Baby Bump Photoshoot: ಎಲ್ಲಾ ಚಿನ್ನಮಯ, ಇದು ಬಂಗಾರ ಲೋಕದ ಫೋಟೋ ಶೂಟ್​!

ಫೋಟೋ ಶೂಟ್​

ಫೋಟೋ ಶೂಟ್​

ಸೆಲೆಬ್ರೆಟಿಗಳು ಕಾರ್ಯಕ್ರಮಕ್ಕೆ ಹೋಗುವಾಗಲೂ ಯಾವುದೇ ಅಂಜಿಕೆ ಇಲ್ಲದೇ ಬೇಬಿ ಬಂಪ್‌ ತೋರಿಸುವಂತಹ ಬಟ್ಟೆಗಳನ್ನು ತೊಡುತ್ತಾರೆ. ಇದೇ ರೀತಿ ಇಲ್ಲೊಂದು ವೈರಲ್​ ಆಗಿದೆ.

  • Share this:
  • published by :

ಇತ್ತೀಚಿನ ದಿನಗಳಲ್ಲಿ ಮೆಟರ್ನಿಟಿ ಫೋಟೋಶೂಟ್ (Maternity‌ Photoshoot) ತುಂಬಾನೇ ಜನಪ್ರಿಯವಾಗಿದೆ. ಸಾಮಾನ್ಯ ಜನರೂ ಇಂಥ ಫೋಟೋಶೂಟ್‌ಗಳನ್ನು ಮಾಡಿಸಿಕೊಳ್ಳುತ್ತಿದ್ದು ಸೆಲೆಬ್ರಿಟಿಗಳಂತೂ ತರಹೇವಾರಿ ಕಾಸ್ಟ್ಯೂಮ್‌ಗಳಲ್ಲಿ ಮಿಂಚುತ್ತಾರೆ. ಇನ್ನೂ ಸೆಲೆಬ್ರೆಟಿಗಳು (Celebrity) ಕಾರ್ಯಕ್ರಮಕ್ಕೆ ಹೋಗುವಾಗಲೂ ಯಾವುದೇ ಅಂಜಿಕೆ ಇಲ್ಲದೇ ಬೇಬಿ ಬಂಪ್‌ ತೋರಿಸುವಂತಹ ಬಟ್ಟೆಗಳನ್ನು ತೊಡುತ್ತಾರೆ. ಈ ಮಧ್ಯೆ ಆಭರಣ ವಿನ್ಯಾಸಕಿ ಸುಹಾನಿಯವರು ನೀತಾ ಮುಖೇಶ್‌ ಅಂಬಾನಿ (Mukesh Ambani) ಕಲ್ಚರರಲ್‌ನ ಗಾಲಾ ಸಮಾರಂಭದಲ್ಲಿ ಧರಿಸಿದ್ದ ಕಾಸ್ಟ್ಯೂಮ್‌ ಸಖತ್‌ ವೈರಲ್ (Viral)‌ ಆಗಿದೆ.


ಇತ್ತೀಚಿಗೆ ಮುಂಬೈನಲ್ಲಿ ನಡೆದ ನೀತಾ ಮುಖೇಶ್‌ ಅಂಬಾನಿ ಕಲ್ಚರರಲ್‌ನ ಗಾಲಾ ಇವೆಂಟ್‌ನಲ್ಲಿ ಆಭರಣ ಲೇಬಲ್‌ನ ಮಿಶೋ ಸಂಸ್ಥಾಪಕಿ ಹಾಗೂ ನಿರ್ದೇಶಕಿ ಸುಹಾನಿ ಪರೇಖ್ ಭಾಗವಹಿಸಿದ್ದರು. ಇವರು ಪ್ರಸಿದ್ಧ ಆಭರಣ ವಿನ್ಯಾಸಕಿಯೂ ಆಗಿದ್ದು 24k ಚಿನ್ನದ ಹೊಟ್ಟೆಯ ಕವಚವನ್ನು ಧರಿಸಿದ್ದು ಆತ್ಮವಿಶ್ವಾಸದಿಂದ ತನ್ನ ಬೇಬಿ ಬಂಪ್ ಪ್ರದರ್ಶಿಸಿದರು.


ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನ ಗಾಲಾದಿಂದ ಸುಹಾನಿ ಫೋಟೋಗಳು ಸಾಮಾಜಿಕ ತಾಲತಾಣಗಳಲ್ಲಿ ವೈರಲ್‌ ಆಗಿವೆ. ಇನ್ನು, ಚಿತ್ರಗಳನ್ನು ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ಪೋಸ್ಟ್ ಮಾಡಲಾಗಿದೆ. ಅಂದಹಾಗೆ ಖ್ಯಾತ ಆಭರಣ ವಿನ್ಯಾಸಕಿ, ಸುಹಾನಿ ಪರೇಖ್ ಅವರು ತಮ್ಮದೇ ಆದ ಆಭರಣ ಲೇಬಲ್ MISHO ಅನ್ನು ನಡೆಸುತ್ತಿದ್ದಾರೆ.


ನೋಡುಗರನ್ನು ಬೆರಗುಗೊಳಿಸಿದ ಚಿನ್ನದ ಕವಚ


NMACC ಯಲ್ಲಿ ಮೂರು ದಿನಗಳ ಉದ್ಘಾಟನಾ ಸಮಾರಂಭದಲ್ಲಿ ಹಾಲಿವುಡ್, ಬಾಲಿವುಡ್ ಮತ್ತು ಸಾಂಸ್ಕೃತಿಕ ಕಲಾವಿದರು ತಮ್ಮ ಕೌಶಲ್ಯ ಮತ್ತು ಪ್ರತಿಭೆಯನ್ನು ಪ್ರದರ್ಶಿಸಿದರು. ಆದಾಗ್ಯೂ, ಸುಹಾನಿ ತಮ್ಮ ವಿಭಿನ್ನ ಕಾಸ್ಟ್ಯೂಮ್‌ನಿಂದ ಪ್ರತಿಯೊಬ್ಬರನ್ನೂ ವಿಸ್ಮಿತರನ್ನಾಗಿಸಿದರು. ಇನ್ನು ಕೆಲವೇ ವಾರಗಳಲ್ಲಿ ಸುಹಾನಿಯವರಿಗೆ ಮಗುವಾಗಲಿದ್ದು ಅವರು ಲೋಹೀಯ ಸೀರೆಯಲ್ಲಿ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. 24K ನಿಜವಾದ ಚಿನ್ನದ ಹೊಟ್ಟೆಯ ರಕ್ಷಾಕವಚದಲ್ಲಿ ತನ್ನ ಬೇಬಿ ಬಂಪ್ಅನ್ನು ಪ್ರದರ್ಶಿಸಿದರು.




ಬೆಲ್ಲಿ ಕವಚದ ಮೇಲೆ ಸೋನೋಗ್ರಫಿ ಛಾಯಾಚಿತ್ರ


ಅವರು ಚಿನ್ನದ ಹೊಟ್ಟೆಯ ರಕ್ಷಾಕವಚ ಮತ್ತು ಹೊಂದಾಣಿಕೆಯ ಚಿನ್ನದ ಟ್ಯೂಬ್ ಬ್ಲೌಸ್‌ನಲ್ಲಿ ಸರಳವಾಗಿ ಮೋಡಿಮಾಡುವಂತೆ ಕಾಣುತ್ತಿದ್ದರು. ಮೆಟಲ್ ಬೆಲ್ಲಿ ರಕ್ಷಾಕವಚದ ಮೇಲಿನ ಟೆಕ್ಸ್ಚರಲ್ ವಿವರಗಳನ್ನು ಕೆತ್ತಲಾಗಿದೆ ಮತ್ತು ಪುಟ್ಟ ಮನುಷ್ಯರ ಮುಖಗಳನ್ನು ಸೋನೋಗ್ರಫಿ ಛಾಯಾಚಿತ್ರಗಳ ಮೇಲೆ ರೂಪಿಸಲಾಗಿದೆ ಎಂದು ಸುಹಾನಿ ಬಹಿರಂಗಪಡಿಸಿದ್ದಾರೆ.


ಇದನ್ನೂ ಓದಿ: ಈ ಮಹಿಳೆಯ ಕೈಯಲ್ಲಿ ಸಿಕ್ಕಿ ವೇಸ್ಟ್ ಬಾಟಲಿಯೂ ಬೆಸ್ಟ್ ಆಯ್ತು! 21 ಸಾವಿರ ಬಾಟಲ್‌ನಿಂದ ಅದ್ಭುತ ಸೃಷ್ಟಿಸಿದ ಕಲಾಕಾರ್ತಿ


“ಲೋಹದ ಕವಚದಲ್ಲಿ ಜೀವನದ ಅಪರೂಪದ ಕ್ಷಣಗಳು”


ಅಲ್ಲದೇ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ದೀರ್ಘ ಟಿಪ್ಪಣಿಯನ್ನು ಅವರು ಬರೆದಿದ್ದಾರೆ. ತಿಂಗಳುಗಳ ಮೂಲಕ ಮಹಿಳೆಯ ದೇಹವು ಹೇಗೆ ಬದಲಾಗುತ್ತದೆ ಎಂಬುದನ್ನು ನೋಡಲು ಮತ್ತು ಅನುಭವಿಸಲು ಇದು ಗಮನಾರ್ಹವಾಗಿದೆ. ನನ್ನ ಗರ್ಭಾವಸ್ಥೆಯ ಕೊನೆಯ ಕೆಲವು ವಾರಗಳಲ್ಲಿ ನಾನು ಪ್ರವೇಶಿಸಿದಾಗ, ಈ ಬಗ್ಗೆ ನಾನು ಸಂಪೂರ್ಣವಾಗಿ ವಿಸ್ಮಯಗೊಂಡಿದ್ದೇನೆ. ರೂಪಾಂತರದ ಈ ಪ್ರಯಾಣವು ತುಂಬಾ ಸ್ಪೂರ್ತಿದಾಯಕವಾಗಿದೆ. ಲೋಹದ ಹೊಟ್ಟೆಯ ಮೇಲೆ ಪುಟ್ಟ ಮಿನಿ ಮಾನವನ ಮುಖದ ಸೋನೋಗ್ರಫಿ ಛಾಯಾಚಿತ್ರಗಳ ಮೇಲೆ ಕೆತ್ತಲಾಗಿದೆ" ಎಂದು ಅವರು ಬರೆದುಕೊಂಡಿದ್ದಾರೆ.


ಅಲ್ಲದೇ, "ಜೀವನದ ಕ್ಷಣಿಕ ಕ್ಷಣಗಳನ್ನು ಸೆರೆಹಿಡಿಯುವುದು ಕಾವ್ಯಾತ್ಮಕವಾಗಿದೆ. ಶಿಲ್ಪಿ ಮತ್ತು ಕಲಾವಿದನಾಗಿ ಈ ಕ್ಷಣ ಮತ್ತು ನನ್ನ ದೇಹವನ್ನು ನನ್ನ ನೆಚ್ಚಿನ ಮಾಧ್ಯಮವಾದ ಲೋಹದಲ್ಲಿ ಈ ಸಾಹಸವನ್ನು ಸೆರೆಹಿಡಿಯಲು ಬಯಸುತ್ತೇನೆ” ಎಂಬುದಾಗಿಯೂ ಅವರು ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: 18 ವರ್ಷಗಳ ಹಿಂದೆ ಗಂಡ ಬರೆದ ಲವ್​ ಲೆಟರ್​ ಹೆಂಡತಿಗೆ ಸಿಕ್ಕೇ ಬಿಡ್ತು, ಎಷ್ಟು ಮುದ್ದಾಗಿ ಬರೆದಿದ್ದಾರೆ ನೋಡಿ!




ಇನ್ನು NMACC ನಲ್ಲಿ ನಡೆದ ಗಾಲಾ ಕಾರ್ಯಕ್ರಮದಿಂದ ಸುಹಾನಿಯ ಚಿತ್ರಗಳನ್ನು ಲಿಸಾ ರೇ ಮರು ಪೋಸ್ಟ್ ಮಾಡಿದ್ದಾರೆ. “ರಾತ್ರಿಯಿಂದ ತನ್ನ ನೆಚ್ಚಿನ ನೋಟ ಇದು” ಎಂದು ಲೀಸಾ ರೇ ಬರೆದುಕೊಂಡಿದ್ದಾರೆ.




ಅಂದಹಾಗೆ ಸುಹಾನಿ ಪರೇಖ್ ಗರ್ಭಾವಸ್ಥೆಯ ಕೊನೆಯ ತಿಂಗಳಲ್ಲಿದ್ದು ಅವರ ಮುಖದ ಹೊಳಪು ಎಲ್ಲವನ್ನೂ ಹೇಳುತ್ತಿದೆ. ರೆಡ್ ಕಾರ್ಪೆಟ್ ಮೇಲೆ ಅವರು ಎಷ್ಟು ಸೊಗಸಾಗಿ ನಡೆದರು ಎಂಬುದಾಗಿ ನೆಟ್ಟಿಗರು ಹೇಳುತ್ತಿದ್ದಾರೆ. ಇನ್ನು, ಬೆಲ್ಲಿ ರಕ್ಷಾಕವಚಗಳು ವಿವಿಧ ಶಾಪಿಂಗ್ ವೆಬ್‌ಸೈಟ್‌ಗಳಲ್ಲಿ ಸುಲಭವಾಗಿ ಲಭ್ಯವಿವೆ. ಇದನ್ನು ವಿಶೇಷವಾಗಿ ವಿಕಿರಣ-ವಿರೋಧಿ ವಿರುದ್ಧ ಮಗುವಿನ ರಕ್ಷಣೆಗಾಗಿ ಬಳಸಲಾಗುತ್ತದೆ.

First published: