Longevity Women: ಇತ್ತೀಚೆಗಷ್ಟೇ 128ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ದಕ್ಷಿಣ ಆಫ್ರಿಕಾದ ಈ ವೃದ್ಧೆ!

ಕೆಲವು ಜನರು ತಮ್ಮ ಸರಿಯಾದ ಆಹಾರ ಮತ್ತು ಜೀವನಶೈಲಿಯಿಂದ ದೀರ್ಘಾಯುಷ್ಯ ಪಡೆದುಕೊಳ್ತಾರೆ. ಅಂತಹ ಮಹಿಳೆಯೊಬ್ಬರು ಇದ್ದಾರೆ. ಅವರು ಇತ್ತೀಚೆಗೆ ಮೇ 11 ರಂದು ತಮ್ಮ 128 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಜೋಹಾನ್ನಾ ಮಜಿಬುಕೊ

ಜೋಹಾನ್ನಾ ಮಜಿಬುಕೊ

  • Share this:
    ದೀರ್ಘಾಯುಷಿಗಳಾಗಿ (Longevity) ಬದುಕಲು (Life) ಯಾರಿಗೆ ತಾನೇ ಇಷ್ಟವಿಲ್ಲ (Like). ಎಲ್ಲರೂ ದೀರ್ಘಕಾಲ ಆರೋಗ್ಯವಂತರಾಗಿ (Healthy) ಬದುಕಲು ಸಾಕಷ್ಟು ಪ್ರಯತ್ನ ಪಡುತ್ತಲೇ ಇರುತ್ತಾರೆ. ದೀರ್ಘಾಯುಷಿಗಳಾಗಲು ಸಾಕಷ್ಟು ಹಸಿರು ತರಕಾರಿ (Vegetables), ತರಕಾರಿ ಸೇವನೆ, ಯೋಗ, ವ್ಯಾಯಾಮ ಮಾಡುವುದನ್ನು ನೀವು ನೋಡಿದ್ದೀರಿ. ಅದಾಗ್ಯೂ ಇತ್ತೀಚಿನ ದಿನಗಳಲ್ಲಿ ತಪ್ಪು ಆಹಾರ ಮತ್ತು ಕೆಟ್ಟ ಜೀವನಶೈಲಿಯಿಂದಾಗಿ, ಚಿಕ್ಕ ವಯಸ್ಸಿನಲ್ಲೇ ಅನೇಕ ರೋಗಗಳು ಜನರನ್ನು ಮುತ್ತುತ್ತಿವೆ. ಇವಗಳಲ್ಲಿ ಅನೇಕರು ಮಾರಣಾಂತಿಕ ಕಾಯಿಲೆಗೆ ತುತ್ತಾಗುತ್ತಿದ್ದು, ಜೀವ ಬಿಟ್ಟಿದ್ದಾರೆ. ಇದರಿಂದಾಗಿ ಅನೇಕ ಬಾರಿ ವ್ಯಕ್ತಿ ಅಕಾಲಿಕ ಮರಣ ಹೊಂದುತ್ತಾನೆ. ಇದರ ಮಧ್ಯೆ ಒಳ್ಳೆಯ ಆಹಾರ ಸೇವಿಸಿ ಬದುಕು ಕಂಡುಕೊಂಡವರೂ ಇದ್ದಾರೆ.

    128 ನೇ ಹುಟ್ಟುಹಬ್ಬ ಆಚರಿಸಿಕೊಂಡ ದೀರ್ಘಾಯುಷಿ ಮಹಿಳೆ

    ಕೆಲವು ಜನರು ತಮ್ಮ ಸರಿಯಾದ ಆಹಾರ ಮತ್ತು ಜೀವನಶೈಲಿಯಿಂದ ದೀರ್ಘಾಯುಷ್ಯ ಪಡೆದುಕೊಳ್ತಾರೆ. ಅಂತಹ ಮಹಿಳೆಯೊಬ್ಬರು ಇದ್ದಾರೆ. ಅವರು ಇತ್ತೀಚೆಗೆ ಮೇ 11 ರಂದು ತಮ್ಮ 128 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೀಗ ಅವರು ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಕರೆಯಿಸಿಕೊಂಡಿದ್ದಾರೆ.

    ದಕ್ಷಿಣ ಆಫ್ರಿಕಾದಲ್ಲಿ 11 ಮೇ 1894 ರಂದು ಜೋಹಾನ್ನಾ ಮಜಿಬುಕೊ ಜನಿಸಿದರು. ಮತ್ತು 12 ಮಂದಿ ಸಹೋದರರಲ್ಲಿ ಜೋಹಾನ್ನಾ ಹಿರಿಯ ಮಗಳಾಗಿದ್ದಾರೆ.

    ಇದನ್ನೂ ಓದಿ: ನಿಮ್ಮ ತ್ವಚೆಯ ಗುಣ ಯಾವುದು? ಈ ತರದ ಸ್ಕಿನ್ ಇದ್ದೋರು ತೆಂಗಿನೆಣ್ಣೆ ಬಳಸೋ ಮುನ್ನ ಎಚ್ಚರ ವಹಿಸಿ

    ಜೊಹಾನ್ನಾ ದೀರ್ಘಾಯುಷ್ಯದ ಗುಟ್ಟು

    ಜೊಹಾನ್ನಾ ಅವರು ಸ್ಥಳೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿರುವ ಪ್ರಕಾರ, 'ನಮ್ಮ ಕುಟುಂಬ ಅನಕ್ಷರಸ್ಥವಾಗಿತ್ತು. ಮತ್ತು ನಾವು ಹೊಲಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದೆವು. ನನಗೆ ಚೆನ್ನಾಗಿ ನೆನಪಿದೆ. ನಾನು ಚಿಕ್ಕವಳಿದ್ದಾಗ ಹೊಲಗಳಲ್ಲಿ ಮಿಡತೆಗಳು ದಾಳಿ ಮಾಡುತ್ತಿದ್ದವು. ಆ ಮಿಡತೆಗಳನ್ನು ಹಿಡಿದು ಹುರಿದು ತಿನ್ನುತ್ತಿದ್ದೆವು ಎಂದಿದ್ದಾರೆ.

    ಹಾಲು ಮತ್ತು ಕಾಡು ಪಾಲಕ್ ತಿನ್ನುತ್ತಿದ್ದೆ

    ಜೋಹಾನ್ನಾ ಪ್ರಕಾರ 'ಈಗ ನಾನು ಇಂದಿನ ಆಹಾರವನ್ನು ತಿನ್ನುತ್ತೇನೆ. ಆದರೆ ನನ್ನ ಬಾಲ್ಯದ ಆ ಆಹಾರವನ್ನು ಹಾಲು ಮತ್ತು ಕಾಡು ಪಾಲಕ ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನಾನು ಒಬ್ಬ ಮುದುಕನನ್ನು ಮದುವೆಯಾಗಿದ್ದೆ. ಅವನ ಹೆಸರು ಸ್ಟಾವಾನಾ ಮಜಿಬುಕೊ.

    ನನ್ನ ಗಂಡನ ಮೊದಲ ಹೆಂಡತಿ ತೀರಿಕೊಂಡಿದ್ದಳು. ನನ್ನ ಗಂಡನಿಗೆ ಸಾಕಷ್ಟು ಹಸು ಮತ್ತು ಕುದುರೆ ಲಾಯಗಳಿದ್ದವು. ನನ್ನ ಪತಿ ಮತ್ತು ಅವರ ಮೊದಲ ಪತ್ನಿ ಮೆಸ್ಟ್ವಾನಾ ಅವರಿಗೆ 7 ಮಕ್ಕಳಿದ್ದರು, ಅವರಲ್ಲಿ 2 ಮಂದಿ ಇನ್ನೂ ಜೀವಂತವಾಗಿದ್ದಾರೆ. ಮೆಸ್ತ್ವಾನಾ ಮತ್ತು ನನ್ನ 2 ಮಕ್ಕಳ ಜೊತೆಗೆ, ನನಗೆ ಸುಮಾರು 50 ಮೊಮ್ಮಕ್ಕಳಿದ್ದಾರೆ. ತಾವು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಮ್ಮ ಪರಿಚಯವನ್ನು ಅನುಭವವನ್ನು ಹೇಳಿದ್ದಾರೆ.

    ಗದ್ದೆಯಲ್ಲಿ ಕೆಲಸ ಮಾಡುವ ಜೊತೆಗೆ ಇತರೆ ಕೆಲಸ ಮಾಡುತ್ತಾರೆ

    'ಮದುವೆಯಾದ ನಂತರ ಜೊಹಾನ್ನಾ ಗದ್ದೆಯಲ್ಲಿ ಕೆಲಸ ಮಾಡುವುದಲ್ಲದೆ, ಬಟ್ಟೆ ಒತ್ತುವುದು, ಸ್ವಚ್ಛಗೊಳಿಸುವ ಕೆಲಸವನ್ನೂ ಮಾಡುತ್ತಿದ್ದರಂತೆ. ಯಾರ ಬಳಿಗೆ ಹಣ ಇರುವುದಿಲ್ಲವೋ ಅವರು ತುಂಬಾ ಕಷ್ಟ ಪಡಬೇಕಾಗುತ್ತದೆ. ಇದನ್ನೇ ತಾವು ನಂಬುತ್ತೇನೆ. ನಾನು ಈಗ ಸರಿಯಾಗಿ ಕೇಳಲು ಸಾಧ್ಯವಿಲ್ಲ ಆದರೆ ನಾನು ಎಲ್ಲವನ್ನೂ ನೋಡುತ್ತೇನೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಮೇಕೆ ಹಾಲು ಕುಡಿದರೆ ಗ್ಯಾಸ್ಟ್ರಿಕ್ ಇರಲ್ಲ, ಮಕ್ಕಳಿಗೆ ಕೊಟ್ಟರೆ ಸಿಗೋ ಆರೋಗ್ಯ ಲಾಭಗಳಿವು

    ದೇಹ ಈಗ ಗಟ್ಟಿಯಾಗುತ್ತಿದ್ದು, ನಡೆಯಲು ಕಷ್ಟವಾಗುತ್ತಿದೆ

    ಈಗ ತನ್ನ ದೇಹವು ಗಟ್ಟಿಯಾಗಲು ಪ್ರಾರಂಭಿಸುತ್ತಿದೆ. ಮತ್ತು ನಡೆಯಲು ಕಷ್ಟವಾಗುತ್ತಿದೆ ಎಂದು ಜೋಹಾನ್ನಾ ಹೇಳಿದ್ದಾರೆ. 'ಜನರು ನಡೆಯುವುದನ್ನು ನೋಡಿದಾಗ ನನಗೂ ಅವರಂತೆ ನಡೆಯಬೇಕು  ಅನಿಸುತ್ತದೆ’. 2001 ರಿಂದ ಒಬ್ಬ ನರ್ಸ್ ಜೊತೆಗೆ ಇರುತ್ತಾರೆ. ಅವಳು ನನಗೆ ತುಂಬಾ ಸ್ಪೆಷಲ್ ಆಗಿದ್ದಾಳೆ.
    Published by:renukadariyannavar
    First published: