Satta Dada Temple: ಇದು ಅಣ್ಣನಿಗಾಗಿ ಸತ್ತ ತಮ್ಮನ ದೇವಸ್ಥಾನ! ಇಲ್ಲಿ ಹರಕೆಗೆಂದು ಪೊರಕೆ ನೀಡುತ್ತಾರೆ ಭಕ್ತರು

ಈ ದೇವಾಲಯ ವಿಶೇಷವೆಂದರೆ ಪೊರಕೆ ಮೂಲಕ ಹರಕೆ ನೀಡುವುದು. ದಾದಾ ಅವರ ಬಾಗಿಲಿಗೆ ಬಂದ ಬಳಿಕ ಪ್ರಸಾದದೊಂದಿಗೆ ಪೊರಕೆಯನ್ನು ಅರ್ಪಿಸುವುದರಿಂದ ಜನರ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಿಕೆ. ಈ ಕಾರಣದಿಂದಲೇ ಸತ್ತಾ ದಾದಾ ದೇವಾಲಯ ಹೆಚ್ಚು ಜನಪ್ರಿಯವಾಗಿದೆ.

ಸತ್ತಾ ದಾದಾ ದೇವಾಲಯ

ಸತ್ತಾ ದಾದಾ ದೇವಾಲಯ

 • Share this:
  ಭಾರತವು ದೇವಸ್ಥಾನಗಳ (Temple) ತವರು. ಇಲ್ಲಿ ಲೆಕ್ಕವಿಲ್ಲದಷ್ಟು ದೇವಸ್ಥಾನಗಳನ್ನು ಕಾಣಬಹುದಾಗಿದೆ. ಅದರಲ್ಲೂ ದೇವರನ್ನು ನಂಬುವ ಜನರು ತಮ್ಮ ಇಷ್ಟಾರ್ಥ ಸಿದ್ಧಿಗಳು ಈಡೇರಿದ ಬಳಿಕ ಹರಕೆಯನ್ನು ಸಮರ್ಪಿಸುತ್ತಾರೆ. ಸಾಮಾನ್ಯವಾಗಿ ಹಣ (Money), ಬೆಳ್ಳಿ, ಚಿನ್ನ (Gold), ಕಂಚಿನ ಮೂರ್ತಿಯನ್ನು ನೀಡುವ ಮೂಲಕ ಹಣಕೆ ನೀಡುವುದನ್ನು ಕಾಣಬಹುದಾಗಿದೆ. ಇನ್ನು ಕೆಲವೆಡೆ ಮಣ್ಣಿನ ಮೂಲಕ, ಪ್ರಾಣಿ ಬಲಿಯನ್ನು ನೀಡುವ ಮೂಲಕ ಹರಕೆ ಒಪ್ಪಿಸುವುದು ಇದೆ. ಆದರೆ ಇಲ್ಲೊಂದು ದೇವಸ್ಥಾನದಲ್ಲಿ ಜನರು ಪೊರಕೆ (Brooms) ನೀಡಿ ಹರಕೆ ಸಮರ್ಪಿಸುತ್ತಾರೆ. ಆದ್ರೆ ಇಲ್ಲಿನ ವಿಶೇಷತೆಯ ಬಗ್ಗೆ ಕೇಳಿದ್ರೆ ನಿಜವಾಗಿಯೂ ಅಚ್ಚರಿ ಆಗೋದು ಸತ್ಯ.

  ಸತ್ತಾ ದಾದಾ ದೇವಾಲಯ ಹೆಸರು ಕೇಳಿದ್ದೀರಾ? ಇದು ರಾಜಸ್ಥಾನದ ಚಿರವಾ ಸಮೀಪದ ಓಜ್ಟು ಗ್ರಾಮದಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಇಬ್ಬರು ಸಹೋದರರ ಪ್ರೀತಿಯ ವಿಶಿಷ್ಟ ಕಥೆಯನ್ನು ಹೇಳುತ್ತದೆ. ಅಣ್ಣನ ಸಾವಿನ ನಂತರ ಕಿರಿಯ ಸಹೋದರ ಸುಡುವ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಕಥೆಯನ್ನು ಹೇಳುತ್ತಿದೆ ಈ ದೇವಾಲಯ.

  ಅಂದಹಾಗೆಯೇ, ಈ ದೇವಾಲಯ ವಿಶೇಷವೆಂದರೆ ಪೊರಕೆ ಮೂಲಕ ಹರಕೆ ನೀಡುವುದು. ದಾದಾ ಅವರ ಬಾಗಿಲಿಗೆ ಬಂದ ಬಳಿಕ ಪ್ರಸಾದದೊಂದಿಗೆ ಪೊರಕೆಯನ್ನು ಅರ್ಪಿಸುವುದರಿಂದ ಜನರ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಿಕೆ. ಈ ಕಾರಣದಿಂದಲೇ ಸತ್ತಾ ದಾದಾ ದೇವಾಲಯ ಹೆಚ್ಚು ಜನಪ್ರಿಯವಾಗಿದೆ.

  ಸತ್ತಾ ದಾದಾ ದೇವಾಲಯ ಮೇಲೆ ನಗರಗಳಿಗಿಂತ ಗ್ರಾಮೀಣ ಭಾಗದ ಭಕ್ತರು ಹೆಚ್ಚು ನಂಬಿಕೆ ಇಟ್ಟಿದ್ದಾರೆ. ದರ್ಶನ-ಪೂಜೆಯ ನಂತರ ಭಕ್ತರು ತಮ್ಮೊಂದಿಗೆ ತಂದ ಪೊರಕೆಯಿಂದ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿ ನಂತರ ಅಲ್ಲಿಯೇ ಬಿಡುತ್ತಾರೆ. ಇದು ಅಲ್ಲಿನ ಸಂಪ್ರದಾಯವಾಗಿದೆ. ಹರಕೆ ಕಟ್ಟಿಕೊಂಡ ಪ್ರತಿಯೊಬ್ಬರು ದೇವಸ್ಥಾನಕ್ಕೆ ಬರುವಾಗ ಪೊರಕೆ ತರುತ್ತಾರೆ.

  ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸಂಬಂಧಿಸಿದವರ ಪ್ರಕಾರ, ಈ ಸಂಪ್ರದಾಯವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇಲ್ಲಿ ಭಾದ್ರಪದ ಮಾಸದ ನವಮಿಯಂದು ಜಾತ್ರೆ ನಡೆಯುತ್ತದೆ. ಅಂದಹಾಗೆಯೇ, ಮೂರು ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಜನರು ಪ್ರಾರ್ಥನೆ ಸಲ್ಲಿಸಿದ ನಂತರ ಮತ್ತು ಅವರ ಆಸೆಗಳನ್ನು ಪೂರೈಸಿದ ನಂತರ ದೇವಾಲಯವನ್ನು ಗುಡಿಸುತ್ತಾರೆ.

  ಸತ್ತಾ ದಾದಾ ದೇವಾಲಯ


  ಇದನನ್ನೂ ಓದಿ: NHAI ಪರಿಚಯಿಸುತ್ತಿದೆ ಹೊಸ ಆ್ಯಪ್​! ಹೆದ್ದಾರಿಯಲ್ಲಿ ಹೊಂಡ, ಗುಂಡಿ ಕಂಡು ಬಂದ್ರೆ ಇಲ್ಲಿ ದೂರು ನೀಡಿ

  ಹಿಂದೆಲ್ಲಾ ಮನೆಯಿಂದ ಬರುವಾಗಲೇ ಪೊರಕೆ ತಯಾರಿಸಿ ತರುತ್ತಿದ್ದರು. ಆದರೀಗ ಹಾಗಲ್ಲ, ಮನೆಯಲ್ಲಿ ಪೊರಕೆ ತಯಾರಿಸುವವರ ಸಂಖ್ಯೆ ಕಡಿಮೆ ಹಾಗಾಗಿ ದೇವಸ್ಥಾನದ ಹೊರಗಿರುವ ಪ್ರಸಾದ ಮಳಿಗೆಗಳಲ್ಲಿ ಪೊರಕೆ ಸಿಗುತ್ತದೆ. ನಂತರ ದೇವರಿಗೆ ಅರ್ಪಿಸುತ್ತಾರೆ. ಈ ಪೊರಕೆಗಳನ್ನು ವಾರ್ಷಿಕ ಜಾತ್ರೆಯ ಸಮಯದಲ್ಲಿ ದೇವಾಲಯದ ಮುಖ್ಯ ಮಂಟಪದ ಮುಂದೆ ಪೊರಕೆಗಳ ಪರ್ವತವನ್ನು ಮಾಡುತ್ತಾರೆ.

  ಅಣ್ಣನ ಸಾವಿನ ನೋವನ್ನು ತಾಳಲಾರದೆ ಚಿತೆಗೆ ಹಾರಿದ ತಮ್ಮ!

  ಮೊದಲೇ ಹೇಳಿದಂತೆ ಈ ದೇವಸ್ಥಾನವು ವಿಶಿಷ್ಟವಾದ ಕಥೆಯನ್ನು ಹೊಂದಿದೆ. ಅದೇನೆಂದರೆ 550 ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದ, ಜಾಟ್ ಜಾತಿಯ ಇಬ್ಬರು ಸಹೋದರರ ನಡುವೆ ಆಳವಾದ ವಾತ್ಸಲ್ಯವಿತ್ತು ಎಂಬ ಐತಿಹ್ಯವು ಇಲ್ಲಿನ ಓಜ್ತುದಲ್ಲಿದೆ. ಆದರೆ ಒಂದು ದಿನ ಅಣ್ಣ ಅನಾರೋಗ್ಯಕ್ಕೆ ಒಳಗಾದನು, ಈ ಸಮಯದಲ್ಲಿ ಕಿರಿಯ ಸಹೋದರ ಹಕೀಮನನ್ನು ಕರೆತರಲು ನರ್ಹಾದಿಗೆ ಹೋದನು. ಹಿಂತಿರುಗಿ ಬರುವಾಗ ಅಣ್ಣನ ಸಾವಿನ ಸುದ್ದಿ ಆತನಿಗೆ ತಿಳಿಯುತ್ತದೆ. ಕಿರಿಯ ಸಹೋದರ ಅಂತ್ಯಕ್ರಿಯೆಯ ಚಿತಾಗಾರದ ಮೇಲೆಯೇ ಹಾರಿ ಪ್ರಾಣ ಬಿಡುತ್ತಾನೆ.

  ಸತ್ತಾ ದಾದಾ ದೇವಾಲಯ


  ಇದನನ್ನೂ ಓದಿ: Ganesh Chaturthi 2022: ಗಣೇಶ ಹಬ್ಬದ ಬಗ್ಗೆ ನಿಮಗೆಷ್ಟು ಗೊತ್ತು?

  ಕಾಯಿಲೆಗಳು ಇಲ್ಲಿ ಗುಣವಾಗುತ್ತದೆ

  ಸತ್ತಾ ದಾದಾ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ಪೊರಕೆಯಿಂದ ದೇವಾಲಯದ ಆವರಣವನ್ನು ಗುಡಿಸುವುದರಿಂದ ಜನರ ಚರ್ಮದ ಕಾಯಿಲೆಗಳಾದ ರಿಂಗ್ವರ್ಮ್ ಮತ್ತು ತುರಿಕೆ ಗುಣವಾಗುತ್ತದೆ ಎಂದು ಗ್ರಾಮಸ್ಥರು ನಂಬುತ್ತಾರೆ.

  ಸಹಬ್​ರಾಮ್​ ಮತ್ತು ರೂರ್​ಭಕ್ಷ್ ಎಂಬ ಸಹೋದದರ ಕಥೆ

  ಸಹೋದರರಾದ ಸಹಬ್​ರಾಮ್​ ಮತ್ತು ರೂರ್​ಭಕ್ಷ್​ ಇಬ್ಬರೂ ಅವಿವಾಹಿತರಾಗಿದ್ದರು. ಸಹಬ್​ರಾಮ್​ ಅನಾರೋಗ್ಯದಿಂದ ಬಳಲುತ್ತಿದ್ದಾಗ, ರೂರ್​ಭಕ್ಷ್​ ಆತನ ಚಿಕಿತ್ಸೆಗಾಗಿ ಔಷಧೀಯ ಗಿಡಮೂಲಿಕೆಗಳನ್ನು ತರಲು ನರಹದಕ್ಕೆ ಹೋಗುತ್ತಿದ್ದನು. ರೂರ್​ಭಕ್ಷ್ ಕೇವಲ ಅರ್ಧದಷ್ಟು ದೂರವನ್ನು ಮಾತ್ರ ಕ್ರಮಿಸುತ್ತಿದ್ದ ವೇಳೆ, ಅವನು ಪ್ರಯಾಣಿಸುತ್ತಿದ್ದ ಕುದುರೆಯು ಮುಂದೆ ಹೋಗಲು ನಿರಾಕರಿಸಿತು. ಹಲವು ಬಾರಿ ಪ್ರಯತ್ನಗಳನ್ನು ಮಾಡಿದರೂ ಕುದುರೆ ಮುಂದಕ್ಕೆ ಹೋಗದೆ ಹಳ್ಳಿಯ ಕಡೆಗೆ ತಿರುಗಿತು. ಇದರಿಂದ ಮನೆಯಲ್ಲಿ ಏನೋ ಅಹಿತಕರ ಘಟನೆ ನಡೆದಿದೆ ಎಂದು ರೂರ್​ಭಕ್ಷನಿಗೆ ಅರಿವಾಯಿತು. ಕೂಡಲೇ ಹಿಂತಿರುಗಿ ಬಂದನು. ಅಷ್ಟರಲ್ಲೇ ಸಹಬ್​ರಾಮ್​ ನಿಧನ ಹೊಂದಿದ್ದನು.

  ರೂರ್​ಭಕ್ಷ್


  ಈ ಸಮಯದಲ್ಲಿ ಗ್ರಾಮಸ್ಥರು ರೂರ್​ಭಕ್ಷ್​ ಬರಲು ಸಮಯ ಬೇಕು ಎಂದು ನಿರ್ಧರಿಸಿ. ಗ್ರಾಮಸ್ಥರೇ ಸಹಬ್​ರಾಮ್​ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ರೂರ್​ಭಕ್ಷ್​​ ಗ್ರಾಮವನ್ನು ತಲುಪಿದಾಗ ತನ್ನ ಸಹೋದರನು ನಿಧನನಾದನೆಂದು ಸುದ್ದಿ ಕೇಳಿ, ಅವನು ಸಹ ಉರಿಯುತ್ತಿರುವ ಚಿತೆಗೆ ಹಾರಿ ತನ್ನ ಸಹೋದರನೊಂದಿಗೆ ತನ್ನ ಪ್ರಾಣವನ್ನು ಬಿಟ್ಟನು.  ಅಂದಿನಿಂದ, ಈ ಗ್ರಾಮದಲ್ಲಿ ಇಂತಹಗೊಂಡು ಪವಾಡಗಳು ನೋಡಿ ಜನರು ಅಚ್ಚರಿಗೊಂಡಿದ್ದಾರೆ. ದಾದ ಇಲ್ಲೇ ಇದ್ದಾರೆ ಎಂಬ ನಂಬಿಕೆಯು ಊರ ಜನರಲ್ಲಿದೆ.

  ಸತ್ತಾ ದಾದಾ ದೇವಾಲಯ


  1991 ರಲ್ಲಿ ದೇವಾಲಯವನ್ನು ಕಟ್ಟಿಸಿದರು

  1991 ರಲ್ಲಿ ಗ್ರಾಮಸ್ಥರು ಸೇರಿ ಹಣ ಒಟ್ಟುಗೂಡಿಸಿ ದೇವಸ್ಥಾನವನ್ನು ಕಟ್ಟಿದರು ಎಂದು ಗ್ರಾಮದ ಸರಪಂಚ್ ವಿನೋದ್ ಡಾಂಗಿ ಮತ್ತು ಉಪ ಅಧ್ಯಕ್ಷ ಉಮ್ರಾವ್ ಸಿಂಗ್ ಹೇಳುತ್ತಾರೆ. ಇದಾದ ನಂತರ 1992 ರಿಂದ ಶ್ರೀ ಸತ್ತ ದಾದಾ ರೂರ್​ಭಕ್ಷನ ಜಾತ್ರೆ ನಡೆಸುತ್ತಾ ಬಂದಿದ್ದಾರೆ.
  Published by:Harshith AS
  First published: