• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Rapido: 'ಪ್ಲೀಸ್​ ನನ್ನ ಅಣ್ಣ ಅಂತ ಕರೆಯಬೇಡಿ' ಎಂದು ಮಹಿಳೆಗೆ ಮೆಸೇಜ್ ಮಾಡಿದ​ ರಾಪಿಡೋ ಚಾಲಕ, ಮುಂದೇನಾಯ್ತು?

Rapido: 'ಪ್ಲೀಸ್​ ನನ್ನ ಅಣ್ಣ ಅಂತ ಕರೆಯಬೇಡಿ' ಎಂದು ಮಹಿಳೆಗೆ ಮೆಸೇಜ್ ಮಾಡಿದ​ ರಾಪಿಡೋ ಚಾಲಕ, ಮುಂದೇನಾಯ್ತು?

ರಾಪಿಡೋ

ರಾಪಿಡೋ

ರೈಡ್ ಶೇರಿಂಗ್ ಆ್ಯಪ್‌‌ಗಳು ಮಹಿಳೆಯರ ಭದ್ರತೆ ಹಾಗೂ ಸುರಕ್ಷತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂಬ ಆಶಯವನ್ನು ಆಕೆ ವ್ಯಕ್ತಪಡಿಸಿದ್ದಾರೆ.

  • Share this:

ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳ ಮೇಲಿನ ಶೋಷಣೆಗಳು ಹೆಚ್ಚಾಗುತ್ತಲೇ ಇದೆ ಎಂಬುದಕ್ಕೆ ಹಲವಾರು ಘಟನೆಗಳು (Situation) ಸಾಕ್ಷಿಯಾಗಿವೆ. ಹೆಣ್ಣುಮಕ್ಕಳಿಗೆ ರಕ್ಷಣೆ ಹಾಗೂ ಭದ್ರತೆ ಒದಗಿಸಲಾಗುತ್ತಿದೆ ಎಂಬುದು ಬರಿಯ ಬಾಯಿಮಾತಿನ ಪದಗಳಿಗೆ ಸೀಮಿತವಾಗುತ್ತಿದೆ. ಕುಟುಂಬದಲ್ಲಿ ನಡೆಯುತ್ತಿರುವ ಶೋಷಣೆಯಾಗಿರಬಹುದು, ಕಚೇರಿ, ಸಾರ್ವಜನಿಕ ಸ್ಥಳಗಳು (Public Places), ಹೀಗೆ ಒಂದು ರೀತಿಯ ದೌರ್ಜನ್ಯವನ್ನು ಹೆಣ್ಣಿನ ಮೇಲೆ ನಡೆಸಲಾಗುತ್ತಿದೆ. ಇದೀಗ ಇದಕ್ಕೆ ಪುಷ್ಟಿ ನೀಡುವಂತಹ ಘಟನೆಯೊಂದು ದೇಶದ ರಾಜಧಾನಿಯಲ್ಲಿ ನಡೆದಿದ್ದು, ರಾಪಿಡೋದಂತಹ ರೈಡ್ ಶೇರಿಂಗ್ ಆ್ಯಪ್‌‌ಗಳಲ್ಲಿ (Ride Sharing App) ಮಹಿಳಾ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿಲ್ಲವೇ ಎಂಬ ಸಂದೇಹವನ್ನುಂಟುಮಾಡಿದೆ. ರಾಪಿಡೋ ಡ್ರೈವಿಂಗ್ ಪಾರ್ಟ್ನರ್‌ ಮಹಿಳೆಗೆ ಇರಿಸುಮುರಿಸು ಉಂಟುಮಾಡುವಂತಹ ಸಂದೇಶವೊಂದನ್ನು ಕಳುಹಿಸಿದ್ದು ಅವರದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.


ತಡರಾತ್ರಿ ಮಹಿಳೆಗೆ ಸಂದೇಶ ಕಳುಹಿಸಿದ ರಾಪಿಡೋ ಚಾಲಕ


ರೈಡ್ ಶೇರಿಂಗ್ ಆ್ಯಪ್‌‌ಗಳು ಮಹಿಳೆಯರ ಭದ್ರತೆ ಹಾಗೂ ಸುರಕ್ಷತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂಬ ಆಶಯವನ್ನು ಆಕೆ ವ್ಯಕ್ತಪಡಿಸಿದ್ದಾರೆ. ಆಕೆ ಹಂಚಿಕೊಂಡ ಸ್ಕ್ರೀನ್‌ಶಾಟ್‌ನಲ್ಲಿ ಐದು ಸಂದೇಶಗಳನ್ನು ಕಾಣಬಹುದಾಗಿದ್ದು, ಅದೂ ಕೂಡ ಬೆಳಗ್ಗಿನ ಜಾವ 1:25 ನಿಮಿಷಕ್ಕೆ ಅವರ ಫೋನ್‌ಗೆ ಬಂದಿರುವಂತಹ ಸಂದೇಶವಾಗಿದೆ.


ಪಠ್ಯ ಸಂದೇಶ ಹಿಂದಿಯಲ್ಲಿದ್ದು ಹಾಯ್ ನಿದ್ದೆ ಮಾಡುತ್ತಿದ್ದೀಯಾ ಎಂಬುದಾಗಿ ಸಂದೇಶ ಆರಂಭವಾಗಿದೆ. ತದನಂತರ ಆ ರೈಡರ್ ಮಹಿಳೆಗೆ ಇರಿಸು ಮುರಿಸುವನ್ನುಂಟು ಮಾಡುವ ರೀತಿಯ ಸಂದೇಶವನ್ನು ಕಳುಹಿಸಿದ್ದು, ನಿನ್ನ ಧ್ವನಿ ಹಾಗೂ ಡಿಪಿಯಲ್ಲಿದ್ದ ಫೋಟೋ ನೋಡಿ ನಾನು ರೈಡ್‌ಗೆ ಬಂದಿದ್ದೆ, ಇಲ್ಲದಿದ್ದರೆ ಇಷ್ಟು ದೂರ ನಾನು ಬರುತ್ತಿರಲಿಲ್ಲ ಎಂಬುದು ಚಾಟಿಂಗ್‌ನಲ್ಲಿದೆ.


ಹಾ ಇನ್ನೊಂದು ಮಾತು ನಾನು ನಿನ್ನ ಸಹೋದರ ಏನಲ್ಲ ಎಂಬ ಸ್ಮೈಲಿ ಎಮೋಜಿ ಇರುವ ಸಂದೇಶ ಕೂಡ ಸ್ಕ್ರೀನ್‌ಶಾಟ್‌ನಲ್ಲಿ ಕಾಣಬಹುದಾಗಿದೆ.


ಇದನ್ನೂ ಓದಿ: ಇದು ಎರಡನೆಯ ತಾಜ್​ ಮಹಲ್​, ಆದರೆ ನೋಡಲು ಬಂದ ಪ್ರವಾಸಿಗರಿಗೆ ಮಾತ್ರ ನಿರಾಸೆ!


ಕ್ಷಮೆಕೋರಿದ ರಾಪಿಡೋ


ಸ್ಕ್ರೀನ್‌ಶಾಟ್ ಟ್ವಿಟರ್‌ನಲ್ಲಿ ವೈರಲ್ ಆಗುತ್ತಿದ್ದಂತೆಯೇ ರಾಪಿಡೋ ತನ್ನ ಉದ್ಯೋಗಿಯ ಅನುಚಿತ ವರ್ತನೆಗಾಗಿ ಮಹಿಳೆಯಲ್ಲಿ ಕ್ಷಮೆ ಕೋರಿದ್ದು ಇದು ಅತ್ಯಂತ ನಿರಾಶದಾಯಕ ಅನುಭವವಾಗಿದೆ ಎಂದು ಸಂಸ್ಥೆಯ ಕಸ್ಟಮರ್ ಕೇರ್ ಟ್ವೀಟ್ ಮಾಡಿದೆ.


 Rapido, women harassed, Sexual harassment, app-based rides, WhatsApp, Rapido Bike, Rapido driver texts customer, Twitter, harassment, kannada news, viral news, trending news, ರಾಪಿಡ್​ ನ್ಯೂಸ್​, ಕನ್ನಡ ನ್ಯೂಸ್​, ಟ್ರೆಂಡಿಂಗ್​ ನ್ಯೂಸ್​, ಮಹಿಳೆಗೆ ಮೆಸೇಜ್​ ಮಾಡಿದ ರಾಪಿಡೋ ಚಾಲಕ
ಚಾಟಿಂಗ್​ ವೈರಲ್​


ಹೆಚ್ಚಿನ ಬಳಕೆದಾರರು ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದು ಇಂತಹ ಆ್ಯಪ್‌‌ಗಳು ಮಹಿಳೆಯರಿಗೆ ಎಷ್ಟು ಸುರಕ್ಷಿತವಾಗಿದೆ ಎಂಬುದಾಗಿ ಪ್ರಶ್ನಿಸಿವೆ.


ಇಂತಹವರೊಂದಿಗೆ ಯಾರಾದರೂ ಪ್ರಯಾಣಿಸುವುದು ಎಷ್ಟು ಸರಿ ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ರಾಪಿಡೋ ಇತ್ತೀಚಿನ ದಿನಗಳಲ್ಲಿ ಅಷ್ಟೊಂದು ಸುರಕ್ಷಿತವಾಗಿಲ್ಲ ಎಂದು ಮಹಿಳೆಯೊಬ್ಬರು ಬರೆದುಕೊಂಡಿದ್ದಾರೆ.


ಬಳಕೆದಾರರು ಏನೆಂದು ಕಾಮೆಂಟ್ ಮಾಡಿದ್ದಾರೆ


ತನ್ನ ಪ್ರೇಯಸಿಗೂ ತಡರಾತ್ರಿಯ ಸಮಯದಲ್ಲಿ ರಾಪಿಡೋ ಚಾಲಕನಿಂದ ಇಂತಹ ಸಂದೇಶಗಳು ಬರುತ್ತಿರುತ್ತವೆ ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.


ನನ್ನ ಗೆಳತಿ ಹೆಚ್ಚಾಗಿ ಕಚೇರಿಗೆ ತೆರಳಲು ಬೈಕ್ ಕ್ಯಾಪ್ ಆ್ಯಪ್‌‌ಗಳನ್ನು ಬಳಸಿಕೊಳ್ಳುತ್ತಾಳೆ. ರಾಪಿಡೋದಲ್ಲಿ ಚಾಲಕರು ಆಕೆಗೆ ಹೆಚ್ಚಾಗಿ ವಾಟ್ಸ್‌ ಆ್ಯಪ್‌‌ ಸಂದೇಶಗಳನ್ನು ಕಳುಹಿಸುತ್ತಿರುತ್ತಾರೆ.


ಇದನ್ನೂ ಓದಿ: ಈ ಜನರು ಕೂದಲು ತೊಳೆಯೋದು ನೀರಿನಿಂದ ಅಲ್ಲ, ಕೋಕಾ ಕೋಲಾದಿಂದ, ವೈರಲ್ ಆಗ್ತಿದೆ ಹೊಸ ಟ್ರೆಂಡ್​!


ತಡರಾತ್ರಿ ಸಂದೇಶಗಳು ಬಂದಿದ್ದೂ ಇದೆ. ಇಂತಹ ಚಾಲಕರ ವಿರುದ್ಧ ಕಠಿಣ ಕ್ರಮಗಳು ಕೈಗೊಳ್ಳಲು ಸಂಸ್ಥೆಗೆ ಸಾಧ್ಯವಿಲ್ಲದಿದ್ದರೆ ಕನಿಷ್ಠ ಪಕ್ಷ ಇತರ ಆ್ಯಪ್‌‌ಗಳಂತೆ ಪ್ರಯಾಣಿಕರ ವೈಯಕ್ತಿಕ ಫೋನ್ ಸಂಖ್ಯೆಗಳನ್ನಾದರೂ ಮರೆಮಾಡಲಿ ಎಂದು ಬಳಕೆದಾರರು ವಿನಂತಿಸಿದ್ದಾರೆ.


ಮಹಿಳೆಯರಿಗಿಲ್ಲ ಸುರಕ್ಷತೆ, ಸಾರ್ವಜನಿಕ ವಾಹನಗಳೇ ಬೆಸ್ಟ್


ಇದಕ್ಕಾಗಿಯೇ ನಾನು ಸಾರ್ವಜನಿಕ ವಾಹನಗಳಲ್ಲಿಯೇ ಹೆಚ್ಚು ಪ್ರಯಾಣಿಸುತ್ತೇನೆ. ಕ್ಯಾಬ್‌ಗಳು ಹಾಗೂ ಆಟೋಗಳಲ್ಲಿ ಪ್ರಯಾಣಿಸುವುದೇ ದುಸ್ತರವಾಗಿದೆ. ಸಾರಿಗೆ ಸೌಲಭ್ಯ ವ್ಯವಸ್ಥೆಗಳಲ್ಲಿ ಹೆಚ್ಚು ಹೆಚ್ಚು ಮಹಿಳೆಯರ ಅಗತ್ಯವಿದೆ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.


ಇದು ನಿಜಕ್ಕೂ ಖೇದಕರ, ಅಸಹ್ಯಕರ ಹಾಗೂ ಭಯಾನಕ ಎಂದು ರಾಪಿಡೋಗೆ ಟ್ಯಾಗ್ ಮಾಡಿ ಇನ್ನೊಬ್ಬ ಬಳಕೆದಾರರು ಈ ಕುರಿತು ನೀವು ಏನು ಕ್ರಮ ಕೈಗೊಳ್ಳಲಿರುವಿರಿ ಎಂದು ಪ್ರಶ್ನಿಸಿದ್ದಾರೆ.


ಖಾತೆಯನ್ನೇ ಅಳಿಸಿರುವ ಮಹಿಳಾ ಬಳಕೆದಾರರು


ಇಂತಹುದೇ ಹಲವಾರು ಘಟನೆಗಳು ಈ ಹಿಂದೆ ಕೂಡ ನಡೆದಿದ್ದು, ಫುಡ್ ಡೆಲಿವರಿ ವ್ಯಕ್ತಿಗಳು ಅಥವಾ ಕ್ಯಾಬ್ ಡ್ರೈವರ್‌ಗಳು ರಾತ್ರಿ ವೇಳೆಯಲ್ಲಿ ಆಗಾಗ್ಗೆ ಕರೆ ಮಾಡುವುದು ಅಥವಾ ಮೆಸೇಜ್ ಮಾಡುವುದು ಮಾಡುತ್ತಿರುತ್ತಾರೆ ಎಂದು ಮಹಿಳಾ ಬಳಕೆದಾರರು ದೂರು ನೀಡಿದ್ದಾರೆ. ಇದರಿಂದ ಖಾತೆಯನ್ನೇ ಅಳಿಸಿ ಹಾಕಬೇಕಾದ ಪ್ರಮೇಯ ಕೂಡ ಬಂದೊದಗಿದೆ ಎಂದು ತಿಳಿಸಿದ್ದಾರೆ.

First published: