ಆಸ್ಟ್ರೇಲಿಯಾ (Australia) ಎಂದರೆ ನಮಗೆ ಮೊದಲು ನೆನಪಾಗುವುದೇ ಕಾಂಗರೂ (Kangaroo) ಪ್ರಾಣಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಆಸ್ಟ್ರೇಲಿಯಾದ ರಾಷ್ಟೀಯ ಪ್ರಾಣಿಯಾದ ಕಾಂಗರೂ ಅವರ ರಾಷ್ಟ್ರಧ್ವಜದಲ್ಲಿ (National Flag) ಸಹ ಇದೆ ಮತ್ತು ಬಹುತೇಕವಾಗಿ ಆಸ್ಟ್ರೇಲಿಯಾದವರು ಎಂದರೆ ಕಾಂಗರೂ ನಾಡಿನವರು ಎಂದು ಉಲ್ಲೇಖಿಸುತ್ತಾರೆ. ಈಗ ಬೇರೆ ಬಣ್ಣದ ಕಾಂಗರೂವನ್ನು ಸ್ಥಳೀಯರು ನೋಡಿದ್ದಾರೆ ಎಂದು ಹೇಳಿದ್ದಾರೆ. ಹೌದು.. ಆಸ್ಟ್ರೇಲಿಯಾದಲ್ಲಿನ ಕ್ವೀನ್ಸ್ಲ್ಯಾಂಡ್ ನಗರದ ಹೊರ ವಲಯದಲ್ಲಿ ನೋಗೋ ಸ್ಟೇಷನ್ ನಿವಾಸಿಯಾದ ಸಾರಾ ಕಿನ್ನನ್ ಎಂಬುವವರು ಬಿಳಿ ಕಾಂಗರೂವನ್ನು (White Kangaroo) ನೋಡಿದ್ದಾರೆ. ಅಲ್ಬಿನೋ ಕಾಂಗರೂ ಆರು ತಿಂಗಳ ಹಿಂದೆ ಕಣ್ಮರೆಯಾಗಿತ್ತು ಎಂದು ಹೇಳಲಾಗುತ್ತಿದೆ. ಮೊದಲಿಗೆ ಅವರು ನೋಡಿದ ಬಿಳಿ ಕಾಂಗರೂವನ್ನೇ ಎಂದು ಅವರಿಗೆ ನಂಬಲು ಸಾಧ್ಯವಾಗಲಿಲ್ಲವಂತೆ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾದಲ್ಲಿ ತುಂಬಾನೇ ಅಪರೂಪವಂತೆ ಇಂತಹ ಬಿಳಿ ಕಾಂಗರೂಗಳು, ಇದರ ಫೋಟೋವನ್ನು ಕ್ಲಿಕ್ಕಿಸಿದ್ದಾರೆ.
"ನಾನು ನನ್ನ ಗಂಡನೊಂದಿಗೆ ಹೊರಗೆ ಹೋಗಿದ್ದೆ, ನಾವು ತೋಟದಲ್ಲಿ ಕೆಲವು ಆಡುಗಳನ್ನು ಬಿಡುತ್ತಿದ್ದೆವು ಮತ್ತು ಅಲ್ಲಿ ಬಿಳಿ ಕಾಂಗರೂ ಇತ್ತು" ಎಂದು ಸಾರಾ ಅವರು ತಿಳಿಸಿದ್ದಾರೆ.
ಮಗಳನ್ನು ಕರೆದು ತಕ್ಷಣ ಪೋಟೋ ಕ್ಲಿಕ್ ಮಾಡಿದ ಮಹಿಳೆ
"ನೀವು ಅದರ ಪಕ್ಕದಲ್ಲಿ ಒಂದು ಬಿಳಿ ಹಾಳೆಯನ್ನು ಹಾಕಿದರೆ, ಅದು ಎಷ್ಟು ಬಿಳಿ ಆಗಿರುತ್ತದೆಯೋ ಆ ಕಾಂಗರೂ ಸಹ ಅಷ್ಟು ಬಿಳಿಯಾಗಿತ್ತು ಎಂಬುದನ್ನು ನೋಡುವುದು ತುಂಬಾನೇ ನಂಬಲು ಅಸಾಧ್ಯವಾಗಿತ್ತು. ಇದೆಲ್ಲವೂ ಎಷ್ಟು ಬೇಗ ನಡೆದು ಹೋಯಿತು ಎಂದರೆ, ನಾವು ಅದನ್ನು ಹೆಚ್ಚು ಹೊತ್ತು ನೋಡಲು ಸಾಧ್ಯವಾಗಲಿಲ್ಲ. ನಾನು ನನ್ನ ಮಗಳಿಗೆ ಕರೆದು ನನ್ನ ಕ್ಯಾಮೆರಾವನ್ನು ತರಲು ಹೇಳಿದೆ ಮತ್ತು ತಕ್ಷಣವೇ ಅದರ ಫೋಟೋವನ್ನು ಕ್ಲಿಕ್ಕಿಸಿದೆ" ಎಂದು ಅವರು ಹೇಳಿದರು.
ಓಡಿ ಹೋದು ಬಿಳಿ ಕಾಂಗಾರೂ
ಆ ಅಪರೂಪದ ಬಿಳಿ ಕಾಂಗರೂ ಅಲ್ಲಿಂದ ಓಡಿ ಹೋಗುವ ಮೊದಲು ಸಾರಾ ಅವರು ಅದರ ಒಂದೆರಡು ಫೋಟೋಗಳನ್ನು ಕ್ಲಿಕ್ ಮಾಡಲು ಸಾಧ್ಯವಾಯಿತು.
ಕಾಂಗಾರೂ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಔಟ್ಬ್ಯಾಕ್ ಪಯೋನಿಯರ್ಸ್ ಎಂಬ ಫೇಸ್ಬುಕ್ ಖಾತೆಯ ಪುಟವು ಈ ಬಿಳಿ ಕಾಂಗರೂವಿನ ಫೋಟೋಗಳನ್ನು ಹಂಚಿಕೊಂಡಿದೆ. "ನೀವು ಎಂದಾದರೂ ಪೊದೆಯಲ್ಲಿ ಅಲ್ಬಿನೋ ಕಾಂಗರೂವನ್ನು ನೋಡಿದ್ದೀರಾ? ನಿನ್ನೆ, ಸಾರಾ ಕಿನ್ನನ್ ನೋಗೋ ಸ್ಟೇಷನ್ನಲ್ಲಿ ಈ ಅಪರೂಪದ ಮತ್ತು ಸುಂದರವಾದ ಕಾಂಗರೂವನ್ನು ನೋಡಿದರು.
ನಾವು ತುಂಬಾ ಅದೃಷ್ಟವಂತರು, ಏಕೆಂದರೆ ಸಾರಾ ಅವರು ಅದರ ಒಂದೆರಡು ಫೋಟೋಗಳನ್ನು ಸೆರೆ ಹಿಡಿದಿದ್ದಾರೆ. ನೀವೇನಾದರೂ ಪೊದೆಯಲ್ಲಿ ಅಲ್ಬಿನೋ ಕಾಂಗರೂವನ್ನು ನೋಡಿದ್ದರೆ ನಮಗೆ ತಿಳಿಸಿ" ಎಂದು ಬರೆದಿದ್ದಾರೆ.
ಇದನ್ನೂ ಓದಿ: Viral Video: ಇರ್ಫಾನ್ ಖಾನ್ ಓ ಹೊ ಹೊ ಹೊ ಹಾಡಿಗೆ ವಧುನಿನ ಸಖತ್ ಡ್ಯಾನ್ಸ್..!
ಆದರೂ, ಕಶೇರುಕಗಳ ಕ್ವೀನ್ಸ್ಲ್ಯಾಂಡ್ ಮ್ಯೂಸಿಯಂ ಕ್ಯುರೇಟರ್ ಪಾಲ್ ಆಲಿವರ್, ಲಾಂಗ್ರಿಚ್ನಲ್ಲಿ ಕಂಡು ಬಂದ 'ಜೀವಿ' ವಾಸ್ತವವಾಗಿ ಲ್ಯೂಸಿಸ್ಟಿಕ್ ಕಾಂಗರೂ ಆಗಿತ್ತು ಮತ್ತು ಅಲ್ಬಿನೋ ಅಲ್ಲ ಎಂದು ಹೇಳಿದರು ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
ಅಲ್ಬಿನೋ ಕಾಂಗರೂ ಗುಲಾಬಿ ಕಣ್ಣುಗಳನ್ನು ಹೊಂದಿರುತ್ತದೆ
'ಈ ಫೋಟೋವನ್ನು ನೋಡಿದರೆ, ಅದು ಕಪ್ಪು ಕಣ್ಣುಗಳನ್ನು ಹೊಂದಿರುವಂತೆ ಕಾಣುತ್ತದೆ, ಅದನ್ನು ಖಂಡಿತವಾಗಿಯೂ ನೋಡುವುದು ಕಷ್ಟ, ಆದರೆ ಅದು ಅಲ್ಬಿನೋ ಅಲ್ಲ ಎಂದು ಸೂಚಿಸುತ್ತದೆ. ನಿಜವಾದ ಅಲ್ಬಿನೋ ಕಾಂಗರೂ ಗುಲಾಬಿ ಕಣ್ಣುಗಳನ್ನು ಹೊಂದಿರುತ್ತದೆ. ಕೆಲವೊಮ್ಮೆ ಲ್ಯೂಸಿಸಂ ಎಂದು ಕರೆಯಲ್ಪಡುವ ಮತ್ತೊಂದು ರೀತಿಯ ರೂಪಾಂತರವಿದೆ, ಅಲ್ಲಿ ಕೆಲವೊಮ್ಮೆ ಆ ಕಾಂಗರೂಗಳು ಕಪ್ಪು ಕಣ್ಣುಗಳನ್ನು ಹೊಂದಿರುತ್ತವೆ' ಎಂದು ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.
ಇದನ್ನೂ ಓದಿ: Viral Video: ಕೊರಿಯರ್ ಬಾಯ್ ಆಗಿ ಬಂದ ಮಗ, ಪತ್ರ ಪಡೆದು ಮುತ್ತುಕೊಟ್ಟ ತಂದೆ! ಭಾವುಕ ಕ್ಷಣಗಳ ದೃಶ್ಯ ನೀವೂ ಕಣ್ತುಂಬಿಕೊಳ್ಳಿ
ಈ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ ನೆಟ್ಟಿಗರು "ನೀವು ಅದನ್ನು ನೋಡಿದಾಗ ಅದು ನಿಜಕ್ಕೂ ಒಂದು ಅದ್ಭುತವಾದ ದೃಶ್ಯವಾಗಿರಬೇಕು" ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು “ನಿಜಕ್ಕೂ ಈ ಫೋಟೋಗಳು ಬೆರಗು ಗೊಳಿಸುತ್ತವೆ.. ನಾನು ಇದುವರೆಗೆ ಒಂದನ್ನು ಕಾಡಿನಲ್ಲಿ ನೋಡಿಲ್ಲ" ಎಂದು ಹೇಳಿದ್ದಾರೆ. ಹೆಚ್ಚಿನ ಜನರು ಇದನ್ನು ನೋಡಿ "ಅದು ಅದ್ಭುತವಾಗಿದೆ", "ತುಂಬಾನೇ ಚೆನ್ನಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ