Snake: ಅಪರೂಪದ ಎರಡು ತಲೆಯ ಮೊಟ್ಟೆ ಭಕ್ಷಕ ಹಾವು ಪತ್ತೆ! ಫೋಟೋ ವೈರಲ್

ನೀವು ಎರಡು ತಲೆಯ ಹಾವಿನ ಬಗ್ಗೆ ಖಂಡಿತಾ ಕೇಳಿರುತ್ತೀರಿ. ಇಂಟರ್ನೆಟ್‍ನಲ್ಲಂತೂ ಎರಡು ತಲೆಯ ಹಾವುಗಳ ಬಗ್ಗೆ ಲೆಕ್ಕವಿಲ್ಲದಷ್ಟು ಚಿತ್ರಗಳಿವೆ. ಹಾಗಂತ, ಇದು ಸಿಕ್ಕ ಸಿಕ್ಕಲ್ಲಿ ಕಾಣ ಸಿಗುವ ಸಾಮಾನ್ಯ ಹಾವು ಎಂದು ಅರ್ಥವಲ್ಲ. ಎರಡು ತಲೆಯ ಹಾವುಗಳು ಕಾಣ ಸಿಗುವುದು ತುಂಬಾ ಅಪರೂಪ. ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಕಾಡಿನಲ್ಲಿ ಎರಡು ತಲೆಗಳನ್ನು ಹೊಂದಿರುವ ಹಾವೊಂದು ಪತ್ತೆಯಾಗಿದೆ.

ಎರಡು ತಲೆಯ ಮೊಟ್ಟೆ ಭಕ್ಷಕ ಹಾವು

ಎರಡು ತಲೆಯ ಮೊಟ್ಟೆ ಭಕ್ಷಕ ಹಾವು

  • Share this:
ನೀವು ಎರಡು ತಲೆಯ ಹಾವಿನ (Snake) ಬಗ್ಗೆ ಖಂಡಿತಾ ಕೇಳಿರುತ್ತೀರಿ. ಇಂಟರ್ನೆಟ್‍ನಲ್ಲಂತೂ ಎರಡು ತಲೆಯ ಹಾವುಗಳ ಬಗ್ಗೆ ಲೆಕ್ಕವಿಲ್ಲದಷ್ಟು ಚಿತ್ರಗಳಿವೆ. ಹಾಗಂತ, ಇದು ಸಿಕ್ಕ ಸಿಕ್ಕಲ್ಲಿ ಕಾಣ ಸಿಗುವ ಸಾಮಾನ್ಯ ಹಾವು ಎಂದು ಅರ್ಥವಲ್ಲ. ಎರಡು ತಲೆಯ ಹಾವುಗಳು ಕಾಣ ಸಿಗುವುದು ತುಂಬಾ ಅಪರೂಪ. ಇತ್ತೀಚೆಗೆ ದಕ್ಷಿಣ ಆಫ್ರಿಕಾದ (South Africa) ಕಾಡಿನಲ್ಲಿ ಎರಡು ತಲೆಗಳನ್ನು ಹೊಂದಿರುವ ಹಾವೊಂದು ಪತ್ತೆಯಾಗಿದೆ. ಹಾವುಗಳನ್ನು ರಕ್ಷಿಸುವ ನಿಕ್ ಇವಾನ್ಸ್ ಎಂಬ ವ್ಯಕ್ತಿ ಆ ಹಾವಿನ ಫೋಟೋಗಳನ್ನು ಫೇಸ್‍ಬುಕ್‍ನಲ್ಲಿ (Facebook) ಹಂಚಿಕೊಂಡಿದ್ದಾರೆ. ಈ ಸದರ್ನ್ ಬ್ರೌನ್ ಮೊಟ್ಟೆ ಭಕ್ಷಕ ಹಾವು ನಿರುಪದ್ರವಿ ಹಾವುಗಳ ಪ್ರಭೇದಕ್ಕೆ ಸೇರಿದ್ದು. ವ್ಯಕ್ತಿಯೊಬ್ಬರ ತೋಟದಲ್ಲಿ ಹರಿದಾಡುತ್ತಿದ್ದ ಈ ಅಪರೂಪದ ಎರಡು ತಲೆಯ ಹಾವನ್ನು (two-headed snake) ತಾನು ರಕ್ಷಿಸಿ ತಂದಿರುವುದಾಗಿ ನಿಕ್ ಇವಾನ್ಸ್ ತಮ್ಮ ಫೇಸ್‍ಬುಕ್ ಪೋಸ್ಟಿನಲ್ಲಿ ಮಾಹಿತಿ ನೀಡಿದ್ದಾರೆ.

ತೋಟದಲ್ಲಿ ಕಾಣ ಸಿಕ್ಕ ಆ ಅಪರೂಪದ ವಿಚಿತ್ರ ಹಾವು
ಆ ವ್ಯಕ್ತಿ ಡರ್ಬನ್‍ನ ಉತ್ತರದಲ್ಲಿರುವ ಒಂದು ಪಟ್ಟಣವಾದ ಡ್ವಾಂಡ್ವಿಯ ನಿವಾಸಿಯಾಗಿದ್ದು, ತನ್ನ ತೋಟದಲ್ಲಿ ಕಾಣ ಸಿಕ್ಕ ಆ ಅಪರೂಪದ ವಿಚಿತ್ರ ಹಾವಿಗೆ ಯಾರೂ ಹಾನಿ ಮಾಡದಂತೆ ನೋಡಿಕೊಂಡರು ಮತ್ತು ಅದನ್ನು ಬಾಟಲಿಯೊಂದರಲ್ಲಿ ಹಾಕಿಟ್ಟು, ಇವಾನ್ ಅವರಿಗೆ ಅಲ್ಲಿಗೆ ಬಂದು ತೆಗೆದುಕೊಂಡು ಹೋಗುವಂತೆ ಹೇಳಿದ್ದರು.

ಹೇಗಿದೆ ಈ ವಿಚಿತ್ರ ಹಾವು ?
“ಈ ವಿರೂಪಗೊಂಡ ಹಾವನ್ನು ನೋಡುವುದು, ಒಂದು ವಿಚಿತ್ರವಾದ ದೃಶ್ಯವಾಗಿತ್ತು” ಎಂದು ನಿಕ್ ಇವಾನ್ಸ್ ತಮ್ಮ ಪೋಸ್ಟಿನಲ್ಲಿ ಬರೆದುಕೊಂಡಿದ್ದಾರೆ. “ಅದು ಚಿಕ್ಕ ವಯಸ್ಸಿನ ಒಂದು ಅಡಿ ಉದ್ದದ ಹಾವು. ಅದು ಹೇಗೆ ಚಲಿಸುತ್ತದೆ ಎಂಬುದನ್ನು ನೋಡುವುದು ತುಂಬಾ ಆಸಕ್ತಿದಾಯಕವಾಗಿತ್ತು. ಕೆಲವೊಮ್ಮೆ, ತಲೆಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಹೋಗಲು ಪ್ರಯತ್ನಿಸುತ್ತವೆ, ಇನ್ನು ಕೆಲವೊಮ್ಮೆ ಅದು ಒಂದು ತಲೆಯನ್ನು ಇನ್ನೊಂದು ತಲೆಯ ಮೇಲೆ ಇಡುತ್ತದೆ. ಅದು ಚಲಿಸುವ ಅತ್ಯಂತ ಪರಿಣಾಮಕಾರಿ ಮಾರ್ಗ ಎಂದು ಕಾಣುತ್ತದೆ” ಎಂದು ನಿಕ್ ಇವಾನ್ಸ್ ಅವರು ತಮ್ಮ ಪೋಸ್ಟಿನಲ್ಲಿ ಬರೆದುಕೊಂಡಿದ್ದಾರೆ.

ಈ ಬಗ್ಗೆ ಇವಾನ್ಸ್ ಅವರು  ಹೇಳಿದ್ದೇನು?
ಆ ಎರಡು ತಲೆಯ ಪುಟ್ಟ ಹಾವು ಪ್ರಸ್ತುತ ವೃತ್ತಿಪರ ಆರೈಕೆಯಲ್ಲಿ ಸುರಕ್ಷಿತವಾಗಿದೆ ಎಂದು ನಿಕ್ ಇವಾನ್ಸ್ ತಿಳಿಸಿದ್ದಾರೆ. ತಾನು ರಕ್ಷಿಸಲು ಹೋಗುವ ವರೆಗೂ ಅದು ಜೀವವನ್ನು ಉಳಿಸಿಕೊಂಡಿತ್ತು ಎಂಬವುದೇ ಇವಾನ್ಸ್ ಅವರಿಗೆ ಅಚ್ಚರಿ ತಂದಿದೆ. ಇನ್ನು ಆ ಹಾವನ್ನು ಮರಳಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Gold Chain: ಚಿನ್ನದ ಸರವನ್ನೇ ಹೊತ್ತೊಯ್ದ ಇರುವೆಗಳು; ಅಬ್ಬಬ್ಬಾ! ಇರುವೆಗಳಿಗೂ ಇಷ್ಟೊಂದು ಚಿನ್ನದ ಮೋಹವೇ

“ನನಗೆ ಗೊತ್ತಿರುವ ಮಟ್ಟಿಗೆ ಅವು ಸಾಮಾನ್ಯವಾಗಿ ತುಂಬಾ ಕಾಲ ಬದುಕುವುದಿಲ್ಲ. ಈ ಹಾವು ಕಾಡಿನಲ್ಲಿ ತುಂಬಾ ಸಮಯ ಖಂಡಿತಾ ಬದುಕುಳಿಯದು. ಇದು ಕೇವಲ ಚಲಿಸಬಹುದು ಮತ್ತು ಅದು ಚಲಿಸಿದಾಗ, ನಂಬಲು ಸಾಧ್ಯವಾಗದಷ್ಟು ನಿಧಾನಕ್ಕೆ ಚಲಿಸುತ್ತದೆ. ಪರಭಕ್ಷಕಗಳಿಗೆ ಬಾಯಿಗೆ ಆರಾಮವಾಗಿ ದೊರೆಯಬಲ್ಲ ಆಯ್ಕೆ ಇದು” ಎಂದು ಇವಾನ್ಸ್ ವಿವರಿಸಿದ್ದಾರೆ.

ಈ ಪೋಸ್ಟ್ ನೋಡಿ ನೆಟ್ಟಿಗರು ಹೇಳಿದ್ದು ಹೀಗೆ
ಈ ಪೋಸ್ಟ್ ಇಂಟರ್ನೆಟ್‍ನಲ್ಲಿ ಬಹಳ ವೈರಲ್ ಆಗಿದೆ. ಈ ಅಪರೂಪದ ಹಾವನ್ನು ಸುರಕ್ಷಿತವಾಗಿ ಕೊಂಡೊಯ್ಯಲಾಗಿದೆ ಎಂಬುದನ್ನು ತಿಳಿದು ಫೇಸ್‍ಬುಕ್ ಮಂದಿ ಸಂತಸದ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

“ಬಡಪಾಯಿ ಜೀವಿ. ಅದು ಸುರಕ್ಷಿತವಾಗಿ ಇದೆ ಎಂಬುವುದು ಒಳ್ಳೆಯ ಸಂಗತಿ” ಎಂದು ಒಬ್ಬ ನೆಟ್ಟಿಗ ಬರೆದಿದ್ದರೆ, ಇನ್ನೊಬ್ಬರು, “ಎಂತಹ ಅದ್ಭುತವಾದ ಪುಟಾಣಿ ಜೀವಿ! ಡ್ವಾಂಡ್ವಿಯಲ್ಲಿರುವ ವ್ಯಕ್ತಿ ನಿಮ್ಮನ್ನು ಸಂಪರ್ಕಿಸಿದ್ದು ಒಳ್ಳೆದಾಯಿತು. ನೀವು ಆ ಪುಟ್ಟ ಜೀವಕ್ಕೆ ಆಹಾರ ಸೇವಿಸಲು ಸಹಾಯ ಮಾಡುತ್ತೀರಿ ಎಂದು ಭಾವಿಸುತ್ತೇನೆ” ಎಂದು ಬರೆದಿದ್ದಾರೆ. ಮತ್ತೊಬ್ಬರು “ಅದ್ಭುತ ಫೋಟೋಗಳು. ತುಂಬಾ ನೋವಿನ ಸಂಗತಿ ಆದರೆ ನೊಡಲು ಬಹಳ ಆಸಕ್ತಿದಾಯಕವಾಗಿದೆ ಕೂಡ. ಅದಕ್ಕೆ ಸಾಕಷ್ಟು ಗುಣಮಟ್ಟದ ಬದುಕು ಸಿಗಲಿ ಎಂದು ಆಶಿಸುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:  Elephant video: ಮರಿ ಆನೆಯೊಂದು ಈ ವ್ಯಕ್ತಿಯನ್ನು ಹೇಗೆ ಮುದ್ದಾಡಿದೆ ನೋಡಿ!

ಮಾಧ್ಯಮವೊಂದು ಹೇಳಿರುವ ಪ್ರಕಾರ, ಎರಡು ಅಥವಾ ಹೆಚ್ಚು ತಲೆಗಳ ಜೊತೆ ಹುಟ್ಟಿರುವ ಜೀವಿಗಳು ಫಾಲಿಸೆಫಾಲಿ ಎಂಬ ಸ್ಥಿತಿಯನ್ನು ಹೊಂದಿರುತ್ತವೆ, ಇದು ಸಸ್ತನಿಗಳಿಗಿಂತಲೂ ಸರಿಸೃಪಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಸ್ಥಿತಿಯನ್ನು ಹೊಂದಿರುವ ಜೀವಿಗಳು ಹೆಚ್ಚು ಕಾಲ ಬದುಕುವುದಿಲ್ಲ.
Published by:Ashwini Prabhu
First published: