• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Video: ಮೆಟ್ರೊ ರೈಲಿನಲ್ಲಿ ಇಲಿಗಳ ಕಾಟ! ನಿದ್ದೆ ಮಾಡ್ತಿದ್ದವನ ಮೇಲೆ ಹತ್ತಿ ಕೀಟಲೆ ಮಾಡಿದ ಮೂಷಿಕ!

Viral Video: ಮೆಟ್ರೊ ರೈಲಿನಲ್ಲಿ ಇಲಿಗಳ ಕಾಟ! ನಿದ್ದೆ ಮಾಡ್ತಿದ್ದವನ ಮೇಲೆ ಹತ್ತಿ ಕೀಟಲೆ ಮಾಡಿದ ಮೂಷಿಕ!

ವೈರಲ್​ ಆದ ವಿಡಿಯೋ

ವೈರಲ್​ ಆದ ವಿಡಿಯೋ

ಒತ್ತಡದ ಜೀವನದಲ್ಲಿ ವಿಶ್ರಾಂತಿ ಪಡೆಯಲು ಸಮಯವಿಲ್ಲದ ಕಾರಣ, ಅನೇಕ ಜನರು ಪ್ರಯಾಣದ ಸಮಯದಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಆದರೆ ಪ್ರಯಾಣದ ಸಮಯದಲ್ಲಿ ವಿಶ್ರಾಂತಿ ಪಡೆಯುವಾಗ, ಅನೇಕ ಜನರು ತಮಾಷೆಯ ವೀಡಿಯೊಗಳನ್ನು ವೀಕ್ಷಿಸುತ್ತಾರೆ.

  • Share this:

ದೈನಂದಿನ ಜೀವನದಲ್ಲಿ (Daily Life) ಜನರು ಸ್ಥಳೀಯ ಮಾರ್ಗಗಳಲ್ಲಿ ಪ್ರಯಾಣಿಸುತ್ತಾರೆ. ಅದು ಬಸ್, ರಿಕ್ಷಾ ಅಥವಾ ರೈಲು ಆಗಿರಲಿ. ಒತ್ತಡದ ಜೀವನದಲ್ಲಿ ವಿಶ್ರಾಂತಿ ಪಡೆಯಲು ಸಮಯವಿಲ್ಲದ ಕಾರಣ, ಅನೇಕ ಜನರು ಪ್ರಯಾಣದ ಸಮಯದಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಆದರೆ ಪ್ರಯಾಣದ ಸಮಯದಲ್ಲಿ ವಿಶ್ರಾಂತಿ (Rest) ಪಡೆಯುವಾಗ, ಅನೇಕ ಜನರು ತಮಾಷೆಯ ವೀಡಿಯೊಗಳನ್ನು ವೀಕ್ಷಿಸುತ್ತಾರೆ. ಕೆಲವರಿಗೆ ವಿಚಿತ್ರ ಘಟನೆಗಳು ನಡೆಯುತ್ತವೆ. ಸದ್ಯ ಸ್ಥಳೀಯ ಪ್ರಯಾಣಿಕರೊಬ್ಬರ ವಿಡಿಯೋ ವೈರಲ್  (Viral) ಆಗಿದೆ.  ಈ ವಿಡಿಯೋವನ್ನು ನೋಡಿದ್ರೆ ನೀವು ನಿಜಕ್ಕೂ ಎಂದಿಗೂ ಮೆಟ್ರೋದಲ್ಲಿ(Metro), ಬಸ್​ಗಳಲ್ಲಿ(Bus) ನಿದ್ದೆ ಮಾಡೋದು ಡೌಟ್​.


ಹೌದು, ದಿನವಿಡೀ ಕೆಲಸಗಳನ್ನು ಮಾಡಿ ಸುಸ್ತಾಗಿರುವ ಕಾರಣದಿಂದಾಗಿ ತಾವು ಓಡಾಡುವ ಸಾರಿಗೆಗಳಲ್ಲಿಯೇ ನಿದ್ರಿಸುತ್ತಿರುವುದು ಕಾಮನ್​. ಅವರವರ ಸ್ಟಾಪ್​ ಬರುವ ಟೈಮ್​ಗೆ ಅಟೋಮ್ಯಾಟಿಕ್​ ಎಚ್ಚರವಾಗುತ್ತಾರೆ. ಇನ್ನೂ ಅದೆಷ್ಟೀ ಜನರಿಗೆ ಆಗ್ಲೂ ಎಚ್ಚರ ಆಗೋಲ್ಲ. ಇದೊಂದು ವಿಚಿತ್ರ ಅನ್ನಬಹುದು. ಆದರೆ ಇಲ್ಲೊಂದು ಮೆಟ್ರೋವಿನಲ್ಲಿ ಸಂಚಾರ ಮಾಡುತ್ತಾ ಇರುವ ವ್ಯಕ್ತಿಯನ್ನು ನೋಡಿದ್ರೆ ನಗು ಬರುತ್ತೆ ಜೊತೆಗೆ ಶಾಕ್​ ಕೂಡ ಆಗುತ್ತೆ.


ಇನ್ನು ಇಲಿಗಳ ಕಾಟವಂತೂ ತಡೆಯೋಕೆ ಆಗೋಲ್ಲ ಬಿಡಿ. ಯಾಕಂದ್ರೆ ಅಂಗಡಿಗಳಲ್ಲಿ, ಹೊಟೇಲ್​ಗಳಲ್ಲಿ ಈ ಇಲಿಗಳದ್ದೇ ದರ್ಬಾರು ಅಂತ ಹೇಳಿದ್ರೂ ತಪ್ಫಗೋಲ್ಲ. ಮನೆಯಲ್ಲಿ ಈ ಇಲಿಗಳನ್ನು ಸಾಯಿಸಲು ನೂರಾರು ಉಪಾಯಗಳನ್ನು ಮಾಡುತ್ತಲೇ ಇರುತ್ತಾರೆ. ಮನೆಗೆ, ಹೊಟೇಲ್​ಗಳಿಗೆ ತಂದ ಅದೆಷ್ಟೋ ಸಾಮಾಗ್ರಿಗಳನ್ನು ಈ ಇಲಿರಾಯನು ತಿಂದು ತೇಗಿರುತ್ತದೆ.


ಇಲಿಗಳನ್ನು ಹಿಡಿಯಲು ಇಲಿ ಬೋನು, ಪಾಷಾಣ ಮತ್ತು ಅಂಟುಗಳು ಬಂದಿವೆ. ಆದರೂ ಕೂಡ ಇಲಿಗಳನ್ನು ಪರ್ಮನೆಂಟ್​ ಕೊನೆಮಾಡಲು ಅಸಾಧ್ಯ. ಹೀಗಾಗಿ ಈ ಇಲಿಯ ಆಸೆಗಳನ್ನು ಪೂರೈಸಲು ಮನೆಯವರೇ ಆಹಾರಗಳನ್ನು ಇಟ್ಟು ಸಾಯಿಸುವ ಉಪಾಯಗಳನ್ನು ಮಾಡುತ್ತಾರೆ.


ಇದನ್ನೂ ಓದಿ: ಜಸ್ಟ್ ರನ್ನಿಂಗ್ ಮೂಲಕ 2 ರೀತಿಯ ಕ್ಯಾನ್ಸರ್ ಗೆದ್ದ 69ರ ವೃದ್ಧ ತಂಗಪ್ರಸಾದ್!


ಈ ಇಲಿಗೂ ಮತ್ತು ಸಾರ್ವಜನಿಕ ಸಾರಿಗೆಗೂ ಏನು ಸಂಬಂಧ ಅಂತ ಯೋಚನೆ ಮಾಡ್ತಾ ಇದ್ದೀರಾ? ಇದೆ ಯಾಕಂದರೆ ಇಲ್ಲೊಂದು ವೈರಲ್​ ಆಗ್ತ ಇರುವ ಸುದ್ಧಿ ಕೂಡ ಇಂತಹದ್ದೇ.


ಏನಿದೆ ವಿಡಿಯೋದಲ್ಲಿ?


ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಆರಾಮವಾಗಿ ಮೆಟ್ರೋದಲ್ಲಿ ಮಲಗಿರುವುದು ಕಂಡು ಬರುತ್ತಿದೆ. ಇದ್ದಕ್ಕಿದ್ದಂತೆ ಇಲಿಯೊಂದು ಅಲ್ಲಿಗೆ ಬಂದು ಅವನ ಮೇಲೆ ಏರುತ್ತದೆ. ಇಲಿಗಳು ವ್ಯಕ್ತಿಯ ಪಾದಗಳಿಂದ ಹಿಡಿದು ಕುತ್ತಿಗೆಯವರೆಗೆ ಎಲ್ಲೆಂದರಲ್ಲಿ ಹರಿದಾಡುತ್ತಿರುವುದು ಕಂಡುಬರುತ್ತದೆ. ಅವನು ತನ್ನ ದೇಹದಲ್ಲಿ ಕೆಲವು ವಿಚಿತ್ರ ಚಲನೆಯನ್ನು ಅನುಭವಿಸುತ್ತಾನೆ ಮತ್ತು ಅವನು ತನ್ನ ಕೈಯನ್ನು ಕುತ್ತಿಗೆಗೆ ಚಲಿಸಿದಾಗ, ಇಲಿಯು ಅಲ್ಲಿಯೇ ಕುಳಿತಿರುತ್ತದೆ. ಅವನು ಅದನ್ನು ಮುಟ್ಟಿದಾಗ ಮೌಸ್ ಓಡಿಹೋಗುತ್ತದೆ.ಈ  ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋಗೆ ಹಲವು ಕಾಮೆಂಟ್‌ಗಳು ಬರುತ್ತಿವೆ. ಹಲವೆಡೆ ಸ್ಥಳೀಯ ಅಂಗಡಿಗಳಲ್ಲಿ ಇಂತಹ ಇಲಿಗಳು ಓಡಾಡುತ್ತಿವೆ. ನೆಟಿಜನ್‌ಗಳು ವೈರಲ್ ವಿಡಿಯೋಗಳ ಅಡಿಯಲ್ಲಿ ಇಲಿಗಳ ಅನೇಕ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಅದಕ್ಕಾಗಿಯೇ ನೆಟಿಜನ್‌ಗಳು ಕೈ ತೊಳೆಯುವಂತೆ ಸಲಹೆಯನ್ನೂ ನೀಡುತ್ತಿದ್ದಾರೆ. ಈ ವೈರಲ್ ವಿಡಿಯೋ ಇದೀಗ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಏತನ್ಮಧ್ಯೆ, ಅಂತಹ ಪ್ರಾಣಿಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇಂತಹ ಇಲಿಗಳು ಹಲವೆಡೆ ಹರಿದಾಡುವುದನ್ನು ಕಾಣಬಹುದು. ಪ್ರಯಾಣಿಕರೊಬ್ಬರಿಗೆ ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ವಿಡಿಯೋಗಳು ವೈರಲ್ ಆಗಿವೆ

First published: