ಇಲಿಗಳ ಕಾಟದಿಂದ ಬಚಾವ್​ ಆಗಲು ಓರಿಯೋ ಬಿಸ್ಕೆಟ್​ ಮೊರೆ ಹೋದ ಅಮೆರಿಕಾದ ಜನ.. ಏಕೆ?

ಈ ಉಪಕರಣದ ಮೇಲ್ಭಾಗದಲ್ಲಿ ಇರಿಸಲಾಗಬಹುದಾದ ವಾಸನೆಯುಕ್ತ ಕುಕ್ಕೀಸ್ ಹಾಗೂ ಸೂರ್ಯಕಾಂತಿ ಬೀಜಗಳು ಇಲಿಗಳಿಗೆ ಆಮಿಷ ಒಡ್ಡುತ್ತವೆ. ವಾರಾನುಗಟ್ಟಲೆ ಇಲಿಗಳು ಈ ಪಂಜರದ ಒಳಗೆ ಹೊರಗೆ ಸಂಚರಿಸುತ್ತ ಆಹಾರ ಸೇವಿಸುತ್ತ ಮುಕ್ತವಾಗಿರುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನ್ಯೂಯಾರ್ಕ್ ನಗರದಲ್ಲಿ (New York )ಇಲಿಗಳ ಉಪಟಳ (Rat Problem) ಜಾಸ್ತಿಯಾಗುತ್ತಿರುವುದರಿಂದ ಹಲವಾರು ವ್ಯಾಪಾರಸ್ಥರಿಗೆ ಗಲಿಬಿಲಿ ಉಂಟಾಗಿದೆ. ಆ ನಿಟ್ಟಿನಲ್ಲಿ ವೆಸ್ಟ್ ವಿಲೇಜ್‌ನಲ್ಲಿರುವ ಕ್ಯಾಸಾ ಲಾ ಫೆಮ್ಮೆ ಎಂಬ ಈಜಿಪ್ಟ್‌ ಶೈಲಿಯ ಐಷಾರಾಮಿ ರೆಸ್ಟೋರೆಂಟ್ ಒಂದರಲ್ಲಿ ಇಲಿಗಳನ್ನು ಹಿಡಿಯುವ ಅತ್ಯಾಧುನಿಕ ತಂತ್ರಜ್ಞಾನದ ಪಂಜರವೊಂದನ್ನು ಇನ್ಸ್ಟಾಲ್ ಮಾಡಲಾಗಿರುವ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಈ ರೆಸ್ಟೋರೆಂಟ್‌ ಮಾಲೀಕರಲ್ಲಿ ಒಬ್ಬರಾದ ಅನಸ್ತಾಸಿಯೋಸ್ ಹೈರಾತಿದಿಸ್ ತಮ್ಮ ಸಹವರ್ತಿ ಪಾಲುದಾರರಿಂದ ವಿಚಿತ್ರವಾಗಿ ಕಾಣುವ 2 ಅಡಿಗಳಷ್ಟು ಉದ್ದದ ಆಧುನಿಕ ಉಪಕರಣ ಬಗ್ಗೆ ಕೇಳಿದ್ದರು. ಆ ಕುರಿತಂತೆ ಅವರು ಅದಕ್ಕೆ ಸಂಬಂಧಿಸಿದ ವಿಡಿಯೋ ಒಂದನ್ನು ವೆಬ್‌ಸೈಟ್‌ನಲ್ಲಿ ವೀಕ್ಷಿಸಿದ್ದರು. ಆ ಸಂಸ್ಥೆಯು ಆ ರೀತಿಯ ಇಲಿ ಜಾಲವನ್ನು ಬಾಡಿಗೆಗೆ ಕೊಡುತ್ತದೆ ಎಂಬ ವಿಷಯ ಗಮನಕ್ಕೆ ಬರುತ್ತಿದ್ದಂತೆಯೆ ತ್ವರಿತವಾಗಿ ಅದನ್ನು ಬಾಡಿಗೆಗೆ ಪಡೆದು ಕಳೆದ ವಾರವೇ ತಮ್ಮ ರೆಸ್ಟೋರೆಂಟ್‌ನಲ್ಲಿ ಅಳವಡಿಸಿದ್ದಾಗಿ ಹೇಳಿದ್ದಾರೆಂದು ವರದಿಯಾಗಿದೆ.

  ಇಲಿ ಕಾಟಕ್ಕೆ ಬೇಸತ್ತ ವ್ಯಾಪಾರಸ್ಥರು 

  ಈ ಬಗ್ಗೆ ಮಾತನಾಡಿರುವ ಹೈರಾತಿದಿಸ್, "ನಾವು ಸಾಮಾನ್ಯವಾಗಿ ಇಂತಹ ವಿಷಯಗಳನ್ನು ಮುಂದೂಡುತ್ತೇವೆ. ಆದರೆ, ಕಳೆದ ಕೆಲ ಸಮಯದಿಂದ ನಗರದಲ್ಲಿ ಇಲಿಗಳ ಹಾವಳಿ ಹೆಚ್ಚಾಗಿರುವುದು ಕಂಡುಬಂದಿದೆ. ಇದರಿಂದಾಗಿ ನಮ್ಮ ಗ್ರಾಹಕರಿಗೆ ಆಹಾರ ಸೇವಿಸುವಾಗ ತುಂಬ ಅಡಚಣೆಯಾಗುವುದರ ಬಗ್ಗೆ ಅರಿತು ಈ ನಿಟ್ಟಿನಲ್ಲಿ ನಾವು ತ್ವರಿತವಾಗಿ ಕ್ರಮ ಕೈಗೊಂಡು ಈ ಇಲಿ ಪಂಜರ ಅಳವಡಿಸಿದೆವು" ಎಂದು ಹೇಳುತ್ತಾರೆ.

  ಇಲಿಗಳನ್ನು ಹಿಡಿಯುವ ಆಧುನಿಕ ಉಪಕರಣ

  ಇಟಲಿ ನಿರ್ಮಿತ ಬ್ಯಾಟರಿ ಚಾಲಿತ ಈ ಉಪಕರಣವು ಈಗ ನಗರದಲ್ಲಿ ಹೊಸದಾಗಿ ಪರಿಚಯಿಸಲ್ಪಟ್ಟಿರುವ ಇಲಿಗಳನ್ನು ಹಿಡಿಯುವ ಆಧುನಿಕ ಉಪಕರಣವಾಗಿ ಗಮನಸೆಳೆಯುತ್ತಿದೆ. ನಗರದ ಮೇಯರ್ ಸ್ಪರ್ಧಿ ಆಗಿರುವ ಎರಿಕ್ ಆ್ಯಡಮ್ ಗಮನವನ್ನೂ ಸಹ ಈ ಉಪಕರಣ ಈಗ ಸೆಳೆದಿದೆ. ಈ ಕುರಿತು ರೇಡಿಯೋ ಸಂದರ್ಶನದಲ್ಲಿ ಅವರು ಮಾತನಾಡುವಾಗ ತಾವು ಒಂದೊಮ್ಮೆ ಅಧಿಕಾರವಹಿಸಿಕೊಂಡ ನಂತರ ಇದನ್ನು ಎಲ್ಲೆಡೆ ಪರಿಣಾಮಕಾರಿಯಾಗಿ ಅಳವಡಿಸಲು ಕ್ರಮ ಕೈಗೊಳ್ಳುವುದಾಗಿಯೂ ನುಡಿದಿದ್ದಾರೆಂದು ಗೊತ್ತಾಗಿದೆ.

  ಹೊಸ ಅಸ್ತ್ರವೇ ಓರಿಯೋ ಕುಕ್ಕೀಸ್

  ಇನ್ನು, ಉಪಕರಣದ ಬಗ್ಗೆ ಮಾತನಾಡುವುದಾದರೆ, ಇದು ವಿಶಿಷ್ಟವಾದ ವಿನ್ಯಾಸ ಹಾಗೂ ವಿಷಕಾರಿ ರಾಸಾಯನಿಕಗಳನ್ನು ಹೊರತುಪಡಿಸಿದರೆ ರಹಸ್ಯಮಯವಾದ ಇನ್ನೊಂದು ಅಸ್ತ್ರವನ್ನು ಹೊಂದಿದೆ, ಅದುವೇ ಓರಿಯೋ ಕುಕ್ಕೀಸ್. ಪೀನಟ್ ಬಟರ್ ಓರಿಯೋ ಕುಕ್ಕೀಸ್‌ಗಳು ಇಲಿಗಳನ್ನು ಆಕರ್ಷಿಸಲು ಅತ್ಯುತ್ತಮವಾಗಿವೆ ಎಂದು ಹೇಳುತ್ತಾರೆ ಈ ಪಂಜರವನ್ನು ಕ್ಯಾಸಾ ಲಾ ಫೆಮ್ಮೆಯಲ್ಲಿ ಅಳವಡಿಸಿದ ಅದರ ಆಪರೇಷನ್ ನಿರ್ದೇಶಕರಾದ ಜಿಮ್ ವೆಬ್‌ಸ್ಟರ್‌.

  ಇದನ್ನೂ ಓದಿ: Year Ender 2021: ಭಾರತದ ಟಾಪ್​ ಯೂಟ್ಯೂಬ್​ ವಿಡಿಯೋ ಕ್ರಿಯೇಟರ್​ಗಳು ಯಾರೆಲ್ಲಾ ಗೊತ್ತಾ? ಇಲ್ಲಿದೆ ಮಾಹಿತಿ

  ಈ ಉಪಕರಣದ ಮೇಲ್ಭಾಗದಲ್ಲಿ ಇರಿಸಲಾಗಬಹುದಾದ ವಾಸನೆಯುಕ್ತ ಕುಕ್ಕೀಸ್ ಹಾಗೂ ಸೂರ್ಯಕಾಂತಿ ಬೀಜಗಳು ಇಲಿಗಳಿಗೆ ಆಮಿಷ ಒಡ್ಡುತ್ತವೆ. ವಾರಾನುಗಟ್ಟಲೆ ಇಲಿಗಳು ಈ ಪಂಜರದ ಒಳಗೆ ಹೊರಗೆ ಸಂಚರಿಸುತ್ತ ಆಹಾರ ಸೇವಿಸುತ್ತ ಮುಕ್ತವಾಗಿರುತ್ತವೆ. ಒಂದೊಮ್ಮೆ ಅವುಗಳಿಗೆ ಈ ರೀತಿಯ ದಿನಚರಿ ಒಪ್ಪುತ್ತಿದ್ದಂತೆ ಈ ಉಪಕರಣವನ್ನು ಆನ್ ಮಾಡಲಾಗುವುದು ಹಾಗೂ ಅದರೊಳಗೆ ಸಿಗುವ ಪ್ರತಿ ಇಲಿಗಳನ್ನು ಕೆಳಗೆ ಸ್ಥಿತವಿರುವ ಚೇಂಬರ್‌ನಲ್ಲಿ ಸಂಗ್ರಹಿಸಲಾಗುತ್ತದೆ ಎಂದು ವೆಬ್‌ಸ್ಟರ್ ನುಡಿಯುತ್ತಾರೆ. ಇದರ ಕೆಳಭಾಗದಲ್ಲಿ ಆಲ್ಕೋಹಾಲ್ ದ್ರಾವಣ ಇರಿಸಲು ವ್ಯವಸ್ಥೆ ಮಾಡಲಾಗಿದ್ದು ಅದರ ಗಾಢವಾದ ವಾಸನೆಯಿಂದಾಗಿ ಇಲಿಗಳು ಪ್ರಜ್ಞೆ ತಪ್ಪುತ್ತವೆ ಎಂದು ವೆಬ್‌ಸ್ಟರ್ ವಿವರಿಸುತ್ತಾರೆ. ಆದರೂ ಇದೊಂದು ಅಹಿತಕರ ವಿಧಾನ ಎಂಬ ಅನಿಸಿಕೆ ಹಲವರಲ್ಲಿರುವುದೂ ಸುಳ್ಳಲ್ಲ ಎನ್ನುತ್ತಾರೆ ಅವರು.

  ಇಟಲಿಯ ಈ ಉಪಕರಣದ ಬಗ್ಗೆ ಇಲ್ಲಿ ಯಾರಿಗೂ ತಿಳಿದಿರಲಿಲ್ಲ. ಇದರಲ್ಲಿ ಅವಕಾಶವಿದೆ ಎಂದರಿತ ನ್ಯೂಯಾರ್ಕ್ ನಿವಾಸಿ ಪ್ಯಾಟ್ ಮರೀನೊ ಯುಎಸ್‌ನಲ್ಲಿ ಇದರ ಮೊದಲ ವಿತರಕನಾದ ಹಾಗೂ ತದನಂತರದಿಂದ ಹಲವಾರು ಸಂಘ ಸಂಸ್ಥೆಗಳು ಮತ್ತು ರಿಯಲ್ ಎಸ್ಟೇಟ್ ವಲಯದಿಂದ ಈ ಇಲಿ ಪಂಜರ ಬಾಡಿಗೆ ಪಡೆಯಲು ಬೇಡಿಕೆ ಬರುತ್ತಲೇ ಇದೆ ಎಂದು ಪ್ಯಾಟ್ ಹೇಳುತ್ತಾರೆ. ಈಗಾಗಲೇ ಅವರು ನಗರದ 150ಕ್ಕೂ ಹೆಚ್ಚು ಕಡೆಗಳಲ್ಲಿ ಇದನ್ನು ಅಳವಡಿಸಿರುವುದಾಗಿ ನುಡಿಯುತ್ತಾರೆ.
  Published by:Kavya V
  First published: