ಇಬ್ಬರು ವ್ಯಕ್ತಿಗಳ ನಡುವೆ ಸ್ನೇಹ ಇರುವಂತೆ, ಎರಡು ಪ್ರಾಣಿಗಳ (Animals) ನಡುವೆ ಪ್ರೀತಿ ಇರುವುದನ್ನೂ ನೀವು ನೋಡಿರಬಹುದು. ಎರಡು ಪ್ರಾಣಿಗಳ ನಡುವೆ ನಡೆಯುವ ಮೋಜಿನ ಅದೆಷ್ಟೋ ವಿಡಿಯೋಗಳನ್ನೂ ನೀವು ನೋಡಿರಬಹುದು. ಕೆಲವೊಮ್ಮೆ ಪ್ರಾಣಿಗಳು ತುಂಬಾ ಅನಿರೀಕ್ಷಿತವಾಗಿ ವರ್ತಿಸುತ್ತವೆ, ಅವುಗಳು ಪ್ರಾಣಿಗಳು ಎಂದು ನಂಬುವುದು ಕಷ್ಟ. ಸಾಮಾಜಿಕ ಜಾಲತಾಣಗಳಲ್ಲಿ ಹಲವು ವೀಡಿಯೋಗಳು ಮನರಂಜನೆ ನೀಡುವುದಲ್ಲದೆ ಪ್ರಾಣಿಗಳಿಗೆ ಮಾನವೀಯತೆ, ಸ್ನೇಹದ (Friendship) ಪಾಠವನ್ನೂ ಕಲಿಸುತ್ತಿವೆ. ಸದ್ಯ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿದೆ. ಇದು ಬೆಕ್ಕು ಮತ್ತು ಹಿಮಸಾರಂಗ ನಡುವಿನ ಸ್ನೇಹವನ್ನು ತೋರಿಸುತ್ತದೆ.
ವನ್ಯಜೀವಿ ವೈರಲ್ ಸರಣಿಯಲ್ಲಿ, Instagram ನಲ್ಲಿ ಪ್ರಾಣಿ_lover_534 ಖಾತೆಯಿಂದ ಹಂಚಿಕೊಂಡ ವಿಡಿಯೋ ಹಿಮಸಾರಂಗ ಮತ್ತು ಬೆಕ್ಕಿನ ವೀಡಿಯೊವನ್ನು ನೋಡಿ ಆಶ್ಚರ್ಯಕರವಾಗಿದೆ. ವಾಸ್ತವವಾಗಿ, ಈ ಪ್ರಾಣಿಗಳನ್ನು ಒಟ್ಟಿಗೆ ನೋಡುವುದು ಅಪರೂಪ. ಆದರೆ ಈ ಎರಡು ಪ್ರಾಣಿಗಳು ಜೊತೆಯಾಗಿರುವುದು ಮಾತ್ರವಲ್ಲ, ಸ್ವಲ್ಪ ಸಮಯ ಮೋಜು ಮಾಡುತ್ತದೆ. ಈ ವಿಡಿಯೋಗೆ ಸುಮಾರು 30 ಲಕ್ಷ ಲೈಕ್‌ಗಳು ಬಂದಿವೆ.
ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಹಿಮಸಾರಂಗವನ್ನು ಕಾಣಬಹುದು. ಈ ಹಿಮಸಾರಂಗವು ಮನೆಯ ಹಿಂಬದಿಯಲ್ಲಿ ಮೇಯುತ್ತಿತ್ತು ಮತ್ತು ಅದನ್ನು ನೋಡಿದ ತಕ್ಷಣ ಬೆಕ್ಕು ಅದರ ಬಳಿಗೆ ಹೋಯಿತು. ಹಿಮಸಾರಂಗದ ಭಯಾನಕ ಮತ್ತು ತೀಕ್ಷ್ಣವಾದ ಕೊಂಬುಗಳನ್ನು ನೋಡಿದ ಬೆಕ್ಕು ಹಿಮಸಾರಣಗದ ಹಿಂದೆ ಕುಳಿತುಕೊಳ್ಳುತ್ತದೆ. ಸ್ವಲ್ಪ ಸಮಯದ ನಂತರ, ಹಿಮಸಾರಂಗದ ಕಾಲಿಗೆ ಬೆಕ್ಕು ಕಚ್ಚುತ್ತದೆ. ಹಿಮಸಾರಂಗ ಹೆದರಿ ಕಾಲಿನಲ್ಲಿ ಒದೆಯುತ್ತದೆ. ಬೆಕ್ಕು ಒಂದೇ ಸಲಿಗೆ ಸಖತ್ ಭಯ ಪಡುತ್ತದೆ.
ಇದನ್ನೂ ಓದಿ: ಕೆಲ್ಸ ಮಾಡಿಸಿಕೊಳ್ಳದೇ ವರ್ಷಕ್ಕೆ1 ಕೋಟಿ ಸ್ಯಾಲರಿ ಕೊಡುತ್ತಂತೆ! ಆದರೂ ಕಂಪನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನೌಕರ!
ಆದರೂ ಕೂಡ ಬೆಕ್ಕು ಅದೇ ಜಾಗದಲ್ಲಿ ಸುಮ್ಮನೆ ಕುಳಿತುಕೊಂಡಿರುತ್ತದೆ. ಹಿಮಸಾರಂಗಕ್ಕೆ ಬೆಕ್ಕನ್ನು ನೋಡಿ ಬಹುಶಃ ಅಯ್ಯೊ ಪಾಪ ಅಂತ ಅನಿಸ್ತು ಅಂತ ಕಾಣುತ್ತೆ. ಯಾಕೆಂದರೆ ಒದ್ದ ಕೆಲವೇ ಕ್ಷಣಗಳಲ್ಲಿ ಹಿಮಸಾರಂಗವು ಬೆಕ್ಕನ್ನು ಮುದ್ದು ಮಾಡಲು ಆರಂಭಿಸುತ್ತದೆ. ಆಗ ಬೆಕ್ಕು ಹೆದರುತ್ತದೆ. ಈ ವಿಡಿಯೋ ನೋಡಲು ಸಖತ್ ಮಜವಾಗಿದೆ ಜೊತೆಗೆ ಪಾಪಾ ಮೂಕಪ್ರಾಣಿಗಳು ಅಂತಲೂ ಅನಿಸುತ್ತದೆ.
View this post on Instagram
ಇದರ ನಡುವೆ ಇಂತಹ ಮೋಜಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ಧು ಮಾಡ್ತಾ ಇದೆ. ಹಳ್ಳಿಯ ಜೀವನವೇ ಚೆಂದ ಅಂತ ಈ ವಿಡಿಯೋಗೆ ಕಾಮೆಂಟ್ಗಳು ಬಂದಿದೆ. ಅರಣ್ಯ ಪ್ರಾಣಿಗಳಿಗೆ ಸಂಬಂಧಿಸಿದ ವಿವಿಧ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವೀಡಿಯೋವನ್ನು ಅನೇಕ ಜನರು ಇಷ್ಟಪಟ್ಟಿದ್ದಾರೆ. ಅಲ್ಲದೆ, ಈ ವೀಡಿಯೊಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಅನೇಕರು ಇದರ ಬಗ್ಗೆ ತಮಾಷೆಯ ಕಾಮೆಂಟ್‌ಗಳನ್ನು ಸಹ ಮಾಡುತ್ತಾರೆ. ಹಾಗಾಗಿಯೇ ವನ್ಯಜೀವಿಗಳಿಗೆ ಸಂಬಂಧಿಸಿದ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿವೆ. ಒಟ್ಟಿನಲ್ಲಿ ಆಹಾರ ತಿಂತಾ ಇದ್ದ ಹಿಮಸಾರಂಗಕ್ಕೆ ಪ್ರಾಣವನ್ನೇ ಬಾಯಿಗೆ ತರಿಸುವ ಕೆಲಸ ಮಾಡಿತ್ತು ಈ ಪುಟ್ಟ ಬೆಕ್ಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ