• Home
  • »
  • News
  • »
  • trend
  • »
  • Tropical Trees: ಉಷ್ಣವಲಯದಲ್ಲಿ ಪುನಃ ನೆಟ್ಟ ಮರಗಳು ದೀರ್ಘಕಾಲ ಉಳಿಯದಿರಲು ಇದೇ ಕಾರಣವಂತೆ

Tropical Trees: ಉಷ್ಣವಲಯದಲ್ಲಿ ಪುನಃ ನೆಟ್ಟ ಮರಗಳು ದೀರ್ಘಕಾಲ ಉಳಿಯದಿರಲು ಇದೇ ಕಾರಣವಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Tropical Trees: ಒಂದು ಪ್ರದೇಶದ ಅರಣ್ಯವು ಸಂಪೂರ್ಣ ನಾಶವಾದಾಗ ಮರು-ಅರಣ್ಯೀಕರಣದ ವಿಧಾನಗಳು ಕಡಿಮೆ ಯಶಸ್ವಿಯವಾಗಿವೆ ಎಂಬುದನ್ನು ಅಧ್ಯಯನ ತಂಡವು ಕಂಡುಹಿಡಿದಿದೆ.

  • Share this:

ಇತ್ತೀಚಿನ ಸಂಶೋಧನೆಯ (Research) ಪ್ರಕಾರ, ಉಷ್ಣವಲಯದ (tropical trees) ಮತ್ತು ಉಪ ಉಷ್ಣವಲಯದ ಕಾಡುಗಳನ್ನು (Forest) ಮರುಸ್ಥಾಪಿಸುವ ಪ್ರಯತ್ನದಲ್ಲಿ ನೆಡಲಾದ ಹೆಚ್ಚಿನ ಮರಗಳು ಐದು ವರ್ಷಗಳಿಗಿಂತ ಹೆಚ್ಚು ಬದುಕುವುದಿಲ್ಲ ಎನ್ನಲಾಗಿದ್ದು ಅದರ ಫಲಿತಾಂಶಗಳಲ್ಲಿ ಹೆಚ್ಚಿನ ವೈವಿಧ್ಯವಿದೆ ಎಂಬುದನ್ನು ವರದಿ ಬಹಿರಂಗಪಡಿಸಿದೆ. ಏಷ್ಯಾದ ಉಷ್ಣವಲಯದ ಮತ್ತು ಉಪ-ಉಷ್ಣವಲಯದ 176 ಸ್ಥಳಗಳಲ್ಲಿ ಮರುಸ್ಥಾಪನೆ ಮಾಡಿದ ಮರಗಳ ಬದುಕುಳಿಯುವಿಕೆ ಮತ್ತು ಬೆಳವಣಿಗೆಯ ಡೇಟಾವನ್ನು ಸದ್ಯ ಮಾಡಲಾದ ಅಧ್ಯಯನದಲ್ಲಿ ವಿಶ್ಲೇಷಿಸಲಾಗಿದೆ. ಇದರಲ್ಲಿ ನೈಸರ್ಗಿಕ ಕಾಡುಗಳು ಅವನತಿಗೆ ಒಳಗಾಗಿರುವ ಅಂಶ ಕಂಡುಬಂದಿದೆ. ನೆಟ್ಟ ಒಟ್ಟು ಸಸಿಗಳಲ್ಲಿ ಸರಾಸರಿ 18% ರಷ್ಟು ಸಸಿಗಳು ಮೊದಲ ವರ್ಷದಲ್ಲಿ ಮೃತಗೊಂಡಿವೆ ಎಂಬುದನ್ನು ತಂಡವು ಕಂಡುಹಿಡಿದಿದ್ದು ಅಲ್ಲದೆ ಐದು ವರ್ಷಗಳ ನಂತರ ಈ ಪ್ರಮಾಣ 44% ಕ್ಕೆ ಏರಿದೆ.


ಆದಾಗ್ಯೂ, ಬದುಕುಳಿಯುವಿಕೆಯ ಪ್ರಮಾಣವು ಸ್ಥಳ ಮತ್ತು ಮರದ ಜಾತಿಗಳ ನಡುವೆ ಹೆಚ್ಚು ವ್ಯತ್ಯಾಸಗೊಳ್ಳುತ್ತದೆ ಎಂಬುದನ್ನು ಅಧ್ಯಯನ ತಿಳಿಸಿದ್ದು, ಕೆಲವು ಸ್ಥಳಗಳಲ್ಲಿ ಐದು ವರ್ಷಗಳ ನಂತರ 80% ರಷ್ಟು ಮರಗಳು ಇನ್ನೂ ಜೀವಂತವಾಗಿವೆ ಎಂಬುದನ್ನೂ ಸಹ ತೋರಿಸಿದೆ, ಆದರೆ ಇತರ ಸ್ಥಳಗಳಲ್ಲಿ ಇಷ್ಟೇ ಪ್ರಮಾಣದಲ್ಲಿ ಮರಗಳು ಸತ್ತಿವೆ ಎಂಬುದು ಪತ್ತೆಯಾಗಿದೆ.


ಮರು ಅರಣ್ಯೀಕರಣ ಏಕೆ ಮುಖ್ಯ?


ಜೈವಿಕ ವಿಜ್ಞಾನದ ಫಿಲಾಸಫಿಕಲ್ ಟ್ರಾನ್ಸಾಕ್ಷನ್ಸ್‌ನಲ್ಲಿ ಸಂಶೋಧನೆಗಳನ್ನು ಪ್ರಕಟಿಸಲಾಗಿದೆ. ಅರಣ್ಯ ಮರುಸ್ಥಾಪನೆಯು ಜೀವವೈವಿಧ್ಯತೆಯ ನಷ್ಟವನ್ನು ತಡೆಯಲು ಸಹಕಾರಿ ಎಂಬುದು ತಿಳಿದು ಬಂದಿದ್ದು, ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಈ ವಿಧಾನ ಪರಿಣಾಮಕಾರಿ ಎಂಬುದು ತಜ್ಞರ ಅಭಿಪ್ರಾಯವಾಗಿದೆ.


ಇಂಗಾಲವನ್ನು ಲಾಕ್ ಮಾಡುವ ಮೂಲಕ ಪ್ರಮುಖ ಆವಾಸಸ್ಥಾನಗಳನ್ನು ಬೆಂಬಲಿಸುವ ಕಾರ್ಯವನ್ನು ಅರಣ್ಯ ಮರುಸ್ಥಾಪನೆ ನಡೆಸುತ್ತದೆ. ಮರು ಅರಣ್ಯೀಕರಣ ಯೋಜನೆಗಳನ್ನು ಇಂಗಾಲದ ಪ್ರಮಾಣವನ್ನು ಸರಿದೂಗಿಸಲು ವ್ಯಾಪಕವಾಗಿ ಬಳಸಬಹುದಾಗಿದೆ.


ಮರಗಳು ಸಾಯಲು ಕಾರಣಗಳೇನು?


ಆರಂಭದಲ್ಲಿ ನೆಟ್ಟಮರಗಳ ಸಂಖ್ಯೆಯನ್ನು ಮಾಪನವನ್ನು ವಿಶ್ಲೇಷಿಸಿದಾಗ ಈ ಮರಗಳಲ್ಲಿ ಹೆಚ್ಚಿನವು ದೀರ್ಘಕಾಲ ಉಳಿಯುವುದಿಲ್ಲ ಎಂಬುದು ಪತ್ತೆಯಾಗಿದೆ. ಕೆಲವು ಸ್ಥಳಗಳಲ್ಲಿ ಮರಗಳ ಬದುಕುಳಿಯುವಿಕೆ ಪ್ರಮಾಣ ಹೆಚ್ಚಾಗಿದ್ದು ಸರಿಯಾದ ವಿಧಾನವನ್ನು ಬಳಸಿ ಅರಣ್ಯ ಮರುಸ್ಥಾಪನೆಯನ್ನು ನಡೆಸುವುದರಿಂದ ಈ ಯೋಜನೆಯಲ್ಲಿ ಯಶಸ್ಸು ಕಾಣಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.


ಆಗ್ನೇಯ ಏಷ್ಯಾದಲ್ಲಿ ಮರು ಅರಣ್ಯೀಕರಣ ಏಕೆ ಮುಖ್ಯ?


ಪ್ರಪಂಚದ ಸುಮಾರು 15% ದಷ್ಟು ಉಷ್ಣವಲಯದ ಕಾಡುಗಳು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತವೆ ಮತ್ತು ಅವು ಪ್ರಪಂಚದಲ್ಲೇ ಅತ್ಯಂತ ಇಂಗಾಲ-ದಟ್ಟವಾದ ಮತ್ತು ಜಾತಿ-ಸಮೃದ್ಧವಾಗಿದ್ದು, ಹುಲಿಗಳು, ಸಸ್ತನಿಗಳು ಮತ್ತು ಆನೆಗಳಿಗೆ ಆವಾಸಸ್ಥಾನವನ್ನು ಒದಗಿಸುತ್ತವೆ.


ಅದಾಗ್ಯೂ ಇತ್ತೀಚಿನ ದಶಕಗಳಲ್ಲಿ ಈ ಕಾಡುಗಳು ಪ್ರಮುಖ ನಾಶಕ್ಕೊಳಗಾಗಿವೆ. 1990 ಮತ್ತು 2010 ರ ನಡುವೆ ಅಂದಾಜು 32 ಮಿಲಿಯನ್ ಹೆಕ್ಟೇರ್‌ಗಳಷ್ಟು ಅರಣ್ಯ ಪ್ರದೇಶವು ಕಡಿಮೆಯಾಗಿದೆ. ಹಾಗಾಗಿ ಈ ಸ್ಥಳಗಳಲ್ಲಿ ಅರಣ್ಯ ಮರುಸ್ಥಾಪನೆ ಯೋಜನೆಯು ಮುಖ್ಯ ಉದ್ದೇಶವಾಗಿದೆ.


ಇದನ್ನೂ ಓದಿ: ವಿಮಾನದಲ್ಲಿ ನಿಮ್ಮ ಲಗೇಜ್​ಗಳನ್ನು ಹೇಗೆ ಲೋಡ್ ಮಾಡ್ತಾರೆ? ಈ ವೈರಲ್ ವಿಡಿಯೋ ನೋಡಿ


29 ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನಾ ಕೇಂದ್ರಗಳ ವಿಜ್ಞಾನಿಗಳ ಅಂತರರಾಷ್ಟ್ರೀಯ ತಂಡವು ಪುನಃಸ್ಥಾಪನೆ ಯೋಜನೆಗಳ ದೀರ್ಘಕಾಲೀನ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡಿದ ಮೊದಲ ತಂಡವಾಗಿದೆ.


ಅರಣ್ಯ ಮರುಸ್ಥಾಪನೆಯನ್ನು ಹೇಗೆ ಕೈಗೊಳ್ಳಬೇಕು?


ಯುಕೆ ಸೆಂಟರ್ ಫಾರ್ ಎಕಾಲಜಿ ಮತ್ತು ಹೈಡ್ರಾಲಜಿ ಮೂಲದ ಸಹ-ಮುಖ್ಯ ಲೇಖಕ ಡಾ ಲಿಂಡ್ಸೆ ಬ್ಯಾನಿನ್ ತಿಳಿಸಿರುವಂತೆ ಮರಗಳ ಬದುಕುಳಿಯುವಿಕೆಗೆ ಕಾರಣಗಳನ್ನು ನೋಡಿದಾಗ ಮುಖ್ಯವಾಗಿ ಕಂಡುಬಂದಿದ್ದು ಮರಗಳನ್ನು ನೆಟ್ಟ ಸಾಂದ್ರತೆ, ಮರಗಳ ಜಾತಿಗಳ ಆಯ್ಕೆ, ಸ್ಥಳದ ಪರಿಸ್ಥಿತಿಗಳು ಹೀಗೆ ಪಟ್ಟಿಮಾಡಿದ್ದಾರೆ.


ಇನ್ನು ಮರಗಳ ನಷ್ಟಕ್ಕೆ ಕೂಡ ಇವರು ಕೆಲವೊಂದು ಕಾರಣಗಳನ್ನು ನೀಡಿದ್ದು ವಿಪರೀತ ಹವಾಮಾನ ಘಟನೆಗಳು ಇಲ್ಲವೇ ನಿರ್ವಹಣೆಯಲ್ಲಿನ ವ್ಯತ್ಯಾಸಗಳು ಹಾಗೂ ಸ್ಥಳೀಯ ಸಾಮಾಜಿಕ-ಆರ್ಥಿಕ ಅಂಶಗಳು ಸಹ ಮುಖ್ಯವಾಗಿದೆ ಎಂಬುದು ಲಿಂಡ್ಸೆಯವರ ವಾದವಾಗಿದೆ.


ಮರುಸ್ಥಾಪನೆಯ ಯೋಜನೆಯು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿರಬೇಕು ಎಂದು ತಿಳಿಸಿರುವ ಲಿಂಡ್ಸೆ ಮರುಸ್ಥಾಪನೆಗೆ ಲಭ್ಯವಿರುವ ವಿರಳ ಸಂಪನ್ಮೂಲಗಳು ಮತ್ತು ಭೂಮಿಯನ್ನು ಉತ್ತಮ ಪರಿಣಾಮಕ್ಕಾಗಿ ಬಳಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ಎಲಾನ್ ಮಸ್ಕ್, ಬಿಲ್‌ ಗೇಟ್ಸ್‌ಗಿಂತ ಶ್ರೀಮಂತ ಇವರು! ಸಾರ್ವಕಾಲಿಕ ರಿಚ್ಚೆಸ್ಟ್ ಪರ್ಸನ್ ಇವರಂತೆ!


ಹೆಚ್ಚಿನ ಪ್ರಯೋಗಗಳು ಅಗತ್ಯ


ಒಂದು ಪ್ರದೇಶದ ಅರಣ್ಯವು ಸಂಪೂರ್ಣ ನಾಶವಾದಾಗ ಮರು-ಅರಣ್ಯೀಕರಣದ ವಿಧಾನಗಳು ಕಡಿಮೆ ಯಶಸ್ವಿಯವಾಗಿವೆ ಎಂಬುದನ್ನು ಅಧ್ಯಯನ ತಂಡವು ಕಂಡುಹಿಡಿದಿದೆ. ವಿವಿಧ ಪರಿಸ್ಥಿತಿಗಳಲ್ಲಿ ಮರುಸ್ಥಾಪನೆಯ ಅತ್ಯಂತ ಸೂಕ್ತವಾದ ಮತ್ತು ವೆಚ್ಚ-ಪರಿಣಾಮಕಾರಿ ವಿಧಾನಗಳನ್ನು ಅಭಿವೃದ್ಧಿಪಡಿಸಲು ನೆರವಾಗುವ ಹೆಚ್ಚಿನ ಪ್ರಯೋಗಗಳ ಅಗತ್ಯವಿದೆ ಎಂಬುದನ್ನು ಸಂಶೋಧನೆ ಪತ್ತೆಹಚ್ಚಿದೆ.

Published by:Sandhya M
First published: