Grey hair: 13ನೇ ವಯಸ್ಸಿನಲ್ಲೇ ಬಿಳಿಯಾಯ್ತು ಕೂದಲು, 5 ಅಡಿ ಉದ್ದ ಕೂದಲ ಶೆಫರ್ಡ್ ಈಗ ಫುಲ್ ಫೇಮಸ್

ಒಮ್ಮೆ ಒಬ್ಬ ಹುಡುಗ ನನ್ನನ್ನು ಕ್ರೂರಿ ಎಂದು ಕರೆದಿದ್ದು ನೆನಪಿದ್ದು ಅದರಿಂದ ನಾನು ಘಾಸಿಯಾಗಿದ್ದೆ ಆದರೆ ದಿನ ಕಳೆದಂತೆ ನಾನು ನನ್ನ ಬೂದು ಬಣ್ಣದ ಕೂದಲನ್ನು ಪ್ರೀತಿಸತೊಡಗಿದೆ ಎಂದು ಹೇಳಿಕೊಂಡಿದ್ದಾರೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ನಿಮ್ಮ ಹದಿಹರೆಯದ ವಯಸ್ಸಿನಲ್ಲೇ ಕಪ್ಪು ಕೇಶದ (Black Hair) ಬದಲಿಗೆ ಬಿಳಿ ಕೂದಲು ಬೆಳೆದರೆ ಹೇಗಿರಬಹುದು ಎಂಬುದನ್ನು ಊಹಿಸಿಕೊಳ್ಳಿ . ಒಂದೋ ನೀವು ಹಲವಾರು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ ಇಲ್ಲವೆ ಮೊನಚು ಅಥವಾ ವ್ಯಂಗ್ಯದ ಮಾತುಗಳನ್ನು ನಿಮ್ಮ ಗೆಳೆಯರು ಹಾಗೂ ಸಂಬಂಧಿಕರಿಂದಲೇ ಎದುರಿಸಬೇಕಾಗುತ್ತದೆ. ತನ್ನ ಹದಿಮೂರನೇ ವಯಸ್ಸಿನಲ್ಲೇ ಕೂದಲು(Grey hair)  ಬೂದು ಬಣ್ಣಕ್ಕೆ (ನರೆಗೂದಲು) ಮಾರ್ಪಡಲು ತೊಡಗಿದಾಗ ಅನ್ನಾ ಶೆಫರ್ಡ್ (Anna Shepherd) ಈ ಎಲ್ಲಾ ಯಾತನೆಯನ್ನು ಅನುಭವಿಸಿದ್ದಳು. ಆದರೆ, ನಿಧಾನವಾಗಿ ಆ ಕೂದಲನ್ನು 5 ಅಡಿಯಷ್ಟು ನೀಳವಾಗಿ ಬೆಳೆಸುವುದನ್ನು ಕಲಿತಳು. ಎಲ್ಲಾ ಅಪಮಾನಗಳನ್ನು ಎದುರಿಸಿಕೊಂಡು ಇದೀಗ ಆಕೆ ತನ್ನ ಮೂವತ್ತನೇ ವಯಸ್ಸಿನಲ್ಲಿ ವೈರಲ್ ಸುಂದರಿಯಾಗಿ (Beautiful) ಬದಲಾಗಿದ್ದಾಳೆ.

ಹೃದಯ ಒಡೆದುಹೋಗಿತ್ತು
ಹಂಗೇರಿಯವಳಾದ ಅನ್ನಾ ಶೆಫರ್ಡ್, ತನ್ನ ಹದಿಹರೆಯದ ಹೊಸ್ತಿಲಲ್ಲೇ ತನ್ನ ತಲೆಗೂದಲು ಬೂದು ಬಣ್ಣಕ್ಕೆ ಮಾರ್ಪಡುತ್ತಿರುವುದನ್ನು ಕಂಡು ತೀರಾ ಹತಾಶೆಗೆ ಒಳಗಾಗಿದ್ದಳು ಹಾಗೂ ಚುಚ್ಚು ನುಡಿಗಳಿಂದ ಹಾಸ್ಯಗಳಿಂದ ಆಕೆಯ ಹೃದಯ ಒಡೆದುಹೋಗಿತ್ತು. ಆದರೆ, ನಿಧಾನವಾಗಿ ಯಥಾರ್ಥವನ್ನು ಮನಗಂಡ ಆಕೆ ನಿಧಾನವಾಗಿ ಜನಪದ ಕತೆಗಳು ಹಾಗೂ ಉದ್ದನೆಯ ನರೆಕೂದಲನ್ನು ಹೊಂದಿದ್ದ ಮಹಿಳೆಯೊಬ್ಬಳ ಕುರಿತ ಕತೆಯೊಂದರಿಂದ ಸ್ಫೂರ್ತಿಗೊಂಡಳು.

ಸದ್ಯ 2022ರಲ್ಲಿ ಆಕೆ ತನ್ನ 5 ಅಡಿ ಉದ್ದದ ನೀಳ ಕೂದಲನ್ನು ಪ್ರದರ್ಶಿಸುತ್ತಿದ್ದು, ಆಕೆಯ ಕುರಿತ ವಿವರಗಳಿಂದ ಆಕೆಯ ವಿರೋಧಿಗಳು ಸ್ತಂಭೀಭೂತರಾಗಿದ್ದಾರೆ. 30 ವರ್ಷ ವಯಸ್ಸಿನ ಅನ್ನಾ ಶೆಫರ್ಡ್, ಗೌರವಯುತವಾದ ವೈರಲ್ ಜನಪ್ರಿಯತೆಯನ್ನು ಸಂಪಾದಿಸಿದ್ದು, ಆಕೆಯ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 17,500 ಹಿಂಬಾಲಕರಿದ್ದಾರೆ. ಆಕೆಯ ಕೆಲವು ವಿಡಿಯೋಗಳು ಆಕೆಗೆ ಒಂದು ಮಿಲಿಯನ್‍ಗಿಂತಲೂ ಅಧಿಕ ವೀಕ್ಷಕರನ್ನು ಸಂಪಾದಿಸಿಕೊಟ್ಟಿವೆ.

ಇದನ್ನೂ ಓದಿ: Hair Care: ಕಡು ಕಪ್ಪು ಕೂದಲು ಬೇಕು ಅಂದ್ರೆ ಈ ಎಣ್ಣೆಗಳನ್ನು ಟ್ರೈ ಮಾಡಿ

ಕೂದಲು ಆರೋಗ್ಯಕರ
ಅನ್ನಾ ಶೆಫರ್ಡ್ ತನ್ನ ಕೂದಲನ್ನು ನಿರ್ವಹಿಸಲು ಅಸಹಜ ದಿನಚರಿಯನ್ನು ಆಚರಿಸುತ್ತಾಳೆ. ಆಕೆ ತನ್ನ ಕೂದಲನ್ನು ಒಂದು ತಿಂಗಳಿಗೊಮ್ಮೆ ಮಾತ್ರ ತೊಳೆದುಕೊಳ್ಳುತ್ತಾಳೆ. ಇದರಿಂದ ಕೂದಲು ಆರೋಗ್ಯಕರವಾಗಿರುತ್ತದೆ ಎನ್ನುತ್ತಾಳವಳು. ಮತ್ತೂ ಕುತೂಹಲಕರ ಸಂಗತಿಯೆಂದರೆ, ವಾರಗಟ್ಟಲೆ ಆಕೆ ತನ್ನ ತಲೆಗೂದಲನ್ನು ಬಾಚುವ ಗೊಡವೆಗೇ ಹೋಗುವುದಿಲ್ಲ.


View this post on Instagram


A post shared by Anna (@prettyshepherd)


“ನನ್ನ ಕೂದಲು ಬೂದು ಬಣ್ಣಕ್ಕೆ ತಿರುಗುವಾಗ ಅದಕ್ಕೆ ಬಣ್ಣ ಹಚ್ಚುವಂತೆ ನನ್ನ ತಾಯಿಯನ್ನು ಬೇಡಿಕೊಂಡಿದ್ದೆ. ನಾನು ವಯಸ್ಸಾದವಳಂತೆ ಕಾಣುತ್ತೇನೆ ಎಂದು ತುಂಬಾ ದುಃಖ ಹಾಗೂ ಆತಂಕವನ್ನು ಅನುಭವಿಸಿದ್ದೆ. ಈ ಎಲ್ಲ ಸಂದರ್ಭಗಳಲ್ಲಿ ನಾನು ಸ್ವಯಂ ಎಚ್ಚರ ವಹಿಸುತ್ತಿದ್ದೆ. ಜನರು ನನ್ನ ಬೂದು ಬಣ್ಣದ ಕೂದಲನ್ನು ಕುರಿತು ಅಪಹಾಸ್ಯ ಮಾಡುತ್ತಿದ್ದರು ಮತ್ತು ಅದರ ಕುರಿತು ನಾನು ತೆಗಳಿಕೆಯನ್ನು ಪಡೆಯಬೇಕಾಗುತ್ತಿತ್ತು” ಎಂದು ಶೆಫರ್ಡ್ ನೆನಪಿಸಿಕೊಂಡಿದ್ದಾಳೆ.

ಬೂದು ಬಣ್ಣದ ಕೂದಲ
ಒಮ್ಮೆ ಒಬ್ಬ ಹುಡುಗ ನನ್ನನ್ನು ಕ್ರೂರಿ ಎಂದು ಕರೆದಿದ್ದು ನೆನಪಿದ್ದು, ಅದರಿಂದ ನಾನು ಘಾಸಿಯಾಗಿದ್ದೆ. ಆದರೆ, ದಿನ ಕಳೆದಂತೆ ನಾನು ನನ್ನ ಬೂದು ಬಣ್ಣದ ಕೂದಲನ್ನು ಪ್ರೀತಿಸತೊಡಗಿದೆ ಮತ್ತದು ಬೆಳವಣಿಗೆಯ ಮೂಲಕ ವಿಸ್ತರಣೆಯಾಯಿತು” ಎಂದೂ ಹೇಳಿಕೊಂಡಿದ್ದಾಳೆ. ಇತ್ತೀಚಿನ ವರ್ಷಗಳಲ್ಲಿ ತನ್ನ ನೀಳ ಕೂದಲಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿರುವ ಧನಾತ್ಮಕ ಪ್ರತಿಕ್ರಿಯೆಗಳು ಆಕೆಯಲ್ಲಿನ ಆತ್ಮವಿಶ್ವಾಸವನ್ನು ಇಮ್ಮಡಿಸಿದೆ. ಹೀಗಿದ್ದೂ, ಕೆಲವು ಪುರುಷ ಅಭಿಮಾನಿಗಳು ಆಕೆಯ ಮುಂದೆ ವಿಚಿತ್ರ ಬೇಡಿಕೆಗಳನ್ನಿಡುವುದೂ ಕಾಲ ಕಾಲಕ್ಕೆ ನಡೆಯುತ್ತಲೇ ಇದೆ.

ಇದನ್ನೂ ಓದಿ: Business Idea: 20 ರಿಂದ 25 ಸಾವಿರಕ್ಕೆ ಮಾರಾಟ ಆಗುತ್ತೆ ನಿಮ್ಮ ಉದುರಿದ ಕೂದಲು: ಇಡೀ ವಿಶ್ವದಲ್ಲಿ ಕೋಟಿ ಕೋಟಿ ವ್ಯವಹಾರ

30 ವರ್ಷದ ಅನ್ನಾ ಶೆಫರ್ಡ್ ಪೂರ್ಣಪ್ರಮಾಣದ ಕೃಷಿಕಳು. ಆಕೆ ತನ್ನ ಗೆಳೆಯನೊಂದಿಗೆ ಹೊಲದಲ್ಲಿ ಕೆಲಸ ಮಾಡುತ್ತಾಳೆ ಹಾಗೂ ತಾನು ಯಾವುದೇ ತೀವ್ರತೆರನಾದ ಕೇಶ ಆರೈಕೆಯನ್ನು ಮಾಡುವುದಿಲ್ಲ ಎಂದು ಒತ್ತಿ ಹೇಳುತ್ತಾಳೆ. ನಾನು ಹದಿನಾಲ್ಕನೆ ವಯಸ್ಸಿನವಳಾಗಿದ್ದಾಗ ಮಾತ್ರ ಸಮರ್ಪಕವಾಗಿ ಕೂದಲನ್ನು ಕತ್ತರಿಸಲಾಗಿತ್ತು. ನಾನು ಕೇಶ ವಿನ್ಯಾಸಕನ ಬಳಿ ಕೂದಲನ್ನು ಸಣ್ಣದಾಗಿ ತುಂಡರಿಸುವಂತೆ ಕೇಳಿದ್ದೆ. ಆದರೆ, ಆತ ತನ್ನ ಕೂದಲನ್ನು ಹೆಚ್ಚೇ ಕತ್ತರಿಸಿದ್ದ” ಎಂದು ಅನ್ನಾ ಶೆಫರ್ಡ್ ಹೇಳಿಕೊಂಡಿದ್ದಾರೆ.
Published by:vanithasanjevani vanithasanjevani
First published: