HOME » NEWS » Trend » RELIANCE RETAILS VOCAL FOR LOCAL MISSION EXPANDS TO 30000 ARTISANS AND OVER 40000 ARTISANAL PRODUCTS

ಸ್ಥಳೀಯ ಕುಶಲಕರ್ಮಿಗಳಿಗೆ ವೇದಿಕೆಯಾದ ರಿಲಯನ್ಸ್​ ರಿಟೇಲ್ಸ್​; 40 ಸಾವಿರ ಕರಕುಶಲ ವಸ್ತುಗಳ ಪ್ರದರ್ಶನ

ಭಾರತದ ಫ್ಯಾಷನ್​ ಮತ್ತು ಕರಕುಶಲ ವಸ್ತುಗಳ ಹುಡುಕಾಡುವ ಗ್ರಾಹಕರಿಗಾಗಿ ಅಜಿಯೋ ಜಾಲತಾಣವನ್ನು ಇನ್ನಷ್ಟು ವಿಸ್ತರಿಸಲಾಗಿದೆ. ಅಲ್ಲದೇ ಈ ಮೂಲಕ ದೇಶದ ಹಲವು ಭಾಗದ ಕರಕುಶಲ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ನಿರ್ವಹಿಸಲಾಗಿದೆ.

news18-kannada
Updated:November 23, 2020, 7:26 PM IST
ಸ್ಥಳೀಯ ಕುಶಲಕರ್ಮಿಗಳಿಗೆ ವೇದಿಕೆಯಾದ ರಿಲಯನ್ಸ್​ ರಿಟೇಲ್ಸ್​; 40 ಸಾವಿರ ಕರಕುಶಲ ವಸ್ತುಗಳ ಪ್ರದರ್ಶನ
ರಿಲಾಯನ್ಸ್ ಇಂಡಸ್ಟ್ರೀಸ್
  • Share this:
ಸ್ಥಳೀಯ ಕುಶಲಕರ್ಮಿಗಳ ಉತ್ತೇಜನಕ್ಕೆ ರಿಲಯನ್ಸ್​, ರೀಟೆಲ್ಸ್ ಮುಂದಾಗಿದೆ. ಇದೇ ಕಾರಣದಿಂದ ಹಬ್ಬದ ಈ ಸೀಸನ್​ನಲ್ಲಿ 50 ಕ್ಕೂ ಹೆಚ್ಚು 'ಭೌಗೋಳಿಕ ಸೂಚನೆ' (ಜಿಐ) ಕ್ಲಾಸ್ಟರ್​ಗಳಿಂದ ​ 40 ಸಾವಿರಕ್ಕೂ ಹೆಚ್ಚು ಕುಶಲಕರ್ಮಿಗಳು ತಯಾರಿಸಿರುವ ವಸ್ತುಗಳನ್ನು ಗ್ರಾಹರಕರ ಪ್ರದರ್ಶನಕ್ಕೆ ಮುಂದಾಗಿದೆ. ಮೂರು ವರ್ಷಗಳ ಈ ಸಹಭಾಗಿತ್ವದಲ್ಲಿ ಇಂಡಿಯ ಅಜಿಯೋ ಮತ್ತು ಸ್ವದೇಶ ಮಾರುಕಟ್ಟೆಯಲ್ಲಿ  30 ಸಾವಿರಕ್ಕೂ  ಹೆಚ್ಚು ಕುಶಲಕರ್ಮಿಗಳ  ಉತ್ಪನ್ನಗಳ ಪ್ರದರ್ಶನ ನಡೆಯಲಿದೆ. ಬಟ್ಟೆ, ಜವಳಿ ಮತ್ತು ಕರಕುಶಲ ವಸ್ತು ಸೇರಿದಂತೆ 600ಕ್ಕೂ ಹೆಚ್ಚು ಕಲಾ ವಸ್ತುಗಳು ಇದರಲ್ಲಿ ಪ್ರದರ್ಶನಗೊಳ್ಳಲಿವೆ.

ಇನ್ನು ಈ ಕುರಿತು ಮಾತನಾಡಿರುವ 'ರಿಲಯನ್ಸ್​ ಫ್ಯಾಷನ್​ ಮತ್ತು ಲೈಫ್​ಸ್ಟೈಲ್'​ ಅಧ್ಯಕ್ಷ ಅಖಿಲೇಶ್​ ಪ್ರಸಾದ್​, ಇಂದಿನ ಗ್ರಾಹಕರು ಕುಶಲಕರ್ಮಿಗಳ ಉತ್ಪನ್ನಗಳನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ಈ ಹಿನ್ನಲೆ ಅವರ ಕುಶಲಕರ್ಮಿಗಳೊಂದಿಗೆ ನೇರ ವ್ಯವಹಾರ ನಡೆಸಲು ಮುಂದಾಗಿದ್ದೇವೆ. ಈ ಮೂಲಕ ಕಳೆದ ಕೆಲವು ವರ್ಷಗಳಿಂದ ನಾವು ನಡೆಸುತ್ತಿರುವ ಅಭಿವೃದ್ಧಿ ಪ್ರಯತ್ನಕ್ಕೆ ಮತ್ತಷ್ಟು ಬಲ ಬಂದಿದೆ. ಸಾಂಪ್ರದಾಯಿಕ ಕರಕುಶಲ ಉತ್ಪನ್ನಗಳ ದೊಡ್ಡ ಸಂಗ್ರಹಕ್ಕೆ ರಿಲಯನ್ಸ್​ ರಿಟೇಲ್ಸ್​ ಆಧುನಿಕ ಸ್ವರೂಪ ನೀಡುವ ಮೂಲಕ ಅದರ ಬೇಡಿಕೆ ಹೆಚ್ಚಿಸಿದೆ. ಕರಕುಶಲ ವಸ್ತುಗಳ ಗುಣಮಟ್ಟ ಶೈಲಿಯನ್ನು ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಮೂಡಿಸುವ ಪ್ರಯತ್ನ ನಡೆಸಲಾಗಿದೆ ಎಂದರು.

ಬಟ್ಟೆಗಳ ಆನ್​ಲೈನ್​ ಮಾರುಕಟ್ಟೆ ಜಾಲತಾಣವಾದ 'ಅಜಿಯೋ' ಮೂಲಕ ಸಂಪ್ರದಾಯಕ, ಕೈಮಗ್ಗದ ಜವಳಿಗಳನ್ನು ಗ್ರಾಹಕರಿಗೆ ತಲುಪಿಸಲಾಗುವುದು. ಸಂಪ್ರದಾಯಿಕ ಉಡುಪುಗಳಿಗೆ ಆಧುನಿಕ ಕಂಟೆಂಪರರಿ ಟಚ್​ ನೀಡುವ ಉಡುಪು, ಗೃಹೋಪಯೋಗಿ ವಸ್ತು, ಸುಂದರ ಆಭರಣಗಳಿಗೆ ವಿಶಿಷ್ಟವಾಗಿ ವಿನ್ಯಾಸ ಮಾಡಲಾಗಿದೆ. ಇಕಾಟ್​, ಶಿಬೊರಿ, ಬನಾರಸಿ, ಜಮದಾನಿ, ತಂಗೈಲ್​, ಚಂದೇರಿ ಅಂತಹ ವಿಶಿಷ್ಟ ಭೌಗೋಳಿಕ ಸೂಚನೆ ಪಡೆದಿರುವ ಭಾರತದ ವಿಶಿಷ್ಟ ಕರಕುಶಲ ಬಟ್ಟೆಗಳನ್ನು ಗ್ರಾಹಕರಿಗೆ ತಲುಪಿಸಲಾಗುವುದು.

ಭಾರತದ ಫ್ಯಾಷನ್​ ಮತ್ತು ಕರಕುಶಲ ವಸ್ತುಗಳ ಹುಡುಕಾಡುವ ಗ್ರಾಹಕರಿಗಾಗಿ 'ಅಜಿಯೋ' ಜಾಲತಾಣವನ್ನು ಇನ್ನಷ್ಟು ವಿಸ್ತರಿಸಲಾಗಿದೆ. ಅಲ್ಲದೇ ಈ ಮೂಲಕ ದೇಶದ ಹಲವು ಭಾಗದ ಕರಕುಶಲ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ನಿರ್ವಹಿಸಲಾಗಿದೆ.

ದೇಶದ ಮೂಲೆ ಮೂಲೆಯಲ್ಲಿನ ವೈವಿಧ್ಯಮಯ, ವಿಶಿಷ್ಠ ಕರಕುಶಲವನ್ನು ಗ್ರಾಹಕರಿಗೆ ತಲುಪಿಸಲು ಆನ್​ಲೈನ್​ ಮಾರುಕಟ್ಟೆ ವೃದ್ಧಿಗೊಳಿಸುವ ಜೊತೆಗೆ ದೇಶದ ಸುಮಾರು 30 ಸಾವಿರ ಕುಶಲಕರ್ಮಿಗಳಿಗೆ ಈ ಮೂಲಕ ವೇದಿಕೆ ಕಲ್ಪಿಸಲಾಗಿದೆ. ನುರಿತ ಕುಶಲಕರ್ಮಿಗಳೊಂದಿಗೆ ನೇರ ಉದ್ಯೋಗದಲ್ಲಿ ತೊಡಗುವ ಮೂಲಕ ಅವರು ಮತ್ತು ನಾವು ಬೆಳೆಯಲು ಇದು ವೇದಿಕೆಯಾಗಿದೆ ಎಂದರು.
Published by: Seema R
First published: November 23, 2020, 7:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories