VIDEO: ಯುವಕನ ಹಾಡಿನ ಜತೆ ಕತ್ತೆ ರಾಗದ ಕಮಾಲ್..!

ಅಮೆರಿಕದ ದಕ್ಷಿಣ ಕ್ಯಾರೊಲಿನಾ ನಿವಾಸಿ ಟ್ರೆವಿಸ್ ಇತ್ತೀಚೆಗೆ ಲಯನ್ ಕಿಂಗ್ ಸಿನಿಮಾ ಥೀಮ್​ ಅನ್ನು ಹಾಡಲು ಶುರು ಹಚ್ಚಿಕೊಂಡಿದ್ದಾರೆ. ಇದು ಕೂಡ ತಮ್ಮ ಫಾರ್ಮ್​ನಲ್ಲಿ. ಒಂದೆಡೆ ಎಡಭಾಗದಲ್ಲಿ ಕುದುರೆ ನಿಂತಿದ್ದರೆ ಬಲ ಭಾಗದಲ್ಲಿ ಕತ್ತೆ ಸಾಥ್ ನೀಡಿತ್ತು.

news18
Updated:August 1, 2019, 4:59 PM IST
VIDEO: ಯುವಕನ ಹಾಡಿನ ಜತೆ ಕತ್ತೆ ರಾಗದ ಕಮಾಲ್..!
.
  • News18
  • Last Updated: August 1, 2019, 4:59 PM IST
  • Share this:
ಮನಸ್ಸಿಗೆ ಮತ್ತು ಆತ್ಮಕ್ಕೆ ಸಂತೋಷ ನೀಡುವ ಸಂಗೀತಕ್ಕೆ ಯಾವುದೇ ಜಾತಿ, ಧರ್ಮ, ಭಾಷೆಯ ಲೇಪ ಇಲ್ಲ. ಸಂಗೀತ ಎಂಬುದು ಎಲ್ಲೆಯನ್ನು ಮೀರಿದ್ದು ಎಂದು ಹೇಳುವುದುಂಟು. ಆದರೆ ಇದನ್ನೇ ನಿಜ ಮಾಡುವಲ್ಲಿ ಅಮೆರಿಕದ ಟ್ರೆವಿಸ್ ಕಿನ್ಲಿ ಯಶಸ್ವಿಯಾಗಿದ್ದಾರೆ.

ಅಮೆರಿಕದ ದಕ್ಷಿಣ ಕ್ಯಾರೊಲಿನಾ ನಿವಾಸಿ ಟ್ರೆವಿಸ್ ಇತ್ತೀಚೆಗೆ 'ಲಯನ್ ಕಿಂಗ್' ಸಿನಿಮಾ ಥೀಮ್​ ಅನ್ನು ಹಾಡಲು ಶುರು ಹಚ್ಚಿಕೊಂಡಿದ್ದಾರೆ. ಇದು ಕೂಡ ತಮ್ಮ ಫಾರ್ಮ್​ನಲ್ಲಿ. ಒಂದೆಡೆ ಎಡಭಾಗದಲ್ಲಿ ಕುದುರೆ ನಿಂತಿದ್ದರೆ ಬಲ ಭಾಗದಲ್ಲಿ ಕತ್ತೆ ಸಾಥ್ ನೀಡಿತ್ತು.

ಆದರೆ ಕುದುರೆಗೇನು ಗೊತ್ತು ಸಂಗೀತದ ಪರಿಮಳ ಎಂಬಂತೆ ಟ್ರೆವಿಸ್​ ಜೊತೆಯಾಗಿ ಕೊರಸ್ ಹಾಡಲು ಕತ್ತೆ ಪ್ರಾರಂಭಿಸಿಯೇ ಬಿಟ್ಟಿತ್ತು. ಥೀಮ್ ಸಂಗೀತವನ್ನು ಹಾಡುತ್ತಾ ಸಾಗುತ್ತಿದ್ದಂತೆ ಟ್ರೆವಿಸ್​ ಜತೆ ಕತ್ತೆ ಕೂಡ ತನ್ನದೇ ಧಾಟಿಯಲ್ಲಿ ಧ್ವನಿಗೂಡಿಸಿತು.

ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ಈಗಾಗಲೇ ಕತ್ತೆಯ ಹಾಡುಗಾರಿಕೆಯನ್ನು 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅಂದಹಾಗೆ ಟ್ರೆವಿಸ್​ ಜೊತೆಗಿದ್ದ ಕತ್ತೆಯನ್ನು ಕಾಯಬೇಕಿದ್ದರೆ ಒಂದಿಷ್ಟು ಸಂಗೀತ ಕೂಡ ಗೊತ್ತಿರಬೇಕಾಗುತ್ತದೆ ಎಂದು ಕೆಲವರು  ಹಾಸ್ಯ ಚಟಾಕಿ ಹಾರಿಸಿದ್ದಾರೆ.

First published:August 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...