಕ ಚಿತ್ರ (Photo: Canva)

ಪ್ರಾತಿನಿಧಿಕ ಚಿತ್ರ (Photo: Canva)

  • Share this:
    ಮಕ್ಕಳು ತಮ್ಮ ದೇಹದಲ್ಲಿ ವಯಸ್ಕರಿಗಿಂತ 15 ಪಟ್ಟು ಹೆಚ್ಚು ಮೈಕ್ರೋಪ್ಲಾಸ್ಟಿಕ್‌ಗಳನ್ನು (Microplastics) ಹೊಂದಿರುತ್ತಾರೆ ಎಂಬ ಆತಂಕಕಾರಿ ಮಾಹಿತಿಯನ್ನು ಸಂಶೋಧನೆಯು ಕಂಡುಕೊಂಡಿದೆ. ಮೈಕ್ರೋಪ್ಲಾಸ್ಟಿಕ್‌ ಅಂದರೆ ಏನು ಅಂತೀರಾ..? ಮೈಕ್ರೋಪ್ಲಾಸ್ಟಿಕ್‌ಗಳು ಐದು ಮಿಮೀ ಗಾತ್ರಕ್ಕಿಂತ ಕಡಿಮೆ ಪ್ಲಾಸ್ಟಿಕ್‌ನ ಸಣ್ಣ ತುಂಡುಗಳಾಗಿವೆ. ಇದು ಎರಡು ಯುರೋ ನಾಣ್ಯದಷ್ಟು ದಪ್ಪದಾಗಿರುತ್ತದೆ. ಮೈಕ್ರೋಪ್ಲಾಸ್ಟಿಕ್‌ಗಳನ್ನು ಸೌಂದರ್ಯವರ್ಧಕ (Cosmetics), ಜೈವಿಕ ತಂತ್ರಜ್ಞಾನ, ತೊಳೆಯುವ ಉತ್ಪನ್ನ ಮತ್ತು ಔಷಧದ ಕ್ಯಾಪ್ಸೂಲ್‌ ಸೇರಿದಂತೆ ವಿವಿಧ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ.

    ಪ್ಲಾಸ್ಟಿಕ್ ವಸ್ತುಗಳನ್ನು ಒಡೆದಾಗಲೂ ಈ ಮೈಕ್ರೋ ಪ್ಲಾಸ್ಟಿಕ್‌ಗಳು ಸೃಷ್ಟಿಯಾಗಬಹುದು. ಸಿಂಥೆಟಿಕ್ ಬಟ್ಟೆಗಳನ್ನು ನಲ್ಲಿಯ ಕೆಳಗೆ ತೊಳೆಯುವಾಗಲೂ ಇದರ ರಚನೆಯಾಗಬಹುದು. ಇನ್ನು, ಬೊಂಬೆಗಳನ್ನು ಬಾಯಿಗೆ ಹಾಕುವ ಮೂಲಕ ಅಥವಾ ತಿನ್ನುವ ಬೊಂಬೆಗಳಂತಹ ವಸ್ತುಗಳಿಂದಲೂ ಮೈಕ್ರೋಪ್ಲಾಸ್ಟಿಕ್‌ಗಳು ಸೃಷ್ಟಿಯಾಗಬಹುದು.

    ಹೌದು, ಶಿಶುಗಳು (Babies) ಅಥವಾ ಮಕ್ಕಳು ಇಂತಹ ಹೆಚ್ಚಿನ ಮಟ್ಟದ ಮೈಕ್ರೋಪ್ಲಾಸ್ಟಿಕ್‌ಗಳನ್ನು (Microplastics) ಸೇವಿಸುತ್ತಿರುತ್ತಾರೆ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ. ಗೊಂಬೆಗಳ ಮೂಲಕ ಮತ್ತು ಮೈಕ್ರೋಪ್ಲಾಸ್ಟಿಕ್‌ಗಳನ್ನು ಹೊಂದಿರುವ ಕಾರ್ಪೆಟ್‌ಗಳ ಮೇಲೆ ತೆವಳುವ ಮೂಲಕವೂ ಮೈಕ್ರೋಪ್ಲಾಸ್ಟಿಕ್‌ಗಳು ಮಕ್ಕಳ ದೇಹ ಸೇರಿಕೊಳ್ಳಬಹುದು.

    ಈ ಸಂಶೋಧಕರ ತಂಡವು ಪಾಲಿಥಿಲೀನ್ ಟೆರೆಫ್ತಲೇಟ್ (PET) ಮತ್ತು ಪಾಲಿಕಾರ್ಬೊನೇಟ್ (PC) ಎಂಬ ಎರಡು ಸಾಮಾನ್ಯ ರೀತಿಯ ಮೈಕ್ರೋಪ್ಲಾಸ್ಟಿಕ್‌ಗಳನ್ನು ಹುಡುಕಿದೆ. PET ಮತ್ತು PCಯನ್ನು ದೇಹದಲ್ಲಿ ಪತ್ತೆಹಚ್ಚಲು, ಅವರು ಅಮೆರಿಕದ ನ್ಯೂಯಾರ್ಕ್‌ ರಾಜ್ಯದಲ್ಲಿ 10 ವಯಸ್ಕರು ಮತ್ತು 6 ಶಿಶುಗಳ ಮಲದ ಮಾದರಿಗಳನ್ನು ಸಂಗ್ರಹಿಸಿ ಮೈಕ್ರೋಪ್ಲಾಸ್ಟಿಕ್ ಮಟ್ಟವನ್ನು ಪರೀಕ್ಷಿಸಿದರು.

    ಈ ಎಲ್ಲಾ ಮಾದರಿಗಳಲ್ಲೂ ಅವರು ಕನಿಷ್ಠ ಒಂದು ವಿಧದ ಮೈಕ್ರೋಪ್ಲಾಸ್ಟಿಕ್ ಅನ್ನು ಕಂಡುಕೊಂಡರು. ಇದರರ್ಥ ವಯಸ್ಕರ ದೇಹದಲ್ಲೂ ಕೆಲವು ಮೈಕ್ರೋಪ್ಲಾಸ್ಟಿಕ್‌ಗಳು ಇರುವ ಸಾಧ್ಯತೆಯಿದೆ.

    ಆದರೆ ಮಗುವಿನ ಮಾದರಿಗಳನ್ನು ವಯಸ್ಕರಿಗೆ ಹೋಲಿಸಿದಾಗ, ಸಂಶೋಧಕರು ಕನಿಷ್ಠ 10 ಪಟ್ಟು ಹೆಚ್ಚು ಮೈಕ್ರೋಪ್ಲಾಸ್ಟಿಕ್‌ ಕಂಡುಕೊಂಡರು.

    ಮೈಕ್ರೋಪ್ಲಾಸ್ಟಿಕ್ಸ್‌ನಿಂದ ಸಮಸ್ಯೆ ಏನು..?

    ದುರದೃಷ್ಟವಶಾತ್, ಮೈಕ್ರೋಪ್ಲಾಸ್ಟಿಕ್‌ಗಳ ಪರಿಣಾಮದಿಂದ ಮಾನವನ ಆರೋಗ್ಯದ ಮೇಲೆ ನಿಖರವಾಗಿ ಯಾವ ರೀತಿ ಹಾನಿಯಾಗುತ್ತದೆ ಎಂಬ ಸ್ಪಷ್ಟ ಮಾಹಿತಿ ಇನ್ನೂ ಸಿಕ್ಕಿಲ್ಲ. ಆದರೆ, ಮೈಕ್ರೋಪ್ಲಾಸ್ಟಿಕ್‌ಗಳನ್ನು ಸೇವಿಸಿದಾಗ ಅವು ತುಂಬಾ ಹಾನಿಕಾರಕವಾಗಬಹುದು ಎಂಬ ಆತಂಕ ಹಲವರಲ್ಲಿ ಹೆಚ್ಚಾಗುತ್ತಿದೆ.

    ಮೈಕ್ರೋಪ್ಲಾಸ್ಟಿಕ್‌ಗಳು ಜೀರ್ಣಾಂಗವ್ಯೂಹದ ಮೂಲಕ ನಿರುಪದ್ರವವಾಗಿ ಹಾದುಹೋಗುತ್ತವೆ ಎಂದು ವಿಜ್ಞಾನಿಗಳು ನಂಬುತ್ತಿದ್ದರು. ಆದರೆ ಇತ್ತೀಚಿನ

    ಸಂಶೋಧನೆಯ ಪ್ರಕಾರ ಅದರ ಸಣ್ಣ ತುಣುಕುಗಳು ಸೆಲ್‌ ಮೆಂಬ್ರೇನ್‌ಗಳನ್ನು ದಾಟಲು ಮತ್ತು ನಮ್ಮ ರಕ್ತಪರಿಚಲನೆಯನ್ನು ಪ್ರವೇಶಿಸಲು ಸಮರ್ಥವಾಗಿವೆ ಎಂದು ಸೂಚಿಸುತ್ತದೆ

    ಲ್ಯಾಬ್‌ನಲ್ಲಿನ ಪ್ರಾಣಿಗಳಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳ ಮೇಲಿನ ಸಂಶೋಧನೆಯ ವೇಳೆ ಜೀವಕೋಶದ ಸಾವು, ಉರಿಯೂತ ಮತ್ತು ಚಯಾಪಚಯ ಅಸ್ವಸ್ಥತೆಗಳಿಗೆ ಕಾರಣವಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆ ಇದನ್ನು ಮಕ್ಕಳು ಹಾಗೂ ಮನುಷ್ಯರು ಸೇವಿಸಿದರೆ ಅವರ ದೇಹಕ್ಕೂ ಅಪಾರ ಹಾನಿಯಾಗಬಹುದು ಎಂಬ ಆತಂಕ ಇದೆ.



    ಕೈಗಾರಿಕೆಗಳಿಂದ ಮೈಕ್ರೋಪ್ಲಾಸ್ಟಿಕ್‌ಗಳನ್ನು ತೆಗೆಯುವುದು

    ಮೈಕ್ರೋಪ್ಲಾಸ್ಟಿಕ್‌ಗಳು ಪರಿಸರಕ್ಕೆ ಏಕೆ ಹಾನಿಕಾರಕ ಎಂದು ನಮಗೆ ಈಗಾಗಲೇ ತಿಳಿದಿದೆ.

    ಕಳೆದ ವರ್ಷ, ಡ್ಯೂಕ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಾಗರದಲ್ಲಿನ ಮೈಕ್ರೋಪ್ಲಾಸ್ಟಿಕ್‌ಗಳಿಂದ ರಾಸಾಯನಿಕಗಳಿಂದ ಮೀನುಗಳಿಗೆ ಹಾನಿಯಾಗುತ್ತಿದೆ ಎಂದು ತೋರಿಸಿದರು. ಸಿಂಥೆಟಿಕ್ ಬಟ್ಟೆಗಳನ್ನು ಒಗೆಯುವುದರಿಂದ ಒಡೆದ ಅನೇಕ ಮೈಕ್ರೋಪ್ಲಾಸ್ಟಿಕ್‌ಗಳು ಸಾಗರದಲ್ಲಿ ಸೇರುತ್ತವೆ.

    ಆ ಸಂಶೋಧನೆಗೂ ಮೊದಲು, ಮೈಕ್ರೋಪ್ಲಾಸ್ಟಿಕ್‌ಗಳನ್ನು ತಿನ್ನುವ ಮೀನುಗಳಿಗೆ ಹೆಚ್ಚಿನ ಹಾನಿಯಾಗುವುದಿಲ್ಲ. ಸುಲಭವಾಗಿ ಜೀರ್ಣಿಸುತ್ತವೆ ಎಂದು ಭಾವಿಸಲಾಗಿತ್ತು. ಆದರೆ ಡ್ಯೂಕ್ ವಿಶ್ವವಿದ್ಯಾಲಯದ ಸಂಶೋಧನೆಯು ಇದಕ್ಕೆ ವಿರುದ್ಧವಾಗಿದೆ.

    ಮೈಕ್ರೋಪ್ಲಾಸ್ಟಿಕ್‌ಗಳಿಗೆ ಲೇಪಿಸುವ ರಾಸಾಯನಿಕಗಳು ಮೀನಿನ ಸಂತಾನೋತ್ಪತ್ತಿ ಹಾರ್ಮೋನುಗಳ ಮೇಲೆ ಪರಿಣಾಮ ಬೀರುವುದನ್ನು ಅವರು ಕಂಡುಕೊಂಡರು.

    ಮೈಕ್ರೋಪ್ಲಾಸ್ಟಿಕ್ ಅನ್ನು ಒಮ್ಮೆಲೇ ತೊಡೆದುಹಾಕುವುದು

    ಸಮುದ್ರದ ಶೋಧಕಗಳಾಗಿರುವ ಮಸ್ಸೆಲ್ಸ್ ಎಂಬ ಪ್ರಾಣಿ ಸಾಗರಗಳಿಂದ ಮೈಕ್ರೋಪ್ಲಾಸ್ಟಿಕ್‌ಗಳನ್ನು ತೆಗೆದುಹಾಕುವ ಮೂಲಕ ಮನುಷ್ಯರ, ಪ್ರಾಣಿಗಳ ಹಾಗೂ ಪರಿಸರದ ರಕ್ಷಣೆಗೆ ಬರಬಹುದು. 300 ಮಸ್ಸೆಲ್‌ಗಳ ಗುಂಪು ಒಂದು ಗಂಟೆಗೆ 250,000 ಮೈಕ್ರೋಪ್ಲಾಸ್ಟಿಕ್ ತುಣುಕುಗಳನ್ನು ಫಿಲ್ಟರ್ ಮಾಡಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

    ಒಂದು ದಿನ ಮಸ್ಸೆಲ್ಸ್ ಅವುಗಳನ್ನು ಸುತ್ತುವರೆದಿರುವ ನೀರಿನಲ್ಲಿ ಶೇಕಡಾ 25 ರಷ್ಟು ಮೈಕ್ರೋಪ್ಲಾಸ್ಟಿಕ್‌ಗಳನ್ನು ಫಿಲ್ಟರ್ ಮಾಡಲು ಕಾರಣವಾಗಬಹುದು ಎಂದು ಕಂಪ್ಯೂಟರ್‌ ಮಾಡೆಲ್ಲಿಂಗ್ ಸೂಚಿಸುತ್ತದೆ. ಆದರೆ, ಎಲ್ಲದನ್ನೂ ಅದೇ ಮಾಡಬೇಕಾಗಿಲ್ಲ.

    ನಿಮ್ಮ ಮಗುವಿನ ಆಟಿಕೆಗಳನ್ನು ಸ್ವಚ್ಛಗೊಳಿಸಲು ಮಸ್ಸೆಲ್ ಅನ್ನು ಬಳಸಲು ಸಾಧ್ಯವೇ.. ಈ ಹಿನ್ನೆಲೆ ನೀವು ಬಳಸುವ ಸಿಂಥೆಟಿಕ್‌ ಫೈಬರ್‌ಗಳನ್ನು ಕಡಿಮೆ ಮಾಡಬೇಕಾಗುತ್ತದೆ.

    ಹಾಗಂತ, ಒಮ್ಮೆಲೇ ನಿಮ್ಮ ಹಳೆಯ ಸಿಂಥೆಟಿಕ್ ಕಸವನ್ನು ನೀವು ಡಸ್ಟ್‌ಬಿನ್‌ ಹಾಗೂ ಕಸದ ಗಾಡಿಗೆ ಹಾಕಬೇಡಿ.ಏಕೆಂದರೆ, ಆ ಕಸ ಕೇವಲ ಲ್ಯಾಂಡ್‌ಫಿಲ್‌ಗೆ ಹೋಗಿ ಸೇರುತ್ತದೆ. ಅದು ಕರಗುವುದೂ ಇಲ್ಲ.

    Read Also: Christmas Holiday: ಈ ಸಲ ಕ್ರಿಸ್​ಮಸ್ ರಜೆಗೆ ಎಲ್ಲಿಗೆ ಟ್ರಿಪ್? ಎಲ್ರೂ ಆಗ್ಲೇ ಬುಕ್ ಮಾಡ್ತಿದಾರೆ ನೋಡಿ

    ನಿಮ್ಮ ಸಿಂಥೆಟಿಕ್ ಬಟ್ಟೆಗಳಿಂದ ಹೊರಬರುವ ಮೈಕ್ರೋಪ್ಲಾಸ್ಟಿಕ್‌ಗಳನ್ನು ಹಿಡಿಯುವಂತಹ ಫಿಲ್ಟರ್‌ಗಳನ್ನು ನೀವು ಖರೀದಿಸಬಹುದು. ಅಥವಾ ಪರ್ಯಾಯವಾಗಿ ನಿಮ್ಮ ತೊಳೆಯುವ ಬಟ್ಟೆಗಳು ಹೆಚ್ಚಾದಾಗ ವಾಷಿಂಗ್ ಮಷಿನ್‌ಗೆ ಹಾಕಬಹುದು. ಏಕೆಂದರೆ, ವಾಷಿಂಗ್ ಮಷಿನ್‌ ಲೋಡ್‌ ಪೂರ್ತಿಯಾದರೆ, ಅದರಿಂದ ಘರ್ಷಣೆ (ಫ್ರಿಕ್ಷನ್‌) ಕಡಿಮೆ ಮಾಡುತ್ತದೆ. ಇದರಿಂದಾಗಿ ಕಡಿಮೆ ಫೈಬರ್‌ಗಳು ಚರಂಡಿಗೆ ಹೋಗುತ್ತವೆ.
    Published by:Harshith AS
    First published: