ಹುಡುಗಿ ಬದಲು ಹುಡುಗ ಹಿಂದಿನಿಂದ ಚೆನ್ನಾಗಿ ಕಂಡರೆ ಏನು ಮಾಡ್ತೀಯಾ?: ಪಾಂಡ್ಯಗೆ ರಾಖಿ ಬೌನ್ಸರ್​

ಹಾರ್ದಿಕ್ ಪಾಂಡ್ಯ ಅಶ್ಲೀಲ ಹೇಳಿಕೆ ವಿಚಾರವಾಗಿ ಸದ್ಯ ಬಾಲಿವುಡ್​ನ ಮಾದಕ ನಟಿ ರಾಖಿ ಸಾವಂತ್ ಪ್ರಶ್ನೆಯೊಂದಿಗೆ ಪಾಂಡ್ಯಗೆ ಸರಿಯಾಗೆ ಚಾಟಿ ಬೀಸಿದ್ದಾರೆ

Vinay Bhat | news18
Updated:January 16, 2019, 4:36 PM IST
ಹುಡುಗಿ ಬದಲು ಹುಡುಗ ಹಿಂದಿನಿಂದ ಚೆನ್ನಾಗಿ ಕಂಡರೆ ಏನು ಮಾಡ್ತೀಯಾ?: ಪಾಂಡ್ಯಗೆ ರಾಖಿ ಬೌನ್ಸರ್​
ರಾಖಿ ಸಾವಂತ್ ಹಾಗೂ ಹಾರ್ದಿಕ್ ಪಾಂಡ್ಯ
  • News18
  • Last Updated: January 16, 2019, 4:36 PM IST
  • Share this:
ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ಅಶ್ಲೀಲ ಹೇಳಿಕೆ ಪ್ರಕರಣ ತಣ್ಣಗಾಗುವಂತೆ ಕಾಣುತ್ತಿಲ್ಲ. ಬಿಸಿಸಿಐ ಈಗಾಗಲೇ ಹಾರ್ದಿಕ್ ಪಾಂಡ್ಯ ಹಾಗೂ ಕೆ ಎಲ್ ರಾಹುಲ್​​ ಮೇಲೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಈ ಮಧ್ಯೆ ಬಾಲಿವುಡ್​ನ ಮಾದಕ ನಟಿ ರಾಖಿ ಸಾವಂತ್ ಪ್ರಶ್ನೆಯೊಂದಿಗೆ ಹಾರ್ದಿಕ್​​ಗೆ ಸರಿಯಾಗೆ ಚಾಟಿ ಬೀಸಿದ್ದಾರೆ. ಹಾರ್ದಿಕ್​​ರ ಈ ರೀತಿಯ ಹೇಳಿಕೆ ನನಗೆ ತುಂಬಾ ಬೇಸರತಂದಿದೆ. ಅವರಿಗೆ ಮಹಿಳೆಯರ ಮೇಲಿರುವ ಗೌರವ ಎಂತಹದು ಎಂಬುದನ್ನು ಇದು ತೋರಿಸುತ್ತದೆ.

ಇದನ್ನೂ ಓದಿ: 'ವಿರಾಟ್ ಕೊಹ್ಲಿಗೆ 100 ಶತಕ ಸಿಡಿಸುವ ಶಕ್ತಿಯಿದೆ': ಟೀಂ ಇಂಡಿಯಾ ಮಾಜಿ ನಾಯಕ

ಇತ್ತೀಚೆಗಷ್ಟೆ ಕಾರ್ಯಕ್ರಮವೊಂದರಲ್ಲಿ ಹಾರ್ದಿಕ್ ಯಾವುದೇ ಹುಡುಗಿ ಹಿಂದಿನಿಂದ ನೋಡಲು ತುಂಬಾ ಚೆನ್ನಾಗಿ ಕಂಡರೆ ನಾನು ಮನೆಗೆ ತೆರಳಿ ಕೆಲಸ ಮುಗಿಸಿ ಬಂದೆ ಎಂದು ಹೇಳುತ್ತೀಯ. ಇದನ್ನೂ ಕೇಳಿ ನನಗೆ ತುಂಬಾ ಬೇಸರವಾಯಿತು. ಆದರೆ, ನಾನೊಂದು ಪ್ರಶ್ನೆ ಕೇಳುವೆ, ಎಲ್ಲಾದರು ಹುಡುಗಿಯ ಬದಲು ಹುಡುಗ ಹಿಂದಿನಿಂದ ಚೆನ್ನಾಗಿ ಕಂಡರೆ ಆಗೇನು ಮಾಡ್ತೀಯ? ಎಂದು ರಾಕಿ ಸಾವಂತ್ ಪ್ರಶ್ನಿಸಿದ್ದಾರೆ.

ರಾಖಿ ಸಾವಂತ್ ಮಾತನಾಡಿರುವ ಈ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಪಂದ್ಯ ಮುಗಿದ ಬಳಿಕ ಧೋನಿ ಬಗ್ಗೆ ಕ್ಯಾಪ್ಟನ್​​ ಕೊಹ್ಲಿ ಹೇಳಿದ್ದೇನು..?

ಇತ್ತೀಚೆಗಷ್ಟೆ ಬಾಲಿವುಡ್​ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ನಡೆಸಿ ಕೊಡುವ ಚಾಟ್​ ಶೋ ಕಾಫಿ ವಿತ್ ಕರಣ್'ನಲ್ಲಿ ಹಾರ್ದಿಕ್ ಮತ್ತು ರಾಹುಲ್​ ಸ್ತ್ರೀ ದ್ವೇಷಿ ಹಾಗೂ ಕಾಮ ಪ್ರಚೋದಕ ಹೇಳಿಕೆ ನೀಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆಟಗಾರರ ಇಂತಹ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಬಿಸಿಸಿಐ ಆಡಳಿತ ಮಂಡಳಿ ಇವರಿಬ್ಬರ ಮೇಲೆ ಕ್ರಮಕೈಗೊಂಡಿದೆ.

First published:January 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ