HOME » NEWS » Trend » RAKHI SAWANT TROLLED AFTER SHARING HER YOGA VIDEO STG AE

Rakhi Sawant: ಯೋಗಾಭ್ಯಾಸ ಮಾಡುವ ವಿಡಿಯೋ ಪೋಸ್ಟ್‌ ಮಾಡಿ ಟ್ರೋಲ್ ಆದ ರಾಖಿ ಸಾವಂತ್..!

Rakhi Sawants Yoga Video: ಒಂದಲ್ಲಾ ಒಂದು ವಿಷಯದಿಂದಾಗಿ ಸದಾ ಸುದ್ದಿಯಲ್ಲಿರುವ ರಾಖಿ ಸಾವಂತ್​ ಈಗ ತಾವೇ ಹಂಚಿಕೊಂಡಿರುವ ವಿಡಿಯೋದಿಂದಾಗಿ ಸದ್ದು ಮಾಡುತ್ತಿದ್ದಾರೆ. ರಾಖಿ ಯೋಗಾಭ್ಯಾಸ ಮಾಡುತ್ತಿರುವ ವಿಡಿಯೋ ಈಗ ವೈರಲ್​ ಆಗುವುದರ ಜತೆಗೆ ಟ್ರೋಲ್​ ಆಹ ಆಗುತ್ತಿದೆ.

Trending Desk
Updated:June 10, 2021, 3:50 PM IST
Rakhi Sawant: ಯೋಗಾಭ್ಯಾಸ ಮಾಡುವ ವಿಡಿಯೋ ಪೋಸ್ಟ್‌ ಮಾಡಿ ಟ್ರೋಲ್ ಆದ ರಾಖಿ ಸಾವಂತ್..!
ಯೋಗಾಸನ ಮಾಡುತ್ತಿರುವ ನಟಿ ರಾಖಿ ಸಾವಂತ್​
  • Share this:
ಐಟಂ ಸಾಂಗ್ ಮತ್ತು ರಿಯಾಲಿಟಿ ಶೋಗಳ ತಾರೆ ರಾಖಿ ಸಾವಂತ್‍ಗೆ ಸದಾ ಸುದ್ದಿಯಲ್ಲಿ ಇರಬೇಕೆಂಬ ಖಯಾಲಿ. ಕೈಯಲ್ಲಿ ಕೆಲಸ ಇರಲಿ ಅಥವಾ ಇಲ್ಲದಿರಲಿ ತಾನು ಮಾತ್ರ ಮಾಧ್ಯಮದಲ್ಲಿ ಮಿಂಚುತ್ತಿರಬೇಕು ಎಂದು ಬಯಸುವ ರಾಖಿ ಅದಕ್ಕಾಗಿ ಯಾವ ರೀತಿಯ ಸರ್ಕಸ್ ಬೇಕಾದರೂ ಮಾಡಲು ಸಿದ್ಧವಿರುತ್ತಾರೆ. ತುಂಡುಡುಗೆ ತೊಟ್ಟು ರಸ್ತೆ ಬದಿಯಲ್ಲಿ ಎಳನೀರು ಕುಡಿಯುವುದು, ತರಕಾರಿ ಕೊಳ್ಳುವುದು, ದಾರಿ ಹೋಕರನ್ನು ಮಾತನಾಡಿಸುವುದು, ಬೀದಿ ಮಕ್ಕಳಿಗೆ ತಿಂಡಿ ಕೊಡಿಸುವುದು ಮುಂತಾದ ರಾಖಿ ಸಾವಂತ್ ವರ್ತನೆಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಲೇ ಇರುತ್ತದೆ. ಇವುಗಳ ಜತೆಗೆ ವಿವಾದಿತ ಹೇಳಿಕೆ ನೀಡಿ ಚರ್ಚೆಯಲ್ಲಿರುತ್ತಾರೆ. ಅದಕ್ಕೆ ರಾಖಿ ವಿವಾದಿತ ನಟಿ ಎಂದೇ ಖ್ಯಾತರಾಗಿದ್ದಾರೆ. 

ಒಂದಲ್ಲಾ ಒಂದು ವಿಷಯದಿಂದಾಗಿ ಸದಾ ಸುದ್ದಿಯಲ್ಲಿರುವ ರಾಖಿ ಸಾವಂತ್​ ಈಗ ತಾವೇ ಹಂಚಿಕೊಂಡಿರುವ ವಿಡಿಯೋದಿಂದಾಗಿ ಸದ್ದು ಮಾಡುತ್ತಿದ್ದಾರೆ. ರಾಖಿ ಯೋಗಾಭ್ಯಾಸ ಮಾಡುತ್ತಿರುವ ವಿಡಿಯೋ ಈಗ ವೈರಲ್​ ಆಗುವುದರ ಜತೆಗೆ ಟ್ರೋಲ್​ ಆಹ ಆಗುತ್ತಿದೆ.

Rakhi Sawant, Troll, Yoga video, ರಾಖಿ ಸಾವಂತ್, ಟ್ರೋಲ್, ಯೋಗ ವಿಡಿಯೋ
ನಟಿ ರಾಖಿ ಸಾವಂತ್​


ಇದೀಗ ಮತ್ತೆ ರಾಖಿ , ಹೊಸ ಫಿಟ್ನೆನೆಸ್ ವಿಡಿಯೋವೊಂದನ್ನು ಪೋಸ್ಟ್ ಮಾಡುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ತೂಕ ಇಳಿಸುವ ಪ್ರಕ್ರಿಯೆಯಲ್ಲಿ ನಿರತರಾಗಿರುವ ರಾಖಿ, ಅದರ ಕುರಿತ ವಿಡಿಯೋವನ್ನು ಗುರುವಾರ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ಕ್ಲಿಪ್‍ನಲ್ಲಿ, ತರಬೇತುದಾರರ ಮೇಲ್ವಿಚಾರಣೆಯಲ್ಲಿ ರಾಖಿ ಯೋಗ ಮಾಡುವ ದೃಶ್ಯವಿದೆ.
ಆ ವಿಡಿಯೋದಲ್ಲಿ, ರಾಖಿ ಮೈಗಂಟಿಕೊಂಡಿರುವಂತಹ ಚರ್ಮದ ಬಣ್ಣದ ಸ್ಪೋರ್ಟ್ಸ್‌ ಬ್ರಾ ಮತ್ತು ನೀಲಿ ಶಾರ್ಟ್ಸ್‌ ಹಾಕಿದ್ದು, ತರಬೇತುದಾರರ ಮೇಲುಸ್ತುವಾರಿಯಲ್ಲಿ ಹ್ಯಾಂಡ್‍ಸ್ಟ್ಯಾಂಡ್ ವ್ಯಾಯಾಮ ಮಾಡುತ್ತಿದ್ದಾರೆ.


ರಾಖಿ ಸಾವಂತ್ ಆ ವಿಡಿಯೋವನ್ನು ಪೋಸ್ಟ್ ಮಾಡಿದ್ದೇ ತಡ, ಅದು ವೈರಲ್ ಆಗೋಯ್ತು. ಅದು 5 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದು ಮಾತ್ರವಲ್ಲ, ಸಾಕಷ್ಟು ಕಮೆಂಟ್‍ಗಳು ಹರಿದು ಬಂದವು. ಕೆಲವು ನೆಟ್ಟಿಗರು ರಾಖಿಯ ಈ ಪ್ರಯತ್ನವನ್ನು ಮೆಚ್ಚಿ ಹೊಗಳಿದರೆ, ಇನ್ನು ಕೆಲವರು ಯೋಗ ಮಾಡುವಾಗ ಅಸಂಬದ್ಧ ಉಡುಪು ತೊಟ್ಟಿದ್ದಕ್ಕಾಗಿ ಆಕೆಯನ್ನು ಟ್ರೋಲ್ ಮಾಡಿದ್ದಾರೆ. ಚರ್ಮದ ಬಣ್ಣದ ಬ್ರಾ ತೊಟ್ಟಿರುವುದರಿಂದ ಆಕೆ ನಗ್ನವಾಗಿರುವಂತೆ ಕಾಣುತ್ತಿದ್ದಾರೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಇನ್ನೊಬ್ಬರು ಆಕೆಯನ್ನು ನಟಿ ಮತ್ತು ಗಾಯಕಿ ಶೆಹನಾಸ್ ಗಿಲ್‍ಗೆ ಹೋಲಿಸಿದ್ದಾರೆ.

ಇದನ್ನೂ ಓದಿ: ಸೀತೆಯ ಪಾತ್ರಕ್ಕೆ ಸರಿ ಹೊಂದುವುದಿಲ್ಲವಂತೆ ಬಿ-ಟೌನ್​ ಬೇಬೊ ಕರೀನಾ ಕಪೂರ್​..!

ರಾಖಿಯ ಗೆಳತಿ ಮತ್ತು ಗಾಯಕಿ ಸೋಫಿಯಾ ಹಯಾತ್, ಆಕೆಯನ್ನು ಗಟ್ಟಿಗಿತ್ತಿ ಎಂದಿದ್ದಾರೆ. ಈ ಹಿಂದೆ ಶೆಹನಾಜ್ ಗಿಲ್ ತೂಕ ಇಳಿಸಿಕೊಂಡು ತಮ್ಮ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದ್ದರು. ಸದ್ಯಕ್ಕೆ ರಾಖಿ ಪಡುತ್ತಿರುವ ಶ್ರಮ ನೋಡಿದರೆ, ಸಪೂರ ಕಾಯದಿಂದ ಎಲ್ಲರ ಗಮನ ಸೆಳೆಯುವ ರಾಖಿಯನ್ನು ನಾವು ನೋಡುವ ದಿನಗಳು ದೂರ ಇಲ್ಲ ಎನಿಸುತ್ತದೆ.

ರಾಖಿ ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಆಸಕ್ತಿದಾಯಕ ಮತ್ತು ನಗು ತರಿಸುವಂತಹ ಪೋಸ್ಟ್‌ಗಳನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಕಳೆದ ವಾರ, ನಾಗಿನ್ ಧಾರಾವಾಹಿಯ 6ನೇ ಸರಣಿಯ ಪೋಸ್ಟರನ್ನು ರಾಖಿ ಹಂಚಿಕೊಂಡಿದ್ದರು. ಅದರಲ್ಲಿ ನಾಯಕಿಯ ಬದಲಿಗೆ ತನ್ನ ಫೋಟೋವನ್ನು ಹಾಕಿಕೊಂಡಿದ್ದರು.

ಇದನ್ನೂ ಓದಿ: ರಸ್ತೆ ಮೇಲೆ ಲ್ಯಾಂಡ್​ ಆದ ಪುಟ್ಟ ವಿಮಾನ: ವಿಡಿಯೋ ಹಂಚಿಕೊಂಡ ನಟಿ ಪ್ರೀತಿ ಜಿಂಟಾ..!

ಇನ್ನೊಮ್ಮೆ, ಸಂಜಯ್ ಲೀಲಾ ಬನ್ಸಾಲಿಯ ಸಿನಿಮಾ ಬಾಜಿರಾವ್ ಮಸ್ತಾನಿಯ ಪೋಸ್ಟರ್‌ನಲ್ಲಿ , ಆಕೆಯ ಸ್ನೇಹಿತ ಹಾಗೂ ಗಾಯಕ ರಾಹುಲ್ ವೈದ್ಯ ಅವರ ಮತ್ತು ತನ್ನ ಫೋಟೋವನ್ನು, ಬಾಜಿರಾವ್ ಹಾಗೂ ಮಸ್ತಾನಿಯ ಫೋಟೋಗೆ ಎಡಿಟ್ ಮಾಡಿ ಆ ಪೋಸ್ಟರನ್ನು ಪೋಸ್ಟ್ ಮಾಡಿದ್ದರು.

ರಾಖಿ ಕೊನೆಯದಾಗಿ ರಿಯಾಲಿಟಿ ಶೋ ಬಿಗ್‍ಬಾಸ್‍ನ 14ನೇ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದರು. ಈ ವಾರಾಂತ್ಯದಲ್ಲಿ ಅವರು, ಇಂಡಿಯನ್ ಐಡಲ್ ಸಂಗೀತ ರಿಯಾಲಿಟಿ ಶೋನ 12ನೇ ಸರಣಿಯಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
Published by: Anitha E
First published: June 10, 2021, 3:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories