• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Lion And Dog: ಕಾಡಿನಿಂದ ನಾಡಿಗೆ ಬಂದ ಸಿಂಹಕ್ಕೆ ನಾಯಿ ಬೆಸ್ಟ್​ಫ್ರೆಂಡ್, ಪ್ರಾಣಿಗಳ ಗೆಳೆತನ ನೋಡಿ ನೆಟ್ಟಿಗರು ಫಿದಾ

Lion And Dog: ಕಾಡಿನಿಂದ ನಾಡಿಗೆ ಬಂದ ಸಿಂಹಕ್ಕೆ ನಾಯಿ ಬೆಸ್ಟ್​ಫ್ರೆಂಡ್, ಪ್ರಾಣಿಗಳ ಗೆಳೆತನ ನೋಡಿ ನೆಟ್ಟಿಗರು ಫಿದಾ

 ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಲೋಧಿಕಾ ತಾಲೂಕಿನ ಸಂಗನವಾ ಗ್ರಾಮದ ಸಮೀಪ ಕಾಣಿಸಿಕೊಂಡಿದ್ದ, ಸಿಂಹವು ಅಲ್ಲಿಗೆ ತಲುಪುವವರೆಗಿನ ತನ್ನ ಪ್ರಯಾಣದ ಉದ್ದಕ್ಕೂ ಕಪ್ಪು ಬಣ್ಣದ ನಾಯಿಯೊಂದನ್ನು ಜೊತೆಯಾಗಿಸಿಕೊಂಡಿತ್ತು ಎಂಬುದನ್ನು ಅರಣ್ಯ ಅಧಿಕಾರಿಗಳು ಕೂಡ ಖಚಿತಪಡಿಸಿದ್ದಾರೆ.

 • Share this:

ರಾಜ್‍ಕೋಟ್ : ನಾಯಿಯ (Dog) ಬೊಗಳಿಕೆಗೆ ಸಿಂಹದ (Lion) ಘರ್ಜನೆ ನಿಲ್ಲುವುದೇ? ಖಂಡಿತಾ ಇಲ್ಲ. ಆದರೆ, ಸಿಂಹವನ್ನು ಕಂಡು ನಾಯಿ ಬೊಗಳದಿದ್ದರೆ, ನಾಯಿಯನ್ನು ಕಂಡು ಸಿಂಹ ಘರ್ಜಿಸದಿದ್ದರೆ , ಬೊಗಳಿಕೆ ಮತ್ತು ಘರ್ಜನೆಯ (Roar) ವಿಷಯವೇ ಬೇಕಿಲ್ಲ ಬಿಡಿ. ಇಲಿಯನ್ನು (Rat) ಕಂಡರೂ ಬೌ ಬೌ ಎನ್ನುವ ಗುಣ ನಾಯಿಯದ್ದು, ಇನ್ನು ತನ್ನವರಲ್ಲದ ಯಾರನ್ನು ಕಂಡರೂ ಸಿಂಹ ಘರ್ಜಿಸದಿರಲು ಸಾಧ್ಯವೆ ಇಲ್ಲ ಎನ್ನುತ್ತೀರಾ? ಆದರೆ, ಸಿಂಹ ನಾಯಿಯ ಮೇಲೆ ಘರ್ಜಿಸದೆ , ಅದನ್ನು ಸಹ ಪಯಣಿಗನನ್ನಾಗಿ ಮಾಡಿಕೊಂಡ ಘಟನೆ ರಾಜ್‍ಕೋಟ್‍ನಲ್ಲಿ (Rajkot) ನಡೆದಿದೆ !


ಹೌದು, ಇಲ್ಲಿನ ಗಿರ್ ಅರಣ್ಯ ಪ್ರದೇಶದ ವಯಸ್ಕ ಸಿಂಹವೊಂದು, ಅಲ್ಲಿಂದ ರಾಜ್‍ಕೋಟ್‍ನ ಕೈಗಾರಿಕಾ ಪ್ರದೇಶವಾದ ಲೋಧಿಕಾಗೆ ಹೊರಟಾಗ, ನಾಯಿಯೊಂದನ್ನು ಸ್ನೇಹಿತನನ್ನಾಗಿ ಮಾಡಿಕೊಂಡು ಜೊತೆಯಾಗಿ ಸಾಗಿತು.


ನಾಯಿಯನ್ನು ಜೊತೆಯಾಗಿಸಿಕೊಂಡ ಸಿಂಹ
ಲೋಧಿಕಾ ತಾಲೂಕಿನ ಸಂಗನವಾ ಗ್ರಾಮದ ಸಮೀಪ ಕಾಣಿಸಿಕೊಂಡಿದ್ದ, ಸಿಂಹವು ಅಲ್ಲಿಗೆ ತಲುಪುವವರೆಗಿನ ತನ್ನ ಪ್ರಯಾಣದ ಉದ್ದಕ್ಕೂ ಕಪ್ಪು ಬಣ್ಣದ ನಾಯಿಯೊಂದನ್ನು ಜೊತೆಯಾಗಿಸಿಕೊಂಡಿತ್ತು ಎಂಬುದನ್ನು ಅರಣ್ಯ ಅಧಿಕಾರಿಗಳು ಕೂಡ ಖಚಿತಪಡಿಸಿದ್ದಾರೆ.


ಇದನ್ನೂ ಓದಿ: Weird Job: ಕೆಲಸ ಖಾಲಿ ಇದೆ! ವಾರಕ್ಕೆ 5 ದಿನ ನಾಯಿ ಆಹಾರ ಸೇವಿಸಿದ್ರೆ 5 ಲಕ್ಷ ಸಂಬಳ


ಆ ಸಿಂಹವು ಗಿರ್‍ನಾರ್ ಅಭಯಾರಣ್ಯ ಪ್ರದೇಶಕ್ಕೆ ಮರಳಿದೆ ಮತ್ತು ಅರಣ್ಯ ಅಧಿಕಾರಿಗಳು ಅದು ಹಿಂದಿರುಗಿರುವುದಕ್ಕೆ ಸಾಕ್ಷಿಯಾಗಿ, ಹಿಂದಿರುಗಿರುವ ಹೆಜ್ಜೆ ಗುರುತುಗಳನ್ನು ಕೂಡ ಪತ್ತೆ ಹಚ್ಚಿದ್ದಾರೆ.


ಈ ಅಚ್ಚರಿಯ ಸಂಗತಿ ಸಿಂಹಗಳ ಚಟುವಟಿಕೆಯನ್ನು ವೀಕ್ಷಿಸಲು ನಿಯೋಜಿಸಲಾದ ರಾಜ್‍ಕೋಟ್ ವೃತ್ತದ ನಾಲ್ಕು ತಂಡಗಳಿಗೆ ಕೂಡ ಕಾಣ ಸಿಕ್ಕಿತು. ಹೌದು, ಆ ತಂಡಗಳು ತೆಗೆದ ಪೋಟೋ ಮತ್ತು ವಿಡಿಯೋಗಳಲ್ಲಿ , ನಾಯಿ ಮತ್ತು ಸಿಂಹದ ಅಪರೂಪದ ಸಹ ಪಯಣದ ದೃಶ್ಯಗಳು ಸೆರೆಯಾಗಿವೆ. ನಾಯಿಯೊಂದು, ಸಿಂಹವು ತನ್ನ ಪ್ರದೇಶವನ್ನು ಬಿಟ್ಟು ಸುತ್ತಾಡ ಹೊರಟಾಗ ಅದರ ಜೊತೆ ಓಡಾಡಿರುವುದನ್ನು ಅವರು ಕಂಡುಕೊಂಡಿದ್ದಾರೆ.


ಸಿಂಹದ ಹೆಜ್ಜೆ ಗುರುತುಗಳಿಗೆ ಹತ್ತಿರದಲ್ಲೇ ನಾಯಿಯ ಹೆಜ್ಜೆ ಗುರುತುಗಳು
ಅನೇಕ ಸ್ಥಳಗಳಲ್ಲಿ ಸಿಂಹದ ಹೆಜ್ಜೆ ಗುರುತುಗಳಿಗೆ ಹತ್ತಿರದಲ್ಲೇ, ನಾಯಿಯ ಹೆಜ್ಜೆ ಗುರುತುಗಳು ಕಂಡು ಬಂದಿವೆ ಮತ್ತು ಅರಣ್ಯಾಧಿಕಾರಿಗಳ ತಂಡ ತೆಗೆದಿರುವ ಹಲವಾರು ವಿಡಿಯೋಗಳಲ್ಲೂ ಆ ಕರಿ ಬಣ್ಣದ ನಾಯಿ ಕಾಣ ಸಿಕ್ಕಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಅಧಿಕಾರಿಗಳು ಹೇಳಿರುವ ಪ್ರಕಾರ, ಸಿಂಹ ಕೂತಲ್ಲೆಲ್ಲಾ , ನಾಯಿ ಕೂಡ ಕುಳಿತು ವಿಶ್ರಾಂತಿ ಪಡೆದಿದೆ ಮತ್ತು ಸಿಂಹ ಓಡಿದಾಗ, ನಾಯಿ ಕೂಡ ನಡೆದುಕೊಂಡು ಅದನ್ನು ಹಿಂಬಾಲಿಸಿದೆ.


ರಾಜ್‍ಕೋಟ್ ಸರ್ಕಲ್‍ನ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಕುಮಾರ್ ಅವರು, “ ಸಿಂಹವು ಇರುವ ಪ್ರದೇಶದಲ್ಲಿ, ನಾಯಿಯು ಸಿಂಹದ ಜೊತೆಯಲ್ಲಿ ಇರುವುದನ್ನು ನೋಡುವುದು ತುಂಬಾ ಅಪರೂಪ. ಬಹುಷಃ, ನಾಯಿ ಈ ಹಿಂದೆಂದೂ ಸಿಂಹವನ್ನು ನೋಡಿಯೇ ಇರದ ಸಾಧ್ಯತೆ ಇದೆ. ಸಿಂಹದ ಎತ್ತರವು ನಾಯಿಗಿಂತ ಕೊಂಚ ಜಾಸ್ತಿ ಇತ್ತು ಮತ್ತು ಅದು ತನ್ನ ಪ್ರದೇಶದಲ್ಲಿ ಹೊಸ ಪ್ರಾಣಿಗಳನ್ನು ನೋಡಿದೆ. ಬೇರೆ ಪ್ರದೇಶಗಳಲ್ಲಿ ನಾವು, ನಾಯಿಗಳು ಮತ್ತು ಸಿಂಹಗಳ ನಡುವೆ ಜಗಳಗಳನ್ನು ನೋಡಿದ್ದೇವೆ. ಆದರೆ, ಈ ಪ್ರದೇಶದಲ್ಲಿ ಸಿಂಹ ಅದನ್ನು ಅಪಾಯವೆಂದು ಪರಿಗಣಿಸಿ ನೋಡಲಿಲ್ಲ” ಎಂದು ಹೇಳಿದ್ದಾರೆ.


ಅರಣ್ಯ ಅಧಿಕಾರಿಗಳು ಹೇಳಿರುವ ಪ್ರಕಾರ, ಬಹುಷಃ ಸಂರಕ್ಷಿತ ಪ್ರದೇಶದಿಂದ ಬಂದ ಈ ಸಿಂಹ, ಹೊಸ ಪ್ರದೇಶವನ್ನು ಪ್ರವೇಶಿಸಿದಾಗ , ಅದು ಸುತ್ತಲೂ ಮನುಷ್ಯರನ್ನು ನೋಡಿತು ಮತ್ತು ರಕ್ಷಣಾತ್ಮಕವಾಯಿತು.


ಸ್ನೇಹಿತರಂತೆ ಇದ್ದ ಪ್ರಾಣಿಗಳು
ನಾಯಿ ಮತ್ತು ಸಿಂಹಗಳು ಸ್ನೇಹಿತರಂತೆ ಓಡಾಡಿಕೊಂಡಿದ್ದ ದೃಶ್ಯವನ್ನು ಅಲ್ಲಿನ ಹಲವಾರು ಮಂದಿ ಗ್ರಾಮಸ್ಥರು ಕೂಡ ನೋಡಿದ್ದಾರೆ. ಅದರಲ್ಲೂ ನಾಯಿಯೊಂದು ಯಾವುದೇ ಭಯವಿಲ್ಲದೆ ಸಿಂಹದ ಹಿಂದೆ ಬಾಲ ಅಲ್ಲಾಡಿಸಿಕೊಂಡು ಓಡಾಡುತ್ತಿರುವುದು ಅವರ ಪಾಲಿಗೂ ಅಪರೂಪದ ದೃಶ್ಯ.


ಇದನ್ನೂ ಓದಿ:  Cute Panda: ಏಳಪ್ಪಾ ತಿಂಡಿ ತಿನ್ನು ಅಂತ ಕರೆದರೆ ಎದ್ದು ತಿನ್ನುತ್ತೆ ಈ ಪಾಂಡಾ! ಮುದ್ದು ಜಾಸ್ತಿ ಆಯ್ತು, ಆದರೂ ಮುದ್ದಾಗಿದೆ

top videos


  ಪ್ರತ್ಯಕ್ಷದರ್ಶಿಗಳು ನಾಯಿ ಮತ್ತು ಸಿಂಹದ ವಿಶೇಷ ಒಡನಾಟದ ವಿಡಿಯೋಗಳನ್ನು ಕೂಡ ಸೆರೆ ಹಿಡಿದಿದ್ದಾರೆ. ಆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಕರಿನಾಯಿ ಮತ್ತು ಸಿಂಹದ ಗೆಳೆತನ ಕಂಡು ಅಚ್ಚರಿ ಪಟ್ಟಿದ್ದಾರೆ.

  First published: