ಈ ಸ್ಕಾಚ್ ವಿಸ್ಕಿ ಮಾರಾಟವಾದ ಬೆಲೆ ಕೇಳಿದ್ರೆ ನಿಮಗೂ ಕಿಕ್ಕೇರಬಹುದು!

news18
Updated:October 4, 2018, 12:14 PM IST
ಈ ಸ್ಕಾಚ್ ವಿಸ್ಕಿ ಮಾರಾಟವಾದ ಬೆಲೆ ಕೇಳಿದ್ರೆ ನಿಮಗೂ ಕಿಕ್ಕೇರಬಹುದು!
news18
Updated: October 4, 2018, 12:14 PM IST
-ನ್ಯೂಸ್ 18 ಕನ್ನಡ

ಸ್ಕಾಟ್ಲೆಂಡ್​ನಲ್ಲಿ ನಡೆದ ಹರಾಜಿನಲ್ಲಿ ವಿಸ್ಕಿ ಬಾಟಲ್​ವೊಂದು ಬರೋಬ್ಬರಿ 8 ಕೋಟಿ 4 ಲಕ್ಷ  25 ಸಾವಿರಕ್ಕೆ(1.09 ಮಿಲಿಯನ್ ಡಾಲರ್) ಮಾರಾಟವಾಗುವ ಮೂಲಕ ಮದ್ಯಲೋಕದಲ್ಲೊಂದು ಹೊಸ ದಾಖಲೆ ನಿರ್ಮಿಸಿದೆ. ಎಡಿನ್​ಬರ್ಗ್​ನ ಬೊನ್​​​ಹಮ್ಸ್​​​​​ನಲ್ಲಿ ಈ ಹರಾಜು ಪ್ರಕ್ರಿಯೆ ನಡೆದಿದ್ದು, ಇಲ್ಲಿ 60 ವರ್ಷದಷ್ಟು ಹಳೆಯದಾದ ಮಕಲ್ಲಾನ್​​​ ವಲೇರಿಯೋ ಅಡಾಮಿ 1926 ಎಂಬ ವಿಸ್ಕಿ ಬಾಟಲ್​​​ ಅತೀ ದುಬಾರಿ ಬೆಲೆಗೆ ಹರಾಜಾಗಿದೆ.

ಈ ಹಿಂದೆ ಹಾಂಕಾಂಗ್​ನಲ್ಲಿ 814,081 ಪೌಂಡ್( 7 ಕೋಟಿ. 77 ಲಕ್ಷ) ​ಗೆ ವಿಸ್ಕಿ ಬಾಟಲ್​ವೊಂದು ಮಾರಾಟವಾಗಿರುವುದು ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಬೊನ್​​​ಹಮ್ಸ್ ಸ್ಕಾಚ್​ ವಿಸ್ಕಿ ತನ್ನ ಹೆಸರಿಗೆ ಬರೆದುಕೊಂಡಿದೆ.

ಹರಾಜಿನಲ್ಲಿ ಪಾಲ್ಗೊಂಡಿದ್ದ ಪೂರ್ವ ರಾಷ್ಟ್ರದ ವ್ಯಕ್ತಿಯೊಬ್ಬರು ಈ ಅಪರೂಪದ ಮದ್ಯದ ಬಾಟಲ್​ನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಸ್ಕಾಟ್ಲೆಂಡ್​ ವಿಸ್ಕಿಯು ವಿಶ್ವ ಮದ್ಯಪ್ರಿಯರ ನೆಚ್ಚಿನ ಪಾನೀಯವಾಗಿದ್ದು, ಅದರಲ್ಲೂ ಶೇ.40ರಷ್ಟು ವಿಸ್ಕಿಯ ಗ್ರಾಹಕರು ಪೂರ್ವ ರಾಷ್ಟ್ರದವರಾಗಿದ್ದಾರೆ ಎಂದು ಡ್ರಿಂಕ್ಸ್ ಎಕ್ಸ್​ಪರ್ಟ್​ ರಿಚರ್ಡ್​ ಹಾರ್ವೆ ತಿಳಿಸಿದ್ದಾರೆ.

ಈ ಹಿಂದೆಯೂ ಬೋನ್​ಹಮ್ಸ್​ ಹರಾಜಿನಲ್ಲಿ  ದುಬಾರಿ ಬೆಲೆಗೆ ವಿಸ್ಕಿ ಮಾರಾಟವಾಗಿದ್ದು, ವಿಶ್ವದ  ಅತ್ಯಮೂಲ್ಯ 3 ಸ್ಕಾಚ್ ವಿಸ್ಕಿ ದುಬಾರಿ ವೆಚ್ಚಕ್ಕೆ ಮಾರಾಟವಾಗಿರುವ ದಾಖಲೆ ಈ ಹರಾಜು ಸಂಸ್ಥೆಯ ಹೆಸರಲ್ಲಿದೆ.  ಇದೀಗ ಕೋಟಿ ಲೆಕ್ಕದಲ್ಲಿ ಮಾರಾಟವಾದ ವಿಸ್ಕಿಯು 1926 ರಲ್ಲಿ ಭಟ್ಟಿ ಇಳಿಸಲ್ಪಟ್ಟ ಮದ್ಯ ಎಂದು ತಿಳಿಸಿರುವ ಡ್ರಿಂಕ್ಸ್ ಎಕ್ಸ್​ಪರ್ಟ್​ಗಳು, ಇದನ್ನು 1986 ರಲ್ಲಿ ಬಾಟಲಿಯಲ್ಲಿ ಇರಿಸಲಾಗಿತ್ತು.
First published:October 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626