Ratan Tata: ಬಾಡಿಗಾರ್ಡ್ಸ್ ಇಲ್ಲದೆಯೇ ತಾಜ್ ಹೋಟೆಲ್ ಗೆ ಬಂದ ರತನ್ ಟಾಟಾ! ವೀಡಿಯೋ ವೈರಲ್

ಜನರಿಗೆ ಇಷ್ಟವಾಗುವುದು ಅವರ ಸರಳತೆ ಮತ್ತು ಜನ ಪರ ಕೆಲಸಗಳಿಂದ ಎಂದು ಹೇಳಿದರೆ ತಪ್ಪಾಗುವುದಿಲ್ಲ. ರತನ್ ಟಾಟಾ ಅವರು ತುಂಬಾ ವರ್ಷಗಳ ಹಿಂದೆ ಮಧ್ಯಮ ವರ್ಗದ ಜನರಿಗೂ ಸಹ ಒಂದು ಕಾರನ್ನು ಖರೀದಿಸಲು ಸುಲಭವಾಗಲೆಂದು 1 ಲಕ್ಷ ರೂಪಾಯಿಯ ಟಾಟಾ ನ್ಯಾನೋ ಎಂಬ ಪುಟ್ಟ ಕಾರೊಂದನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದ್ದರು ಎಂದು ಹೇಳಬಹುದು.

ರತನ್ ಟಾಟಾ

ರತನ್ ಟಾಟಾ

  • Share this:
ಭಾರತದ (India) ಅತ್ಯಂತ ಪ್ರಸಿದ್ದ ಕೈಗಾರಿಕೋದ್ಯಮಿಗಳಲ್ಲಿ (Industrialist) ರತನ್ ಟಾಟಾ (Ratan Tata) ಅವರ ಹೆಸರು ತುಂಬಾನೇ ಮೇಲಿನ ಸ್ಥಾನದಲ್ಲಿರುತ್ತದೆ. ಇವರು ಜನರಿಗೆ ಇಷ್ಟವಾಗುವುದು ಅವರ ಸರಳತೆ (Simple) ಮತ್ತು ಜನ ಪರ ಕೆಲಸಗಳಿಂದ ಎಂದು ಹೇಳಿದರೆ ತಪ್ಪಾಗುವುದಿಲ್ಲ. ರತನ್ ಟಾಟಾ ಅವರು ತುಂಬಾ ವರ್ಷಗಳ ಹಿಂದೆ ಮಧ್ಯಮ ವರ್ಗದ ಜನರಿಗೂ ಸಹ ಒಂದು ಕಾರನ್ನು ಖರೀದಿಸಲು ಸುಲಭವಾಗಲೆಂದು 1 ಲಕ್ಷ ರೂಪಾಯಿಯ ಟಾಟಾ ನ್ಯಾನೋ (Tata Nano) ಎಂಬ ಪುಟ್ಟ ಕಾರೊಂದನ್ನು ಮಾರುಕಟ್ಟೆಯಲ್ಲಿ (Market) ಪರಿಚಯಿಸಿದ್ದರು ಎಂದು ಹೇಳಬಹುದು.

ಇದು ಅನೇಕ ಭಾರತೀಯರಿಗೆ ಕಾರನ್ನು ಖರೀದಿ ಮಾಡುವ ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಅನುವು ಮಾಡಿಕೊಟ್ಟಿತು. ಅರೇ ಇಲ್ಲಿ ರತನ್ ಟಾಟಾ ಮತ್ತು ಅವರು ಪರಿಚಯಿಸಿದ ಕಾರಿನ ಬಗ್ಗೆ ಈಗೇಕೆ ಹೇಳುತ್ತಿದ್ದೇವೆ ಎಂದು ನಿಮಗೆ ಆಶ್ಚರ್ಯವಾಗಬಹುದು. ಹೌದು.. ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೂ ಮತ್ತು ಅವರು ಪರಿಚಯಿಸಿದ ಟಾಟಾ ನ್ಯಾನೋ ಕಾರಿಗೂ ಸಂಬಂಧಪಟ್ಟ ಒಂದು ಘಟನೆ ಇತ್ತೀಚೆಗೆ ನಡೆದಿದೆ ನೋಡಿ.

ನ್ಯಾನೋ ಕಾರಿನಲ್ಲಿ ಹೋಟೆಲ್ ಗೆ ಆಗಮಿಸಿದ ರತನ್ ಟಾಟಾ
ಟಾಟಾ ಟ್ರಸ್ಟ್ ಅಧ್ಯಕ್ಷರಾದ ರತನ್ ಟಾಟಾ ಅವರು ತಾವು ಪರಿಚಯಿಸಿದ ಟಾಟಾ ನ್ಯಾನೋ ಕಾರಿನಲ್ಲಿ ಮುಂಬೈ ನಗರದಲ್ಲಿರುವ ಪ್ರತಿಷ್ಠಿತ ಹೋಟೆಲ್ ಗೆ ಆಗಮಿಸುವ ಮೂಲಕ ಇಂಟರ್ನೆಟ್ ನಲ್ಲಿ ದೊಡ್ಡ ಸುದ್ದಿ ಮಾಡಿ, ನೆಟ್ಟಿಗರ ಮನಸ್ಸನ್ನು ಗೆದ್ದಿದ್ದಾರೆ ಎಂದು ಹೇಳಬಹುದು.
ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಳ್ಳಲಾದ ವೈರಲ್ ವೀಡಿಯೋದಲ್ಲಿ, ರತನ್ ಟಾಟಾ ಅವರು ಟಾಟಾ ನ್ಯಾನೋ ಕಾರಿನಲ್ಲಿ ತಾಜ್ ಹೋಟೆಲ್ ಗೆ ಆಗಮಿಸಿದ್ದಾರೆ. ಈ ಕೈಗಾರಿಕೋದ್ಯಮಿಯ ಸರಳತೆ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ತುಂಬಾನೇ ಪ್ರಭಾವಿಸಿದೆ ಎಂದು ಹೇಳಬಹುದು.

ಇದನ್ನೂ ಓದಿ:  Ratan Tata: Facebook ನಕಲಿ ಖಾತೆಗಳ ವಿರುದ್ಧ ರತನ್ ಟಾಟಾ ಗರಂ! ಸ್ಟ್ರಿಕ್ಟ್ ವಾರ್ನಿಂಗ್

ಈ ಪೋಸ್ಟ್ ಗೆ ಉತ್ತರಿಸುತ್ತಾ, ಹಲವಾರು ಜನರು ರತನ್ ಟಾಟಾ ಅವರ ಬಗ್ಗೆ ತಮ್ಮ ಗೌರವ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಉದಾಹರಣೆಗೆ, ಬಳಕೆದಾರರೊಬ್ಬರು ಇವರನ್ನು ಕುರಿತು "ತುಂಬಾ ಸರಳ ಮತ್ತು ವಿನಮ್ರ" ಎಂದು ಹೇಳಿದರು. "ಲೆಜೆಂಡ್" ಎಂದು ಕಾಮೆಂಟ್ ಗಳಲ್ಲಿ ಇನ್ನೊಬ್ಬರು ಬರೆದಿದ್ದಾರೆ.

ಹೃದಯಸ್ಪರ್ಶಿ ಮತ್ತು ವಿವರವಾದ ಶೀರ್ಷಿಕೆ
ಇನ್ನೊಬ್ಬ ಬಳಕೆದಾರರು ರತನ್ ಟಾಟಾ ಅವರನ್ನು "ಮಾನವೀಯತೆಯ ನಿಜವಾದ ಮನೋಭಾವ ಹೊಂದಿರುವ ಮಹಾನ್ ಮಾನವ ಆತ್ಮ" ಎಂದು ಬಣ್ಣಿಸಿದ್ದಾರೆ. "ನಾವು ಅವರಿಂದ ಸಾಕಷ್ಟು ಕಲಿಯಬೇಕಾಗಿದೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ರತನ್ ಟಾಟಾ ಅವರು ಟಾಟಾ ನ್ಯಾನೋ ಎಂದರೆ ಏನು ಎಂಬುದರ ಬಗ್ಗೆ ಟಿಪ್ಪಣಿ ಬರೆದಿದ್ದರು. ಹೃದಯಸ್ಪರ್ಶಿ ಮತ್ತು ವಿವರವಾದ ಶೀರ್ಷಿಕೆಯಲ್ಲಿ, ಅವರು ‘ಈ ಕಾರು ಯಾವಾಗಲೂ ನಮ್ಮ ಎಲ್ಲಾ ಜನರಿಗಾಗಿ’ ಎಂದು ಬರೆದಿದ್ದರು.

ಕಾರಿನ ಬಿಡುಗಡೆಯ ಫೋಟೋವೊಂದನ್ನು ಹಂಚಿಕೊಂಡಿರುವ ರತನ್ ಟಾಟಾ
ಕಾರಿನ ಬಿಡುಗಡೆಯ ಫೋಟೋವೊಂದನ್ನು ಹಂಚಿಕೊಂಡಿರುವ ರತನ್ ಟಾಟಾ ಅವರು "ನಿಜವಾಗಿಯೂ ನನ್ನನ್ನು ಪ್ರೇರೇಪಿಸಿದ್ದು ಮತ್ತು ಅಂತಹ ವಾಹನವನ್ನು ತಯಾರಿಸುವ ಬಯಕೆಯನ್ನು ಪ್ರಚೋದಿಸಿದ್ದು, ಭಾರತೀಯ ಕುಟುಂಬಗಳು ಯಾವಾಗಲೂ ಸ್ಕೂಟರ್ ಗಳಲ್ಲಿ ಹೋಗುವುದನ್ನು ನಾನು ಅನೇಕ ಬಾರಿ ನೋಡಿದ್ದು. ಬಹುಶಃ ಮಗುವು ತಾಯಿ ಮತ್ತು ತಂದೆಯ ನಡುವೆ ಕುಳಿತು ಸ್ಯಾಂಡ್ವಿಚ್ ಆಗಿರಬಹುದು. ಆ ಇಳಿಜಾರಿನ ರಸ್ತೆಗಳಲ್ಲಿ ಸ್ಕೂಟರ್ ನಲ್ಲಿ ಕುಳಿತುಕೊಂಡು ಹೇಗೆ ಹೋಗುತ್ತಾರೆ.

ಸ್ಕೂಲ್ ಆಫ್ ಆರ್ಕಿಟೆಕ್ಚರ್ ನಲ್ಲಿರುವುದರ ಪ್ರಯೋಜನಗಳಲ್ಲಿ ಒಂದು ಎಂದರೆ ನಾನು ಸ್ವತಂತ್ರನಾಗಿದ್ದಾಗ ಡೂಡಲ್ ಮಾಡಲು ಅದು ನನಗೆ ಕಲಿಸಿತ್ತು. ಮೊದ ಮೊದಲು, ದ್ವಿಚಕ್ರವಾಹನಗಳನ್ನು ಸುರಕ್ಷಿತವಾಗಿಸುವುದು ಹೇಗೆಂದು ಕಂಡು ಹಿಡಿಯಲು ನಾವು ಪ್ರಯತ್ನಿಸುತ್ತಿದ್ದೆವು, ಡೂಡಲ್ ಗಳು ನಾಲ್ಕು ಚಕ್ರಗಳಾದವು, ಕಿಟಕಿಗಳಿಲ್ಲ, ಬಾಗಿಲುಗಳಿಲ್ಲ. ನಾನು ಅಂತಿಮವಾಗಿ ಅದು ಕಾರಾಗಿರಬೇಕು ಎಂದು ನಿರ್ಧರಿಸಿದೆ. ನ್ಯಾನೋ ನಮ್ಮ ಎಲ್ಲಾ ಜನರಿಗಾಗಿ ತಯಾರಾಯಿತು" ಎಂದು ಶೀರ್ಷಿಕೆಯಲ್ಲಿ ಹೇಳಿದ್ದರು.

ಇದನ್ನೂ ಓದಿ:  Vertical Forest: ಕಾಂಕ್ರಿಟ್ ಕಾಡಿನ ಮಧ್ಯೆ ಎದ್ದು ನಿಂತ ಹಸಿರಿನ ಗಗನಚುಂಬಿ ಕಟ್ಟಣಗಳು, ಏನಿದು ಮಾಯೆ ನೋಡಿ

ಟಾಟಾ ಮೋಟಾರ್ಸ್ ಜನವರಿ 10, 2008 ರಂದು ನ್ಯಾನೋವನ್ನು ಅಧಿಕೃತವಾಗಿ ಬಿಡುಗಡೆ ಮಾಡಿತ್ತು. ಈ ಕಾರಿನ ಮಾರಾಟವು ಕ್ಷೀಣಿಸುತ್ತಿರುವಂತಹ ಸಮಸ್ಯೆಗಳಿಂದಾಗಿ, ಕಂಪನಿಯು ಒಂದು ದಶಕದ ನಂತರ ಎಂದರೆ 2018 ರಲ್ಲಿ ನ್ಯಾನೋವನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಎಳೆದುಕೊಂಡಿತು ಎಂದು ಹೇಳಬಹುದು.
Published by:Ashwini Prabhu
First published: