ಆಪರೇಷನ್​​ಗಾಗಿ ಕೂಡಿಟ್ಟಿದ್ದ ಹಣವನ್ನು ಕಡಿದು ಹಾಳು ಮಾಡಿದ ಇಲಿ: ಮುಂದೆ ನಡೆದದ್ದು ಪವಾಡವೇ ಸರಿ!

 ಶಸ್ತ್ರಚಿಕಿತ್ಸೆ ಮಾಡಿಸುವ ಸಲುವಾಗಿ ಕಾಟನ್ ಬ್ಯಾಗಿನಲ್ಲಿ ಇಟ್ಟಿದ್ದ ಹಣವನ್ಜು ತೆಗೆದಿದ್ದಾರೆ. ಆಗ ಅವರಿಗೆ ಸಿಡಿಲು ಬಡಿದಂತಾಗಿದೆ. ಅವರು ಸಂಗ್ರಹಿಸಿಟ್ಟಿದ್ದ ಹಣವನ್ನೆಲ್ಲಾ ಇಲಿ ಕಡಿದು ಹಾಳು ಮಾಡಿತ್ತು.

ಇಲಿ ಹಾಳು ಮಾಡಿರುವ ಹಣ

ಇಲಿ ಹಾಳು ಮಾಡಿರುವ ಹಣ

 • Share this:

  ಪ್ರತಿಯೊಬ್ಬ ವ್ಯಕ್ತಿಯು ಅದರಲ್ಲೂ ಬಡವರು ಯಾವುದೋ ಒಂದು ಉದ್ದೇಶಕ್ಕೆ ಹಣವನ್ನು ಕೂಡಿಡುತ್ತಾರೆ. ಮಕ್ಕಳ ಶಿಕ್ಷಣಕ್ಕೊ, ಹಿರಿಯರ ಆರೋಗ್ಯಕ್ಕೋ ಅಥವಾ ಮುಂದಿನ ಜೀವನೋಪಾಯಕ್ಕೋ ಹನಿ ಹನಿ ಕೂಡಿದರೆ ಹಳ್ಳ ಎಂಬಂತೆ ಸಣ್ಣ ಸಣ್ಣ ಮೊತ್ತದ ಹಣವನ್ನು ಕೂಡಿಡುತ್ತಾರೆ. ಆ ಹಣ ತುರ್ತಿನ ಸಮಯದಲ್ಲಿ ಕೈ ದಕ್ಕದಿದ್ದರೆ ಆ ವ್ಯಕ್ತಿಯ ಪರಿಸ್ಥಿತಿ ಏನಾಗಬೇಡ ಹೇಳಿ? ನಿಜ ಇದೇ ರೀತಿಯ ಮನಕಲಕುವ ಘಟನೆ ತೆಲಂಗಾಣದಲ್ಲಿ ನಡೆದಿದೆ.


  ತರಕಾರಿ ವ್ಯಾಪಾರಿಯೊಬ್ಬರು ಒಂದು ಹೊತ್ತಿನ ಊಟ ಬೇಕಾದರೂ ದುಡಿದೇ ತಿನ್ನಬೇಕು. ಇವರು ತಮ್ಮ ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆಗೆ ಹಣವನ್ನು ಉಳಿತಾಯ ಮಾಡಿದ್ದರು. ಆದರೆ ಆ ಹಣವನ್ನು ಇಲಿ ತಿಂದು ಹಾಕಿದೆ. ಅದು ಸಣ್ಣ ಪುಟ್ಟ ಮೊತ್ತವಲ್ಲ, ಬರೋಬ್ಬರಿ 2 ಲಕ್ಷ. ಇದನ್ನು ನೋಡಿದ ವ್ಯಕ್ತಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿದೆ.


  ರಾದ್ಯ ನಾಯಕ್ ಇವರು ಮೂಲತಃ ಮಹಾಬುಬಾಬಾದ್ ಜಿಲ್ಲೆಯ ವೆಮುನುರ್ ಗ್ರಾಮದವರು. ಇವರು ತರಕಾರಿ ಮಾರಾಟ ಮಾಡಿ ತಮ್ಮ ಜೀವನ ಸಾಗಿಸುತ್ತಾರೆ. ಪ್ರತಿದಿನ ಕಷ್ಟಪಟ್ಟು ದುಡಿದು 4 ಲಕ್ಷ ಹಣ ಸಂಗ್ರಹಿಸಿದ್ದರು. ಇವರಿಗೆ ನಾಲ್ಕು ವರ್ಷಗಳ ಹಿಂದೆ ಕಿಬ್ಬೊಟ್ಟೆಯ ಗೆಡ್ಡೆ ಕಾಣಿಸಿಕೊಂಡಿತ್ತು. ಅದರ ಶಸ್ತ್ರ ಚಿಕಿತ್ಸೆಗೆ 2 ಲಕ್ಷ ಹಣ ಬೇಕಾಗಿತ್ತು. ಹಾಗಾಗಿ 500 ರೂ. ನೋಟಿನ 4 ಲಕ್ಷ ಹಣವನ್ನು ಉಳಿತಾಯ ಮಾಡಿ ಕಬೋರ್ಡಿನಲ್ಲಿ ಇಟ್ಟಿದ್ದರು. ಆದರೆ ಆ ಅಷ್ಟು ಹಣವನ್ನು ಇಳಿ ಚೂರು ಚೂರು ಮಾಡಿ ಬಿಟ್ಟಿದೆ.


   ಶಸ್ತ್ರಚಿಕಿತ್ಸೆ ಮಾಡಿಸುವ ಸಲುವಾಗಿ ಕಾಟನ್ ಬ್ಯಾಗಿನಲ್ಲಿ ಇಟ್ಟಿದ್ದ ಹಣವನ್ಜು ತೆಗೆದಿದ್ದಾರೆ. ಆಗ ಅವರಿಗೆ ಸಿಡಿಲು ಬಡಿದಂತಾಗಿದೆ. ಅವರು ಸಂಗ್ರಹಿಸಿಟ್ಟಿದ್ದ ಹಣವನ್ನೆಲ್ಲಾ ಇಲಿ ಕಡಿದು ಹಾಳು ಮಾಡಿತ್ತು.


  ಇದನ್ನೂ ಓದಿ: ಪೊಲೀಸ್ ಅಂಕಲ್ 5 ಕೊಲೆಯಾಗಿದೆ ಬೇಗ ಬನ್ನಿ.. ಬಾಲಕಿಯ ಮಾತು ಕೇಳಿ ಸ್ಥಳಕ್ಕೆ ಬಂದ ಪೊಲೀಸರಿಗೆ ಶಾಕ್!

  ಇದರಿಂದ ದಿಕ್ಕು ತೋಚದಂತಾದ ರಾದ್ಯ ನಾಯಕ್ ಅವರು ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್ ಸೇರಿದಂತೆ ಎಲ್ಲಾ ಬ್ಯಾಂಕ್‍ಗಳಿಗೂ ತೆರಳಿ ತಮಗೆ ಎದುರಾದ ಪರಿಸ್ಥಿತಿಯನ್ನು ವಿವರಿಸಿ ಏನಾದರೂ ಸಲಹೆ ಅಥವಾ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಆದರೆ ಅವರು ಏನು ಸಹಾಯ ಮಾಡದೇ ಈ ರೀತಿಯ ನೋಟು ಚಲಾವಣೆಯಾಗುವುದಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ.


  ಈ ಕುರಿತು ಹಿಂದಿಯ ಬಿಬಿಸಿ ಚಾನಲ್ ರಾದ್ಯ ನಾಯಕ್ ಅವರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಸುದ್ದಿ ಬಿತ್ತರಿಸಿತ್ತು. ರಾದ್ಯ ಅವರು ಸಂಕಷ್ಟದಲ್ಲಿರುವ ವಿಚಾರ ತೆಲಂಗಾಣದ ಬುಡಕಟ್ಟು ಮಹಿಳಾ ಮತ್ತು ಮಕ್ಕಳ ರಕ್ಷಣಾ ಮಂತ್ರಿ ಸತ್ಯಾವತಿ ರಾಥೋಡ್ ಅವರಿಗೆ ತಲುಪಿತು. ಇದನ್ನು ಕಂಡ ಅವರು ಕೂಡಲೇ ಆ ವ್ಯಕ್ತಿಯ ಸಹಾಯಕ್ಕೆ ನಿಂತರು. ರಾಥೋಡ್ ಅವರು ತಕ್ಷಣ ಮಹಾಬುಬಾಬಾದ್ ಜಿಲ್ಲಾಧಿಕಾರಿ ಮೂಲಕ ಅವರೆಡೆಗೆ ಧಾವಿಸಿ ಅವರ ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆಗೆ ತಗುಲುವ ಸಂಪೂರ್ಣ ವೆಚ್ಚವನ್ನು ಸ್ವತಃ ತಾವೇ ಭರಿಸುವುದಾಗಿ ಭರವಸೆ ನೀಡಿದ್ದಾರೆ.

  Published by:Kavya V
  First published: