ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸೀರೀಸ್ನಲ್ಲಿ ಟೀಂ ಇಂಡಿಯಾ 1-4ರ ಅಂತರದಲ್ಲಿ ಸೋಲನುಭವಿಸಿದರೂ, ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ತನ್ನ ತಂಡವನ್ನು ಪ್ರಶಂಸಿಸಿದ್ದಾರೆ. ಟೆಸ್ಟ್ ಸೀರೀಸ್ ಮುಗಿದ ಬಳಿಕ ಜಡೇಜಾ ಟೀಂ ಇಂಡಿಯಾಗೆ 'ವೆಲ್ ಡನ್' ಎಂದಿದ್ದಾರೆ. ಜಡೇಜಾ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಈ ಕುರಿತಾಗಿ ಪೋಸ್ಟ್ ಮಾಡುತ್ತಾ 'ಈ ಸೀರೀಸ್ ಸವಾಲಿನಂತಿತ್ತು. ಆದರೆ ಹಲವಾರು ಧನಾತ್ಮಕ ವಿಚಾರಗಳೊಂದಿಗೆ ಮುನ್ನಡೆಯಬೇಕು. ವೆಲ್ ಡನ್ ಟೀಂ ಇಂಡಿಯಾ' ಎಂದಿದ್ದಾರೆ.
ಕೊನೆಯ ಟೆಸ್ಟ್ನಲ್ಲಿ ಜಡೇಜಾಗೆ ಸಿಕ್ಕಿತ್ತು ಅವಕಾಶಆಲ್ರೌಂಡರ್ ಜಡೇಜಾಗೆ ಮೊದಲ ನಾಲ್ಕು ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಕೊನೆಯ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಅವರು ಸರಿಯಾಗಿ ಬಳಸಿಕೊಂಡರು. ಜಡೇಜಾ ಮೊದಲ ಇನ್ನಿಂಗ್ಸ್ನಲ್ಲಿ 4 ವಿಕೆಟ್ ಪಡೆಯುವುದರೊಂದಿಗೆ ಅತ್ಯುತ್ತಮ ಬ್ಯಾಟಿಂಗ್ ಮಾಡಿ ಕಷ್ಟದಲ್ಲಿದ್ದ ಟೀಂ ಇಂಡಿಯಾವನ್ನು ಮೇಲೆತ್ತಿದರು. ಜಡೇಜಾ ಮೊದಲ ಇನ್ನಿಂಗ್ಸ್ನಲ್ಲಿ ಅಜೇಯ 86 ರನ್ಗಳ ಆಟವಾಡಿದರು. ಎರಡನೇ ಇನ್ನಿಂಗ್ಸ್ನಲ್ಲೂ ಅವರು 3 ವಿಕೆಟ್ ಕಸಿದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ