ಹೆಲ್ಮೆಟ್​​ ಧರಿಸದೆ ವಾಹನ ಚಾಲನೆ: ತಡೆಯಲು ಬಂದ ಪೊಲೀಸ್​ ಮೇಲೆಯೇ ಸ್ಕೂಟರ್​ ಓಡಿಸಿದ ಯುವಕ

Mumbai: ಟ್ರಾಫಿಕ್​ ಪೊಲೀಸರು ನಗರದಲ್ಲಿ ಹೆಲ್ಮೆಟ್​ ಧರಿಸದ ವಾಹನ ಸವಾರರನ್ನು ಹಿಡಿಯುತ್ತಿದ್ದರು. ಈ ವೇಳೆ ಸ್ಕೂಟರ್​ನಲ್ಲಿ ಬರುತ್ತಿದ್ದ ಸವಾರನೋರ್ವ ಸಂಚಾರಿ ಪೊಲೀಸರನ್ನು ನೋಡಿ ವಾಹನವನ್ನು ವೇಗವಾಗಿ ಚಲಾಯಿಸಿದ್ದಾನೆ.

news18
Updated:May 15, 2019, 10:15 PM IST
ಹೆಲ್ಮೆಟ್​​ ಧರಿಸದೆ ವಾಹನ ಚಾಲನೆ: ತಡೆಯಲು ಬಂದ ಪೊಲೀಸ್​ ಮೇಲೆಯೇ ಸ್ಕೂಟರ್​ ಓಡಿಸಿದ ಯುವಕ
ಮುಂಬೈ
  • News18
  • Last Updated: May 15, 2019, 10:15 PM IST
  • Share this:

​ಹೆಲ್ಮೆಟ್​ ಧರಿಸದ ವ್ಯಕ್ತಿಯೋರ್ವನ ವಾಹನ ಚಾಲನೆಯನ್ನು ತಡೆಯಲು ಯತ್ನಸಿದ ಪೊಲೀಸ್​​ ಪೇದೆಯ ಮೇಲೆ ಸ್ಕೂಟರ್​ ಓಡಿಸಿದ ಘಟನೆ ಮುಂಬೈ ನಗರದಲ್ಲಿ ನಡೆದಿದೆ. ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡುತ್ತಿರುವ  ದ್ವಿಚಕ್ರ ವಾಹನ ಸವಾರರನ್ನು ಹಿಡಿಯುತ್ತಿರುವ ವೇಳೆ ಈ ಘಟನೆ ನಡೆದಿದ್ದು, ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ದ್ವಿಚಕ್ರ ಸವಾರನ ಈ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.


ಮುಂಬೈ ಟ್ರಾಫಿಕ್​ ಪೊಲೀಸರು ನಗರದಲ್ಲಿ ಹೆಲ್ಮೆಟ್​ ಧರಿಸದ ವಾಹನ ಸವಾರರನ್ನು ಹಿಡಿಯುತ್ತಿದ್ದರು. ಈ ವೇಳೆ ಸ್ಕೂಟರ್​ನಲ್ಲಿ ಬರುತ್ತಿದ್ದ ಸವಾರನೋರ್ವ ಸಂಚಾರಿ ಪೊಲೀಸರನ್ನು ನೋಡಿ ವಾಹನವನ್ನು ವೇಗವಾಗಿ ಚಲಾಯಿಸಿದ್ದಾನೆ. ಅತ್ತ ತಡೆಯಲು ಬಂದ ಪೊಲೀಸ್​​​ ಪೇದೆಯ ಮೇಲೆ ಸ್ಕೂಟರ್​ ಓಡಿಸಿದ್ದಾನೆ. ಘಟನೆಯಿಂದ ಪೊಲೀಸ್​ ಪೇದೆಗೆ ಗಾಯವಾಗಿದ್ದು, ದ್ವಿಚಕ್ರ ಸವಾರನ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ.ಇದನ್ನೂ ಓದಿ:ಸಿಖ್ ಹತ್ಯಾಕಾಂಡ ಹೇಳಿಕೆಗೆ ಸ್ಯಾಮ್ ಪಿತ್ರೋಡರನ್ನು ಟೀಕಿಸುವ ನಾಟಕವಾಡಬೇಡಿ; ರಾಹುಲ್ ವಿರುದ್ಧ ಮೋದಿ ಕಿಡಿ'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ'
First published: May 14, 2019, 1:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading