• Home
 • »
 • News
 • »
 • trend
 • »
 • Dussehra 2022: ರಾವಣನ ಪ್ರತಿಕೃತಿ ಸರಿಯಾಗಿ ಸುಡದ ಕಾರಣಕ್ಕೆ ಪುರಸಭೆಯ ಗುಮಾಸ್ತನನ್ನೇ ಅಮಾನತುಗೊಳಿಸಿದ್ರು! ಎಂಥಾ ಅವಸ್ಥೆ ಮಾರ್ರೆ

Dussehra 2022: ರಾವಣನ ಪ್ರತಿಕೃತಿ ಸರಿಯಾಗಿ ಸುಡದ ಕಾರಣಕ್ಕೆ ಪುರಸಭೆಯ ಗುಮಾಸ್ತನನ್ನೇ ಅಮಾನತುಗೊಳಿಸಿದ್ರು! ಎಂಥಾ ಅವಸ್ಥೆ ಮಾರ್ರೆ

ರಾವಣನ ಪ್ರತಿಕೃತಿ

ರಾವಣನ ಪ್ರತಿಕೃತಿ

ರಾವಣನ ಪ್ರತಿಕೃತಿಯನ್ನು ಸಿದ್ಧಪಡಿಸುವಲ್ಲಿ ನಿರ್ಲಕ್ಷ್ಯ ವಹಿಸಿದ ಕಾರಣಕ್ಕಾಗಿ ಸಹಾಯಕ ಗ್ರೇಡ್ III ರಾಜೇಂದ್ರ ಯಾದವ್ ಅವರನ್ನು ಅಮಾನತುಗೊಳಿಸಿ ಎಂದು ಧಮ್ತಾರಿ ಪುರಸಭೆಯ ಕಂಪನಿ ಆಯುಕ್ತರು ಗುರುವಾರ ಆದೇಶ ಹೊರಡಿಸಿದ್ದಾರೆ

 • Share this:

  ದಸರಾ (Dussehra) ಸಮಯದಲ್ಲಿ ಉತ್ತರ ಭಾರತದ ಬಹುತೇಕ ಕಡೆಗಳಲ್ಲಿ ರಾವಣನ ಪ್ರತಿಕೃತಿ ಮಾಡಿ ಸುಡುವ ಮೂಲಕ ಸಂಭ್ರಮಾಚರಣೆ ಮಾಡುತ್ತಾರೆ. ಅಂದರೆ ಇದನ್ನು ಲಂಕಾಧಿಪತಿ ರಾವಣ (Ravana) ಸಂಹಾರವಾಗಿ ಈ ಸಡಗರವನ್ನು ಸಂಭ್ರಮಿಸುತ್ತಾರೆ. ಅದರಂತೆಯೇ ಛತ್ತೀಸ್‌ಗಢದ (chattisgarh) ಧಮ್ತಾರಿ (Dhamtari) ಜಿಲ್ಲೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ರಾವಣನ ಪ್ರತಿಕೃತಿ ನಿರ್ಮಿಸಲಾಗಿತ್ತು. ಆದರೆ ಈ ಪ್ರತಿಕೃತಿಯನ್ನು ಸರಿಯಾಗಿ ಸುಡದ ಕಾರಣಕ್ಕಾಗಿ ಪುರಸಭೆಯ ಗುಮಾಸ್ತರನ್ನು ಅಮಾನತುಗೊಳಿಸಲಾಗಿದೆ.


  ರಾವಣನ ಪ್ರತಿಕೃತಿಯನ್ನು ಸಿದ್ಧಪಡಿಸುವಲ್ಲಿ ನಿರ್ಲಕ್ಷ್ಯ ವಹಿಸಿದ ಕಾರಣಕ್ಕಾಗಿ ಸಹಾಯಕ ಗ್ರೇಡ್ III ರಾಜೇಂದ್ರ ಯಾದವ್ ಅವರನ್ನು ಅಮಾನತುಗೊಳಿಸಿ ಎಂದು ಧಮ್ತಾರಿ ಪುರಸಭೆಯ ಕಂಪನಿ ಆಯುಕ್ತರು ಗುರುವಾರ ಆದೇಶ ಹೊರಡಿಸಿದ್ದಾರೆ. ಇದು ನಗರ ಪುರಸಭೆಗೆ ಕಳಂಕ ತಂದಿದೆ ಎಂದು ಘೋಷಿಸಿದ್ದಾರೆ.


  ಬುಧವಾರ ರಾತ್ರಿ ದಸರಾ ಆಚರಣೆಯ ಅಂಗವಾಗಿ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಹತ್ತು ತಲೆಯ ರಾವಣನ ಪ್ರತಿಕೃತಿಯನ್ನು ಸುಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ದಹನದ ಕಾರ್ಯಕ್ರಮದ ವೇಳೆ ರಾವಣನ ಪ್ರತಿ ಹತ್ತು ತಲೆಗಳು ಬೆಂಕಿಗೆ ಸುಡದೇ ಹಾಗೆಯೇ ಉಳಿದಿವೆ. ಫೋಟೋದಲ್ಲಿ ಇದು ಚೆನ್ನಾಗಿ ಕಾಣಿಸಿದ್ದು, ಅಲ್ಲಿನ ಆಡಳಿತವನ್ನು ಕೆರಳಿಸಿದೆ.


  ಪುರಾಣಗಳ ಪ್ರಕಾರ, ರಾವಣನನು 10 ತಲೆಯನ್ನು ಹೊಂದಿದ್ದಾನೆ. ಈತನನ್ನು ದಶಮುಖ ಎಂದೂ ಕರೆಯುತ್ತಾರೆ. ಪ್ರತಿ ತಲೆಯು, ಗ್ರಹಿಕೆಯ ಪ್ರಕಾರ, ಮದ (ಆನಂದ), ಘೃಣ (ದ್ವೇಷ), ಕಾಮ (ಕಾಮ), ಭಯ (ಕಾಳಜಿ), ಮೋಹ (ಬಾಂಧವ್ಯ), ಕ್ರೋಧ (ಕೋಪ), ಅಹಂಕಾರ (ಅಹಂಕಾರ), ಲೋಭ (ಅಹಂಕಾರ), ದುರಾಸೆ, ಸಂಬಂಧ (ಅಸೂಕ್ಷ್ಮತೆ) ಮತ್ತು ಇರ್ಶ್ಯ (ಅಸೂಯೆ) ಎಂದು ಬಿಂಬಿಸಲಾಗಿದೆ.


  ಇದನ್ನೂ ಓದಿ: Gyanvapi Case: ಜ್ಞಾನವಾಪಿ ಪರಿಸರದಲ್ಲಿ ಹಿಂದೂಯೇತರರ ಪ್ರವೇಶ ಪ್ರಕರಣದ ವಿಚಾರಣೆ ಮಂಗಳವಾರಕ್ಕೆ ಮುಂದೂಡಿಕೆ


  ಸದ್ಯ ಈ ವಿಚಾರ ವೈರಲ್​ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಗಳು ಶುರುವಾಗಿದೆ. ಅದರಲ್ಲೂ ಗುಮಾಸ್ತನ ಅಮಾನತುಗೊಳಿಸಿದ ವಿಚಾರವಾಗಿ ಪರ-ವಿರೋಧ ಪ್ರತಿಕ್ರಿಯೆಗಳು ಹೊರಬರುತ್ತಿವೆ.


  ದಸರಾ ಹಬ್ಬದ ಸಮಯದಲ್ಲಿ ದೇಶದಾದ್ಯಂತ ಜನರು ಸಡಗರ ಸಂಭ್ರಮಾಚರಣೆಗಳನ್ನು ಮಾಡುತ್ತಾರೆ. ಆಯಾಯ ರಾಜ್ಯಗಳು ಒಂದೊಂದು ಆಚರಣೆಗಳನ್ನು ಮಾರುತ್ತಾರೆ. ಇದು ಅಲ್ಲಿ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಬಿಂಬಿಸುತ್ತದೆ. ಅದರಂತೆ ಉತ್ತರ ಭಾರತದ ಕಡೆಗಳಲ್ಲಿ ರಾವಣನ ಸಂಹಾರ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ. ಇಲ್ಲಿ ಹತ್ತು ತಲೆಯ ರಾವಣನ ಬೃಹತ್​ ಪ್ರತಿಮೆಯನ್ನು ನಿರ್ಮಿಸಿ ನಂತರ ಅದಕ್ಕೆ ಬೆಂಕಿ ಹಚ್ಚುತ್ತಾರೆ.


  ಇದನ್ನೂ ಓದಿ: Work Form Home: ಕೆಲಸವನ್ನಾದ್ರೂ ಬಿಡ್ತೀವಿ, ವರ್ಕ್‌ ಫ್ರಮ್‌ ಹೋಂ ಬಿಟ್ಟು ಆಫೀಸಿಗೆ ಬಂದು ಕೆಲಸ ಮಾಡಲ್ಲ ಅಂತಿದ್ದಾರೆ ಐಟಿ ಉದ್ಯೋಗಿಗಳು


  ರಾವಣನ ದಹನ ಎಂದು ಕರೆಯುವ ಮೂಲಕ ನವ ದೇವತೆಗಳನ್ನು ಕೊಂಡಾಡುತ್ತಾರೆ. ಅದರಂತೆಯೇ ಛತ್​ತೀಸ್​ಗಡದಲ್ಲೂ ರಾವಣ ಪ್ರತಿಮೆಯನ್ನು ನಿರ್ಮಿಸಿ ಬೆಂಕಿ ಹಚ್ಚಲಾಗಿದೆ. ಆದರೆ ಕಾರಣಾಂತರ ಅಥವಾ ನಿರ್ಲಕ್ಷದಿಂದಾಗಿ ಪ್ರತಿಕೃತಿ ಸರಿಯಾಗಿ ಸುಡದೆ ಹಾಗೆಯೇ ಉಳಿದಿದೆ. ಈ ಕಾರಣದಿಂದಾಗಿ ಅಲ್ಲಿನ ಆಡಳಿತ ಮಂಡಳಿ ಕೆಂಡಾಮಂಡಲವಾಗಿ. ಕೆಲಸದಲ್ಲಿದ್ದ ಗುಮಾಸ್ತನನ್ನು ವಜಾ ಮಾಡಿದ್ದಾರೆ ಎನ್ನಲಾಗಿದೆ.

  Published by:Harshith AS
  First published: