Hero Rats: ಇನ್ಮುಂದೆ ಭೂಕಂಪದಲ್ಲಿ ಬದುಕುಳಿದವರನ್ನ ಇಲಿಗಳು ಪತ್ತೆ ಹಚ್ಚಿ ರಕ್ಷಿಸುತ್ತೆ

ಒಮ್ಮೊಮ್ಮೆ ಯಾವ ಯಾವ ರೀತಿ ಪರಿಸ್ಥಿತಿಗಳು ಉಂಟಾಗುತ್ತಿವೆ ಎಂಬುದನ್ನೂ ಊಹಿಸಲು ಸಹ ಸಾಧ್ಯವಾಗುವುದಿಲ್ಲ. ನಮ್ಮ ಕಲ್ಪನೆಗೂ ಮೀರಿದ ಅದೆಷ್ಟೋ ಪ್ರಯೋಗಗಳು, ವಿದ್ಯಮಾನಗಳು ಜರುಗುತ್ತಿರುವುದನ್ನು ಕಂಡಾಗ ಒಂದು ಕ್ಷಣ ಮೂಕ ವಿಸ್ಮಿತರಾಗದೆ ಏನೂ ಮಾಡಲು ಸಾಧ್ಯವಿಲ್ಲ. ಈಗ ಇಂತಹ ಒಂದು ವಿಚಿತ್ರ ಸುದ್ದಿಯೊಂದು ಹೊರಬಿದ್ದಿದೆ.

ಇಲಿಗಳು

ಇಲಿಗಳು

 • Share this:
  ಒಮ್ಮೊಮ್ಮೆ ಯಾವ ಯಾವ ರೀತಿ ಪರಿಸ್ಥಿತಿಗಳು ಉಂಟಾಗುತ್ತಿವೆ ಎಂಬುದನ್ನೂ ಊಹಿಸಲು ಸಹ ಸಾಧ್ಯವಾಗುವುದಿಲ್ಲ. ನಮ್ಮ ಕಲ್ಪನೆಗೂ ಮೀರಿದ ಅದೆಷ್ಟೋ ಪ್ರಯೋಗಗಳು (Experiment), ವಿದ್ಯಮಾನಗಳು ಜರುಗುತ್ತಿರುವುದನ್ನು ಕಂಡಾಗ ಒಂದು ಕ್ಷಣ ಮೂಕ ವಿಸ್ಮಿತರಾಗದೆ ಏನೂ ಮಾಡಲು ಸಾಧ್ಯವಿಲ್ಲ. ಈಗ ಇಂತಹ ಒಂದು ವಿಚಿತ್ರ ಸುದ್ದಿಯೊಂದು ಹೊರಬಿದ್ದಿದೆ. ವಿಶಿಷ್ಟ ಅಥವಾ ಅನನ್ಯ ವೈಜ್ಞಾನಿಕ ಯೋಜನೆಯ (Scientific Project) ಒಂದು ಭಾಗ ಎಂದು ಹೇಳಲಾಗಿರುವ ವಿಶೇಷ ಪ್ರಯೋಗ ಅಥವಾ ತರಬೇತಿಯೊಂದರ ಬಗ್ಗೆ ವರದಿಗಳು ಕೇಳಿ ಬಂದಿವೆ. ಅಷ್ಟಕ್ಕೂ ಈ ವರದಿಯಲ್ಲಿ ಹೇಳಲಾಗಿರುವ ವಿಷಯ ಎಂದರೆ ಈಗಾಗಲೇ ಇಲಿಗಳಿಗೆ (Rats) ಭೂಕಂಪನಗಳು (Earthquake) ನಡೆದಾಗ ಭೂಮಿಯ ಆಳದಲ್ಲಿ ಬದುಕುಳಿದಿರುವ ಜನರನ್ನು ಪತ್ತೆ ಹಚ್ಚಿ ರಕ್ಷಿಸಲು ಸಹಾಯವಾಗುವಂತೆ ತರಬೇತಿ ನೀಡಲಾಗುತ್ತಿರುವುದಾಗಿ ಹೇಳಲಾಗುತ್ತಿದೆ.

  ಇಲಿಗಳು ಹೇಗೆ ಕೆಲಸ ಮಾಡುತ್ತವೆ?
  ಈ ತರಬೇತಿ ಯೋಜನೆಯಡಿಯಲ್ಲಿ ಇಲಿಗಳ ಹಿಂದೆ ಚಿಕ್ಕ ಬ್ಯಾಗ್ ಒಂದನ್ನು ಹಾಕಲಾಗಿರುತ್ತದೆ ಹಾಗೂ ಆ ಬ್ಯಾಗಿನಲ್ಲಿ ಮೈಕ್ರೋಫೋನ್ ಮತ್ತು ಲೊಕೇಷನ್ ಟ್ರ್ಯಾಕರ್ ಇರಿಸಲಾಗಿರುತ್ತದೆ. ಬೀಪ್ ಸದ್ದಿಗೆ ಇಲಿಗಳು ಹೇಗೆ ಸ್ಪಂದಿಸಬೇಕೆಂಬುದನ್ನೇ ತರಬೇತಿಯು ಮುಖ್ಯವಾಗಿ ಒಳಗೊಂಡಿರುವ ವಿಷಯ. ಈ ಮೂಲಕ ಅವು ಭೂಆಳದಲ್ಲಿ ಮಾನವನಿಂದ ಪ್ರವೇಶಿಸಲು ಸಾಧ್ಯವಾಗದ ಪ್ರದೇಶಗಳಲ್ಲಿ ಹೊಕ್ಕಿ ಚಲಿಸುತ್ತವೆ ಮತ್ತು ಯಾರಾದರೂ ವ್ಯಕ್ತಿ ಬದುಕುಳಿದಿದ್ದರೆ ಆ ಸಂಕೇತಗಳು ಇಲಿಗಳ ಮೂಲಕ ಸುಲಭವಾಗಿ ರಕ್ಷಣಾಕರ್ತರಿಗೆ ದೊರೆಯುತ್ತವೆ. ತದನಂತರ ರಕ್ಷಣಾ ಕಾರ್ಯಕರ್ತರು ಬದುಕುಳಿದ ವ್ಯಕ್ತಿಗಳೊಡನೆ ಸುಲಭವಾಗಿ ಸಂವಹನ ನಡೆಸಬಹುದು ಹಾಗೂ ಅವರು ತಗುಲಿ ಹಾಕಿಕೊಂಡಿರುವ ಸ್ಥಳಗಳಿಂದ ಅವರನ್ನು ರಕ್ಷಿಸಲು ಸಮರ್ಥರಾಗಬಹುದಾಗಿದೆ.

  "ಹೀರೋ ರ್‍ಯಾಟ್ಸ್" ಅಥವಾ ನಾಯಕ ಇಲಿಗಳು
  APOPO (ಅಪೋಪೊ) ಎಂಬ ಸರ್ಕಾರೇತರ ಸಂಸ್ಥೆಯೊಂದಿಗೆ ಈ ಯೋಜನೆಯಲ್ಲಿ ಸುಮಾರು ಸಮಯದಿಂದ ಕೆಲಸ ಮಾಡುತ್ತಿರುವ ಗ್ಲ್ಯಾಸ್ಗೋವ್ ಮೂಲಕ ಡಾ. ಡೊನ್ನಾ ಕೀನ್ ಅವರು ಈ ಇಲಿಗಳನ್ನು "ಹೀರೋ ರ್‍ಯಾಟ್ಸ್" ಅಥವಾ ಸರಳವಾಗಿ ಕನ್ನಡದಲ್ಲಿ ತರ್ಜುಮೆ ಮಾಡಿದರೆ "ನಾಯಕ ಇಲಿಗಳು" ಎಂದು ಕರೆದಿದ್ದಾರೆ. ಇನ್ನು ಈ ಇಲಿಗಳನ್ನು ವಾಸ್ತವದಲ್ಲಿ ಫೀಲ್ಡ್ ನಲ್ಲಿ ಇಳಿಸಿ ಕೆಲಸ ಮಾಡಿಸುವ ಉದ್ದೇಶದಿಂದ ಈಗಾಗಲೇ ಇವುಗಳನ್ನು ಟರ್ಕಿ ದೇಶಕ್ಕೆ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.

  ಈ ಬಗ್ಗೆ ಡಾ. ಡೊನ್ನಾ ಕೀನ್ ಹೇಳುವುದೇನು?
  ಇಂಡಿ 100 ಅವರು ಪ್ರಕಟಿಸಿರುವ ವರದಿಯಲ್ಲಿ ಕೀನ್ ಹೀಗೆ ಹೇಳುತ್ತಾರೆ, "ಇಲಿಗಳು ಸಾಮಾನ್ಯವಾಗಿ ಅಸ್ತವ್ಯಸ್ತವಾದ ಭೂಮಿಯ ಮೇಲ್ಮೈಗಳಲ್ಲಿ ಲಭ್ಯವಿರುವ ಸಂದಿಗಳು ಹಾಗೂ ರಂಧ್ರಗಳ ಮೂಲಕ ಮನುಷ್ಯರು ನೆಲದಡಿಯಲ್ಲಿ ಸಿಕ್ಕಿ ಹಾಕಿಕೊಂಡಿರಬಹುದಾದ ಸ್ಥಳಗಳನ್ನು ಸುಲಭವಾಗಿ ತಲುಪುತ್ತವೆ. ಸದ್ಯ ನಾವು ಅಂತಹ ಯಾವುದೇ ನೈಜ ಪರಿಸ್ಥಿತಿ ಈಗ ನೋಡುತ್ತಿಲ್ಲವಾದರೂ ಆ ರೀತಿಯ ಅಸ್ತವ್ಯಸ್ತವಾಗಿರುವ ಮಾದರಿಯು ನಮ್ಮ ಮುಂದಿದೆ.

  ಇದನ್ನೂ ಓದಿ: Cockroaches: ಕೋರ್ಟ್​ ಒಳಗಡೆ ರಾಶಿ ರಾಶಿ ಜಿರಳೆ ಪ್ರತ್ಯಕ್ಷ, ವಿಚಾರಣೆಯೇ ಸ್ಟಾಪ್

  ಒಂದೊಮ್ಮೆ ಇಲಿಗಳಿಗೆ ಹಾಕಬಹುದಾದ ಬ್ಯಾಕ್ ಪ್ಯಾಕುಗಳು ಸಿದ್ಧವಾದವೆಂದರೆ ಅವು ನೆಲದಡಿಯಲ್ಲಿ ಎಲ್ಲಿ ತೂರಿಕೊಳ್ಳುತ್ತಿವೆ ಹಾಗೂ ನಾವು ಎಲ್ಲಿದ್ದೇವೆ ಎಂಬುದು ತಿಳಿಯಲಿದೆ, ಅಲ್ಲದೆ ಅವುಗಳ ಬ್ಯಾಕ್ಪ್ಯಾಕಿನಲ್ಲಿ ಅಳವಡಿಸಲಾಗಿರುವ ಮೈಕ್ರೋಫೋನುಗಳ ಮೂಲಕ ವಾಸ್ತವದ ಸಂದರ್ಭದಲ್ಲಿ ನಾವು ಸಿಲುಕಿ ಹಾಕಿಕೊಂಡ ಮನುಷ್ಯನ ಜೊತೆ ಸಂಭಾಷಣೆ ನಡೆಸಬಹುದಾಗಿದೆ" ಎಂದು ಹೇಳಿದ್ದಾರೆ.

  ಇಲಿಗಳಿಗೆ ತರಬೇತಿ ಹೀಗೆ ನೀಡಲಾಗುತ್ತದೆ
  ಇನ್ನು ಇಲಿಗಳಿಗೆ ಸಂಬಂಧಿಸಿದಂತೆ ಅವು ಎಂತಹ ಕಠಿಣ ಪರಿಸ್ಥಿತಿಗಳಲ್ಲೂ ಹಾಗೂ ವಾತಾವರಣಕ್ಕನುಗುಣವಾಗಿ ನಿರಾಯಾಸವಾಗಿ ಬದುಕುವ ಸಾಮಥ್ಯ ಹೊಂದಿವೆ ಎಂದು ಕೀನ್ ವಿವರಿಸುತ್ತಾರೆ. ಈ ಮೂಲಕ ಈ ಚಿಕ್ಕ ಪ್ರಾಣಿಗಳು ರೆಸ್ಕ್ಯೂ ಕಾರ್ಯಾಚರಣೆಗಳಲ್ಲಿ ಏನಾದರೂ ಹುಡುಕಲು ಅವು ಎಷ್ಟು ಪ್ರಯೋಜನಕಾರಿ ಎಂಬುದನ್ನು ತೋರಿಸುತ್ತವೆ ಎನ್ನುವ ಅವರು ಇಲಿಗಳಿಗೆ ತರಬೇತಿಯನ್ನು ನೀಡಬಹುದಾಗಿದ್ದು ಆ ಸಾಮರ್ಥ್ಯವನ್ನು ಅವು ಹೊಂದಿವೆ ಎನ್ನುತ್ತಾರೆ ಕೀನ್.

  ಕೀನ್ ಅವರ ಪ್ರಕಾರ, ಮೊದಲಿಗೆ ಈ ಇಲಿಗಳಿಗೆ ಅವು ಎಲ್ಲೆ ಹೋಗಿದ್ದರೂ ಮತ್ತೆ ತಮ್ಮ ಬೇಸ್ ಪಾಯಿಂಟಿಗೆ ಮರಳುವ ಬಗ್ಗೆ ಕಲಿಸಿ ಕೊಡಬೇಕಾಗುತ್ತದೆ ಹಾಗೂ ತದನಂತರ ಬೀಪ್ ಸದ್ದಿಗೆ ಅವು ಯಾವ ರೀತಿ ಸ್ಪಂದಿಸಬೇಕೆಂಬುದನ್ನು ಕಲಿಸಬೇಕಾಗುತ್ತದೆ. ಕೀನ್ ಅವರ ಅಭಿಪ್ರಾಯದ ಪ್ರಕಾರ, ಇಲಿಗಳು ಮಲಿನ ಪ್ರಾಣಿ, ಸ್ವಚ್ಛವಾಗಿರುವುದಿಲ್ಲ ಎಂಬುದು ಮಿಥ್ಯವಾಗಿದ್ದು ಅವು ಸಾಕಷ್ಟು ಸಂವೇದನಾಶೀಲ ಪ್ರಾಣಿಗಳಾಗಿದ್ದು ಸಂಘಜೀವಿಗಳಾಗಿವೆ.

  ಇದನ್ನೂ ಓದಿ: Drinks: ಇದು ಕೂಗೋ ಕೋಳಿ ಅಲ್ಲ, ಕುಡುಕ ಕೋಳಿ! ಈ ಹುಂಜ ಪ್ರತಿ ತಿಂಗಳು 2 ಸಾವಿರ ರೂಪಾಯಿಯ ಎಣ್ಣೆ ಕುಡಿಯುತ್ತೆ!

  ಡೊನ್ನಾ ಕೀನ್ ಹೇಳುವಂತೆ ಅವರ ತಂಡವು ಈಗಾಗಲೇ ಟರ್ಕಿಯಲ್ಲಿರುವ ರಕ್ಷಣಾ ತಂಡವೊಂದರ ಜೊತೆ ಕೈಜೋಡಿಸಿದ್ದು ಇಲಿಗಳ ಜೊತೆ ಸೇರಿ ರಕ್ಷಣಾ ಕಾರ್ಯಾಚರಣೆಯ ತರಬೇತಿ ನೀಡುತ್ತಿರುವುದು ಏಕೈಕ ಸಂಸ್ಥೆಯಾಗಿದೆ. ಈಗಾಗಲೇ ನಾಯಿಗಳನ್ನು ಬಳಸಿ ರಕ್ಷಣಾಚಾರ್ಯ ಕೈಗೊಳ್ಳಲು ಅನುಕೂಲವಾಗುವಂತೆ ಅನೇಕ ತರಬೇತಿ ಸಂಸ್ಥೆಗಳಿದ್ದು ನಮ್ಮ ಈ ತರಬೇತಿಯು ಇಲಿಗಳನ್ನು ಒಳಗೊಂಡಿರುವ ಏಕೈಕ ಕೇಂದ್ರವಾಗಿದ್ದು ಇದರಿಂದ ಮನುಷ್ಯರ ಪ್ರಾಣ ಉಳಿಸಲು ಖಂಡಿತ ಸಹಾಯವಾಗಲಿದೆ ಎಂಬ ಭರವಸೆಯನ್ನು ಕೀನ್ ವ್ಯಕ್ತಪಡಿಸುತ್ತಾರೆ.
  Published by:Ashwini Prabhu
  First published: