ಸಾಮಾನ್ಯವಾಗಿ ನಾವು ಬೆಳಿಗ್ಗೆ (Morning) ಹೊತ್ತಿನಲ್ಲಿ ಈ ಸಮುದ್ರಗಳ ತೀರದಲ್ಲಿ ಹಾಗೆ ಒಂದು ವಾಕ್ ಹೋದರೆ, ಅಲ್ಲಿ ನಮಗೆ ಸಮುದ್ರದಲ್ಲಿರುವ ಅನೇಕ ರೀತಿಯ ಜಲಚರ ಜೀವಿಗಳು ದೊಡ್ಡ ದೊಡ್ಡ ಅಲೆಗಳ ಜೊತೆಗೆ ಹಾಗೆಯೇ ತೇಲಿಕೊಂಡು ಬಂದು ಕಡಲತೀರವನ್ನು ಸೇರಿರುವುದನ್ನು ನಾವು ನೋಡುತ್ತೇವೆ. ಹೌದು, ಅನೇಕ ರೀತಿಯ ಮೀನುಗಳನ್ನು ನಾವು ನೋಡುವುದಲ್ಲದೆ, ಇನ್ನೂ ಬೇರೆ ಬೇರೆ ರೀತಿಯಾದ ಜಲಚರ ಜೀವಿಗಳಾದ ಆಮೆಗಳು, ಏಡಿಗಳು, ಡಾಲ್ಫಿನ್ ಗಳು, ಆಕ್ಟೋಪಸ್ (Octopus) ಮತ್ತು ಶಂಖದ ಹುಳುಗಳನ್ನು ಸಹ ನಾವು ಕಡಲತೀರದಲ್ಲಿ ನೋಡಬಹುದು. ಮೀನುಗಳಲ್ಲಿಯೇ ಸ್ಟಾರ್ ಫಿಶ್, ಜೆಲ್ಲಿ ಫಿಶ್ ಮತ್ತು ದೊಡ್ಡದಾದ ತಿಮಿಂಗಲಗಳನ್ನು ನಾವು ನೋಡುತ್ತೇವೆ.
ಕಡಲತೀರದಲ್ಲಿ ಇದ್ದು, ಮೀನುಗಳನ್ನು ಹಿಡಿದು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ಮೀನುಗಾರರು ಸಹ ಎಷ್ಟೋ ಬಾರಿ ವಿಭಿನ್ನವಾದ ಅಪರೂಪದ ಮೀನುಗಳನ್ನು ಮತ್ತು ಇನ್ನಿತರೆ ಜಲಚರ ಪ್ರಾಣಿಗಳನ್ನು ನೋಡಿ ಆಶ್ಚರ್ಯ ಪಟ್ಟಿರುತ್ತಾರೆ ಅಂತ ಹೇಳಬಹುದು.
ಒಟ್ಟಿನಲ್ಲಿ ಹೇಳುವುದಾದರೆ ಸಮುದ್ರದಲ್ಲಿ ಇರುವ ಆ ಜಲಚರಗಳ ಪ್ರಪಂಚ ತುಂಬಾನೇ ವಿಸ್ಮಯಕಾರಿಯಾಗಿರುತ್ತದೆ ಅಂತ ಹೇಳಬಹುದು. ಆಗಾಗ್ಗೆ ನಾವು ಹೊಸ ಹೊಸ ಪ್ರಾಣಿಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಗಳನ್ನು ನೋಡುತ್ತಲೇ ಇರುತ್ತೇವೆ ಅಂತ ಹೇಳಬಹುದು.
ನೆದರ್‌ಲ್ಯಾಂಡ್ ಕಡಲತೀರದಲ್ಲಿ ಪತ್ತೆಯಾಯ್ತು ಅಪರೂಪದ ಮೀನು
ನೆದರ್ ಲ್ಯಾಂಡ್ಸ್ ನ ಕಡಲತೀರದಲ್ಲಿ ಹಲ್ಲುಗಳನ್ನು ಹೊಂದಿರುವ ಅಪರೂಪದ, ರಕ್ತ ಹೀರುವ ಜೀವಿಯೊಂದು ಪತ್ತೆಯಾಗಿದೆ. ಫಾಕ್ಸ್ ವೆದರ್ ಪ್ರಕಾರ, ಮೂರು ಅಡಿ ಉದ್ದದ ಸೀ ಲ್ಯಾಂಪ್ರೇ ಅಂತ ಕರೆಯುವ ಈ ಮೀನು ಕಳೆದ ತಿಂಗಳು ಸಮುದ್ರ ಜೀವಶಾಸ್ತ್ರಜ್ಞ ಜಾಕೊ ಹ್ಯಾವರ್ಮನ್ಸ್ ಕಡಲತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗುರುತಿಸಿದ್ದಾರೆ.
ಇದನ್ನೂ ಓದಿ: ಮುನಿಸಿಕೊಂಡ ಗೆಳತಿಯ ಮನವೊಲಿಸಲು ಯುವಕನ 21 ಗಂಟೆಯ ಹೋರಾಟ; ಅಯ್ಯೋ ಪಾಪ ಎಂದ ನೆಟ್ಟಿಗರು
ಆರು ವರ್ಷಗಳಲ್ಲಿ ಮೊದಲ ಬಾರಿಗೆ ಈ ಜೀವಿ ಪತ್ತೆಯಾಗಿದೆ. ಎನ್ಎಲ್ ಟೈಮ್ಸ್ ಪ್ರಕಾರ, ಸೀ ಲ್ಯಾಂಪ್ರೇ ಪತ್ತೆಯಾದ ಕಡಲತೀರವು ಆಮ್ಸ್ಟ್ರಾಡ್ಯಾಮ್ ಉತ್ತರಕ್ಕೆ ಸುಮಾರು 65 ಮೈಲಿ ದೂರದಲ್ಲಿದೆ. ಮೀನುಗಳಿಗೆ ಸರಿಯಾದ ತಳದ ದವಡೆ ಇಲ್ಲ, ಆದರೆ ಬಾಯಿಯಲ್ಲಿ ಸಾಕಷ್ಟು ಹಲ್ಲುಗಳಿರುವುದನ್ನು ನಾವು ಈ ಫೋಟೋದಲ್ಲಿ ನೋಡಬಹುದು.
ದವಡೆಗಳನ್ನು ಹೊಂದಿರುವ ಮೀನುಗಳು ಇರುವುದಕ್ಕಿಂತ ಮೊದಲು 400 ಮಿಲಿಯನ್ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಅಗ್ನಾಥ ಎಂಬ ಅತ್ಯಂತ ಹಳೆಯ ಕಶೇರುಕಗಳ ಗುಂಪಿಗೆ ಅವು ಸೇರಿವೆ ಎಂದು ಫಾಕ್ಸ್ ವೆದರ್ ಹೇಳಿದೆ.
ಸೀ ಲ್ಯಾಂಪ್ರೇಯನ್ನು ನೇಚರ್ ಮ್ಯೂಸಿಯಂ ಅಂಡ್ ಅಕ್ವೆರಿಯಮ್ ಆದ ಎಕೊಮಾರೆಗೆ ನೀಡಲಾಗಿದೆ. ಮ್ಯೂಸಿಯಂ ಅಧಿಕಾರಿಗಳು ಈಗಾಗಲೇ ತಮ್ಮ ಸಂಗ್ರಹದಲ್ಲಿ ಈ ಸೀ ಲ್ಯಾಂಪ್ರೇಯನ್ನು ಸೇರಿಸಿಕೊಂಡಿದ್ದಾರೆ ಮತ್ತು ಇದನ್ನು ಇತರ ವಸ್ತುಸಂಗ್ರಹಾಲಯಗಳಿಗೂ ಸಹ ನೀಡುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸೀ ಲ್ಯಾಂಪ್ರೇ ಮೀನುಗಳು ಹೆಚ್ಚಾಗಿ ಎಲ್ಲಿರುತ್ತವೆ ನೋಡಿ..
ಯುಎಸ್ ಸರ್ಕಾರಿ ಸಂಸ್ಥೆಯಾದ ನ್ಯಾಷನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಫಿಯರ್ ಅಡ್ಮಿನಿಸ್ಟ್ರೇಷನ್ (ಎನ್ಒಎಎ) ಪ್ರಕಾರ, ಸೀ ಲ್ಯಾಂಪ್ರೆ ಮೀನು ಉತ್ತರ ಮತ್ತು ಪಶ್ಚಿಮ ಅಟ್ಲಾಂಟಿಕ್ ಮಹಾಸಾಗರದಲ್ಲಿ ಹೆಚ್ಚಾಗಿ ಕಂಡು ಬರುವಂತಹ ಪರಾವಲಂಬಿ ಮೀನು ಅಂತ ಹೇಳಲಾಗುತ್ತಿದೆ.
ಇದನ್ನೂ ಓದಿ: ತುಂಡುಡುಗೆ ತೊಟ್ಟು ಮೆಟ್ರೋ ಹತ್ತಿದ ಹುಡುಗಿ! ಇದೇನಾ ಸಭ್ಯತೆ, ಇದೇನಾ ಸಂಸ್ಕೃತಿ ಎಂದ ನೆಟ್ಟಿಗರು!
ಈ ಮೀನು ಇತರ ಮೀನುಗಳಿಗಿಂತ ಸ್ವಲ್ಪ ಭಿನ್ನವಾಗಿರುತ್ತವೆ ಮತ್ತು ಇತರೆ ಮೀನುಗಳಂತೆ ಅವುಗಳು ರೆಕ್ಕೆಗಳು ಮತ್ತು ಗಿಲ್ ಕವರ್ ಗಳನ್ನು ಹೊಂದಿರುವುದಿಲ್ಲ ಅಂತ ಸಹ ಹೇಳಲಾಗುತ್ತಿದೆ.
ರಕ್ತ ಹೀರುತ್ತದೆಯಂತೆ ಈ ದೈತ್ಯ ಮೀನು
ಈ ಸೀ ಲ್ಯಾಂಪ್ರೇಗಳು ತಮ್ಮ ದೊಡ್ಡ ಆಕಾರದ ಬಾಯಿಯನ್ನು ಬಳಸಿಕೊಂಡು ರಕ್ತವನ್ನು ಹೀರಲು ಇತರೆ ಮೀನುಗಳ ಮೇಲೆ ದಾಳಿ ಮಾಡುತ್ತವೆ. ಇತರ ಮೀನುಗಳ ಮಾಂಸವನ್ನು ಹೊರ ತೆಗೆಯಲು ಈ ಮೀನು ತನ್ನ ಒರಟು ನಾಲಿಗೆಯನ್ನು ಬಳಸುತ್ತದೆ, ಇದರಿಂದ ಅದು ಬೇರೆ ಮೀನುಗಳ ರಕ್ತ ಮತ್ತು ದೇಹದ ದ್ರವಗಳನ್ನು ಹೀರಿಕೊಳ್ಳುತ್ತದೆ ಎಂದು ಎನ್ಒಎಎ ಹೇಳಿದೆ. ಇಂತಹ ಒಂದು ಸೀ ಲ್ಯಾಂಪ್ರೇ ಮೀನು ಪ್ರತಿ ವರ್ಷ ಸುಮಾರು 40 ಪೌಂಡ್ ಮೀನುಗಳನ್ನು ಕೊಲ್ಲುತ್ತದೆಯಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ