Ratan Tata: ಮನೆ ಇಲ್ಲದ ಸಾಕು ನಾಯಿಯನ್ನು ದತ್ತು ಪಡೆಯುವಂತೆ ಇನ್​ಸ್ಟಾಗ್ರಾಂನಲ್ಲಿ ಮನವಿ ಮಾಡಿದ ರತನ್​ ಟಾಟಾ..!

Dog Adoption Appeal By Ratan Tata: ಉದ್ಯಮಿ ರತನ್​ ಟಾಟಾ ಮನೆ ಇಲ್ಲದ ನಾಯಿಯೊಂದಕ್ಕೆ ಕುಟುಂಬದ ಹುಡುಕಾಟ ನಡೆಸಿದ್ದಾರೆ. ಅದಕ್ಕಾಗಿ ತಮ್ಮ ಇನ್​ಸ್ಟಾಗ್ರಾಂನಲ್ಲೂ ಒಂದು ಪೋಸ್ಟ್​ ಮಾಡಿದ್ದಾರೆ.

ಮನೆಗಾಗಿ ಕಾಯುತ್ತಿರುವ ನಾಯಿ ಸುರ್ ಹಾಗೂ ರತನ್​ ಟಾಟಾ

ಮನೆಗಾಗಿ ಕಾಯುತ್ತಿರುವ ನಾಯಿ ಸುರ್ ಹಾಗೂ ರತನ್​ ಟಾಟಾ

  • Share this:
ಟಾಟಾ ಸನ್ಸ್​ ಸಮೂಹ ಸಂಸ್ಥೆ ಮುಖ್ಯಸ್ಥ ಹಾಗೂ ಸಿರಿವಂತ ಉದ್ಯಮಿಗಳಲ್ಲಿ ಒಬ್ಬರಾದ ರತನ್​ ಟಾಟಾ ಸರಳ ವ್ಯಕ್ತಿತ್ವಕ್ಕೆ ಹೆಸರಾದವರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರತನ್​ ಟಾಟಾ ಮಾಡುವ ಪೋಸ್ಟ್​ಗಳಿಗೆ ಲಕ್ಷಗಟ್ಟಲೆ ವೀಕ್ಷಣೆ ಹಾಗೂ ಪ್ರತಿಕ್ರಿಯೆಗಳು ಸಿಗುತ್ತವೆ. 

ರತನ್​ ಟಾಟಾ ಅವರಿಗೆ ನಾಯಿಗಳು ಎಂದರೆ ಎಷ್ಟು ಪ್ರೀತಿ ಅನ್ನೋದು ಗೊತ್ತೇ ಇದೆ. ಬೀದಿಯಲ್ಲಿ ವಾಸಿಸುವ ನಾಯಿಗಳಿಗಾಗಿ ಟಾಟಾ ಹೃದಯ ಮಿಡಿಯುತ್ತದೆ. ಮುಂಬೈನಲ್ಲಿರುವ ಟಾಟಾ ಸನ್ಸ್​ ಗ್ರೂಪ್​ನ ಕಾರ್ಪೋರೇಟ್ ಕಚೇರಿ ಬಾಂಬೆ ಹೌಸ್​ನಲ್ಲಿ ಈಗಲೂ ಬೀದಿ ನಾಯಿಗಳು ಮಲಗಲು ಅವಕಾಶ ಇದೆ. ಈ ಹಿಂದೆ 2018ರಲ್ಲಿ ಈ ಕಟ್ಟಡದ ಪುನಶ್ಚೇತನ ಮಾಡಲಾಗಿತ್ತು. ಇದಾದ ನಂತರವೂ ನಾಯಿಗಳಿಗೆ ಅಲ್ಲಿ ಇರಲು ಅವಕಾಶ ಮಾಡಿಕೊಡಲಾಯಿತು. ಇದು ರತನ್ ಟಾಟಾ ಅವರಿಗೆ ನಾಯಿಗಳ ಬಗ್ಗೆ ಇರುವ ಪ್ರೀತಿಗೆ ಒಂದು ಪುಟ್ಟ ಉದಾಹರಣೆ.

Ratan Tata Wins Hearts With His Appeal For Adoption Of Homeless Dog Sur
ರತನ್​ ಟಾಟಾ


ಈಗಲೂ ಸಹ ರತನ್​ ಟಾಟಾ ಮನೆ ಇಲ್ಲದ ನಾಯಿಯೊಂದಕ್ಕೆ ಕುಟುಂಬದ ಹುಡುಕಾಟ ನಡೆಸಿದ್ದಾರೆ. ಅದಕ್ಕಾಗಿ ತಮ್ಮ ಇನ್​ಸ್ಟಾಗ್ರಾಂನಲ್ಲೂ ಒಂದು ಪೋಸ್ಟ್​ ಮಾಡಿದ್ದಾರೆ.

Ratan Tata Wins Hearts With His Appeal For Adoption Of 9-Month-Old Abandoned Dog
ರತನ್​ ಟಾಟಾ ಮಾಡಿರುವ ಪೋಸ್ಟ್​





'ಸುರ್​' ಎಂಬ ಹೆಣ್ಣು ನಾಯಿಯೊಂದಕ್ಕೆ ಪ್ರೀತಿ ತುಂಬಿದ ಮನೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈಗಾಗಲೇ ಸುರ್​ ಸಾಕಷ್ಟು ಕುಟುಂಬಗಳನ್ನು ಬದಲಾಯಿಸಿದ್ದಾಳೆ. ಪ್ರೀತಿಸಿದವರಿಂದ ಶಾಶ್ವತವಾಗಿ ದೂರಾಗುವುದು ನಿಜಕ್ಕೂ ಬರಿಸಲಾಗದಷ್ಟು ನೋವು ನೀಡುತ್ತದೆ. ಕಳೆದ ಸಲವೂ ಮೈರಾ  ಎನ್ನುವ ನಾಯಿಗೆ ಮನೆ ಹುಡುಕಿ ಕೊಡುವಲ್ಲಿ ಸಹಾಯ ಮಾಡಿದ್ದಿರಿ. ಈಗಲೂ ಎಲ್ಲರೂ ಒಂದಾಗಿ ಸುರ್​ಗಾಗಿ ಮನೆ ಹುಡುಕೋಣ. ನೀವು ಅಥವಾ ನಿಮಗೆ ತಿಳಿದವರಲ್ಲಿ ಯಾರಾದರೂ ನಿಮ್ಮ ಮನೆ ಬಾಗಿಲನ್ನು ಸುರ್​ಗಾಗಿ ತೆರೆಯ ಬಹುದು. ಆಸಕ್ತರಿಗಾಗಿ ಒಂದು ಲಿಂಕ್ ಅನ್ನೂ ತಮ್ಮ ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ​ ಕೊಟ್ಟಿದ್ದಾರೆ ರತನ್​ ಟಾಟಾ.




ಸುರ್​ಗಾಗಿ ರತನ್​ ಟಾಟಾ ಪೋಸ್ಟ್​ ಮಾಡಿದ ಕೂಡಲೇ 3 ಲಕ್ಷಕ್ಕೂ ಅಧಿಕ ಲೈಕ್ಸ್​ ಹಾಗೂ ಕಮೆಂಟ್​ಗಳು ಬಂದಿವೆ. ಈ ಹಿಂದೆಯೂ ಸಹ ಮೈಯ್ರಾ ಎಂಬ ನಾಯಿಗಾಗಿ ಮಾಡಿದ್ದ ಪೋಸ್ಟ್​ಗೂ ಹೀಗೆ ಲಕ್ಷಾಂತರ ಲೈಕ್ಸ್​ ಹಾಗೂ ಕಮೆಂಟ್​ ಸಿಕ್ಕಿತ್ತು. ಜೊತೆಗೆ ಅಷ್ಟೇ ಬೇಗ ಮೈಯ್ರಾ ಮನೆಯೊಂದನ್ನು ಸೇರಿತ್ತು.

ಅಭಿಮಾನಿಗಳ ಮನವಿ ಗೌರವಿಸಿ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾದ ರಶ್ಮಿಕಾ ಮಂದಣ್ಣ !

First published: