ಇನ್ಶೂರೆನ್ಸ್ ( Insurance) ಮಾಡಿಸಬೇಕು, ಇದು ನಮ್ಮ ಫ್ಯೂಚರ್ಗೆ ಹೆಲ್ಪ್ ಆಗುತ್ತೆ ಎನ್ನೋದು ಹಲವಾರು ಜನರಿಗೆ ಗೊತ್ತಿರುತ್ತದೆ. ಆದರೆ, ಮಾಡಿಸಲು ಮಾತ್ರ ತುಂಬಾ ಸಲ ಹಿಂದೆ ಮುಂದೆ ಯೋಚನೆ ಮಾಡ್ತಾರೆ. ಇನ್ಶೂರೆನ್ಸ್ ಅನ್ನೋದು ನಿಜಕ್ಕೂ ಒಳ್ಳೆಯ ಕಡೆ ಮಾಡಿಸಬೇಕು. ಇದು ನಮ್ಮ ಸೇವಿಂಗ್ಸ್ ಅಂತ ಹೇಳಬಹುದು. ಇದು ಕೇವಲ ನಮ್ಮ ಕಾಲಕ್ಕೆ ಮಾತ್ರವಲ್ಲದೇ ಮುಂದಿನ ನಮ್ಮ ಪೀಳಿಗೆಗೂ ಹೆಲ್ಪ್ (Help) ಆಗುತ್ತೆ. ಜೀವ ವಿಮೆ, ವಿದ್ಯಾರ್ಥಿಗಳಿಗಾಗಿ (Students) ವಿಮೆ ಮತ್ತು ಆ್ಯಕ್ಷಿಡೆಂಟ್ ಆಗಿರೋದಕ್ಕೆ ಎಲ್ಲದಕ್ಕೂ ಇನ್ಶೂರೆನ್ಸ್ ಸಿಗುತ್ತೆ. ಇದೀಗ ಈ ಇನ್ಶೂರೆನ್ಸ್ಗೆ ಸಂಬಂಧ ಪಟ್ಟಂತಹ ಒಂದು ವಿಷಯ ಸಖತ್ ವೈರಲ್ ಆಗ್ತಾ ಇದೆ.
ಇಲ್ಲೊಬ್ಬನಿಗೆ ಬ್ರೇಕಪ್ ಆಗಿದ್ಯಂತೆ. ಅದಕ್ಕೆ ಇನ್ಶೂರೆನ್ಸ್ ಇಂದ ದುಡ್ಡು ಕ್ಲೈಮ್ ಆಗಿದ್ಯಂತೆ. ಈತನಿಗೆ ಸಿಕ್ಕಿದ್ದು ಎಷ್ಟು ಹಣ ಗೊತ್ತಾ? ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರ. ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬ ತಾನು ಹಾರ್ಟ್ಬ್ರೇಕ್ ಇನ್ಶೂರೆನ್ಸ್ ಫಂಡ್ನಿಂದ 25,000 ರುಪಾಯಿ ಪಡೆದಿದ್ದಾಗಿ ಹೇಳಿಕೊಂಡಿದ್ದಾರೆ.
ತನ್ನ ಗರ್ಲ್ಫ್ರೆಂಡ್ ಕೈಕೊಟ್ಟಿದ್ದರಿಂದ ತನಗೆ ರೀಫಂಡ್ ಬಂದಿತು ಎಂದು ಪ್ರತೀಕ್ ಆರ್ಯನ್ ಹೆಸರಿನ ಟ್ವಿಟ್ಟರ್ ಅಕೌಂಟ್ ಹೊಂದಿರುವ ವ್ಯಕ್ತಿ ಪೋಸ್ಟ್ ಹಾಕಿದ್ದಾರೆ. ನನ್ನ ಗರ್ಲ್ ಫ್ರೆಂಡ್ ನನಗೆ ಕೈ ಕೊಟಿದ್ದರಿಂದ ನನಗೆ 25,000 ರುಪಾಯಿ ಬಂದಿತು. ಇದು ಹಾರ್ಟ್ಬ್ರೇಕ್ ಇನ್ಶೂರೆನ್ಸ್ ಫಂಡ್ ಎಂದು ಪ್ರತಿಕ್ ಆರ್ಯನ್ ಟ್ವೀಟ್ ಮಾಡಿದ್ದಾರೆ.
ಏನಿದು ವೈರಲ್?
ಪ್ರತೀಕ್ ಆರ್ಯನ್ ಹೇಳಿಕೊಂಡಿರುವ ಪ್ರಕಾರ ಅವರು ಮತ್ತು ಮಾಜಿ ಗರ್ಲ್ ಫ್ರೆಂಡ್ ಮಧ್ಯೆ ಎರಡು ವರ್ಷದಿಂದ ರಿಲೇಶನ್ಶಿಪ್ ಇತ್ತು. ಅವರಿಬ್ಬರ ಸಂಬಂಧ ಆರಂಭವಾಗುವಾಗ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಹಾರ್ಟ್ಬ್ರೇಕ್ ಇನ್ಶೂರೆನ್ಸ್ ಫಂಡ್ ಎಂಬ ಜಾಯಿಂಟ್ ಅಕೌಂಟ್ ತೆರೆದಿದ್ದರು.
I got Rs 25000 because my girlfriend cheated on me .When Our relationship started we deposited a monthly Rs 500 each into a joint account during relationship and made a policy that whoever gets cheated on ,will walk away with all money.
That is Heartbreak Insurance Fund ( HIF ).
— Prateekaaryan (@Prateek_Aaryan) March 15, 2023
ಇದನ್ನೂ ಓದಿ: ಮೀಸೆ, ಗಡ್ಡ ಬಂತೆಂದು ಪತ್ನಿಯನ್ನು ಮನೆಯಿಂದ ಹೊರ ಹಾಕಿದ ಪತಿ, ಇದು ಗಡ್ಡ ಬಿಟ್ಟ ಮಹಿಳೆಯ ಕಥೆ!
ಪ್ರತೀಕ್ ಆರ್ಯನ್ ತನಗೆ ಈ ಸಂಬಂಧದಲ್ಲಿ ಗರ್ಲ್ಫ್ರೆಂಡ್ನಿಂದ ವಂಚನೆಯಾಗಿದ್ದು ತನಗೆ 25,000 ರುಪಾಯಿ ಬಂದಿದೆ ಎಂದು ಹೇಳಿಕೊಂಡಿದ್ದಾರೆ. ಎರಡು ವರ್ಷಗಳಿಂದ ಇಬ್ಬರೂ ತಲಾ 500 ರುಪಾಯಿ ಹಾಕಿದ್ದರಿಂದ 25 ಸಾವಿರ ರುಪಾಯಿ ಮೊತ್ತ ಖಾತೆಯಲ್ಲಿ ಜಮೆಯಾಗಿತ್ತು. ಇದರಲ್ಲಿ ಪ್ರತೀಕ್ ಆರ್ಯನ್ ಕೊಡುಗೆ ಕಳೆದರೆ 12,500 ರು ಹಣ ಅವರಿಗೆ ಪರಿಹಾರವಾಗಿ ಬಂದಂತಾಯಿತು.
ಪ್ರತೀಕ್ ಆರ್ಯನ್ ಅವರ ಈ ಟ್ವೀಟ್ನಲ್ಲಿರುವ ಪೋಸ್ಟ್ ಬಹಳ ವೈರಲ್ ಆಗುತ್ತಿದೆ. ಪ್ರತೀಕ್ ಆರ್ಯನ್ ತನ್ನ ಟ್ವಿಟ್ಟರ್ ಪ್ರೊಫೈಲ್ನಲ್ಲಿ ಹಾರ್ಟ್ಬ್ರೇಕ್ ಇನ್ಷೂರೆನ್ಸ್ ಫಂಡ್ನ ಸಿಇಒ ಮತ್ತು ಸ್ಥಾಪಕ ಎಂದು ಹಾಕಿಕೊಂಡಿರುವುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: 5 ಸೆಕೆಂಡಿನಲ್ಲಿ ಈ ಕಾಡಿನ ಚಿತ್ರದಲ್ಲಿರುವ ಕಪ್ಪೆಯನ್ನು ಹುಡುಕಿ ನೋಡೋಣ!
ಎಂಬಿಬಿಎಸ್ ಓದಿರುವುದಾಗಿ ಬರೆದಿರುವ ಅವರು ಮುಂದಿನ ರಿಲೇಶನ್ಶಿಪ್ನಲ್ಲಿ ಹಾರ್ಟ್ಬ್ರೇಕ್ ಇನ್ಷೂರೆನ್ಸ್ ಫಂಡ್ಗೆ ತಿಂಗಳಿಗೆ 50 ಸಾವಿರ ರೂಪಾಯಿ ಹಾಕುವುದಾಗಿ ಒಂದು ಕಮೆಂಟ್ನಲ್ಲಿ ಬರೆದಿದ್ದಾರೆ.
ಹುಡುಗಿ ಕೈಕೊಟ್ಟಳೆಂದು ಹಿಂದೆಲ್ಲಾ ಹುಡುಗರು ದೇವದಾಸರಾಗುತ್ತಿದ್ದರು. ಈಗ ಕಾಲ ಬದಲಾಗಿದೆ. ಬದಲಾದ ಕಾಲಕ್ಕೆ ತಕ್ಕಂತೆ ಈಗ ಹುಡುಗರೂ ಹೊಸ ಸಂಗಾತಿ ಹುಡುಕುತ್ತಾರೆ. ಈಗ ಹಾರ್ಟ್ಬ್ರೇಕ್ ಇನ್ಷೂರೆನ್ಸ್ ಫಂಡ್ನಂತಹ ಐಡಿಯಾವನ್ನು ತಮ್ಮ ಸಂಬಂಧಗಳಲ್ಲಿ ಅಳವಡಿಸಿದರೆ ಹುಡುಗರಿಗೆ ಒಳ್ಳೆಯ ಬ್ಯುಸಿನೆಸ್ ಫಂಡ್ ಕೂಡ ಆಗಬಹುದು ಎಂಬುದು ಕೆಲ ನೆಟ್ಟಿಗರ ಅನಿಸಿಕೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ