Reliance: ಮಾಧ್ಯಮ ಕ್ಷೇತ್ರಕ್ಕೆ ಪೈಪೋಟಿ ನೀಡಲು ಸಜ್ಜಾದ ರಿಲಯನ್ಸ್! ಏನು ಇದು ಹೊಸ ಪ್ಲ್ಯಾನ್?

Reliance: ಬೃಹತ್ ಆರ್ಥಿಕ ಯುದ್ಧದ ಖಜಾನೆಯೊಂದಿಗೆ, ತನ್ನ ಪ್ರತಿಸ್ಪರ್ಧಿಗಳಾದ ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‍ಫ್ಲಿಕ್ಸ್ ಹಾಗೂ ಡಿಸ್ನಿ ಹಾಟ್‍ಸ್ಟಾರ್‌ನೊಂದಿಗೆ ಸ್ಪರ್ಧಿಸಲು ರಿಲಯನ್ಸ್ ಮುಂದಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಾಧ್ಯಮ ಕ್ಷೇತ್ರದಲ್ಲಿನ ತನ್ನ ಹೂಡಿಕೆಯನ್ನು ದ್ವಿಗುಣಗೊಳಿಸಲು ಮುಂದಾಗಿರುವ ರಿಲಯನ್ಸ್ ಇಂಡಸ್ಟ್ರೀಸ್,(Reliance Industries) ತನ್ನ ವಯಾಕಾಮ್ (Viacom 18 unit) 18 ಘಟಕದಲ್ಲಿ ದೊಡ್ಡ ಬಂಡವಾಳ ಹೂಡಿಕೆದಾರರಿಗೆ ಅವಕಾಶ ನೀಡುವ ಮೂಲಕ ಪ್ರಸಾರ ಹಾಗೂ ಡಿಜಿಟಲ್ ವಲಯಗಳೆರಡಕ್ಕೂ ಬಲಿಷ್ಠ ಪ್ರಚೋದನೆ ನೀಡುವ ಮೂಲಕ ಬೃಹತ್ ಬಂಡವಾಳ ಹೂಡಲು ನಿರ್ಧರಿಸಿದೆ. ವಯಾಕಾಮ್18 ಹೂಡಿಕೆದಾರರಿಂದ12 ಸಾವಿರ ಕೋಟಿ ($1.6 ಬಿಲಿಯನ್) ರೂಪಾಯಿ (Big Investors) ಬಂಡವಾಳ ಸಂಗ್ರಹಿಸಲು ಮುಂದಾಗಿದೆ ಎಂದು ಮಾಧ್ಯಮ ವ್ಯವಹಾರದಲ್ಲಿರುವ (Media Business) ರಿಲಯನ್ಸ್ ಇಂಡಸ್ಟ್ರೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಕೂಡಾ ತನ್ನ ಸ್ವಂತ ಬಂಡವಾಳವನ್ನು ಹೂಡಲಿದೆ.

ಡಿಜಿಟಲ್ ಸೇವಾ ವ್ಯವಹಾರ
ಅಧಿಕಾರಿಗಳ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಸ್ಟಾರ್ ಆ್ಯಂಡ್ ಡಿಸ್ನಿ ಇಂಡಿಯಾದ ಮಾಜಿ ಅಧ್ಯಕ್ಷ ಉದಯ್ ಶಂಕರ್ ಹಾಗೂ ಜೇಮ್ಸ್ ಮುರ್ಡೋಕ್ ಅವರನ್ನು ವಯಾಕಾಮ್18ನ ಕಾರ್ಯತಂತ್ರದ ಪಾಲುದಾರರನ್ನಾಗಿಸಿಕೊಂಡಿದೆ. ಈ ಇಬ್ಬರೂ ಮಾಧ್ಯಮ ವ್ಯವಹಾರದ ಬೆಳವಣಿಗೆಯಲ್ಲಿ ಮುಖ್ಯ ಕೊಡುಗೆ ನೀಡುವ ಪಾತ್ರ ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇಂತಹ ಬೃಹತ್ ಆರ್ಥಿಕ ಯುದ್ಧದ ಖಜಾನೆಯೊಂದಿಗೆ, ತನ್ನ ಪ್ರತಿಸ್ಪರ್ಧಿಗಳಾದ ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‍ಫ್ಲಿಕ್ಸ್ ಹಾಗೂ ಡಿಸ್ನಿ+ಹಾಟ್‍ಸ್ಟಾರ್‌ನೊಂದಿಗೆ ಸ್ಪರ್ಧಿಸಲು ರಿಲಯನ್ಸ್ ಮುಂದಾಗಿದೆ. ರಿಲಯನ್ಸ್ ಜಿಯೋ ಇನ್ಫೊಕಾಮ್ ಮೂಲಕ ಡಿಜಿಟಲ್ ಸೇವಾ ವ್ಯವಹಾರದಲ್ಲಿ ಎಂತಹ ಪಲ್ಲಟವನ್ನು ಉಂಟು ಮಾಡಿತೋ ಅಂತಹುದೇ ವ್ಯೂಹವನ್ನು ಮಾಧ್ಯಮ ಕ್ಷೇತ್ರದಲ್ಲೂ ರಿಲಯನ್ಸ್ ಅಳವಡಿಸಿಕೊಂಡಿದೆ.

ಇದನ್ನೂ ಓದಿ: Reliance Industries: 3ನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ಗೆ ದಾಖಲೆಯ 20,539 ಕೋಟಿ ರೂ. ನಿವ್ವಳ ಲಾಭ

ವಿಡಿಯೋ ಸ್ಟ್ರೀಮಿಂಗ್ ಸೇವೆ
ವಯಾಕಾಮ್18 - ರಿಲಯನ್ಸ್‌ ನೆಟ್‍ವರ್ಕ್18 ಹಾಗೂ ವಯಾಕಾಮ್‍ಸಿಬಿಎಸ್‍ನ ಜಂಟಿ ಪಾಲುದಾರಿಕೆಯ ಸಂಸ್ಥೆಯಾಗಿದ್ದು, ಕ್ರಮವಾಗಿ ಶೇ. 51 ಹಾಗೂ ಶೇ. 49ರಷ್ಟು ಪಾಲನ್ನು ಹೊಂದಿವೆ. ರಿಲಯನ್ಸ್ ಅತಿ ದೊಡ್ಡ ಹೂಡಿಕೆ ಸಂಸ್ಥೆಯಾಗಿರುವುದರಿಂದ, ವಯಾಕಾಮ್‍ನ ಹೂಡಿಕೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಯಾಕಾಮ್ 18 ಎಂಟಿವಿ, ವಿಎಚ್‍1 ಹಾಗೂ ಕಾಮಿಡಿ ಸೆಂಟ್ರಲ್ ಅಲ್ಲದೆ ಕಲರ್ಸ್ ಬ್ರ್ಯಾಂಡ್ ಅಡಿ ವಿವಿಧ ಭಾಷೆಗಳಲ್ಲಿ ಉಪಗ್ರಹ ವಾಹಿನಿಗಳನ್ನು ಕಾರ್ಯಾಚರಿಸುತ್ತಿದೆ. ಇದಲ್ಲದೆ ವೂಟ್ ಎಂಬ ವಿಡಿಯೋ ಸ್ಟ್ರೀಮಿಂಗ್ ಸೇವೆಯನ್ನೂ ಒದಗಿಸುತ್ತಿದೆ.

ಜೀ ಎಂಟರ್‌ಟೈನ್‍ಮೆಂಟ್‍ ಹಾಗೂ ಸೋನಿ ಪಿಕ್ಚರ್ಸ್ ನೆಟ್‍ವರ್ಕ್ ವಿಲೀನಗೊಂಡು ವೀಕ್ಷಕರ ಸಂಖ್ಯೆಯನ್ನು ಆಧರಿಸಿ ಭಾರತದ ಅತಿ ದೊಡ್ಡ ಮನರಂಜನಾ ಜಾಲವಾಗಲು ಸಮ್ಮತಿಸಿದ ನಂತರ ವಯಾಕಾಮ್18 ಅನ್ನು ಈ ಜಂಟಿ ಸಂಸ್ಥೆಗಳಿಗೆ ಪ್ರತಿಸ್ಪರ್ಧಿಯನ್ನಾಗಿ ಬೆಳೆಸಲು ರಿಲಯನ್ಸ್ ನಿರ್ಧರಿಸಿದೆ. ಜೀ ಎಂಟರ್‌ಟೈನ್‍ಮೆಂಟ್‍ ಹಾಗೂ ಸೋನಿ ಪಿಕ್ಚರ್ಸ್ ನೆಟ್‍ವರ್ಕ್ ಜಂಟಿಯಾಗಿ ಶೇ. 26.7 ವೀಕ್ಷಕರ ಸಂಖ್ಯೆಯನ್ನು ಹೊಂದಿವೆ. ಮತ್ತೊಂದು ಪ್ರಮುಖ ಮನರಂಜನಾ ಜಾಲ ಸ್ಟಾರ್+ಡಿಸ್ನಿ ಶೇ. 18.6 ವೀಕ್ಷಕರನ್ನು ಹೊಂದಿದೆ.

ಆನ್‍ಲೈನ್ ವ್ಯವಹಾರ
ವಯಾಕಾಮ್18 53 ಮನರಂಜನಾ ವಾಹಿನಿಗಳನ್ನು ನೀಡುತ್ತಿದ್ದು, ಪ್ರತಿ ತಿಂಗಳು 600 ಮಿಲಿಯನ್ ಭಾರತೀಯರನ್ನು ತಲುಪುತ್ತಿದೆ. ಈ ಜಾಲವು ಕ್ರೀಡಾ ಖಾತೆಯನ್ನೂ ನಿರ್ಮಿಸಿಕೊಳ್ಳುವ ಪ್ರಯತ್ನದಲ್ಲಿದ್ದು, ಈಗಾಗಲೇ ರಾಷ್ಟ್ರೀಯ ಬ್ಯಾಸ್ಕೆಟ್‍ಬಾಲ್ ಒಕ್ಕೂಟ (ಎನ್‍ಬಿಎ), ಫೀಫಾ ವಿಶ್ವಕಪ್‍ 2022, ಇಟಲಿಯ ಫುಟ್‍ಬಾಲ್ ಲೀಗ್ ಸರಣಿ ಎ, ಸ್ಪ್ಯಾನಿಶ್ ಫುಟ್‍ಬಾಲ್ ಲೀಗ್‍ ಲಾ ಲೀಗಾ, ಫ್ರೆಂಚ್ ಫುಟ್‍ಬಾಲ್ ಲೀಗ್ ಲೀಗ್ 1, ಎಟಿಪಿ ಮಾಸ್ಟರ್ಸ್ (ಟೆನ್ನಿಸ್) ಹಾಗೂ ಅಬುಧಾಬಿ ಟಿ10 ಕ್ರಿಕೆಟ್ ಪ್ರಸಾರ ಹಕ್ಕುಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ: Reliance: ಗುಜರಾತ್‌ನಲ್ಲಿ ಹೊಸ ಇಂಧನ ಯೋಜನೆಗಳಲ್ಲಿ 6 ಟ್ರಿಲಿಯನ್ ರೂ. ಹೂಡಿಕೆ ಮಾಡಲಿದೆ ರಿಲಯನ್ಸ್‌

ಡಿಜಿಟಲ್ ವ್ಯವಹಾರದಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸುತ್ತಿರುವ ಜೀ-ಸೋನಿ ಸಾಮ್ರಾಜ್ಯದಂತೆಯೇ, ರಿಲಯನ್ಸ್ ಕೂಡಾ ಆನ್‍ಲೈನ್ ವ್ಯವಹಾರ ಕ್ಷೇತ್ರವನ್ನು ವಿಸ್ತರಿಸುವತ್ತ ಕಣ್ಣು ನೆಟ್ಟಿದೆ. ಡಿಜಿಟಲ್ ಮಾಧ್ಯಮ ಶೇ. 22-23ರಷ್ಟು ಬೆಳವಣಿಗೆ ಸಾಧಿಸುತ್ತಿದ್ದು, ಮಾಧ್ಯಮ ವಲಯದಲ್ಲಿಯೇ ಅತ್ಯಂತ ವೇಗವಾಗಿ ವೃದ್ಧಿಯಾಗುತ್ತಿರುವ ವಲಯವಾಗಿದೆ ಎನ್ನುತ್ತಾರೆ ವಿಶ್ಲೇಷಕರು.

ವಯಾಕಾಮ್‍18ನ ಸ್ಟ್ರೀಮಿಂಗ್ ಅಸ್ತ್ರವಾದ ವೂಟ್ ಮಾರ್ಚ್ 2020ರಲ್ಲಿ ಪ್ರಾರಂಭಗೊಂಡಿತ್ತು. ಅದು ಕೇವಲ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ 10 ಲಕ್ಷ ಚಂದಾದಾರರನ್ನು ಹೊಂದಿದೆ. ವಯಾಕಾಮ್18ನ ಎಸ್‍ಒವಿಡಿ ಹಾಗೂ ಅಂತಾರಾಷ್ಟ್ರೀಯ ವ್ಯವಹಾರಗಳ ಮುಖ್ಯಸ್ಥ ಫರ್ಜಾದ್ ಪಾಲಿಯಾ ಪ್ರಕಾರ, ಪ್ರಾದೇಶಿಕ ಭಾಷೆಗಳಲ್ಲಿ ಧಾರಾವಾಹಿಗಳಿಗೆ ಪ್ರಥಮ ಬೇಡಿಕೆಯಿದೆ ಎನ್ನುತ್ತಾರೆ. ಮುಂದಿನ 12 ತಿಂಗಳೊಳಗೆ ನಮ್ಮ ಪ್ರಾದೇಶಿಕ ಭಾಷಾ ಆಯ್ಕೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಿದ್ದೇವೆ” ಎನ್ನುತ್ತಾರವರು.
Published by:vanithasanjevani vanithasanjevani
First published: