Luxurious palace: ಜುಂಜುನ್ವಾಲಾರ 14 ಅಂತಸ್ತಿನ ಭವ್ಯ ಬಂಗಲೆಯಲ್ಲಿ ಏನೆಲ್ಲಾ ಇದೆ ಗೊತ್ತಾ..!

ಜುಂಜುನ್‌ವಾಲಾ ಅವರ 14 ಅಂತಸ್ತಿನ ಬಂಗಲೆಯ ನಿರ್ಮಾಣ ಕಾರ್ಯವನ್ನು ಬಿಜಿ ಖೇರ್ ಮಾರ್ಗ್‌ ಕನ್ಸ್ಟ್ರಕ್ಷನ್ಸ್ ನೋಡಿಕೊಳ್ಳುತ್ತಿದ್ದು ತ್ವರಿತ ಗತಿಯಲ್ಲಿ ಮನೆ ಕಟ್ಟುವ ಕೆಲಸ ಮುಗಿಸುತ್ತಿದ್ದಾರೆ ಎನ್ನಲಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇದನ್ನು ಮನೆ ಅನ್ನಬೇಕೋ, ಅರಮನೆ ಅನ್ನಬೇಕೋ ಗೊತ್ತಿಲ್ಲ. ಬರೋಬ್ಬರಿ 14 ಅಂತಸ್ತಿನ ಭವ್ಯ ಬಂಗಲೆ (Bungalow) ಮುಂಬೈನಲ್ಲಿ ರೆಡಿ ಆಗಿದೆ. ಇದು ದಕ್ಷಿಣ ಮುಂಬೈನ ಅತ್ಯಂತ ದುಬಾರಿ ವಸತಿ ಪ್ರದೇಶವಾಗಿದೆ.ಬಿಲಿಯನೇರ್(Billionaire Investor) ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ (Rakesh Jhunjhunwala) ಮುಂಬೈನಲ್ಲಿ ಐಷಾರಾಮಿ ಅರಮನೆಯೊಂದನ್ನು ಕಟ್ಟಿಸಿದ್ದಾರೆ. ಜುಂಜುನ್ವಾಲಾ ಮತ್ತು ಕುಟುಂಬ ಶೀಘ್ರದಲ್ಲೇ ತಮ್ಮ ಹೊಸ ಮನೆಗೆ ತೆರಳಲಿದ್ದಾರೆ. ಮುಂಬೈನ ಐಷಾರಾಮಿ ಮಲಬಾರ್ ಹಿಲ್ ಪ್ರದೇಶದಲ್ಲಿ ಈ ಭವ್ಯ ಬಂಗಲೆ ನಿರ್ಮಾಣವಾಗಿದೆ. ಪ್ರಸ್ತುತ, ಅವರು ಅಪಾರ್ಟ್‌ಮೆಂಟ್‌ ಒಂದರಲ್ಲಿ ಎರಡು ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿದ್ದಾರೆ. ಶೀಘ್ರದಲ್ಲೇ ಮುಂಬೈನ ಐಷಾರಾಮಿ ಮಲಬಾರ್ ಹಿಲ್(luxurious Malabar Hill) ಪ್ರದೇಶದಲ್ಲಿರುವ ಹೊಸ ನಿವಾಸವನ್ನು ಪ್ರವೇಶಿಸಲಿದ್ದಾರೆ.

ಎತ್ತರದ ಐಷಾರಾಮಿ ಕಟ್ಟಡ
ಜುಂಜುನ್‌ವಾಲಾ ಅವರ 14 ಅಂತಸ್ತಿನ ಬಂಗಲೆಯ ನಿರ್ಮಾಣ ಕಾರ್ಯವನ್ನು ಬಿಜಿ ಖೇರ್ ಮಾರ್ಗ್‌ ಕನ್ಸ್ಟ್ರಕ್ಷನ್ಸ್ ನೋಡಿಕೊಳ್ಳುತ್ತಿದ್ದು ತ್ವರಿತ ಗತಿಯಲ್ಲಿ ಮನೆ ಕಟ್ಟುವ ಕೆಲಸ ಮುಗಿಸುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ಮೂಲಗಳು ತಿಳಿಸಿವೆ. ಮೊದಲು ಇಲ್ಲಿ 14 ಫ್ಲ್ಯಾಟ್‌ಗಳಿದ್ದು, ರಾಕೇಶ್ ಮತ್ತು ಅವರ ಪತ್ನಿ ರೇಖಾ ಜುಂಜುನ್‌ವಾಲಾ ಅವರು 371 ಕೋಟಿ ರೂ.ಗೆ ಖರೀದಿಸಿದ್ದರು. ಈಗ ಈ ಫ್ಲ್ಯಾಟ್‌ಗಳನ್ನು ಕೆಡವಿ ಹೊಸ ಬಂಗಲೆ ನಿರ್ಮಿಸಿದ್ದಾರೆ. ಒಟ್ಟು 2,700 ಚದರ ಅಡಿ ಜಾಗದಲ್ಲಿ 57 ಮೀಟರ್ ಎತ್ತರದ ಐಷಾರಾಮಿ ಕಟ್ಟಡ ನಿರ್ಮಾಣವಾಗಿದೆ.

ಕನಸಿನ ಬಂಗಲೆ
ಇದಕ್ಕೂ ಮೊದಲು, ಈ ಫ್ಲ್ಯಾಟ್‌ನಲ್ಲಿ ರಿಡ್ಜ್‌ವೇ ಅಪಾರ್ಟ್‌ಮೆಂಟ್ ಇತ್ತು. ಇದು 14 ಫ್ಲ್ಯಾಟ್‌ಗಳು ಮತ್ತು ಪಾರ್ಕಿಂಗ್ ಸ್ಥಳವನ್ನು ಹೊಂದಿತ್ತು. ಈ ಅಪಾರ್ಟ್ಮೆಂಟ್ ಈ ಹಿಂದೆ ಎರಡು ಖಾಸಗಿ ವಲಯದ ಬ್ಯಾಂಕ್‌ಗಳ ಒಡೆತನದಲ್ಲಿದೆ. ರಾಕೇಶ್ ಮತ್ತು ರೇಖಾ ಜುಂಜುನ್‌ವಾಲಾ ಈ ಏಳು ಫ್ಲ್ಯಾಟ್‌ಗಳನ್ನು 2013ರಲ್ಲಿ 176 ಕೋಟಿ ರೂಪಾಯಿಗೆ ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನಿಂದ ಖರೀದಿಸಿದರು. ನಂತರ 2017ರಲ್ಲಿ ಎಚ್‌ಎಸ್‌ಬಿಸಿಯಿಂದ (HSBC) ಉಳಿದ ಅಪಾರ್ಟ್‌ಮೆಂಟ್‌ಗಳನ್ನು 195 ಕೋಟಿಗೆ ಖರೀದಿಸಿದರು. ಬಳಿಕ ಪೂರ್ತಿ ಅಪಾರ್ಟ್ಮೆಂಟನ್ನು ಕೆಡವಿ ಹೊಸದಾಗಿ ತಮ್ಮ ಕನಸಿನ ಬಂಗಲೆಯೊಂದನ್ನು ಜುಂಜುನ್‌ವಾಲಾ ಕುಟುಂಬ ನಿರ್ಮಿಸಿದ್ದಾರೆ.

ಇದನ್ನೂ ಓದಿ: Birds Bungalow: ಪಕ್ಷಿಗಳ ಮೇಲಿನ ಪ್ರೀತಿಗೆ ಲಕ್ಷಾಂತರ ರೂ ವೆಚ್ಚದಲ್ಲಿ ಬಂಗ್ಲೆಯನ್ನೇ ನಿರ್ಮಿಸಿದ ಗುಜರಾತಿನ ವ್ಯಕ್ತಿ!

ದೊಡ್ಡ ಟೆರೇಸ್
ಮಹಾನಗರ ಪಾಲಿಕೆಗೆ ಸಲ್ಲಿಸಿರುವ ಕಟ್ಟಡದ ಪ್ಲ್ಯಾನ್ ಪ್ರಕಾರ ಕಟ್ಟಡದ 12ನೇ ಮಹಡಿ ಮಾಸ್ಟರ್ ಫ್ಲೋರ್ ಆಗಿರುತ್ತದೆ.ರಾಕೇಶ್ ಜುಂಜುನ್ವಾಲಾ ತಮ್ಮ ಪತ್ನಿಯೊಂದಿಗೆ ಇಲ್ಲಿಯೇ ವಾಸಿಸುತ್ತಾರೆ. ಮಹಡಿಯಲ್ಲಿ ದೊಡ್ಡ ಮಲಗುವ ಕೋಣೆ, ಪ್ರತ್ಯೇಕ ಸ್ನಾನಗೃಹ, ಡ್ರೆಸ್ಸಿಂಗ್ ಕೋಣೆ ಮತ್ತು ಲಿವಿಂಗ್ ರೂಮ್ ಇರುತ್ತದೆ. ಅವರ ಮಕ್ಕಳಿಗಾಗಿ 11ನೇ ಮಹಡಿಯನ್ನು ಯೋಜಿಸಲಾಗಿದೆ. ಅಲ್ಲಿ ಎರಡು ಮಲಗುವ ಕೋಣೆಗಳನ್ನು ನಿರ್ಮಿಸಲಾಗುತ್ತಿದೆ. ಬಾಲ್ಕನಿಗೆ ಹೆಚ್ಚುವರಿಯಾಗಿ ಎರಡು ಮಲಗುವ ಕೋಣೆಗಳೊಂದಿಗೆ ದೊಡ್ಡ ಟೆರೇಸ್ ಅನ್ನು ಸಹ ಜೋಡಿಸಲಾಗುವುದು ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಹೇಳಿದೆ.

ಏಳು ಪಾರ್ಕಿಂಗ್ ಸ್ಲಾಟ್‌
ನಾಲ್ಕನೇ ಮಹಡಿ ಮನೆಗೆ ಬರುವ ಅತಿಥಿಗಳಿಗಾಗಿ ಮೀಸಲಿದೆ. ಎಲ್ ಆಕಾರದ ಅಡುಗೆ ಕೋಣೆ ಇರುತ್ತದೆ. ಮೊದಲ, ಎರಡನೇ ಮತ್ತು ಮೂರನೇ ಮಹಡಿಗಳು ಮಧ್ಯಮ ಗಾತ್ರದ ಕೊಠಡಿಗಳು, ಸ್ನಾನಗೃಹಗಳು ಮತ್ತು ಗೋಡನ್ ಹೊಂದಿರುತ್ತದೆ. ನೆಲಮಹಡಿಯಲ್ಲಿ ಮೂರು ಅಂತಸ್ತಿನ ಲಾಬಿ, ಫೋಯರ್ ಮತ್ತು ಫುಟ್ಬಾಲ್ ಕೋರ್ಟ್ ನಿರ್ಮಿಸಿದ್ದಾರೆ. ನೆಲಮಾಳಿಗೆಯನ್ನು ಪಾರ್ಕಿಂಗ್‌ಗಾಗಿ ಕಾಯ್ದಿರಿಸಲಾಗಿದೆ. ಈ ಮನೆಯಲ್ಲಿ ವಾಸಿಸುವ ಐವರ ಕುಟುಂಬಕ್ಕೆ ಏಳು ಪಾರ್ಕಿಂಗ್ ಸ್ಲಾಟ್‌ಗಳು ರೆಡಿ ಆಗಿವೆ.

ಇದನ್ನೂ ಓದಿ: Tree House: ಮುಂಬೈನಲ್ಲಿ ಶೀಘ್ರ ತಲೆ ಎತ್ತಲಿದೆ 'ಟ್ರೀ ಹೌಸ್'..! ಏನಿದರ ವಿಶೇಷ.

ಜುಂಜುನ್‌ವಾಲಾ ಅವರ ಹೊಸ ಮನೆಯಲ್ಲಿ ಒಂದು ಮಹಡಿಯಲ್ಲಿ ಬ್ಯಾಂಕ್ವೆಟ್ ಹಾಲ್, ಒಂದರಲ್ಲಿ ಸ್ವಿಮ್ಮಿಂಗ್ ಪೂಲ್, ಒಂದರಲ್ಲಿ ಜಿಮ್, ಒಂದರಲ್ಲಿ ಹೋಮ್ ಥಿಯೇಟರ್ ಇರಲಿದೆ. ಕಟ್ಟಡದ ಮೇಲಿನ ಮಹಡಿಯಲ್ಲಿ 70.24 ಚದರ ಮೀಟರ್ ಕನ್ಸರ್ವೇಟರಿ ಪ್ರದೇಶ, ಮರು-ತಾಪನ ಅಡಿಗೆ, ಪಿಜ್ಜಾ ಕೌಂಟರ್, ಉತ್ತಮ ಹೊರಾಂಗಣ ಆಸನ ಸ್ಥಳ, ತರಕಾರಿ ಉದ್ಯಾವನ, ಸ್ನಾನಗೃಹ ಮತ್ತು ಟೆರೇಸ್ ಇರುತ್ತದೆ.
Published by:vanithasanjevani vanithasanjevani
First published: