Dog Rescue: ಅಬ್ಬಾ, ಬದುಕಿತು ಬಡ ಜೀವ! 2 ತಿಂಗಳಿನಿಂದ ಗುಹೆಯೊಂದರಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆ

ಸಾಕುನಾಯಿ ಅಮೆರಿಕದ ಮಿಸ್ಸೌರಿಯಲ್ಲಿರುವ ಗುಹೆಯೊಂದರಲ್ಲಿ ಹೋಗಿದೆ ಮತ್ತು ಅದು ಕಾಣೆಯಾದ ಸುಮಾರು ಎರಡು ತಿಂಗಳ ನಂತರ ಅದನ್ನು ಮತ್ತೆ ರಕ್ಷಣೆ ಮಾಡಲಾಗಿದೆ ನೋಡಿ. ಗುಹೆ ಅನ್ವೇಷಕರ ಕೈಗೆ ಈ ಸಾಕುನಾಯಿ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಕೇವ್ ರಿಸರ್ಚ್ ಫೌಂಡೇಶನ್ ನ ಬೆರೋಮ್ ಗುಹೆಯೊಳಗೆ ಮ್ಯಾಪಿಂಗ್ ಕಾರ್ಯವನ್ನು ಮುನ್ನಡೆಸಿದ ರಿಕ್ ಹ್ಯಾಲೆ ಮತ್ತು ಗೆರ್ರಿ ಕೀನ್ ಅವರು ಗುಹೆಯ ಮುಖ್ಯ ಮಾರ್ಗದ ಒಳಗೆ ಸುಮಾರು 200 ಅಡಿ ಆಳದ ಕಂದಕದಲ್ಲಿ ಸಿಲುಕಿದ್ದಂತಹ ಒಂದು ಸಾಕುನಾಯಿಯನ್ನು ರಕ್ಷಿಸಿದ್ದಾರೆ.

ಕಾಣೆಯಾದ ನಾಯಿಯ ರಕ್ಷಣೆ

ಕಾಣೆಯಾದ ನಾಯಿಯ ರಕ್ಷಣೆ

  • Share this:
ಕೆಲವೊಮ್ಮೆ ಈ ಸಾಕು ನಾಯಿಗಳು (Pet Dogs) ಮನೆಯಿಂದ ಹೊರಗೆ ಒಂಟಿಯಾಗಿ ಸುತ್ತಾಡಲು ಹೋಗಿ ಹಾಗೆ ಮುಂದಕ್ಕೆ ಹೋಗಿ ದಾರಿ ತಪ್ಪಿಸಿಕೊಂಡು ಎಲ್ಲೋ ಹೋಗಿ ಕಾಣೆಯಾಗಿರುವ (Missing) ಅನೇಕ ಘಟನೆಗಳನ್ನು ನಾವು ನೋಡಿರುತ್ತೇವೆ ಮತ್ತು ಕೇಳಿರುತ್ತೇವೆ. ಎಷ್ಟೋ ನಾಯಿಗಳನ್ನು ರಕ್ಷಿಸಿದರೂ (Rescue) ಸಹ ಅದು ಯಾವ ಮನೆಗೆ ಸೇರಿದ ಸಾಕುನಾಯಿ ಅಂತ ಗುರುತು ಸಿಗುವುದಿಲ್ಲ. ಅದರಲ್ಲಿ ಎಷ್ಟೋ ನಾಯಿಗಳು ಒಮ್ಮೆ ದಾರಿ ತಪ್ಪಿಸಿಕೊಂಡು ಕಾಣೆಯಾಗಿ ನಂತರ ಮತ್ತೆ ತನ್ನನ್ನು ಸಾಕಿಕೊಂಡ ಮನೆಯವರ ಮುಖವನ್ನು (Face) ನೋಡುವುದೇ ಇಲ್ಲ. ಇಲ್ಲೊಂದು ಅಂತಹದೇ ಒಂದು ಘಟನೆ ನಡೆದಿದೆ ನೋಡಿ, ಈ ಘಟನೆಯಲ್ಲಿ ಈ ನಾಯಿ ಬದುಕಿ ಬಂದದ್ದೇ ಒಂದು ದೊಡ್ಡ ಚಮತ್ಕಾರ ಅಂತ ಹೇಳಿದರೆ ತಪ್ಪಾಗುವುದಿಲ್ಲ.

ಗುಹೆಯೊಳಗಿಂದ ಸಾಕುನಾಯಿಯ ರಕ್ಷಣೆ
ಇಲ್ಲೊಂದು ಸಾಕುನಾಯಿ ಅಮೆರಿಕದ ಮಿಸ್ಸೌರಿಯಲ್ಲಿರುವ ಗುಹೆಯೊಂದರಲ್ಲಿ ಹೋಗಿದೆ ಮತ್ತು ಅದು ಕಾಣೆಯಾದ ಸುಮಾರು ಎರಡು ತಿಂಗಳ ನಂತರ ಅದನ್ನು ಮತ್ತೆ ರಕ್ಷಣೆ ಮಾಡಲಾಗಿದೆ ನೋಡಿ. ಗುಹೆ ಅನ್ವೇಷಕರ ಕೈಗೆ ಈ ಸಾಕುನಾಯಿ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಕೇವ್ ರಿಸರ್ಚ್ ಫೌಂಡೇಶನ್ ನ ಬೆರೋಮ್ ಗುಹೆಯೊಳಗೆ ಮ್ಯಾಪಿಂಗ್ ಕಾರ್ಯವನ್ನು ಮುನ್ನಡೆಸಿದ ರಿಕ್ ಹ್ಯಾಲೆ ಮತ್ತು ಗೆರ್ರಿ ಕೀನ್ ಅವರು ಗುಹೆಯ ಮುಖ್ಯ ಮಾರ್ಗದ ಒಳಗೆ ಸುಮಾರು 200 ಅಡಿ ಆಳದ ಕಂದಕದಲ್ಲಿ ಸಿಲುಕಿದ್ದಂತಹ ಒಂದು ಸಾಕುನಾಯಿಯನ್ನು ರಕ್ಷಿಸಿದ್ದಾರೆ.ಗುಹೆ ಅನ್ವೇಷಕರ ಮತ್ತೊಂದು ಗುಂಪಿನಿಂದ ಎಚ್ಚರಿಸಲ್ಪಟ್ಟ ಅಗ್ನಿಶಾಮಕ ದಳದವರು, ಗುಹೆಯಿಂದ ಕಷ್ಟಕರವಾದ ಆರೋಹಣದ ಸಮಯದಲ್ಲಿ ನಾಯಿಯನ್ನು ರಕ್ಷಿಸಲು ಡಫೆಲ್ ಬ್ಯಾಗ್ ಮತ್ತು ಕಂಬಳಿಗಳನ್ನು ಬಳಸುವಂತೆ ತಂಡಕ್ಕೆ ಸಲಹೆ ನೀಡಿದರು.ಮಿಸ್ಸೌರಿಯ ಎರಡನೇ ಅತಿದೊಡ್ಡ ಗುಹೆ
ಅಬ್ಬಿ ಎಂದು ಗುರುತಿಸಲಾದ ಈ ಸಾಕುನಾಯಿಯು ಜೂನ್ 9 ರಂದು ಕಾಣೆಯಾಗಿದೆ ಮತ್ತು ಎರಡು ತಿಂಗಳವರೆಗೆ ಮಿಸ್ಸೌರಿಯ ಎರಡನೇ ಅತಿದೊಡ್ಡ ಗುಹೆಯಲ್ಲಿ ಕಳೆದು ಹೋಗಿದೆ. ಹಸಿವಿನಿಂದ ಬಳಲುತ್ತಿದ್ದರೂ, ಈ ನಾಯಿಗೆ ಎಲ್ಲಿಯೂ ಯಾವುದೇ ಗಾಯಗಳಾಗಿರಲಿಲ್ಲ ಎಂದು ಗುಹೆ ಅನ್ವೇಷಕರು ಹೇಳಿದರು. 12 ಅಡಿ ಆಳದ ಗುಂಡಿಯೊಳಗೆ ಗುಹೆಯ ಪ್ರವೇಶದ್ವಾರದ ಬಳಿ ಪಂಜದ ಗುರುತುಗಳನ್ನು ತಾನು ಗಮನಿಸಿದ್ದೇನೆ ಎಂದು ಹ್ಯಾಲೆ ಹೇಳಿದರು, ಅಲ್ಲಿಯೇ ನಮಗೆ ಯಾವುದೋ ಒಂದು ನಾಯಿ ಒಳಗೆ ಸಿಲುಕಿಹಾಕಿಕೊಂಡಿರಬೇಕು ಎಂದು ಅನುಮಾನ ಶುರುವಾಗಿತ್ತು ಎಂದು ಹೇಳಿದರು.

ಇದನ್ನೂ ಓದಿ: Ghatiana Dwivarna: ಬಿಳಿ ಮೈ, ಕಾಲು ಚಾಕ್ಲೇಟ್ ಬಣ್ಣ! ಅಪರೂಪದ ಘಾಟಿಯಾನ ದ್ವಿವರ್ಣ ಏಡಿಯ ವಿಡಿಯೋ ನೋಡಿ

ಹ್ಯಾಲೆ ಅವರ ಫೇಸ್‌ಬುಕ್ ಪೋಸ್ಟ್ ನಲ್ಲಿ ಈ ಸಾಕುನಾಯಿಯ ರಕ್ಷಣಾ ಕಾರ್ಯವನ್ನು "ತುಂಬಾ ಕಷ್ಟಕರವಾದ, ವಿಚಿತ್ರವಾದ, ಲಂಬವಾದ ಆರೋಹಣ, ಅದನ್ನು ಮೇಲಕ್ಕೆ ಎತ್ತಲು ಪಟ್ಟ ಸಾಹಸ ಅಷ್ಟಿಷ್ಟಲ್ಲ" ಎಂದು ವಿವರಿಸಲಾಗಿದೆ. ಮಿಸ್ಸೌರಿ ಗುಹೆಗಳು ಮತ್ತು ಕಾರ್ಸ್ಟ್ ಕನ್ಸರ್ವೆನ್ಸಿ ಪ್ರಕಾರ, ಬೆರೋಮ್ ಮೂರ್ ಸುಮಾರು 21 ಮೈಲಿಗಳಷ್ಟು ಉದ್ದ ಎಂದರೆ ಸುಮಾರು 33 ಕಿಲೋ ಮೀಟರ್ ಉದ್ದ ಇವೆ ಎಂದು ನಂಬಲಾಗಿದೆ.

ಭಾರತೀಯ ಅರಣ್ಯ ಸೇವೆಯ ರೇಂಜರ್ ಗಳಿಂದ ಆನೆಯ ರಕ್ಷಣೆ
ಜುಲೈನಲ್ಲಿ, ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ರೇಂಜರ್ ಗಳು ಸಹ ಮಧ್ಯರಾತ್ರಿ 1 ಗಂಟೆಗೆ ಕಂದಕಕ್ಕೆ ಬಿದ್ದ ಆನೆಯ ಮರಿಯನ್ನು ದೀರ್ಘವಾದ ರಾತ್ರಿ ರಕ್ಷಣಾ ಕಾರ್ಯಾಚರಣೆಯಲ್ಲಿ ರಕ್ಷಿಸಿದ್ದರು.

ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಈ ಅದ್ಭುತ ಪ್ರಯತ್ನದ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಒಂದು ಪರ್ಯಾಯ ಮಾರ್ಗವನ್ನು ರಚಿಸಲು ಉತ್ಖನನ ಯಂತ್ರವನ್ನು ಬಳಸಿ ಗುಂಡಿಯನ್ನು ತೆಗೆಯುವ ಶ್ರಮದಾಯಕ ರಕ್ಷಣಾ ಕಾರ್ಯವನ್ನು ಇದು ತೋರಿಸುತ್ತದೆ, ನಂತರ ಅದರಿಂದ ಮರಿ ಆನೆಯನ್ನು ತಲುಪಿ ಮತ್ತು ಅದನ್ನು ಮೇಲಕ್ಕೆತ್ತಲು ರಕ್ಷಕರು ಮಾಡಿದ ಹರಸಾಹಸವನ್ನು ಸಹ ವೀಡಿಯೋದಲ್ಲಿ ನೋಡಬಹುದಿತ್ತು.

ಇದನ್ನೂ ಓದಿ: Video: ಕಾಡಿನಲ್ಲಿ ಕಳೆದು ಹೋದ ಮರಿ ಆನೆಯನ್ನು ಮತ್ತೆ ಅದರ ಹಿಂಡಿನೊಂದಿಗೆ ಸೇರಿಸಿದ ಅರಣ್ಯ ಸಿಬ್ಬಂದಿ! ಈ ಸಂತಸದ ಕ್ಷಣವನ್ನೊಮ್ಮೆ ನೋಡಿ

ಬೆಳಿಗ್ಗೆ 5 ಗಂಟೆಯ ಹೊತ್ತಿಗೆ, ಆನೆಯ ಮರಿಯನ್ನು ಸಂಪೂರ್ಣವಾಗಿ ಮೇಲಕ್ಕೆತ್ತಿ ಅದರ ಕುಟುಂಬದೊಂದಿಗೆ ಮತ್ತೆ ಸೇರಿಸಲಾಯಿತು.
Published by:Ashwini Prabhu
First published: