HOME » NEWS » Trend » RESCUERS IN KERALA SAVE ELEPHANT FROM WELL AFTER 12 HOUR STRUGGLE HG

Video Viral: ಜೆಸಿಬಿ ಮೂಲಕ 50 ಅಡಿ ಆಳದ ಬಾವಿಗೆ ಬಿದ್ದ ಕಾಡಾನೆಯ ರಕ್ಷಣೆ!

ಬೆಳಗ್ಗಿನ ಜಾವ ಕಾಡಾಣೆ ಬಾವಿಗೆ ಬಿದ್ದಿರುವುದು ಗೊತ್ತಾಗಿದೆ. ಈ ವಿಚಾರ ತಿಳಿದ ಅರಣ್ಯ ಅಧಿಕಾರಿ ಮತ್ತು ಊರಿನವರ ಸಹಾಯ ಪಡೆಯುವ ಮೂಲದ ರಾತ್ರಿ 9 ಗಂಟೆಯವರೆಗೆ ರಕ್ಷಣೆ ಕಾರ್ಯಚರಣೆ ನಡೆಸಿ ಆನೆಯನ್ನು ಕಾಡಿಗೆ ಕಳುಹಿಸುವ ಮೂಲಕ ಸಾಹಸ ಮೆರೆದಿದ್ದಾರೆ.

news18-kannada
Updated:January 3, 2021, 8:11 PM IST
Video Viral: ಜೆಸಿಬಿ ಮೂಲಕ 50 ಅಡಿ ಆಳದ ಬಾವಿಗೆ ಬಿದ್ದ ಕಾಡಾನೆಯ ರಕ್ಷಣೆ!
ಬಾವಿಗೆ ಬಿದ್ದ ಕಾಡಾನೆ
  • Share this:
50 ಅಡಿ ಆಳವಾದ ಬಾವಿಗೆ ಬಿದ್ದ ಕಾಡಾನೆಯೊಂದನ್ನು ರಕ್ಷಿಸಿ ಕಾಡಿಗೆ ಬಿಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೊಜ್ಹಿಕೊದೆ(Kozhikode)​ ಜಿಲ್ಲೆಯ ಅನ್ನಕಂಪಾಯಿಲ್​ನಲ್ಲಿ ಕಾಡಾನೆಯೊಂದು ಆಳವಾದ ಬಾವಿಗೆ ಬಿದ್ದಿತ್ತು. ಅಲ್ಲಿನ ಅರಣ್ಯಾಧಿಕಾರಿಗಳು 12 ಗಂಟೆಗಳ ನಿರಂತರ ಪರಿಶ್ರಮದಿಂದ ಕಾಡಾನೆಯನ್ನು ರಕ್ಷಿಸಿದ್ದಾರೆ.

ಜನವರಿ 1 ರಂದು  ಬೆಳಗ್ಗಿನ ಜಾವ ಕಾಡಾಣೆ ಬಾವಿಗೆ ಬಿದ್ದಿರುವುದು ಗೊತ್ತಾಗಿದೆ. ಈ ವಿಚಾರ ತಿಳಿದ ಅರಣ್ಯ ಅಧಿಕಾರಿ ಮತ್ತು ಊರಿನವರ ಸಹಾಯ ಪಡೆಯುವ ಮೂಲದ  ಅದೇ ದಿನ ರಾತ್ರಿ 9 ಗಂಟೆಯವರೆಗೆ ರಕ್ಷಣೆ ಕಾರ್ಯಚರಣೆ ನಡೆಸಿ ಆನೆಯನ್ನು ಕಾಡಿಗೆ ಕಳುಹಿಸುವ ಮೂಲಕ ಸಾಹಸ ಮೆರೆದಿದ್ದಾರೆ.

ಆನೆಯನ್ನು ರಕ್ಷಿಸಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಐಎಫ್​ಎಸ್​ ಅಧಿಕಾರಿ ಪ್ರವೀಣ್​ ಕಸ್ವಾನ್​ ತಮ್ಮ ಟ್ವಿಟ್ಟರ್​ನಲ್ಲಿ ಆನೆಯನ್ನು ರಕ್ಷಿಸುವ ದೃಶ್ಯವನ್ನು ಹಂಚಿಕೊಂಡಿದ್ದಾರೆ.ಜೆಸಿಬಿ ಸಹಾಯದ ಮೂಲಕ ಬಾವಿ ಅಗೆದು ಕಾಡಾನೆಗೆ ದಾರಿ ಮಾಡಿಕೊಡಲಾಗಿದೆ. ನಂತರ ಆನೆ ನಿಧಾನವಾಗಿ ಬಾವಿಯಿಂದ ಹೊರಬಂದು ಕಾಡ ದಾರಿ ಸೇರಿದೆ.

ಈ ಬಗ್ಗೆ ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಮಾತನಾಡಿದ್ದು, ಅದೃಷ್ಟವಶಾತ್​ ಕಾಡಾನೆಗೆ ಯಾವುದೇ ದೊಡ್ಡ ಗಾಯವಾಗಿಲ್ಲ. ಜೆಸಿಬಿ ಸಹಾಯದ ಮೂಲಕ ಆನೆಯನ್ನು ರಕ್ಷಿಸಲಾಗಿದೆ ಎಂದರು
Published by: Harshith AS
First published: January 3, 2021, 8:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories