41 ವರ್ಷದ ಹಿಂದಿನ ಅತ್ಯಾಚಾರ ಪ್ರಕರಣದ ವಿಚಾರಣೆ ಈಗ ಅಂತ್ಯ, ಆರೋಪಿಯ ಖುಲಾಸೆ!

Gujarat Rape: ಆ ಮಹಿಳೆ ತಾನು ಈ ಪ್ರಕರಣಕ್ಕೆ ಸಂಬಂಧಿಸಿದ ದಾವೆ ಮುಂದುವರೆಸಲು ಬಯಸುವುದಿಲ್ಲ ಮತ್ತು ನ್ಯಾಯಾಲಯ ಈ ಮೊಕದ್ದಮೆ ಮುಕ್ತಾಯ ಮಾಡಬೇಕು ಎಂದು ಲಿಖಿತ ರೂಪದ ಮನವಿ ಸಲ್ಲಿಸಿದ್ದಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಒಂದೆಡೆ ಕ್ರಿಮಿನಲ್ ನ್ಯಾಯಾಲಯಗಳು(Criminal courts) , ಲೈಂಗಿಕ ಅಪರಾಧದ ಪ್ರಕರಣಗಳಲ್ಲಿ ನ್ಯಾಯ ಒದಗಿಸಲು ಪ್ರಯತ್ನಿಸುತ್ತಿದ್ದರೆ, ಇನ್ನೊಂದೆಡೆ ಗುಜರಾತ್‌ನ ಅಹಮದಾಬಾದ್‍ ನ್ಯಾಯಾಲಯವೊಂದು ಅತ್ಯಾಚಾರದ (Accused of rape) ಆರೋಪಿಯನ್ನು ಖುಲಾಸೆ (Gujarat court acquitted ) ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯು, ದೂರು ಸಲ್ಲಿಸಿ 41 ವರ್ಷಗಳು ಆದ ಬಳಿಕ ಆರಂಭಗೊಂಡಿದ್ದೇ ಈ ತೀರ್ಪಿಗೆ ಕಾರಣವಾಗಿದೆ. ದೂರು(complaint) ನೀಡಿರುವ ಮಹಿಳೆಗೆ ಈಗ 55 ವರ್ಷ ವಯಸ್ಸು ಮತ್ತು ಆಕೆ ಈ ಪ್ರಕರಣಕ್ಕೆ ಸಂಬಂಧಿಸಿದ ದಾವೆ ( Litigation) ಮುಂದುವರೆಸಲು ಬಯಸುತ್ತಿಲ್ಲ. ತಾನು ಈಗಾಗಲೇ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದೇನೆ ಮತ್ತು ತಾನೀಗ ವಯಸ್ಕ ಮಕ್ಕಳ(Adult children) ತಾಯಿ ಕೂಡ, ಹಾಗಾಗಿ ತಾನು ಇನ್ನು ಮುಂದೆ ಈ ದಾವೆಯನ್ನು ಮುಂದುವರೆಸಲು ಬಯಸುವುದಿಲ್ಲ ಎಂದು ಆಕೆ ತಿಳಿಸಿದ್ದಾರೆ.

ಸಾಕ್ಷ್ಯಾಧಾರಗಳ ಕೊರತೆ
ಆ ಮಹಿಳೆ ತಾನು ಈ ಪ್ರಕರಣಕ್ಕೆ ಸಂಬಂಧಿಸಿದ ದಾವೆ ಮುಂದುವರೆಸಲು ಬಯಸುವುದಿಲ್ಲ ಮತ್ತು ನ್ಯಾಯಾಲಯ ಈ ಮೊಕದ್ದಮೆ ಮುಕ್ತಾಯ ಮಾಡಬೇಕು ಎಂದು ಲಿಖಿತ ರೂಪದ ಮನವಿ ಸಲ್ಲಿಸಿದ್ದಾಳೆ. ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಡಿ.ಎಂ. ವ್ಯಾಸ್ ಆಕೆಯ ಲಿಖಿತ ಮನವಿಯನ್ನು ತಮ್ಮ ತೀರ್ಪಿನಲ್ಲಿ ದಾಖಲಿಸಿದ್ದಾರೆ. ಈ ವರ್ಷದ ನವೆಂಬರ್ 30 ರಂದು, ಸಾಕ್ಷ್ಯಾಧಾರಗಳ ಕೊರತೆಯ ಕಾರಣದಿಂದ ನ್ಯಾಯಾಲಯವು ಅತ್ಯಾಚಾರದ ಆರೋಪಗಳಿಂದ ಆರೋಪಿಯನ್ನು ಖುಲಾಸೆಗೊಳಿಸಿದೆ.

ಇದನ್ನೂ ಓದಿ: Beggar Raped- ಭಿಕ್ಷುಕಿಗೆ ಮದ್ಯ ಕುಡಿಸಿ ಅತ್ಯಾಚಾರ; ಯಾದಗಿರಿಯಲ್ಲಿ ಆರೋಪಿ ಬಂಧನ

ಮುಂಬೈನ ಟ್ಯಾಕ್ಸಿ ಚಾಲಕ
ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಗಳ ಪ್ರಕಾರ, 1980ರ ಜೂನ್ 30ರಂದು ಮುಂಬೈನ ಟ್ಯಾಕ್ಸಿ ಚಾಲಕನೊಬ್ಬ ಮಹಿಳೆಯೊಂದಿಗೆ ಅಹಮದಾಬಾದ್‍ನ ಸರ್ಖೆಜ್ ಪ್ರದೇಶದಿಂದ ಓಡಿಹೋಗಿದ್ದ ಎಂದು ಆರೋಪಿಸಲಾಗಿತ್ತು. ಆ ಮಹಿಳೆ ಸ್ನೇಹಿತರೊಬ್ಬರು ಅವರ ಆ ಮುಂಬೈ ಪ್ರಯಾಣಕ್ಕೆ ಜೊತೆಗೂಡಿದ್ದರು. ಆ ಸ್ನೇಹಿತರು ಅದೇ ವರ್ಷ ಜುಲೈ 3ರಂದು ಅಹಮದಾಬಾದ್‍ಗೆ ಹಿಂದಿರುಗಿದ್ದರು ಮತ್ತು ಜುಲೈ 8ರಂದು ಆ ಮಹಿಳೆಯನ್ನು ಪತ್ತೆ ಹಚ್ಚಿದ್ದರು.

4 ಮಂದಿ ಸಾಕ್ಷಿ
ಮಹಿಳೆಯ ತಂದೆ ಸೇರಿದಂತೆ 4 ಮಂದಿ ಸಾಕ್ಷಿಗಳು ಈ ಪ್ರಕರಣದಲ್ಲಿ ಸಾಕ್ಷ್ಯ ನುಡಿದಿದ್ದಾರೆ. ಆ ಟ್ಯಾಕ್ಸಿ ಚಾಲಕ ಇಬ್ಬರೂ ಮಹಿಳೆಯರನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಸಾಕ್ಷಿಯೊಬ್ಬರು, ಟ್ಯಾಕ್ಸಿ ಚಾಲಕ ಆ ಮಹಿಳೆಯನ್ನು ವಾಕೇಶ್ವರದ ಆಕೆಯ ಮನೆಯಲ್ಲಿ ಕೂಡಿ ಹಾಕಿದ್ದ ಎಂದು ನ್ಯಾಯಾಲಯಕ್ಕೆ ಸಾಕ್ಷ್ಯ ನುಡಿದಿದ್ದರು. ಆದರೆ, ಮಹಿಳೆಯು ಆರೋಪಿಯ ಬಂಧನಕ್ಕೆ ಒಳಗಾಗಿರಲಿಲ್ಲ ಎಂಬುದನ್ನು ನ್ಯಾಯಾಲಯ ಕಂಡುಕೊಂಡಿದೆ. ಮತ್ತೊಬ್ಬ ಸಾಕ್ಷಿಯು, ಜುಲೈ 1ರಂದು ತಾನು ಟ್ಯಾಕ್ಸಿ ಚಾಲಕನ ಮದುವೆಯನ್ನು ನೆರವೇರಿಸಿದ್ದೆ, ಆದರೆ ತಾನು ವಧುವನ್ನು ನೋಡಿರಲಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾನೆ. ಆ ವಧು ತಾನು 20 ವರ್ಷ ವಯಸ್ಸಿನವಳು ಎಂದು ತನಗೆ ಹೇಳಿದ್ದಾಗಿ ಆತ ನ್ಯಾಯಾಲಯಕ್ಕೆ ಸಾಕ್ಷಿ ಹೇಳಿದ್ದಾನೆ.

ಮಹಿಳೆಯೇ ಸಾಕ್ಷ್ಯ ಹೇಳಲು ನಿರಾಕರಣೆ
ಈ ಪ್ರಕರಣದ ಕೇಂದ್ರ ಬಿಂದು ಆಗಿರುವ ಮಹಿಳೆಯೇ ಸಾಕ್ಷ್ಯ ಹೇಳಲು ನಿರಾಕರಿಸಿರುವುದರಿಂದ , ಮತ್ತು ನೇರ ಅಥವಾ ಪರೋಕ್ಷ ಸಾಕ್ಷ್ಯಾಧಾರಗಳ ಕೊರತೆ ಇರುವುದರಿಂದ , ಇತರ ಸಾಕ್ಷಿಗಳ ಸಾಕ್ಷ್ಯಗಳು ಅತ್ಯಲ್ಪವೆನಿಸಿ, ಪ್ರಾಮುಖ್ಯತೆ ಪಡೆಯುವಲ್ಲಿ ವಿಫಲವಾಗಿವೆ ಎಂದು ನ್ಯಾಯಾಲಯ ತಿಳಿಸಿದೆ.

ಇದನ್ನೂ ಓದಿ: Rape: ಅನ್ಯ ಜಾತಿ ಯುವಕನ ಪ್ರೀತಿ ಮಾಡಿದ್ದಕ್ಕೆ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ತಂದೆ

1980ರ ಜುಲೈ 1ರಂದು ಆರೋಪಿಯ ಮದುವೆ ನಡೆದಿದೆ, ಆದರೆ ಆರೋಪಿಯು ಸರ್ಖೇಜ್‍ನ ಮಹಿಳೆಯನ್ನು ಮದುವೆಯಾಗಿದ್ದಾನೆ ಎಂಬುವುದು ಸಾಬೀತಾಗಿಲ್ಲ, ಆಕೆಯ ಅಪಹರಣ, ಮದುವೆ ಅಥವಾ ಅತ್ಯಾಚಾರ ನಡೆದಿರುವುದು ಸಾಬೀತು ಆಗಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
Published by:vanithasanjevani vanithasanjevani
First published: