HOME » NEWS » Trend » RAM NAVAMI FASTING RULES KNOW WHAT TO EAT DATE AND SIGNIFICANCE OF RAM NAVAMI 2021 STG HG

ರಾಮನವಮಿ ಆಚರಣೆ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ

Ram Navami Fasting Rules: ಹಿಂದೂ ಪುರಾಣಗಳ ಪ್ರಕಾರ, ಭಗವಾನ್ ರಾಮ ವಿಷ್ಣುವಿನ ಏಳನೇ ಅವತಾರವೆನ್ನುವ ನಂಬಿಕೆ ಇದೆ. ಇದರ ಜೊತೆಗೆ ಚೈತ್ರ ನವರಾತ್ರಿಯು ತಾಯಿ ದುರ್ಗಾ ದೇವಿಗೆ ಸಮರ್ಪಿತವಾಗಿದೆ.

news18-kannada
Updated:April 20, 2021, 4:01 PM IST
ರಾಮನವಮಿ ಆಚರಣೆ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ
(Image: Shutterstock)
  • Share this:
ಯುಗಾದಿ ಸಂಭ್ರಮದ ನಂತರ ರಾಮನವಮಿ ಪಾನಕ ಮತ್ತು ಕೋಸಂಬರಿಯ ಸ್ವಾದ ಘಮ್ಮೆನ್ನುವುದಕ್ಕೆ ಸಿದ್ಧವಾಗಿದೆ. ಎಲ್ಲೆಡೆ ಈಗಾಗಲೇ ಬೇಲದ ಹಣ್ಣು, ಕರ್ಬೂಜದ ಹಣ್ಣಿನ ಪಾನಕಕ್ಕೆ ಬೇಕಾದ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಚೈತ್ರ ನವರಾತ್ರಿಯ ಒಂಬತ್ತನೇ ದಿನವೇ ರಾಮ ನವಮಿ. ಈ ಆಚರಣೆಯು ಪ್ರಧಾನವಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆಯುತ್ತದೆ. ಈ ವರ್ಷ ರಾಮನವಮಿ ಏಪ್ರಿಲ್ 21 ರಂದು ಆಚರಿಸಲಾಗುತ್ತಿದ್ದು, ಬುಧವಾರ ನಸುಕಿನ ಜಾವ 12:43 ಕ್ಕೆ ನಕ್ಷತ್ರ ಆರಂಭವಾಗಿ , ಏಪ್ರಿಲ್ 22 ರಂದು 12:35 ನಸುಕಿನ ಜಾವಕ್ಕೆ ಮುಕ್ತಾಯಗೊಳ್ಳಲಿದೆ. ಹಿಂದೂ ಪುರಾಣಗಳ ಪ್ರಕಾರ, ಭಗವಾನ್ ರಾಮ ವಿಷ್ಣುವಿನ ಏಳನೇ ಅವತಾರವೆನ್ನುವ ನಂಬಿಕೆ ಇದೆ. ಇದರ ಜೊತೆಗೆ ಚೈತ್ರ ನವರಾತ್ರಿಯು ತಾಯಿ ದುರ್ಗಾ ದೇವಿಗೆ ಸಮರ್ಪಿತವಾಗಿದೆ. ಚಂದ್ರನ ಚಲನೆ ಪ್ರಕಾರ ಹಿಂದೂ ಹೊಸ ವರ್ಷದ ಮೊದಲ ದಿನವಾದ ಯುಗಾದಿಯಿಂದ ಪ್ರಾರಂಭವಾಗಿ ರಾಮ ನವಮಿಯೊಂದಿಗೆ ಕೊನೆಗೊಳ್ಳುತ್ತದೆ.

ಈ ಒಂಬತ್ತು ದಿನಗಳು ಕೂಡ ಬಹುತೇಕ ಭಕ್ತರು ಉಪವಾಸ ಮಾಡುತ್ತಾರೆ. ಇನ್ನು ಕೆಲವೆಡೆ ಮೊದಲ ದಿನ ಮತ್ತು ರಾಮ ನವಮಿಯ ದಿನ ಉಪವಾಸ ಆಚರಿಸುವ ಪದ್ಧತಿಯೂ ಅಸ್ತಿತ್ವದಲ್ಲಿದೆ. ಒಂದು ವೇಳೆ ನೀವೇನಾದರೂ ರಾಮನವಮಿಯ ಉಪವಾಸ ಮಾಡುತ್ತಿದ್ದರೆ, ಸ್ವಲ್ಪ ಮಟ್ಟಿಗೆ ನಿಮ್ಮ ಹಸಿವನ್ನು ನಿಯಂತ್ರಿಸುವ ಕೆಲವು ಆಹಾರಗಳು ಇಲ್ಲಿವೆ. ಇದನ್ನು ನಿಮ್ಮ ಉಪಾವಾಸದಲ್ಲಿ ಅಳವಡಿಸಿಕೊಳ್ಳಬಹುದು.

ಹಣ್ಣುಗಳು: ಉಪವಾಸದ ಸಮಯದಲ್ಲಿ ಆದಷ್ಟು ಸಿಹಿ ಹಣ್ಣುಗಳ ಸೇವನೆ ಮಾಡಿ. ಹುಳಿ ಹಣ್ಣುಗಳು ಆ್ಯಸಿಡಿಟಿ ಉಂಟು ಮಾಡಬಹುದು. ಇನ್ನು ಉಪವಾಸದ ಸಮಯದಲ್ಲಿ ಹಣ್ಣುಗಳನ್ನು ಸೇವಿಸುವುದರಿಂದ ವಿಟಮಿನ್ ಲಭ್ಯವಾಗುತ್ತದೆ. ಹಣ್ಣಿನ ಹೋಳುಗಳು, ಜ್ಯೂಸ್, ಮಿಲ್ಕ್ ಶೇಕ್ ರೀತಿಯೂ ಸೇವಿಸಬಹುದು. ಬಾಳೆ ಹಣ್ಣಿನ ರಸಾಯನ ಅಥವಾ ಪಲ್ಯದಂತೆ ಮಾಡಿಕೊಳ್ಳಬಹುದು. ಆದರೆ ಇದಕ್ಕೆ ಅರಿಶಿನ, ಉಪ್ಪು ಮತ್ತು ಅಚ್ಚಖಾರದ ಪುಡಿ ಸೇರಿಸದೇ ಬಳಸಬೇಕು.

ಸಾಬೂದಾನ ಕಿಚಡಿ: ಸಾಬೂದಾನದ ಅಡುಗೆಗಳು ಉಪಾವಾಸದ ಸಮಯದಲ್ಲಿ ಸರ್ವೇ ಸಾಮಾನ್ಯ. ತಿಂಡಿ ಅಥವಾ ಹಸಿವಾದಾಗ ಸಾಬೂದಾನ ಕಿಚಡಿಯನ್ನು ಸೇವಿಸಬಹುದು. ಖೀರು, ಸಾಬೂದಾನ ವಡೆ, ಸಾಬೂದಾನ ಪಾಪಡ್ ಸೇವಿಸಬಹುದು. ಕಾರ್ಬೋಹೈಡ್ರೇಟ್ ಮತ್ತು ಪಿಷ್ಠವನ್ನು ಹೊಂದಿರುವ ಕಾರಣ ನಿಮಗೆ ಎನರ್ಜಿಯನ್ನು ನೀಡುತ್ತದೆ.

ಆಲೂಗೆಡ್ಡೆ: ಆಲೂಗೆಡ್ಡೆ ಕಾರ್ಬೋಹೈಡ್ರೇಟ್ ಮತ್ತು ಪಿಷ್ಟದ ಉತ್ತಮ ಮೂಲವಾಗಿದೆ . ಸ್ವಲ್ಪ ತುಪ್ಪದೊಂದಿಗೆ ಆಲೂಗೆಡ್ಡೆಯನ್ನು ಫ್ರೈ ಮಾಡಿ ಸೇವಿಸಬಹುದು ಅಥವಾ ಆಲೂಗೆಡ್ಡೆಯ ಹಲ್ವ ಮಾಡಬಹುದು. ಹಣ ಮತ್ತು ಸಮಯ ಎರಡೂ ದೃಷ್ಟಿಯಿಂದಲೂ ಆಲೂಗೆಡ್ಡೆ ರೆಸಿಪಿ ಉತ್ತಮ ಆಲೋಚನೆ. ಸಿಹಿ ಆಲೂಗೆಡ್ಡೆ ಬಳಸುವುದು ಉತ್ತಮ.

ಕುಟ್ಟು / ಸಿಂಘಾರೆ ಅಥವಾ ರಾಜ್‌ಗ್ರೀಹಾ ಹಿಟ್ಟು: ಗೋಧಿ ಹಿಟ್ಟಿನ ಬದಲಿಗೆ ಈ ಹಿಟ್ಟಿನಿಂದ ದೋಸೆ, ಚಪಾತಿ ಮತ್ತು ಹಲ್ವ ತಯಾರಿಸಬಹುದು. ಇದು ಎನರ್ಜಿಯನ್ನು ನೀಡುತ್ತದೆ. ಊಟದ ಸಮಯಕ್ಕೆ ಇದನ್ನು ಆಲೂ ಪಲ್ಯದ ಜೊತೆಗೆ ಸೇವಿಸಬಹುದು.
ಇದಿಷ್ಟೇ ಅಲ್ಲದೇ ಹಾಲು, ಕಾಫಿ(ಅಗತ್ಯವಿದ್ದರೆ) , ಮಿಲ್ಕ್ ಶೇಕ್ ಅಥವಾ ಲಸ್ಸಿ ರೂಪದಲ್ಲಿ ಉಪವಾಸದ ಸಮಯದಲ್ಲಿ ಸೇವಿಸಬಹುದು. ಜೊತೆಗೆ ಪನ್ನೀರ್ ಕೂಡ ಬಳಸಬಹುದು. ಅಲ್ಲದೇ ಒಣ ಹಣ್ಣುಗಳ ಸೇವನೆಯೂ ಪ್ರಯೋಜನಕಾರಿ. ಇದು ಶಕ್ತಿಯ ಮೂಲವಾಗಿದೆ. ನೆನಪಿಡಿ ಡ್ರೈ ಫ್ರೂಟ್ಸ್ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಆದ ಕಾರಣ ಅವುಗಳನ್ನು ಹೆಚ್ಚಾಗಿ ಸೇವಿಸಬೇಡಿ.
First published: April 20, 2021, 3:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories