Two-Headed Diamondback Turtle| ಅಮೆರಿಕದಲ್ಲಿ ಪತ್ತೆಯಾದ ಅಪರೂಪದ ಎರಡು ತಲೆಯ ಡೈಮಂಡ್ ಬ್ಯಾಕ್ ಟೆರಪಿನ್ ಆಮೆ

ಈ ಆಮೆಯು ಮೂಲತಃ, ಪಶ್ಚಿಮ ಬಾರ್ನ್‍ಸ್ಟೇಬಲ್ ಎಂಬ ಸಮುದ್ರ ತೀರದ ಹಳ್ಳಿಯ ಗೂಡಿನಿಂದ ಬಂದಿದ್ದು, ಸಂಶೋಧಕರು ಆಮೆಗೆ ಅದೊಂದು ಅಪಾಯಕಾರಿ ಸ್ಥಳವೆಂದು ಪರಿಗಣಿಸಿ, ಅಲ್ಲಿಂದ ಅದನ್ನು ಸ್ಥಳಾಂತರಿಸಬೇಕೆಂದು ಸಂಶೋಧಕರು ನಿರ್ಧರಿಸಿದರು.

ಎರಡು ತಲೆಯ ಆಮೆ.

ಎರಡು ತಲೆಯ ಆಮೆ.

  • Share this:
ಅಮೆರಿಕದ (America) ಮಸಾಚುಸೆಟ್ಸ್‌ನ (Massachusetts) ಬರ್ಡ್‍ಸಿ ಕೇಪ್ ವನ್ಯಜೀವಿ ಕೇಂದ್ರದಲ್ಲಿ, ಎರಡು ವಾರಗಳ ಹಿಂದೆ ಮೊಟ್ಟೆಯೊಡೆದಿರುವ ಅಪರೂಪದ ಡೈಮಂಡ್ ಬ್ಯಾಕ್ ಟೆರಪಿನ್ (Diamondback Terrapin) ಪ್ರಭೇದದ ಆಮೆ ಮರಿ ಪತ್ತೆಯಾಗಿದ್ದು, ಅದು ಸುರಕ್ಷಿತವಾಗಿದೆ. ಆ ಮರಿ ಏಕೆ ಅಪರೂಪ ಅಂತೀರಾ? ಏಕೆಂದರೆ ಅದು ಎರಡು ತಲೆಗಳನ್ನು ಹೊಂದಿದೆ. ಅಷ್ಟು ಮಾತ್ರವಲ್ಲ ಅದರ ಆರು ಕಾಲುಗಳು ಕೂಡ ಸುಸ್ಥಿತಿಯಲ್ಲಿದೆ. ಡೈಮಂಡ್ ರೆಟಪಿನ್ , ರಾಜ್ಯದಲ್ಲಿ ಅಪಾಯದ ಅಂಚಿನಲ್ಲಿರುವ ಪ್ರಭೇದಗಳಲ್ಲಿ ಒಂದಾಗಿದೆ. ಈ ಎರಡು ತಲೆಯ ಡೈಮಂಡ್ ಬ್ಯಾಕ್ ರೆಟಪಿನ್ ಆಮೆ ಮರಿ (Turtle), ಹುಳುಗಳು ಮತ್ತು ಆಹಾರದ ಉಂಡೆಗಳನ್ನು ಚೆನ್ನಾಗಿ ತಿನ್ನುತ್ತಿದೆ ಎಂದು ವನ್ಯಜೀವಿ ಕೇಂದ್ರದ ಸಿಂಬ್ಬಂದಿ ಹೇಳಿದ್ದಾರೆ. ಈ ಆಮೆಯ ಎರಡೂ ತಲೆಗಳು ಸ್ವತಂತ್ರವಾಗಿ ಕೆಲಸ ಮಾಡುತ್ತಿವೆ. ಅವು ವಿಭಿನ್ನ ಸಮಯಗಳಲ್ಲಿ ಹೊರ ಬರುತ್ತವೆ ಮತ್ತು ಅದರ ಚಿಪ್ಪಿನ ಒಳಗೆ ಎರಡು ಜೀರ್ಣಾಂಗ ವ್ಯವಸ್ಥೆಗಳಿದ್ದು, ಅದರ ದೇಹದ ಎರಡೂ ಬದಿಗಳನ್ನು ಪೋಷಿಸಲು ಸಹಾಯಕವಾಗಿದೆ.

ಈ ಆಮೆಯು ಮೂಲತಃ, ಪಶ್ಚಿಮ ಬಾರ್ನ್‍ಸ್ಟೇಬಲ್ ಎಂಬ ಸಮುದ್ರ ತೀರದ ಹಳ್ಳಿಯ ಗೂಡಿನಿಂದ ಬಂದಿದ್ದು, ಸಂಶೋಧಕರು ಆಮೆಗೆ ಅದೊಂದು ಅಪಾಯಕಾರಿ ಸ್ಥಳವೆಂದು ಪರಿಗಣಿಸಿ, ಅಲ್ಲಿಂದ ಅದನ್ನು ಸ್ಥಳಾಂತರಿಸಬೇಕೆಂದು ಸಂಶೋಧಕರು ನಿರ್ಧರಿಸಿದರು. ಮೊಟ್ಟೆಯೊಡೆದ ನಂತರ , “ಹೆಡ್ ಸ್ಟಾರ್ಟ್” ಎಂದು ಕರೆಯಲ್ಪಡುವ ಗೂಡುಗಳಲ್ಲಿ ಇರುವ ಆಮೆಗಳನ್ನು ವಿವಿಧ ಆರೈಕೆಯ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ. ವಸಂತ ಕಾಲದಲ್ಲಿ ಅವುಗಳನ್ನು ಬಿಡುಗಡೆ ಮಾಡುವ ಮೊದಲು ಮೇಲ್ವಿಚಾರಣೆ ನಡೆಸಲಾಗುತ್ತದೆ ಎಂದು ದ ಕೇಪ್ ಕೋಡ್ ಟೈಮ್ಸ್ ವರದಿ ಮಾಡಿದೆ.

ವನ್ಯಜೀವಿ ಕೇಂದ್ರದಲ್ಲಿರುವ ಪಶು ವೈದ್ಯರಾದ, ಪ್ರಿಯಾ ಪಟೇಲ್ ಮತ್ತು ಇತರ ಸಿಬ್ಬಂದಿ ಈ ಆಮೆಯ ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಲಿದ್ದಾರೆ. ಈ ಎರಡು ತಲೆಯ ಆಮೆಗೆ ಅವರು ಮೇರಿ ಕೇಟ್ ಮತ್ತು ಆಶ್ಲೆ ಓಲ್ಸೇನ್ ಎಂದು ಮುದ್ದಿನ ಹೆಸರುಗಳನ್ನು ಇಟ್ಟಿದ್ದಾರೆ. ಅದರ ರಕ್ತ ಪರಿಚಲನಾ ವ್ಯವಸ್ಥೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಿ.ಟಿ ಸ್ಕ್ಯಾನ್ ಮಾಡಬೇಕು ಎಂದು ಅಲ್ಲಿನ ಸಿಬ್ಬಂದಿ ಬಯಸುತ್ತಿದ್ದಾರೆ.

ಎಡಿಸ್ಟೋ ಬೀಚ್ ಸ್ಟೇಟ್ ಪಾರ್ಕ್‍ನಲ್ಲಿ ವಾಡಿಕೆಯಂತೆ, ಸೀ ಟರ್ಟಲ್ ಪ್ಯಾಟ್ರೋಲ್‌ ಸಿಬ್ಬಂದಿ , ಗೂಡುಗಳ ದಾಸ್ತಾನು ಪರಿಶೀಲನೆ ಮಾಡುತ್ತಿದ್ದಾಗ, ಒಂದು ಅಪರೂಪದ ಎರಡು ತಲೆಯ ಆಮೆಯು ಕಾಣ ಸಿಕ್ಕಿತು. ದಕ್ಷಿಣ ಕೆರೋಲಿನಾ ಕಡಲ ತೀರದಲ್ಲಿ ಎರಡು ತಲೆಯ ಆ ಆಮೆ ತೆವಳಲು ಹೆಣಗಾಡುತ್ತಿರುವುದನ್ನು ಅವರು ಕಂಡರು. ಫೇಸ್‍ಬುಕ್ ಪೋಸ್ಟ್ ಪ್ರಕಾರ, ಸೀ ಟರ್ಟಲ್ ಪೆಟ್ರೋಲ್ ಸಿಬ್ಬಂದಿ ಎಂದಿನಂತೆ ಗೂಡುಗಳ ದಾಸ್ತಾನು ಪರಿಶೀಲನೆ ಮಾಡುತ್ತಿದ್ದರು, ಆಗ ಅತ್ಯಂತ ತುರ್ತು ಪರಿಸ್ಥಿತಿಯಲ್ಲಿದ್ದ ಈ ಆಮೆಯನ್ನು ಪತ್ತೆ ಮಾಡಿದರು.

ಇದನ್ನೂ ಓದಿ: WhatsApp Loan: ಇನ್ಮುಂದೆ ವಾಟ್ಸ್​ಆ್ಯಪ್​ನಲ್ಲೂ ಸಿಗುತ್ತೆ ಲೋನ್​, 5 ನಿಮಿಷದಲ್ಲಿ 10 ಲಕ್ಷ ಪಡೆಯುವುದು ಹೇಗೆ? ಹೀಗೆ ಮಾಡಿ

“ಕಡಲಾಮೆಯ ಗೂಡು ಪ್ರಮುಖ ತುರ್ತು ಪರಿಸ್ಥಿತಿಯ ಲಕ್ಷಣಗಳನ್ನು ತೋರಿಸಿದ 3 - 5 ದಿನಗಳ ನಂತರ, ಗೂಡನ್ನು ಅಗೆದು, ಒಡೆದ ಮೊಟ್ಟೆಗಳು, ಇನ್ನೂ ಒಡೆಯದ ಮೊಟ್ಟೆಗಳನ್ನು ಎಣಿಸುವ ಮೂಲಕ ಅದರ ಯಶಸ್ಸನ್ನು ನಿರ್ಧರಿಸುತ್ತೇವೆ. ಕೆಲವೊಂದು ಸಂದರ್ಭಗಳಲ್ಲಿ ಮೊಟ್ಟೆಯಿಂದ ಹೊರಬಂದ ಮರಿಗಳು ಕೂಡ ಕಾಣ ಸಿಗುತ್ತವೆ” ಎಂದು ದಕ್ಷಿಣ ಕೆರೊಲಿನಾ ಸ್ಟೇಟ್ ಪಾರ್ಕ್‍ನ ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: Maharashtra: ಕರೆಂಟ್​ ಬಿಲ್ ಕಡಿಮೆ ಮಾಡಿಸುತ್ತೇವೆ ಎಂದು ಗ್ರಾಹಕರಿಗೆ 19 ಲಕ್ಷ ಟೋಪಿ ಹಾಕಿದ ಖದೀಮರು

ಸೀ ಟರ್ಟಲ್ ಪ್ಯಾಟ್ರೋಲ್‌ಗಳು ಎಂದರೆ, ಜೂನ್‍ನಿಂದ ಆಗಸ್ಟ್‌ವರೆಗೆ ಸಮುದ್ರ ತೀರದಲ್ಲಿ ಗಸ್ತು ತಿರುಗಿ, ಲಾಗರ್‌ಹೆಡ್‌ ಆಮೆ ಗೂಡುಗಳನ್ನು ಸ್ವಯಂ ಸೇವಕರು ಹುಡುಕುತ್ತಾರೆ. ಒಮ್ಮೆ ಅವರಿಗೆ ಆಮೆಯ ಗೂಡು ಸಿಕ್ಕರೆ, ಆ ಗೂಡನ್ನು ಯಾರೂ ತುಳಿಯದಂತೆ ಮಾಡಲು, ಆ ಗೂಡಿನ ಸುತ್ತ ಹಗ್ಗದ ಆವರಣ ಹಾಕಲಾಗುತ್ತದೆ. ಜೊತೆಗೆ , ಮರಿ ಹಾಕುವ ಆಮೆಗಳಿಗೆ ಅಡೆತಡೆ ಆಗಬಾರದೆಂದು ಅವರು, ಅಲ್ಲಿನ ಕಸವನ್ನು ತೆಗೆಯುತ್ತಾರೆ ಮತ್ತು ಮರಳಿನ ರಂಧ್ರಗಳನ್ನು ಮುಚ್ಚುತ್ತಾರೆ.
Published by:MAshok Kumar
First published: