ದೇಶಾದ್ಯಂತ ಇಂದು ರಾಮನವಮಿಯನ್ನು ಆಚರಿಸಲಾಗುತ್ತದೆ. ಭಾರತದ ಬಹುತೇಕ ರಾಜ್ಯಗಳಲ್ಲಿ ರಾಮ ನವಮಿಯನ್ನು ಪ್ರಮುಖ ಹಬ್ಬವಾಗಿ ಆಚರಿಸಲಾಗುತ್ತದೆ. ಹಿಂದೂಗಳ ಮುಖ್ಯ ಹಬ್ಬವಾದ ಶ್ರೀ ರಾಮ ನವಮಿ ಪ್ರಯುಕ್ತ ಇಂದು ಪಶ್ಚಿಮ ಬಂಗಾಳ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಕೇರಳ, ಕರ್ನಾಟಕ, ಗೋವಾ, ಜಮ್ಮು ಕಾಶ್ಮೀರ, ಅಸ್ಸಾಂ, ಜಾರ್ಖಂಡ್, ಲಕ್ಷದ್ವೀಪ, ಅರುಣಾಚಲ ಪ್ರದೇಶ, ಮಿಜೋರಾಂ, ಪುದುಚೆರಿ, ತಮಿಳುನಾಡು ರಾಜ್ಯಗಳಲ್ಲಿ ರಜೆ ಘೋಷಿಸಲಾಗಿದೆ.
ಪ್ರತಿವರ್ಷ ರಿಸರ್ವ್ ಬ್ಯಾಂಕ್ ಪ್ರಕಟಿಸುವ ಕ್ಯಾಲೆಂಡರ್ ಪ್ರಕಾರ ಆಯಾ ರಾಜ್ಯಗಳಲ್ಲಿ ಆಚರಿಸಲಾಗುವ ಕೆಲವು ಮುಖ್ಯ ಹಬ್ಬ, ಉತ್ಸವಗಳಂದು ಆಯಾ ರಾಜ್ಯಗಳ ಬ್ಯಾಂಕ್ಗಳಿಗೆ ರಜೆ ನೀಡಲಾಗುತ್ತದೆ. ಇದು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಭಿನ್ನವಾಗಿರುತ್ತದೆ. ರಾಮನವಮಿಯನ್ನು ವಿಶೇಷವಾಗಿ ಆಚರಿಸಲಾಗುವ ರಾಜ್ಯಗಳಲ್ಲಿ ಮಾತ್ರ ಇಂದು ರಜೆ ಘೋಷಿಸಲಾಗಿದೆ. ಏಪ್ರಿಲ್ ತಿಂಗಳಲ್ಲಿ ಯಾವೆಲ್ಲ ದಿನ ಬ್ಯಾಂಕ್ ರಜೆಗಳಿರುತ್ತವೆ ಎಂಬ ಪೂರ್ಣ ಮಾಹಿತಿ ಇಲ್ಲಿದೆ...
ಏಪ್ರಿಲ್-21: ಇಂದು ರಾಮ ನವಮಿ ಪ್ರಯುಕ್ತ ಪಶ್ಚಿಮ ಬಂಗಾಳ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಕೇರಳ, ಕರ್ನಾಟಕ, ಗೋವಾ, ಜಮ್ಮು ಕಾಶ್ಮೀರ, ಅಸ್ಸಾಂ, ಜಾರ್ಖಂಡ್, ಲಕ್ಷದ್ವೀಪ, ಅರುಣಾಚಲ ಪ್ರದೇಶ, ಮಿಜೋರಾಂ, ಪುದುಚೆರಿ, ತಮಿಳುನಾಡು ರಾಜ್ಯಗಳಲ್ಲಿ ಬ್ಯಾಂಕ್ಗಳಿಗೆ ರಜೆ ಇರುತ್ತದೆ.
ಏಪ್ರಿಲ್-24: ನಾಲ್ಕನೇ ಶನಿವಾರವಾದ್ದರಿಂದ ಬ್ಯಾಂಕ್ಗಳಿಗೆ ರಜೆ
ಏಪ್ರಿಲ್-25: ಭಾನುವಾರವಾದ್ದರಿಂದ ಬ್ಯಾಂಕ್ಗಳಿಗೆ ರಜೆ. ಹಾಗೇ, ಅದೇ ದಿನ ಮಹರ್ಷಿ ಪರಶುರಾಮ ಜಯಂತಿ ಇರುವುದರಿಂದ ಹಿಮಾಚಲ ಪ್ರದೇಶ, ಗುಜರಾತ್, ಹರಿಯಾಣ, ರಾಜಸ್ಥಾನದಲ್ಲಿ ಪ್ರತಿವರ್ಷ ಬ್ಯಾಂಕ್ಗಳಿಗೆ ರಜೆ ಇರುತ್ತದೆ.
ಈ ಎಲ್ಲಾ ರಜಾದಿನಗಳನ್ನು ಹೊರತುಪಡಿಸಿ ಉಳಿದ ದಿನ ನಿಮ್ಮ ಬ್ಯಾಂಕ್ ಕೆಲಸಗಳನ್ನು ಮುಗಿಸಿಕೊಳ್ಳಿ. ಚೆಕ್ ಹಾಕುವುದು, ಹಣ ಡ್ರಾ ಮಾಡುವುದು, ಹೊಸ ಪಾಸ್ ಬುಕ್ ಅಪ್ಲೈ ಮಾಡುವುದು, ಪಾಸ್ಬುಕ್ ಎಂಟ್ರಿ ಮಾಡಿಸುವುದು, ಪಿಂಚಣಿ ಹಣ ಡ್ರಾ ಮಾಡುವುದು, ಡಿಡಿ ತೆಗೆದುಕೊಳ್ಳುವುದು ಇಂತಹ ತುರ್ತು ಆರ್ಥಿಕ ಚಟುವಟಿಕೆಗಳಿಗೆ ಬ್ಯಾಂಕ್ ಅವಲಂಬನೆ ಇರುವವರು ಈ ಬಗ್ಗೆ ಮುಂಜಾಗ್ರತೆ ವಹಿಸುವುದು ಉತ್ತಮ. ಆದರೆ, ರಜಾ ದಿನಗಳಂದೂ ಸಹ ಎಟಿಎಂ ಸೇವೆ ಲಭ್ಯವಿರುತ್ತದೆ.
ರಜಾದಿನಗಳಿಂದಾಗಿ ದೇಶಾದ್ಯಂತ ಬ್ಯಾಂಕುಗಳು ಮುಚ್ಚಲಿರುವುದರಿಂದ ಬ್ಯಾಂಕುಗಳಿಗೆ ಭೇಟಿ ನೀಡಲು ಪ್ಲಾನ್ ಮಾಡುತ್ತಿರುವವರು ತಮ್ಮ ಭೇಟಿಯನ್ನು ಮುಂದೂಡಬೇಕಾಗುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಬಿಡುಗಡೆ ಮಾಡಿದ ಕ್ಯಾಲೆಂಡರ್ ಪ್ರಕಾರ, ರಜಾದಿನಗಳ ಕಾರಣ, ಬ್ಯಾಂಕ್ ಗ್ರಾಹಕರಿಗೆ ಹಣವನ್ನು ಹಿಂಪಡೆಯಲು ಮತ್ತು ಬ್ಯಾಂಕ್ ಶಾಖೆಗಳಲ್ಲಿ ಠೇವಣಿ ಇರಿಸಲು ಸಾಧ್ಯವಾಗುವುದಿಲ್ಲ. ಆದರೂ, ಈ ದಿನಗಳಲ್ಲಿ ಎಟಿಎಂಗಳು, ಮೊಬೈಲ್ ಬ್ಯಾಂಕಿಂಗ್ ಮತ್ತು ಆನ್ಲೈನ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುತ್ತವೆ ಎಂಬುದನ್ನು ಗ್ರಾಹಕರು ಗಮನಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ