• Home
  • »
  • News
  • »
  • trend
  • »
  • ಹ್ಯಾಕರ್‌ಗಳು ದೋಚಿದ ಕ್ರಿಪ್ಟೋ ಕರೆನ್ಸಿಯ ಮೊತ್ತ ನೋಡಿದರೆ ನೀವು ದಂಗಾಗುವುದು ಖಚಿತ!

ಹ್ಯಾಕರ್‌ಗಳು ದೋಚಿದ ಕ್ರಿಪ್ಟೋ ಕರೆನ್ಸಿಯ ಮೊತ್ತ ನೋಡಿದರೆ ನೀವು ದಂಗಾಗುವುದು ಖಚಿತ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹ್ಯಾಕ್ ಮಾಡಿದ ಮೊತ್ತವು ಇತಿಹಾಸದಲ್ಲಿಯೇ ದಾಖಲೆಯ ಮೊತ್ತವಾಗಿದೆ ಎಂಬುದಾಗಿ ಪಾಲಿ ನೆಟ್‌ವರ್ಕ್ ಕಳ್ಳರಿಗೆ ಟ್ವೀಟ್ ಮಾಡಿದ ಸಂದೇಶದಲ್ಲಿ ತಿಳಿಸಿದೆ. ನೀವು ಕದ್ದಿರುವ ಹಣವು ಹಲವಾರು ಕ್ರಿಪ್ಟೋ ಸಮುದಾಯದಿಂದ ಬಂದಿರುವುದಾಗಿದೆ ಎಂಬುದನ್ನು ಕಂಪೆನಿ ತಿಳಿಸಿದೆ.

  • Share this:

ಕ್ರಿಪ್ಟೋ ಕರೆನ್ಸಿಯಲ್ಲಿ ಪ್ರಾವಿಣ್ಯತೆ ಪಡೆದಿರುವ ಸಂಸ್ಥೆಯ ಭದ್ರತೆಯನ್ನು ಭೇದಿಸಿ ಹ್ಯಾಕರ್‌ಗಳು ರೂ 44,63,13,00,000.0 ಮೌಲ್ಯದ ಸಾಗಾಣಿಕೆಯನ್ನು ಮಾಡಿರುವುದಾಗಿ ತಿಳಿಸಿದೆ. ಕ್ರಿಪ್ಟೋ ಕರೆನ್ಸಿಯನ್ನು ಸಂಗ್ರಹಿಸುವುದಕ್ಕಾಗಿ ವ್ಯಾಪಾರಿಗಳು “ವ್ಯಾಲೆಟ್‌ಗಳನ್ನು” ಚಲಾಯಿಸಲು ಕದ್ದಿರುವ ಎಥೆರಿಯಮ್, ಬಿನಾನ್ಸ್‌ಚೈನ್ ಮತ್ತು ಆಕ್ಸ್‌ಪಾಲಿಗನ್ ಟೋಕನ್‌ಗಳನ್ನು ತ್ಯಜಿಸುವಂತೆ ಪಾಲಿ ನೆಟ್‌ವರ್ಕ್ ಮನವಿ ಮಾಡಿದೆ.


ಹ್ಯಾಕ್ ಮಾಡಿದ ಮೊತ್ತವು ಇತಿಹಾಸದಲ್ಲಿಯೇ ದಾಖಲೆಯ ಮೊತ್ತವಾಗಿದೆ ಎಂಬುದಾಗಿ ಪಾಲಿ ನೆಟ್‌ವರ್ಕ್ ಕಳ್ಳರಿಗೆ ಟ್ವೀಟ್ ಮಾಡಿದ ಸಂದೇಶದಲ್ಲಿ ತಿಳಿಸಿದೆ. ನೀವು ಕದ್ದಿರುವ ಹಣವು ಹಲವಾರು ಕ್ರಿಪ್ಟೋ ಸಮುದಾಯದಿಂದ ಬಂದಿರುವುದಾಗಿದೆ ಎಂಬುದನ್ನು ಕಂಪೆನಿ ತಿಳಿಸಿದೆ. ಪಾಲಿ ನೆಟ್‌ವರ್ಕ್ ಪೊಲೀಸರ್ ಒಳಗೊಳ್ಳುವಿಕೆಯನ್ನು ಈ ಪ್ರಕರಣದಲ್ಲಿ ನಿರಾಕರಿಸಿದ್ದು, ಪರಿಹಾರ ರೂಪಿಸಿಕೊಳ್ಳುವ ಅವಕಾಶವನ್ನು ಹ್ಯಾಕರ್‌ಗಳಿಗೆ ನೀಡಿದೆ ಎಂಬುದಾಗಿ ಹೇಳಬಹುದಾಗಿದೆ.


ಈ ಕಾಮೆಂಟ್‌ಗೆ ಯುಎಸ್‌ನ ನ್ಯಾಯಾಂಗ ವಿಭಾಗ ಹಾಗೂ ಎಫ್‌ಬಿಐ ತುರ್ತಾಗಿ ಪ್ರತಿಕ್ರಿಯೆ ನೀಡಿಲ್ಲ. #PolyNetwork was attacked" (ಪಾಲಿ ನೆಟ್‌ವರ್ಕ್ ಮೇಲೆ ದಾಳಿ ಮಾಡಲಾಗಿದೆ) ಎಂಬ ವಿಷಾದನೀಯ ಸುದ್ದಿಯನ್ನು ನಾವು ಘೋಷಿಸುತ್ತಿದ್ದು ಆಸ್ತಿಗಳನ್ನು ಹ್ಯಾಕರ್ ನಿಯಂತ್ರಿತ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂಬುದಾಗಿ ಕಂಪೆನಿಯು ಸರಣಿ ಟ್ವೀಟ್‌ಗಳ ಮೂಲಕ ಮಾಹಿತಿ ನೀಡಿದೆ.


ಹ್ಯಾಕರ್‌ಗಳು ಬಳಸಿದ ಆನ್‌ಲೈನ್ ವಿಳಾಸಗಳನ್ನು ಪಾಲಿ ನೆಟ್‌ವರ್ಕ್ ಪೋಸ್ಟ್ ಮಾಡಿದ್ದು ಬಾಧಿತ ಬ್ಲಾಕ್‌ಚೈನ್ ಮತ್ತು ಕ್ರಿಪ್ಟೋ ವಿನಿಮಯಗಳ ಗಣಿಗಾರಿಕೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ತಿಳಿಸಿದೆ.


ಎಎಎಫ್‌ಪಿ ವಿನಂತಿಗೆ ಪಾಲಿ ನೆಟ್‌ವರ್ಕ್ ಪ್ರತಿಕ್ರಿಯಿಸಲಿಲ್ಲ, ಆದರೆ ಟ್ವಿಟರ್ ಬಳಕೆದಾರರು ಹ್ಯಾಕರ್‌ಗಳ ಸಾಗಣೆಯು ಸುಮಾರು $ 600 ಮಿಲಿಯನ್ (ರೂ 44,63,13,00,000.0 ಕೋಟಿ) ಮೌಲ್ಯದ ಲೆಕ್ಕಾಚಾರವನ್ನು ಮಾಡಿದ್ದಾರೆ.


ಏಪ್ರಿಲ್ ಅಂತ್ಯದ ವೇಳೆಗೆ ಕ್ರಿಪ್ಟೋಕರೆನ್ಸಿ ಕಳ್ಳತನಗಳು, ಹ್ಯಾಕ್‌ಗಳು ಮತ್ತು ವಂಚನೆಗಳು ಈ ವರ್ಷ ಒಟ್ಟು $ 432 ಮಿಲಿಯನ್ (ರೂ 32,14,38,45,600) ಎಂದು ಸೈಫರ್‌ಟ್ರೇಸ್‌ ವಿಶ್ಲೇಷಣೆ ನಡೆಸಿದೆ.


"ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಸಂಖ್ಯೆಯು ಚಿಕ್ಕದಾಗಿ ತೋರುತ್ತದೆಯಾದರೂ, ತೀಕ್ಷ್ಣವಾಗಿ ಗಮನಿಸಿದಾಗ ಆತಂಕಕಾರಿ ಹೊಸ ಪ್ರವೃತ್ತಿಯನ್ನು ಬಹಿರಂಗಪಡಿಸುತ್ತದೆ-ಡಿಫೈ-ಸಂಬಂಧಿತ ಹ್ಯಾಕ್‌ಗಳು ಈಗ ಒಟ್ಟು ಹ್ಯಾಕ್ ಮತ್ತು ಕಳ್ಳತನದ ಪರಿಮಾಣದ ಶೇಕಡಾ 60 ಕ್ಕಿಂತ ಹೆಚ್ಚು" ಎಂದು ಸೈಫರ್‌ಟ್ರೇಸ್ ಪೋಸ್ಟ್ ಮಾಡಿದೆ. 2019 ರ ಹೋಲಿಕೆಯನ್ನು ಸೈಫರ್‌ಟ್ರೇಸ್ ಮಾಡಿದ್ದು ಡೆಫಿ ಹ್ಯಾಕ್‌ಗಳು ವಾಸ್ತವಿಕವಾಗಿ ಅಸ್ತಿತ್ವದಲ್ಲಿಲ್ಲ.


Read: ಮಕ್ಕಳ ಮೂತ್ರದಿಂದ ಮೊಟ್ಟೆ ಬೇಯಿಸುತ್ತಾರೆ! ಈ ದೇಶದಲ್ಲಿ ವರ್ಜಿನ್​ ಎಗ್​ ಎಂದರೆ ಭಾರಿ ಫೇಮಸ್​!

ಮಾರುಕಟ್ಟೆಯಲ್ಲಿ ಪ್ರಸ್ತುತ ಕ್ರಿಪ್ಟೋ ಕರೆನ್ಸಿಯು ಬೇಡಿಕೆಯ ಮೌಲ್ಯವಾಗಿ ಸದ್ದುಮಾಡುತ್ತಿದ್ದು ಹೆಚ್ಚಿನ ಸೆಲೆಬ್ರಿಟಿಗಳು, ವ್ಯವಹಾರಸ್ಥರು, ವ್ಯಾಪಾರಸ್ಥರು ಇಂದು ಕ್ರಿಪ್ಟೋ ಹೂಡಿಕೆಯನ್ನು ಮಾಡುತ್ತಿದ್ದಾರೆ. ಇದೀಗ ಸುಪ್ರೀಂ ಕೋರ್ಟ್ ಕ್ರಿಪ್ಟೋ ವಹಿವಾಟಿಗೆ ಅನುಮತಿಯನ್ನು ನೀಡಿದ್ದು ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಗೆ ಅಧಿಕಾರ ನೀಡಿದೆ. ಈ ಮೊದಲು ಕ್ರಿಪ್ಟೋ ಕರೆನ್ಸಿಯ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದ್ದು ಕ್ರಿಪ್ಟೋ ವಹಿವಾಟು ಅಕ್ರಮವಲ್ಲ ಎಂಬುದಾಗಿ ತೀರ್ಪು ನೀಡಿದೆ.


ಈ ಹೊತ್ತಿನಲ್ಲಿಯೇ ಕ್ರಿಪ್ಟೋ ಕರೆನ್ಸಿಯ ಮೇಲೆ ಹೇರಿದ್ದ ನಿರ್ಬಂಧಗಳನ್ನು ಹಲವಾರು ದೇಶಗಳು ತೆರವು ಮಾಡಿದ ಬೆನ್ನಲ್ಲಿಯೇ ಕ್ರಿಪ್ಟೋ ಕ್ಷೇತ್ರದಲ್ಲಿ ಕೂಡ ವಂಚನೆ ನಡೆಯುತ್ತಿವೆ.


First published: