• Home
  • »
  • News
  • »
  • trend
  • »
  • Animal Extinction: 550 ಮಿಲಿಯನ್ ವರ್ಷಗಳ ಹಿಂದೆ ಪ್ರಾಣಿಗಳ ಅಳಿವಿಗೆ ಕಾರಣವಾಯ್ತು ಈ ಅಂಶ!

Animal Extinction: 550 ಮಿಲಿಯನ್ ವರ್ಷಗಳ ಹಿಂದೆ ಪ್ರಾಣಿಗಳ ಅಳಿವಿಗೆ ಕಾರಣವಾಯ್ತು ಈ ಅಂಶ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಜಾಗತಿಕ ತಾಪಮಾನ ಮತ್ತು ಆಮ್ಲಜನಕರಹಿತ ಘಟನೆಗಳಂತಹ ಪರಿಸರ ಬದಲಾವಣೆಗಳು ಪ್ರಾಣಿಗಳ ಬೃಹತ್ ಅಳಿವಿಗೆ ಕಾರಣವಾಗಬಹುದು ಮತ್ತು ಪರಿಸರ ವ್ಯವಸ್ಥೆಯ ಆಳವಾದ ತೊಂದರೆ ಮತ್ತು ಮರುಸಂಘಟನೆಗೆ ಕಾರಣವಾಗಬಹುದು ಎಂದು ಗ್ಲೋಬಲ್ ಚೇಂಜ್ ಸೆಂಟರ್‌ನ ಅಂಗಸಂಸ್ಥೆ ಸದಸ್ಯರಾದ ಕ್ಸಿಯಾವೊ ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

ವರ್ಜೀನಿಯಾ ಟೆಕ್ ಜಿಯೋಬಯಾಲಜಿಸ್ಟ್‌ಗಳ (Biologist) ಹೊಸ ಅಧ್ಯಯನವು (Study) ಪ್ರಾಣಿಗಳ ಮೊದಲ ಸಾಮೂಹಿಕ ಅಳಿವಿನ ಕಾರಣವನ್ನು ಪತ್ತೆಹಚ್ಚಿದ್ದು, ಜಾಗತಿಕ ಆಮ್ಲಜನಕದ (Oxygen) ಲಭ್ಯತೆ ಕಡಿಮೆಯಾಗಿರುವುದರಿಂದ ಇದು ಸಂಭವಿಸಿದೆ ಎಂಬುದು ತಿಳಿದುಬಂದಿದೆ. ಆಮ್ಲಜನಕ ಲಭ್ಯತೆಯು ಕಡಿಮೆಯಾಗಿದ್ದರಿಂದ ಎಡಿಯಾಕಾರನ್ ಅವಧಿಯ (Time) ಕೊನೆಯಲ್ಲಿ ಅಂದರೆ ಸುಮಾರು 550 ಮಿಲಿಯನ್ ಪ್ರಾಣಿಗಳ ಅಳಿವು ಉಂಟಾಗಿದೆ ಎಂಬುದು ಅಧ್ಯಯನವು ತಿಳಿಸಿದೆ.


80% ಪ್ರಾಣಿಗಳ ಸಮೂಹಿಕ ಅಳಿವು
ವರ್ಜೀನಿಯಾ ಟೆಕ್ ಕಾಲೇಜ್ ಆಫ್ ಸೈನ್ಸ್‌ನ ಭಾಗವಾಗಿರುವ ಭೂವಿಜ್ಞಾನ ವಿಭಾಗದ ಪೋಸ್ಟ್‌ಡಾಕ್ಟರಲ್ ಸಂಶೋಧಕ ಸ್ಕಾಟ್ ಇವಾನ್ಸ್ ನೇತೃತ್ವದ ಸಂಶೋಧನೆಯು ಈ ಮಧ್ಯಂತರದಲ್ಲಿ ಸುಮಾರು 80% ದಷ್ಟು ಪ್ರಾಣಿಗಳ ಈ ಆರಂಭಿಕ ಸಾಮೂಹಿಕ ಅಳಿವನ್ನು ತೋರಿಸಿದೆ. ಅನೇಕ ವಿಧದ ಪ್ರಾಣಿಗಳ ನಷ್ಟವನ್ನು ಈ ಮಾಹಿತಿ ತೋರಿಸಿದ್ದು, ಪ್ರಾಣಿಗಳ ದೇಹದ ಯೋಜನೆಗಳು ಹಾಗೂ ವರ್ತನೆಗಳು ಗಮನಾರ್ಹ ಪ್ರಮಾಣದ ಆಮ್ಲಜನಕವನ್ನು ಅವಲಂಬಿಸಿವೆ ಎಂಬುದನ್ನು ಸೂಚಿಸಿದ್ದಾರೆ.


ಆಮ್ಲಜನಕದ ಕೊರತೆ
ಅದೂ ಅಲ್ಲದೆ ಆಮ್ಲಜನಕದ ಕೊರತೆಯು ಅವುಗಳ ನಷ್ಟಕ್ಕೆ ಕಾರಣವಾಗಿವೆ ಎಂಬುದನ್ನು ಇವಾನ್ಸ್ ಗುರುತಿಸಿದ್ದಾರೆ. ಭೌಗೋಳಿಕ ದಾಖಲೆಯಲ್ಲಿನ ಎಲ್ಲಾ ಇತರ ಸಾಮೂಹಿಕ ಅಳಿವಿನಂತೆಯೇ ಅಳಿವಿನ ಘಟನೆಯು ಪರಿಸರೀಯವಾಗಿ ನಿಯಂತ್ರಿಸಲಾಗಿದೆ ಎಂದು ಇದು ಸೂಚಿಸುತ್ತದೆ.


ಇವಾನ್ಸ್ ಅಧ್ಯಯನ: ಪ್ರಾಣಿಗಳ ಅಳಿವಿಗೆ ಕಾರಣಗಳೇನು?
ಇವಾನ್ಸ್ ಅವರ ಅನ್ವೇಷಣೆಯು ನವೆಂಬರ್ 7 ರಂದು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್‌ನಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನಕ್ಕೆ ಭೂವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಶುಹೈ ಕ್ಸಿಯಾವೊ ಸಹ-ಲೇಖಕರಾಗಿದ್ದಾರೆ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ರಿವರ್‌ಸೈಡ್‌ನ ಭೂ ಮತ್ತು ಗ್ರಹ ವಿಜ್ಞಾನ ವಿಭಾಗದ ಮೇರಿ ಡ್ರೋಸರ್ ನೇತೃತ್ವದ ಹಲವಾರು ಸಂಶೋಧಕರು ಈ ಅಧ್ಯಯನಕ್ಕೆ ಕೆಲಸ ಮಾಡಿದ್ದಾರೆ. ಇವಾನ್ಸ್ ತಮ್ಮ ಸ್ನಾತಕೋತ್ತರ ಪದವಿ ಮತ್ತು ಪಿಎಚ್‌ಡಿ ಗಳಿಸಿದ್ದಾರೆ.


ಇದನ್ನೂ ಓದಿ: ಕೈ ಮೇಲೆ ಮೂಗನ್ನು ಬೆಳೆಸಿ, ಮಹಿಳೆಯ ಮುಖಕ್ಕೆ ಕಸಿ ಮಾಡಿದ ವೈದ್ಯರು!


ಪರಿಸರ ಬದಲಾವಣೆಗಳು ಪ್ರಾಣಿಗಳ ಅಳಿವಿಗೆ ಕಾರಣ
ಜಾಗತಿಕ ತಾಪಮಾನ ಮತ್ತು ಆಮ್ಲಜನಕರಹಿತ ಘಟನೆಗಳಂತಹ ಪರಿಸರ ಬದಲಾವಣೆಗಳು ಪ್ರಾಣಿಗಳ ಬೃಹತ್ ಅಳಿವಿಗೆ ಕಾರಣವಾಗಬಹುದು ಮತ್ತು ಪರಿಸರ ವ್ಯವಸ್ಥೆಯ ಆಳವಾದ ತೊಂದರೆ ಮತ್ತು ಮರುಸಂಘಟನೆಗೆ ಕಾರಣವಾಗಬಹುದು ಎಂದು ಗ್ಲೋಬಲ್ ಚೇಂಜ್ ಸೆಂಟರ್‌ನ ಅಂಗಸಂಸ್ಥೆ ಸದಸ್ಯರಾದ ಕ್ಸಿಯಾವೊ ತಿಳಿಸಿದ್ದಾರೆ.


ಜಾಗತಿಕ ಆಮ್ಲದ ಕುಸಿತಕ್ಕೆ ಕಾರಣಗಳು
ಜಾಗತಿಕ ಆಮ್ಲದ ಕುಸಿತಕ್ಕೆ ನಿಖರವಾದ ಕಾರಣವೇನು ಎಂಬುದು ಇನ್ನೂ ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಇವಾನ್ಸ್ ತಿಳಿಸಿದ್ದಾರೆ. ಆಮ್ಲಜನಕ ಕುಸಿತಕ್ಕೆ ಜ್ವಾಲಾಮುಖಿ ಸ್ಫೋಟ, ಟೆಕ್ಟೋನಿಕ್ ಪ್ಲೇಟ್ ಚಲನೆ, ಕ್ಷುದ್ರಗ್ರಹ ಪ್ರಭಾವ, ಇತ್ಯಾದಿಗಳ ಯಾವುದೇ ಸಂಖ್ಯೆ ಮತ್ತು ಸಂಯೋಜನೆಯಾಗಿರಬಹುದು ಎಂಬುದು ಇವಾನ್ಸ್ ಅಭಿಪ್ರಾಯವಾಗಿದೆ.


ಶುದ್ಧ ನೀರಿನ ಮೇಲೆ ಪರಿಣಾಮ
ಆಮ್ಲಜನಕದ ಲಭ್ಯತೆಯ ನಷ್ಟವು ಪ್ರಪಂಚದ ಶುದ್ಧ ನೀರಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕಂಡುಹಿಡಿದಿದ್ದಾರೆ ಇದಕ್ಕೆ ಕಾರಣ ಹವಾಮಾನ ಬದಲಾವಣೆಯಿಂದ ಉಂಟಾಗುವ ನೀರಿನ ತಾಪಮಾನ ಮತ್ತು ಭೂ ಬಳಕೆಯಿಂದ ಹೆಚ್ಚಿನ ಮಾಲಿನ್ಯಕಾರಕ ಹರಿವಾಗಿದೆ. ಬೆಚ್ಚಗಾಗುವ ನೀರು ಆಮ್ಲಜನಕವನ್ನು ಹಿಡಿದಿಟ್ಟುಕೊಳ್ಳುವ ಶುದ್ಧ ನೀರಿನ ಸಾಮರ್ಥ್ಯವನ್ನು ಕುಗ್ಗಿಸುತ್ತದೆ, ಆದರೆ ಸಿಹಿನೀರಿನ ಸೂಕ್ಷ್ಮಜೀವಿಗಳ ಹರಿವಿನಲ್ಲಿ ಪೋಷಕಾಂಶಗಳ ವಿಭಜನೆಯು ಆಮ್ಲಜನಕವನ್ನು ಹೀರಿಕೊಳ್ಳುತ್ತದೆ.


ನಮ್ಮ ಅಧ್ಯಯನವು ಭೂಮಿಯ ಹಿಂದಿನ ಎಲ್ಲಾ ಸಾಮೂಹಿಕ ಅಳಿವಿನಂತೆ, ಪ್ರಾಣಿಗಳ ಈ ಹೊಸ, ಮೊದಲ ಸಾಮೂಹಿಕ ಅಳಿವು ಪ್ರಮುಖ ಹವಾಮಾನ ಬದಲಾವಣೆಯಿಂದ ಉಂಟಾಗಿದೆ ಎಂಬುದನ್ನು ತೋರಿಸುತ್ತದೆ. ಎಂದು ಇವಾನ್ಸ್ ತಿಳಿಸಿದ್ದಾರೆ.


ಸಾಮೂಹಿವು ಅಳಿವು
ಸಾಮೂಹಿಕ ಅಳಿವುಗಳು ಈ ಗ್ರಹದಲ್ಲಿನ ಜೀವನದ ವಿಕಸನೀಯ ಪಥದಲ್ಲಿ ಗಮನಾರ್ಹ ಹಂತಗಳಾಗಿ ಗುರುತಿಸಲಾಗಿದೆ ಎಂದು ಇವಾನ್ಸ್ ಮತ್ತು ತಂಡವು ಅಧ್ಯಯನದಲ್ಲಿ ಉಲ್ಲೇಖಿಸಿದ್ದಾರೆ. ಇತರ ಅಧ್ಯಯನಕಾರರು ಸಂಪೂರ್ಣವಾಗಿ ಪ್ರಾಣಿಗಳ ಅಳಿವಿನ ಸಾಧ್ಯತೆ ಇದೆ ಎಂದು ತಿಳಿಸಿದ್ದು ಇದನ್ನು ಪರೀಕ್ಷಿಸಲು ಇವಾನ್ಸ್, ಕ್ಸಿಯಾವೊ ಮತ್ತು ಅವರ ತಂಡವು ಹೆಚ್ಚಾಗಿ ಪ್ರಕಟಿತ ದಾಖಲೆಗಳ ಆಧಾರದ ಮೇಲೆ ಜಾಗತಿಕ ಅಂಕಿಅಂಶವನ್ನು ಒಟ್ಟುಗೂಡಿಸಲು ನಿರ್ಧರಿಸಿದ್ದಾರೆ. ಅಧ್ಯಯನದಲ್ಲಿ ಬಳಸಲಾದ ಹೆಚ್ಚಿನ ಅಂಕಿ ಅಂಶವನ್ನು ಡ್ರೋಸರ್ ಮತ್ತು ಕ್ಯಾಲಿಫೋರ್ನಿಯಾ ರಿವರ್‌ಸೈಡ್ ವಿಶ್ವವಿದ್ಯಾಲಯದ ಹಲವಾರು ಪದವಿ ವಿದ್ಯಾರ್ಥಿಗಳು ಸಂಗ್ರಹಿಸಿದ್ದಾರೆ.

First published: