Golden Ghever: ಆಗ್ರಾದಲ್ಲಿ ತಯಾರಾದ ರಕ್ಷಾ ಬಂಧನ ವಿಶೇಷ ಖಾದ್ಯ "ಗೋಲ್ಡನ್ ಘೇವರ್‌" ; ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟ ಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿದೆ.

ಘೇವರ್‌

ಘೇವರ್‌

  • Share this:
ಶ್ರಾವಣ ಮಾಸ ಬಂತೆದರೆ ಹಬ್ಬಗಳ (Festivals) ಸಾಲು ನಮ್ಮ ಮುಂದಿದೆ ಎಂದು ಕೊಳ್ಳಬೇಕಾಗುತ್ತದೆ. ಈ ಶ್ರಾವಣ ಮಾಸದಲ್ಲಿ ಸಹೋದರ -ಸಹೋದರಿಯರ ಪ್ರೀತಿ ಸಂಕೇತವಾಗಿ ರಕ್ಷಾ ಬಂಧನ (Raksha Bandhan) ಹಬ್ಬ ಮುಖ್ಯವಾದುದು ಆಗಿದೆ. ಈ ರಕ್ಷಾ ಬಂಧನವು ಭಾರತ ದೇಶದಲ್ಲಿ ಅತ್ಯಂತ ಜನಪ್ರಿಯ ಹಬ್ಬಗಳಲ್ಲಿ ಒಂದಾಗಿದೆ. ರಕ್ಷಾ ಬಂಧನ ಪ್ರಾಚೀನ ಕಾಲದಿಂದ ಬಹಳ ಪ್ರಾಮುಖ್ಯತೆ ಹೊಂದಿದೆ. ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬ ರಕ್ಷಾ ಬಂಧನ. ಆ ದಿನ ಸಹೋದರಿಯರು (Sister) ತಮ್ಮ ಸಹೋದರನ (Brother) ಮುಂಗೈಗೆ ರಾಖಿಯನ್ನು ಕಟ್ಟಿ, ಆರತಿ ಮಾಡಿ, ಸೋದರನ ಆಶೀರ್ವಾದವನ್ನು (Blessing) ಪಡೆಯುತ್ತಾರೆ. ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವ ಹಬ್ಬ ಇದಾಗಿದೆ.

ಭಾರತದಲ್ಲಿ ಶ್ರಾವಣ ಮಾಸದ ಹುಣ್ಣಿಮೆಯನ್ನು ಯಜುರ್ ಉಪಕರ್ಮ ಎಂದು ಹಿಂದಿನಿಂದ ಆಚರಿಸುತ್ತಿದ್ದಾರೆ. ಈ ದಿನಕ್ಕೆ ಮತ್ತೊಂದು ವಿಶೇಷವಿದೆ. ಮುಂಚೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ 'ರಕ್ಷಾಬಂಧನ' ಅಥವಾ 'ರಾಖಿ' ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ ಎಲ್ಲರೂ ಆಚರಿಸುತ್ತಾರೆ. ಆದರೆ ಅಣ್ಣ-ತಂಗಿಯರ ಬಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ ಬಾಲ್ಯದ ಅನೇಕ ಸಿಹಿ ಕಹಿ ನೆನಪುಗಳನ್ನು ನಮ್ಮ ಮನದಲ್ಲಿ ಮೂಡಿಸುತ್ತದೆ.

ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟ ಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿದೆ.

ರಕ್ಷಾ ಬಂಧನ ವಿಶೇಷ ಖಾದ್ಯ ಘೇವರ್‌ 

ಇನ್ನು ಈ ಹಬ್ಬದಲ್ಲಿ ಉತ್ತರ ಭಾರತದಲ್ಲಿ ತಯಾರಾಗುವ ವಿಶೇಷ ಖಾದ್ಯವಾದ ಘೇವರ್‌ ಎಲ್ಲರಿಗೂ ಇಷ್ಟವಾದ ಖಾದ್ಯವಾಗಿದೆ. ಈ ಹಬ್ಬದ ವಿಶೇಷವಾಗಿ ಉತ್ತರ ಪ್ರದೇಶದ ಸಿಹಿ ಅಂಗಡಿಯೊಂದು "ಗೋಲ್ಡನ್ ಘೇವರ್" ಅನ್ನು ಮಾರಾಟ ಮಾಡುತ್ತಿದೆ.

ಇದು ಪ್ರತಿ ಕೆಜಿಗೆ ರೂ. 25,000 ಆಗಿದೆ. ಇದು ಉತ್ತರ ಭಾರತದ ಪ್ರಸಿದ್ಧ ಖಾದ್ಯ ಆಗಿದೆ. ಇದನ್ನು ಮೈದಾ, ತುಪ್ಪ, ಸಕ್ಕರೆ ಪಾಕ ಮತ್ತು ಕೆಲವು ಒಣ ಹಣ್ಣುಗಳಿಂದ ತಯಾರಿಸಲಾಗುತ್ತದೆ. ಇದು ಡಿಸ್ಕ್ ಆಕಾರದಲ್ಲಿರುವ ಸಿಹಿ ಖಾದ್ಯವಾಗಿದೆ. ಸಾಂಪ್ರದಾಯಿಕವಾಗಿ, ಈ ಖಾದ್ಯವನ್ನು ರಕ್ಷಾ ಬಂಧನ ಹಬ್ಬದಲ್ಲಿ ತಯಾರಿಸಲಾಗುತ್ತದೆ.

ಇದನ್ನೂ ಓದಿ:  Raksha Bandhan: ಬಂದೇ ಬಿಡ್ತು ಅಣ್ಣ-ತಂಗಿಯರ ನೆಚ್ಚಿನ ರಕ್ಷಾ ಬಂಧನ, ಎರಡು ದಿನ ಬಂದಿದೆಯೇ ಈ ಹಬ್ಬ?

ಈಗ, ಆಗ್ರಾದ ಒಂದು ಸಿಹಿ ಅಂಗಡಿಯಲ್ಲಿ, ಈ ವಿಶೇಷ ಖಾದ್ಯವನ್ನು 24 ಕ್ಯಾರೆಟ್ ಚಿನ್ನದ ತೆಳುವಾದ ಪದರದೊಂದಿಗೆ ತಯಾರಿಸಿ ಅತ್ಯಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಎಎನ್‌ಐ ಪ್ರಕಾರ, ಆಗ್ರಾದ ಷಾ ಮಾರುಕಟ್ಟೆಯ ಬಳಿಯ ಬ್ರಾಜ್ ರಸಾಯನ್ ಮಿಟನ್ ಭಂಡಾರ್ ಅಂಗಡಿಯು ಈ ಖಾದ್ಯವನ್ನು ಪ್ರತಿ ಕೆ.ಜಿ.ಗೆ ರೂ. 25000ಕ್ಕೆ ಮಾರಾಟ ಮಾಡುತ್ತಿದೆ.

ಟ್ವಿಟರ್‌ನಲ್ಲಿ ವಿಶೇಷ ಖಾದ್ಯ ಘೇವರ್?‌

ಈ ವಿಷಯದ ಕುರಿತು ಟ್ವೀಟ್‌ನಲ್ಲಿ, ಈ ಔಟ್‌ಲೆಟ್, "ಉತ್ತರ ಪ್ರದೇಶ: ವಿಶೇಷವಾಗಿ 'ಗೋಲ್ಡನ್ ಘೇವರ್' ಅನ್ನು ಆಗ್ರಾದಲ್ಲಿ ರಕ್ಷಾ ಬಂಧನ್ ಹಬ್ಬಕ್ಕಾಗಿ ತಯಾರಿಸಲಾಗುತ್ತಿದೆ. 24 ಕ್ಯಾರೆಟ್ ಚಿನ್ನದ ತೆಳುವಾದ ಪದರವಿರುವ ಗೋಲ್ಡನ್ ಘೇವರ್ನ ಬೆಲೆ ಪ್ರತಿ ಕೆ.ಜಿ. ರೂ. 25000 ಆಗಿದ್ದು, ಇದು ಅತ್ಯಂತ ವಿಶೇಷ ಖಾದ್ಯ ಆಗಿದೆ" ಎಂದು ಟ್ವಿಟಿಸಿದ್ದಾರೆ.

ಇದನ್ನೂ ಓದಿ:  Breakfast Recipe: ಬೆಳಗಿನ ತಿಂಡಿಗೆ ಪೋಷಕಾಂಶಗಳಿಂದ ಸಮೃದ್ಧವಾದ ಈರುಳ್ಳಿ ಕಚೋರಿ ರೆಸಿಪಿ ಮಾಡಿ ಸವಿಯಿರಿ

ಈ ವಿಶೇಷ ಖಾದ್ಯದ ಆಗಮನದಿಂದ ಜನರು ತುಂಬಾ ಖುಷಿಯಾಗಿ ತಮ್ಮ ಮನೆಗೆ ಈ ಸಿಹಿ ಖಾದ್ಯ ತೆಗೆದುಕೊಂಡು ಹೋಗಲು ಆರ್ಡರ್‌ ನೀಡಲು ಆರಂಭಿಸಿದ್ದಾರೆ.

ಸಿಹಿ ಖಾದ್ಯ ಘೇವರ್ ಬಗ್ಗೆ ಒಂದಿಷ್ಟು ಮಾಹಿತಿ:

ಈ ಘೇವರ್‌ ಜೇನುಗೂಡಿನ ತರಹದ ಗರಿ ಗರಿಯಾದ ವಿನ್ಯಾಸವನ್ನು ಹೊಂದಿರುತ್ತದೆ. ಇದಕ್ಕೆ ಸಕ್ಕರೆ ಪಾಕ, ಮೈದಾ, ಒಣ ಹಣ್ಣುಗಳು, ಕೇಸರಿ ಜೊತೆಗೆ ತಯಾರಿಸಲಾಗುತ್ತದೆ. ಇದರ ರುಚಿಗೆ ಸರಿ ಸಾಟಿ ಯಾವುದೂ ಇಲ್ಲ. ವರ್ಷದ ಈ ಸಮಯದಲ್ಲಿ ಇದನ್ನು ಎಲ್ಲ ಕಡೆ ಮಾರುಕಟ್ಟೆಯಲ್ಲಿ ಕಾಣಬಹುದಾಗಿದೆ.
Published by:Ashwini Prabhu
First published: