• Home
  • »
  • News
  • »
  • trend
  • »
  • Viral News: ಬೋಟ್​ನಿಂದ ಚಂಗನೆ ನದಿಗೆ ಜಿಗಿದು ಈಜಿ ಹೋದ ಹುಲಿಯ ವಿಡಿಯೋ ವೈರಲ್

Viral News: ಬೋಟ್​ನಿಂದ ಚಂಗನೆ ನದಿಗೆ ಜಿಗಿದು ಈಜಿ ಹೋದ ಹುಲಿಯ ವಿಡಿಯೋ ವೈರಲ್

 Tiger

Tiger

ಒಂದು ಮೂಲೆಯಿಂದ ಒಂದು ದೈತ್ಯ ಹುಲಿಯೊಂದು ದೋಣಿಯಿಂದ ನೇರವಾಗಿ ನೀರಿಗೆ ಚಂಗನೆ ಹಾರಿ ಈಜಲು ಪ್ರಾರಂಭಿಸುತ್ತದೆ. ಈ ಹುಲಿ ಆ ಕಡೆ ಇರುವಂತಹ ಒಂದು ದಡವನ್ನು ತಲುಪುವವರೆಗೆ ಈಜುತ್ತಲೇ ಇರುತ್ತದೆ.

  • Share this:

ಸಾಮಾನ್ಯವಾಗಿ ಕಾಡುಗಳಲ್ಲಿ(Forest) ಇರುವಂತಹ ಪ್ರಾಣಿಗಳು (Animals) ಅಲ್ಲೇ ಇರುವಂತಹ ನೀರಿನ ಹೊಂಡಕ್ಕೆ ಮತ್ತು ಚಿಕ್ಕ ಪುಟ್ಟ ಕೆರೆಗಳಿಗೆ (Lake) ಇಳಿಯುವುದನ್ನು ನಾವು ವೀಡಿಯೋಗಳಲ್ಲಿ ಮತ್ತು ಯಾವುದಾದರೂ ರಾಷ್ಟೀಯ ಉದ್ಯಾನವನಗಳಿಗೆ ಸಫಾರಿಗೆ ಹೋದಾಗ ನೋಡಿರುತ್ತೇವೆ. ಆದರೂ, ಈ ಕಾಡು ಪ್ರಾಣಿಗಳನ್ನು (Wild Animals) ತುಂಬಾನೇ ಹತ್ತಿರದಿಂದ ನೋಡುವುದೇ ಭಯಾನಕವಾಗಿರುತ್ತದೆ ಮತ್ತು ಅದರಲ್ಲೂ ಈ ಹುಲಿ ಮತ್ತು ಸಿಂಹಗಳಂತಹ ದೈತ್ಯ ಪ್ರಾಣಿಗಳು ಅತ್ತಿಂದಿತ್ತ ಹಾರುವುದನ್ನು ನೋಡಿದರಂತೂ ಮುಗಿದೇ ಹೋಯ್ತು ನಮ್ಮ ಕಥೆ ಅಂತ ಹೇಳಬಹುದು.


ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಕಾಡು ಪ್ರಾಣಿಗಳ ಭಯಾನಕವಾದ ವೀಡಿಯೋಗಳನ್ನು ನೋಡಿರುತ್ತೇವೆ. ಇಲ್ಲಿ ಒಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವೀಡಿಯೋ ಹಳೆಯದು ಎಂದು ಹೇಳಲಾಗುತ್ತಿದೆ, ಆದರೂ ನೋಡುಗರಿಗೆ ಭಯ ಹುಟ್ಟಿಸುವಂತೆ ಇದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.


ಟ್ವಿಟರ್​ನಲ್ಲಿ ವೈರಲ್ ವಿಡಿಯೋ


ಕಾಡು ಪ್ರಾಣಿಗಳನ್ನು ಒಳಗೊಂಡ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಲಾದ ವಿವಿಧ ವೀಡಿಯೋಗಳು ನೋಡಲು ನಂಬಲಾಗದಷ್ಟು ಆಕರ್ಷಕವಾಗಿರುತ್ತವೆ. ಇಲ್ಲಿಯೂ ಸಹ ಅಂತಹದೇ ವೀಡಿಯೋ ಇದೆ ನೋಡಿ, ಇದನ್ನು ನೋಡುವ ಮುನ್ನ ನಿಮ್ಮ ಗುಂಡಿಗೆಯನ್ನು ಗಟ್ಟಿ ಮಾಡಿಕೊಳ್ಳಿರಿ. ಹೌದು.. ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಪೋಸ್ಟ್ ಮಾಡಿದ ಈ ಕ್ಲಿಪ್ ನಲ್ಲಿ ಒಂದು ಹುಲಿಯನ್ನು ಮರಳಿ ಕಾಡಿಗೆ ಬಿಟ್ಟ ನಂತರ ಅದು ಏನು ಮಾಡುತ್ತದೆ ಎಂಬುದನ್ನು ಈ ವೀಡಿಯೋದಲ್ಲಿ ನೋಡಬಹುದು.


ಸುಂದರ್​ಬನ್​ನಿಂದ ರಕ್ಷಣೆ


"ಆ ಹುಲಿಯ ಗಾತ್ರದಷ್ಟು ದೂರ ಜಿಗಿದಿದೆ. ಸುಂದರ್‌ಬನ್ ನಲ್ಲಿ ಒಂದು ಹುಲಿಯನ್ನು ರಕ್ಷಿಸಿ ನಂತರ ಅದನ್ನು ಮರಳಿ ಕಾಡಿಗೆ ಬಿಡುಗಡೆ ಮಾಡುವ ಹಳೆಯ ವೀಡಿಯೋ" ಎಂದು ಅವರು ಟ್ವಿಟರ್ ನಲ್ಲಿ ವೀಡಿಯೋವನ್ನು ಪೋಸ್ಟ್ ಮಾಡುವಾಗ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ವೀಡಿಯೋ ಇತ್ತೀಚಿನದಲ್ಲದಿದ್ದರೂ, ಈ ವೀಡಿಯೋ ನೆಟ್ಟಿಗರಲ್ಲಿ ಸಂಚಲನವನ್ನು ಸೃಷ್ಟಿಸಿದೆ ಎಂದು ಹೇಳಬಹುದು.


1 ನಿಮಿಷ 49 ಸೆಕೆಂಡುಗಳ ವೀಡಿಯೋ


ಈ 1 ನಿಮಿಷ 49 ಸೆಕೆಂಡುಗಳ ವೀಡಿಯೋದ ಆರಂಭದಲ್ಲಿ ನೀರಿನಲ್ಲಿ ಒಂದು ದೋಣಿ ಮತ್ತು ಅದರ ಸ್ವಲ್ಪ ದೂರದಲ್ಲಿಯೇ ಇನ್ನೊಂದು ದೋಣಿ ಹೋಗುತ್ತಿರುವುದನ್ನು ನಾವು ನೋಡಬಹುದು. ಒಬ್ಬ ವ್ಯಕ್ತಿಯು ಕ್ಯಾಮೆರಾವನ್ನು ಹಿಡಿದಿದ್ದು, ದೋಣಿಯಿಂದ ಇಣುಕಿ ನೋಡುವುದನ್ನು ಇಲ್ಲಿ ನಾವು ನೋಡಬಹುದು.


ನೇರವಾಗಿ ನೀರಿಗೆ ಹಾರಿದ ಹುಲಿ


ಕೆಲವೇ ಕ್ಷಣಗಳಲ್ಲಿ, ಒಂದು ಮೂಲೆಯಿಂದ ಒಂದು ದೈತ್ಯ ಹುಲಿಯೊಂದು ದೋಣಿಯಿಂದ ನೇರವಾಗಿ ನೀರಿಗೆ ಚಂಗನೆ ಹಾರಿ ಈಜಲು ಪ್ರಾರಂಭಿಸುತ್ತದೆ. ಈ ಹುಲಿ ಆ ಕಡೆ ಇರುವಂತಹ ಒಂದು ದಡವನ್ನು ತಲುಪುವವರೆಗೆ ಈಜುತ್ತಲೇ ಇರುತ್ತದೆ. ನಂತರ ಅದು ಜಲಮೂಲದ ಪಕ್ಕದಲ್ಲಿರುವ ಕಾಡಿನ ಕಡೆಗೆ ಚಲಿಸುತ್ತದೆ ಮತ್ತು ನೋಡುವಷ್ಟರಲ್ಲಿಯೇ ಅದು ಕಾಡಿನೊಳಗೆ ಕಣ್ಮರೆಯಾಗುತ್ತದೆ.ಇದನ್ನೂ ಓದಿ: Viral Photo: ಯಪ್ಪಾ.. ಇದೇನ್​ ಹಿಂಗಿದೆ, ಆಸ್ಟ್ರೇಲಿಯಾದಲ್ಲಿ ಕಾಣಿಸಿಕೊಳ್ತು ಬೆಚ್ಚಿ ಬೀಳಿಸೋ ವಿಚಿತ್ರ ಜೀವಿ!


ಕೆಲವು ದಿನಗಳ ಹಿಂದೆ ಹಂಚಿಕೊಂಡ ನಂತರ, ಈ ವೀಡಿಯೋ ಸುಮಾರು 1.1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ಈ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಈ ವೀಡಿಯೋ ಸುಮಾರು 5,900 ಲೈಕ್ ಗಳನ್ನು ಸಹ ಗಳಿಸಿದೆ. ಇದಲ್ಲದೆ, ಈ ವೀಡಿಯೋವು ವಿವಿಧ ಕಾಮೆಂಟ್ ಗಳನ್ನು ಸಹ ಪೋಸ್ಟ್ ಮಾಡಲು ಜನರನ್ನು ಪ್ರೇರೇಪಿಸಿದೆ ಎಂದು ಹೇಳಬಹುದು.


'ಲೈಫ್ ಆಫ್ ಪೈ' ನೆನಪಿಸಿದ ವಿಡಿಯೋ


"ನನಗೆ ಈ ವೀಡಿಯೋ 'ಲೈಫ್ ಆಫ್ ಪೈ' ಅನ್ನು ನೆನಪಿಸುತ್ತದೆ! ರಿಚರ್ಡ್ ಪಾರ್ಕರ್ ಎಂದಿಗೂ ಹಿಂತಿರುಗಿ ನೋಡಲಿಲ್ಲ" ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದಿದ್ದಾರೆ. "ಕೇವಲ ಎರಡೇ ನಿಮಿಷಗಳಲ್ಲಿ ಈಜಿದೆ ನೋಡಿ ಈ ಹುಲಿ. ಸುಂದರ್‌ಬನ್ ನ ನೀರಿನಲ್ಲಿ ಪ್ರವಾಹವು ಅಗಾಧವಾಗಿದೆ.


ಇದನ್ನೂ ಓದಿ: Viral Story: ವಿಶ್ವದ ನಂ.1 ಶ್ರೀಮಂತ ಈತ, ಆದ್ರೆ ಸ್ವಂತ ಮನೆ ಇಲ್ಲ! ಪ್ರತಿ ರಾತ್ರಿ ಇಲ್ಲಿ ಹೋಗಿ ಮಲಗ್ತಾರಂತೆ


ಈ ಅದ್ಭುತ ಜೀವಿಯ ಶಕ್ತಿಗೆ ವಂದನೆಗಳು" ಎಂದು ಇನ್ನೊಬ್ಬರು ಪೋಸ್ಟ್ ಮಾಡಿದ್ದಾರೆ. "ಹುಲಿಗಳು ನಿಸ್ಸಂಶಯವಾಗಿಯೂ ಚೆನ್ನಾಗಿ ಈಜಬಲ್ಲ ಪ್ರಾಣಿ, ಮಸ್ತ್ ವೀಡಿಯೋ” ಎಂದು ಮೂರನೇಯವರು ತಮ್ಮ ಅನಿಸಿಕೆಯನ್ನು ಹಂಚಿ ಕೊಂಡಿದ್ದಾರೆ.

Published by:Divya D
First published: