Black Tiger: ಈ ಅಪರೂಪದ ಕಪ್ಪು ಹುಲಿ ನೋಡಿದ್ದೀರಾ? ಎಷ್ಟು ಕ್ಯೂಟ್ ಇದೇ ನೋಡಿ

ನಾವು ಈ ಮೃಗಾಲಯದಲ್ಲಿರುವ ಸಫಾರಿಗೆ ಅಂತ ಹೋದರೆ ಅಲ್ಲಿ ಬಿಳಿ ಹುಲಿಗಳನ್ನು ಸಹ ನೋಡಬಹುದು, ಅಷ್ಟೇ ಅಲ್ಲದೆ ಬಿಳಿ ನವಿಲುಗಳನ್ನು ಸಹ ಅಲ್ಲಿ ನಾವು ನೋಡಬಹುದು. ಹೀಗೆ ಅಪರೂಪದ ಬಣ್ಣದ ವನ್ಯಜೀವಿಗಳನ್ನು ನೋಡುವುದೇ ಒಂದು ಖುಷಿ ಅಂತ ಹೇಳಬಹುದು. ಈಗೇಕೆ ಇದರ ಬಗ್ಗೆ ಮಾತು ಅಂತ ನೀವು ಅಂದುಕೊಳ್ಳಬಹುದು. ಇತ್ತೀಚೆಗೆ ಕ್ಯಾಮೆರಾದಲ್ಲಿ ತುಂಬಾನೇ ಅಪರೂಪದ ಕಪ್ಪು ಬಣ್ಣದ ಹುಲಿಯೊಂದನ್ನು ಸೆರೆ ಹಿಡಿದಿದ್ದಾರೆ.

ಅಪರೂಪದ ಕಪ್ಪು ಹುಲಿ

ಅಪರೂಪದ ಕಪ್ಪು ಹುಲಿ

  • Share this:
ಕೃತಿಯ (Nature) ಅದ್ಭುತಗಳನ್ನು ನೋಡುವುದೇ ಮನಸ್ಸಿಗೆ ಒಂದು ರೀತಿಯ ಖುಷಿ ನೀಡುತ್ತದೆ ಮತ್ತು ನಮ್ಮನ್ನು ಒಂದು ಕ್ಷಣ ಮಂತ್ರಮುಗ್ಧಗೊಳಿಸುತ್ತದೆ ಅಂತ ಹೇಳಿದರೆ ಸುಳ್ಳಲ್ಲ. ಏಕೆಂದರೆ ಈ ಗ್ರಹದಲ್ಲಿ ಅಸ್ತಿತ್ವದಲ್ಲಿರುವ ಪ್ರತಿಯೊಂದು ಪ್ರಾಣಿಯೂ (Animal) ಅನನ್ಯವಾಗಿದೆ ಅಂತ ಹೇಳಬಹುದು. ಸಾಮಾನ್ಯವಾಗಿ ಈ ಮಳೆಗಾಲದಲ್ಲಿ ಸ್ವಲ್ಪ ನಗರದ ಹೊರಗೆ ಮತ್ತು ಹಳ್ಳಿಗಳ (Village) ಪಕ್ಕದಲ್ಲಿರುವ ಹಸಿರು ತುಂಬಿದ ಹೊಲಗಳಿಗೆ ಹೋದರೆ ಅಲ್ಲಿ ಸುಂದರವಾದ ನವಿಲುಗಳನ್ನು ನಾವು ನೋಡಬಹುದು. ಈ ಕಾಡಿನಲ್ಲಿ ಒಂದು ಸುತ್ತು ಹೋಗಿ ಬಂದರೆ ಸಾಕು ನಮಗೆ ಅನೇಕ ರೀತಿಯ ಪ್ರಾಣಿಗಳು ನೋಡಲು ಸಿಗುತ್ತವೆ. ಅದರಲ್ಲೂ ನಾವು ಈ ಮೃಗಾಲಯದಲ್ಲಿರುವ (Zoo) ಸಫಾರಿಗೆ ಅಂತ ಹೋದರೆ ಅಲ್ಲಿ ಬಿಳಿ ಹುಲಿಗಳನ್ನು ಸಹ ನೋಡಬಹುದು, ಅಷ್ಟೇ ಅಲ್ಲದೆ ಬಿಳಿ ನವಿಲುಗಳನ್ನು ಸಹ ಅಲ್ಲಿ ನಾವು ನೋಡಬಹುದು. 

ಹೀಗೆ ಅಪರೂಪದ ಬಣ್ಣದ ವನ್ಯಜೀವಿಗಳನ್ನು ನೋಡುವುದೇ ಒಂದು ಖುಷಿ ಅಂತ ಹೇಳಬಹುದು. ಈಗೇಕೆ ಇದರ ಬಗ್ಗೆ ಮಾತು ಅಂತ ನೀವು ಅಂದುಕೊಳ್ಳಬಹುದು. ಇತ್ತೀಚೆಗೆ ಕ್ಯಾಮೆರಾದಲ್ಲಿ ತುಂಬಾನೇ ಅಪರೂಪದ ಕಪ್ಪು ಬಣ್ಣದ ಹುಲಿಯೊಂದನ್ನು ಸೆರೆ ಹಿಡಿದಿದ್ದಾರೆ.

ಕಪ್ಪು ಬಣ್ಣದ ಹುಲಿ
ಹೌದು.. ಓಡಿಸ್ಸಾದ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡು ಬಂದ ಈ ಭವ್ಯವಾದ ಕಪ್ಪು ಹುಲಿಯ ವೀಡಿಯೋ ಇಂಟರ್ನೆಟ್ ನಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಐಎಫ್ಎಸ್ ಅಧಿಕಾರಿ ಪರ್ವೀನ್ ಕಾಸ್ವಾನ್ ಅವರು ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯ ಪುಟದಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ ಈ ಪ್ರಾಣಿಯನ್ನು ಸ್ಪಷ್ಟವಾಗಿ ನಾವು ನೋಡಬಹುದು ಮತ್ತು ಇದು ತುಂಬಾನೇ ಅಪರೂಪದ ನೋಡಲೇ ಬೇಕಾದ ದೃಶ್ಯವಾಗಿದೆ.

ಈ ಅಪರೂಪದ ಪ್ರಾಣಿಯ ವಿಡಿಯೋ ವೈರಲ್ 
ಈ 15 ಸೆಕೆಂಡುಗಳ ಕ್ಲಿಪ್ ಅನ್ನು ಮೂಲತಃ ಐಎಫ್ಎಸ್ ಅಧಿಕಾರಿ ಸುಸಾಂತ ನಂದಾ ಅವರು ಒದಗಿಸಿದ್ದಾರೆ. ಓಡಿಸ್ಸಾದ ಸಿಮ್ಲಿಪಾಲ್ ರಾಷ್ಟ್ರೀಯ ಉದ್ಯಾನವನದಲ್ಲಿ ಚಿತ್ರೀಕರಿಸಲಾದ ಈ ವಿಡಿಯೋವು ಸುಂದರವಾದ ಕಪ್ಪು ಬಣ್ಣದ ಕೋಟು ಮತ್ತು ಕಿತ್ತಳೆ ಪಟ್ಟೆಗಳನ್ನು ಹೊಂದಿರುವ ಹುಲಿಯ ನೋಟವನ್ನು ಇದು ನೀಡುತ್ತದೆ. "ಭಾರತದ ಕಪ್ಪು ಹುಲಿಗಳು. ಸಿಮ್ಲಿಪಾಲ್ ನಲ್ಲಿ ಕಂಡು ಬರುವ ಸುಡೋ-ಮೆಲನಿಸ್ಟಿಕ್ ಹುಲಿಗಳಿವೆ ಎಂದು ನಿಮಗೆ ತಿಳಿದಿದೆಯೇ? ಎಂದರೆ ಅವು ಆನುವಂಶಿಕ ರೂಪಾಂತರದಿಂದ ಈ ಬಣ್ಣವನ್ನು ತಾಳುತ್ತವೆ ಮತ್ತು ಇವುಗಳು ತುಂಬಾನೇ ಅಪರೂಪ" ಎಂದು ಕಾಸ್ವಾನ್ ಅವರು ತಮ್ಮ ವಿಡಿಯೋ ಹಂಚಿಕೊಂಡಿರುವುದರ ಜೊತೆಗೆ ಬರೆದಂತಹ ಶೀರ್ಷಿಕೆಯಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ:  Snake Village: ಹಾವಿನಿಂದಲೇ ಹೊಟ್ಟೆ ತುಂಬಿಸಿಕೊಳ್ಳೋ ಹಳ್ಳಿ! ಇವರಿಗೆ ಹಾವಿನ ಭಯವೇ ಇಲ್ಲಈ ಹುಲಿಯ ಮತ್ತಷ್ಟು ಹೆಚ್ಚಿನ ಮಾಹಿತಿಯನ್ನು ನೀಡಿದ  ಕಾಸ್ವಾನ್
ಈ ಸುಂದರ ಪ್ರಭೇದಗಳ ಬಗ್ಗೆ ಕಾಸ್ವಾನ್ ಮತ್ತಷ್ಟು ಹೆಚ್ಚಿನ ಮಾಹಿತಿಯನ್ನು ನೀಡಿದರು. "ಈ ಅಪರೂಪದ ಕಪ್ಪು ಬಣ್ಣದ ಹುಲಿಗಳನ್ನು 2007 ರಲ್ಲಿ ಎಸ್‌ಟಿಆರ್ ನಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ಕಂಡು ಹಿಡಿಯಲಾಯಿತು.ನಂತರ ಇಂತಹ ಬಣ್ಣದ ಹುಲಿಗಳನ್ನು ಕಂಡು ಕೊಳ್ಳಲಾಯಿತು. ಅವು ಅಪರೂಪದ ಆನುವಂಶಿಕ ರೂಪಾಂತರದಿಂದ ಹೀಗಾಗುತ್ತವೆ ಮತ್ತು ಸಣ್ಣ ಇವುಗಳ ಸಂಖ್ಯೆ ತೀರಾ ಕಡಿಮೆ" ಎಂದು ಅವರು ಹೇಳಿದರು. ಹುಲಿಗಳ ಬಣ್ಣಗಳಲ್ಲಿನ ವ್ಯತ್ಯಾಸದ ಬಗ್ಗೆ ಆಸಕ್ತಿದಾಯಕ ಲೇಖನದ ಲಿಂಕ್ ಅನ್ನು ಸಹ ಕಾಸ್ವಾನ್ ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:  Elephant Video: ಕಬ್ಬು ತುಂಬಿ ಬರುತ್ತಿದ್ದ ಲಾರಿ ಅಡ್ಡ ಹಾಕಿದ ಆನೆಗಳು! ಮುಂದೇನಾಯ್ತ? ವಿಡಿಯೋ ವೈರಲ್

ಈ ವಿಡಿಯೋವು 83 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಟನ್ ಗಟ್ಟಲೆ ಪ್ರತಿಕ್ರಿಯೆಗಳನ್ನು ಗಳಿಸಿದೆ. ಜನರು ಈ ಪ್ರಾಣಿಯ ಸೌಂದರ್ಯದಿಂದ ದಿಗ್ಭ್ರಮೆಗೊಂಡರು ಮತ್ತು ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಸಹ ಕೇಳಿದರು. ಅನೇಕರು ಕಪ್ಪು ಹುಲಿಗಳ ಬಗ್ಗೆ ಲೇಖನಗಳು ಮತ್ತು ಕಲಾಕೃತಿಗಳನ್ನು ಸಹ ತಮ್ಮ ಪ್ರತಿಕ್ರಿಯೆಯಲ್ಲಿ ಹಂಚಿಕೊಂಡರು.

ವಿಕಿಪೀಡಿಯಾದ ಪ್ರಕಾರ, ಈ ಸ್ಯೂಡೋ-ಮೆಲಾನಿಸ್ಟಿಕ್ ಹುಲಿಗಳು ದಪ್ಪ ಪಟ್ಟೆಗಳನ್ನು ಎಷ್ಟು ನಿಕಟವಾಗಿ ಹೊಂದಿವೆಯೆಂದರೆ, ಪಟ್ಟೆಗಳ ನಡುವೆ ಕಂದು ಬಣ್ಣದ ಹಿನ್ನೆಲೆಯು ಅಷ್ಟಾಗಿ ನಮಗೆ ಗೋಚರಿಸುವುದಿಲ್ಲ.
Published by:Ashwini Prabhu
First published: