• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Rat Story: ಇಲಿ ಆಟಕ್ಕೆ ಎಟಿಎಂನಲ್ಲಿದ್ದ ಹಣವೆಲ್ಲಾ ಪೀಸ್ ಪೀಸ್! 13 ಲಕ್ಷ ನೋಟುಗಳು ಚೆಲ್ಲಾಪಿಲ್ಲಿ!

Viral Rat Story: ಇಲಿ ಆಟಕ್ಕೆ ಎಟಿಎಂನಲ್ಲಿದ್ದ ಹಣವೆಲ್ಲಾ ಪೀಸ್ ಪೀಸ್! 13 ಲಕ್ಷ ನೋಟುಗಳು ಚೆಲ್ಲಾಪಿಲ್ಲಿ!

ವೈರಲ್​ ಆದ ನ್ಯೂಸ್​

ವೈರಲ್​ ಆದ ನ್ಯೂಸ್​

ಇಲಿ ಅಂದ್ರೆ ತಲೆನೋವು ಅಲ್ವಾ? ಆದ್ರೆ ಇಲ್ಲೊಂದು ಇಲಿ ಎಟಿಎಂಗೆ ನುಗ್ಗಿ ಏನು ಮಾಡಿದೆ ಅಂತ ನೋಡಿ.

  • Share this:

ನಾವು ಹಣಗಳನ್ನು ಉಳಿತಾಯ ಮಾಡಬೇಕು ಅಂತ ಬ್ಯಾಂಕ್​ಗಳಲ್ಲಿ (Bank) ಹಣವನ್ನು ಇಡುತ್ತೇವೆ. ಅದ್ರಲ್ಲೂ ಹತ್ತು ಜನರ ಅಭಿಪ್ರಾಯವನ್ನು ಕೇಳಿ, ಎಲ್ಲಿ ಹೆಚ್ಚಾಗಿ ಲೋನ್​ ಕೊಡುತ್ತಾರೆ, ಇಎಮ್​ಐ ಕೊಡ್ತಾರೆ ಮತ್ತು ಇಂಟ್ರೆಸ್ಟ್​ ಹೆಚ್ಚಾಗಿ ಕೊಡ್ತಾರೆ ಅಂತ ನೋಡಿಕೊಂಡು ಬ್ಯಾಂಕ್​ ಖಾತೆಗಳನ್ನು ತೆಗೆಯುತ್ತಾರೆ. ಇದರಿಂದ ಅದೆಷ್ಟೋ ಜನರಿಗೆ ಸಹಾಯವಾಗುತ್ತದೆ. ಈಗಿನ ಕಾಲದಲ್ಲಿ ಎಲ್ಲವೂ ಡಿಜಿಟಲ್​ ಆಗಿದ್ರಿಂದ ಎಟಿಎಮ್​ಗೆ ಹೋಗಿ ಹಣವನ್ನು ಡ್ರಾ (Money Draw) ಮಾಡೋದು ಬಹಳ ವಿರಳ. ಮಾಡಿದ್ರೂ ಕೂಡ ಎಲ್ಲಾದ್ರೂ ಟ್ರಿಪ್​ಗಳಿಗೆ ಹೋಗುವಾಗ ಎಮರ್ಜನ್ಸಿಗೆ ಬೇಕಾಗುತ್ತದೆ ಎಂಬುವ ಕಾರಣಕ್ಕಾಗಿ ಎಟಿಎಂನ ಮೊರೆ ಹೋಗುತ್ತಾರೆ. ಇನ್ನೂ ಕೆಲವೊಂದಷ್ಟು ಹಾಸ್ಯ (Comedy) ಅಂದ್ರೆ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಶೆಕೆ ಆಗ್ತಾ ಇದ್ರೆ ಎಟಿಎಮ್​ಗೆ ಹೋಗಿ ಜನರು ಎಸಿಯಿಂದ ಶೆಕೆಯನ್ನು ಕಡಿಮೆ ಮಾಡಿಕೊಳ್ಳುವುದು ಕೂಡ ಇದೆ.


ಹೀಗೆ ಹಣ ಅಂದ್ರೆ ಅದನ್ನು ಖರ್ಚು ಮಾಡುವುದಕ್ಕಿಂತ ಹೆಚ್ಚಾಗಿ ಉಳಿತಾಯ ಮಾಡಬೇಕು ಎಂಬುದು ಅದೆಷ್ಟೋ ಜನರ ಕನಸು ಇರುತ್ತೆ. ಇದನ್ನು ನೂರರಲ್ಲಿ ಶೇಕಡ 50 ರಷ್ಟು ಜನರು ಮಾಡಿದ್ರೆ ಇನ್ನು 50 ರಷ್ಟು ಜನರು ಸೇವಿಂಗ್ಸ್​  ಮಾಡೋಲ್ಲ. ಎಟಿಎಂನಲ್ಲಿ ಹಣ ಇದ್ದರೆ ಅದೇನೋ ಒಂದು ರೀತಿಯ ಸೇಫ್ಟಿ ಇದ್ದಂಗೆ. ಆದರೆ ಇಲ್ಲೊಂದು ವಿಷಯ ಸಖತ್​ ವೈರಲ್​ ಆಗ್ತಾ ಇದೆ.


ಇಲಿ ಅಂದ್ರೆ ಯಾರಿಗೆ ತಾನೆ ಇಷ್ಟ ಇದೆ ಹೇಳಿ? ನಮ್ಮ ಹೊಸ, ಹಳೆಯ ಬಟ್ಟೆ  ಮತ್ತು ಪುಸ್ತಕಗಳನ್ನೆಲ್ಲಾ ಕಚ್ಚಿ ತಿಂದು ಹಾಕಿ ಬಿಡುತ್ತವೆ. ಹೀಗಾಗಿ ಈ ಇಲಿಗಳನ್ನು ಸಾಯಿಸಲು ಮನೆಯಲ್ಲಿ ಒಂದಲ್ಲಾ ಒಂದು ರೀತಿಯ ಪ್ಲ್ಯಾನ್​ಗಳನ್ನು ಮಾಡುತ್ತಲೇ ಇರುತ್ತಾರೆ.


ಪಾಷಣಗಳನ್ನು ಇಡೋದು, ವಿಷ ಹಾಕೋದು ಅಥವಾ ಇನ್ನಷ್ಟು ಅಂಟುಗಳನ್ನು ಇಟ್ಟು ಇಲಿಗಳನ್ನು ಸಾಯಿಸೋದು ಇದೀಗ ಸಖತ್​ ಟ್ರೆಂಡ್​ಲ್ಲಿ ಇದೆ. ಆದರೆ ಇದೀಗ ಒಂದು ಇಲಿ ಏನು ಮಾಡಿದೆ ಅಂತ ನೀವೇ ನೋಡಿ.


ಅಸ್ಸಾಂ ರಾಜ್ಯದಲ್ಲಿ ನಡೆದ ಘಟನೆ ಇದಾಗಿದೆ. ಇಲ್ಲಿ ತುಂಬ ಹಣವು ಸಡನ್​ ಆಗಿ ಖಾಲಿ ಆದಾಗ ಜನರು ಬ್ಯಾಂಕ್​ ಅವರ ಮೇಲೆ ಹೌಹಾರಿದ್ದರು. ಆದರೆ ನಿಜವಾಗಿಯೂ ಏನಾಗಿದೆ ಎಂದು ಪತ್ತೆ ಹಚ್ಚಿದಾಗ ಒಂದು ಸತ್ಯ ಬಯಲಿಗೆ ಬಂದಿದೆ.


ಇದನ್ನೂ ಓದಿ: ಪ್ರೇಮಿಗಾಗಿ ನದಿಯಲ್ಲಿ ಈಜಿಕೊಂಡು ಬಂದ ಪ್ರಿಯತಮೆ! ಇದು ಬಾಂಗ್ಲಾ-ಭಾರತದ ಫೇಸ್‌ಬುಕ್ ಲವ್‌ ಸ್ಟೋರಿ


"ಬ್ಯಾಂಕ್ ಅಧಿಕಾರಿಗಳು ಕಳೆದ ವಾರ ಎಟಿಎಂ ಯಂತ್ರವನ್ನು ಪರಿಶೀಲಿಸಲು ಬಂದರು ಮತ್ತು ಅದನ್ನು ತೆರೆದಾಗ ಸತ್ತ ಇಲಿ ಮತ್ತು ಚೂರುಚೂರು ನೋಟುಗಳು ಕಂಡುಬಂದವು" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಗ್ಧಜ್ಯೋತಿ ದೇವ್ ಮಹಂತ ತಿಳಿಸಿದ್ದಾರೆ.


ಇಲಿಗಳು ಅಂದಾಜು 1.2 ಮಿಲಿಯನ್ ರೂಪಾಯಿ (£ 13,300) ಕಚ್ಚಿ ಹಾಕಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಹರಿದ ಮತ್ತು ಚೂರುಚೂರಾದ 500 ಮತ್ತು 2,000 ರೂಪಾಯಿ ನೋಟುಗಳಿಂದ ತುಂಬಿದ ಎಟಿಎಂ ಅನ್ನು ಚಿತ್ರಗಳು ತೋರಿಸಿವೆ.




ಹೊಸ ವರ್ಷ ಎಂದರೆ ಬ್ಯಾಂಕ್​ನಲ್ಲಿ ಹೊಸ ಅವಕಾಶಗಳು ಮತ್ತು ಈ ವರ್ಷವು ಹೆಚ್ಚು ಅಗತ್ಯವಿರುವ ಸ್ಥಿರತೆ ಮತ್ತು ಪ್ರಗತಿಯನ್ನು ನೀಡುತ್ತದೆ ಎಂದು ನಾವು ಜನರು  ಭಾವಿಸಿರುತ್ತಾರೆ. ಹೀಗಾಗಿ ಬ್ಯಾಂಕ್​ನಲ್ಲಿ ಹಣವನ್ನು ಇಟ್ಟಿರುತ್ತಾರೆ.


ಒಟ್ಟಿನಲ್ಲಿ ಲಕ್ಷಗಟ್ಟಲೆ ಹಣವನ್ನು ಕಚ್ಚಿ ಹಾಕಿದ ಇಲಿಯು ಒಂದು ವಾರ ಆದಮೇಲೆ ವಾಸನೆ ಬರಲು ಆರಂಭವಾಗಿದೆ. ಇದೇನಿದು ಎಂದು ಮಿಷನ್​ ತೆಗೆದು ನೋಡಿದಾಗ ಈ ಅನಾಹುತ ಆಗಿರುವುದು ಬೆಳಕಿಗೆ ಬಂದಿದೆ.


ಅಬ್ಬಾ ಈ ವಿಷಯವನ್ನು ಕೇಳ್ತಾನೇ ಸಖತ್​ ಭಯ ಆಗುತ್ತೆ ಅಲ್ವಾ? ಕಷ್ಟ ಪಟ್ಟ ಹಣವೆಲ್ಲಾ ಚೂರು ಚೂರಾದ್ರೆ ಹೃದಯವೇ ಚೂರಾದ ಭಾಸವಾಗೋದಂತೂ ಪಕ್ಕಾ ಬಿಡಿ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು