Dowry: ವರದಕ್ಷಿಣೆ ಹಣ ಹೆಣ್ಮಕ್ಕಳ ಹಾಸ್ಟಲ್ ನಿರ್ಮಾಣಕ್ಕೆ ಮೀಸಲಿಟ್ಟ ವಧು- ಶಹಬ್ಬಾಸ್ ಅಂಜಲಿ

ಅಂಜಲಿ ಮದುವೆಗೆ ಮೊದಲು ತನ್ನ ತಂದೆಯ ಬಳಿ ಈ ಬಗ್ಗೆ ಕೇಳಿಕೊಂಡಿದ್ದಾರೆ. ಮತ್ತು ವರದಕ್ಷಿಣೆಗಾಗಿ ಮೀಸಲಿಟ್ಟ ಹಣವನ್ನು ಬಾಲಕಿಯರ ಹಾಸ್ಟೆಲ್ ನಿರ್ಮಾಣ ಮಾಡಲು ಕೊಡಿ ಎಂದು ಮನವಿ ಮಾಡಿದ್ದಾರೆ.

ಅಂಜಲಿ ಮದುವೆಗೆ ಮೊದಲು ತನ್ನ ತಂದೆಯ ಬಳಿ ಈ ಬಗ್ಗೆ ಕೇಳಿಕೊಂಡಿದ್ದಾರೆ. ಮತ್ತು ವರದಕ್ಷಿಣೆಗಾಗಿ ಮೀಸಲಿಟ್ಟ ಹಣವನ್ನು ಬಾಲಕಿಯರ ಹಾಸ್ಟೆಲ್ ನಿರ್ಮಾಣ ಮಾಡಲು ಕೊಡಿ ಎಂದು ಮನವಿ ಮಾಡಿದ್ದಾರೆ.

ಅಂಜಲಿ ಮದುವೆಗೆ ಮೊದಲು ತನ್ನ ತಂದೆಯ ಬಳಿ ಈ ಬಗ್ಗೆ ಕೇಳಿಕೊಂಡಿದ್ದಾರೆ. ಮತ್ತು ವರದಕ್ಷಿಣೆಗಾಗಿ ಮೀಸಲಿಟ್ಟ ಹಣವನ್ನು ಬಾಲಕಿಯರ ಹಾಸ್ಟೆಲ್ ನಿರ್ಮಾಣ ಮಾಡಲು ಕೊಡಿ ಎಂದು ಮನವಿ ಮಾಡಿದ್ದಾರೆ.

 • News18
 • Last Updated :
 • Share this:
  ಹೆಣ್ಣು ಮಕ್ಕಳ ಶಿಕ್ಷಣವನ್ನು (Girl Child Education) ಪ್ರೋತ್ಸಾಹಿಸುವ ಸಲುವಾಗಿ ಇತ್ತೀಚೆಗೆ ಸಪ್ತಪದಿ ತುಳಿದ ರಾಜಸ್ತಾನದ ವಧು ಅಂಜಲಿ (Rajasthan's bride Anjali,) ತನ್ನ ವರದಕ್ಷಿಣೆಗಾಗಿ ಮೀಸಲಿಟ್ಟ 75 ಲಕ್ಷ ರೂ ಮೊತ್ತವನ್ನು ಬಾಲಕಿಯರ ಹಾಸ್ಟೆಲ್ ನಿರ್ಮಾಣಕ್ಕೆ ಬಳಸಿಕೊಳ್ಳಲು ಮುಂದಾಗಿರುವ ನಡೆಗೆ ಇದೀಗ ಎಲ್ಲೆಡೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಬಾರ್ಮರ್ ನಗರದ ಕಿಶೋರ್ ಸಿಂಗ್ ಕಾನೋಡ್ (Kishore Singh Kanod) ಅವರ ಪುತ್ರಿ ಅಂಜಲಿ ಕನ್ವರ್ ಅವರು ಇತ್ತೀಚಿಗೆ ಪ್ರವೀಣ್ ಸಿಂಗ್ ಅವರೊಂದಿಗೆ ಸಪ್ತಪದಿ ತುಳಿದಿದ್ದರು, ಆ ವೇಳೆ ತಂದೆ ಮಗಳಿಗಾಗಿ ಭಾರಿ ಮೊತ್ತದ ಹಣವನ್ನು ವರದಕ್ಷಿಣೆ ರೂಪದಲ್ಲಿ(Dowry) ಕೊಡಲು ನಿರ್ಧರಿಸಿದ್ದರು, ಆದರೆ ಆ ಹಣವನ್ನು ಬಾಲಕಿಯರ ಹಾಸ್ಟೆಲ್ ನಿರ್ಮಾಣಕ್ಕೆ ಮೀಸಲಿಡುವಂತೆ ಆಕೆ ತಂದೆಯೊಂದಿಗೆ ವಿನಂತಿಸಿಕೊಂಡಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ(Social networking,) ಭಾರಿ ಸುದ್ದಿ ಮಾಡಿದ್ದು, ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಈಕೆ ಮಾಡಿರುವ ಸೇವೆ ಕೇಳೆ ನೆಟ್ಟಿಗರು ಶಭಾಷ್‌ ಅಂಜಲಿ , ಒಳ್ಳೆಯ ಕೆಲಸ ಮಾಡಿರುವೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

  ವ್ಯಾಪಕ ಪ್ರಶಂಸೆಗೆ ಪಾತ್ರ: ವರದಿಯ ಪ್ರಕಾರ, ಅಂಜಲಿ ಮದುವೆಗೆ ಮೊದಲು ತನ್ನ ತಂದೆಯ ಬಳಿ ಈ ಬಗ್ಗೆ ಕೇಳಿಕೊಂಡಿದ್ದಾರೆ. ಮತ್ತು ವರದಕ್ಷಿಣೆಗಾಗಿ ಮೀಸಲಿಟ್ಟ ಹಣವನ್ನು ಬಾಲಕಿಯರ ಹಾಸ್ಟೆಲ್ ನಿರ್ಮಾಣ ಮಾಡಲು ಕೊಡಿ ಎಂದು ಮನವಿ ಮಾಡಿದ್ದಾರೆ. ಅದಕ್ಕೆ ತಂದೆ ಮರುಮಾತಾಡೆ ಆಕೆ ಆಸೆಯನ್ನು ನೆರವೇರಿಸಲು ಬ್ಲಾಕ್‌ ಚೆಕ್‌ ನ್ನು ನೀಡಿದ್ದಾರೆ.

  ಕಿಶೋರ್ ಸಿಂಗ್ ಕಾನೋಡ್ ಅವರು ತಮ್ಮ ಮಗಳ ಇಚ್ಛೆಯಂತೆ ನಿರ್ಮಾಣಕ್ಕೆ ಈಗಾಗಲೇ ಹಣವನ್ನು ಕೊಡಲು ಸಮ್ಮತಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಸುದ್ದಿಯನ್ನು ಬಾರ್ಮರ್‌ನ ರಾವತ್ ತ್ರಿಭುವನ್ ಸಿಂಗ್ ರಾಥೋಡ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದ್ದರಿಂದ ವರದಕ್ಷಿಣೆ ಪಿಡುಗಿನ ಬಗ್ಗೆ ಜನರಿಗೆ ಒಂದು ಸಂದೇಶ ತಲುಪಿಸಿದಂತಾಗಿದೆ.

  ಇದನ್ನು ಓದಿ: ಆರು ತಿಂಗಳಿಗೆ ಮುರುಟಿದ ಫೇಸ್​ಬುಕ್​ ಪ್ರೇಮ; ವರದಕ್ಷಿಣೆ ಕಿರುಕುಳ ಕಾರಣವಾಯ್ತಾ ಯುವತಿ ಸಾವಿಗೆ

  ಖಾಲಿ ಚೆಕ್ ನೀಡಿದ ತಂದೆ

  ಮದುವೆಯ ವಿಧಿವಿಧಾನಗಳು ಪೂರ್ಣಗೊಂಡ ನಂತರ ಅಂಜಲಿ ಮಹಂತ್ ಪ್ರತಾಪ್ ಪುರಿ ಅವರನ್ನು ಸಂಪರ್ಕಿಸಿ, ಪತ್ರದಲ್ಲಿನ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದರು, ಅವರು ನೆರೆದಿದ್ದ ಅತಿಥಿಗಳಿಗೆ ಓದಿ ಹೇಳಿದರು. ಇದರ ಬಗ್ಗೆ ಕೇಳುತ್ತಿದ್ದಂತೆ ನೆರೆದವರು ಚಪ್ಪಾಳೆಯೊಂದಿಗೆ ಆಕೆಯನ್ನು ಹೊಗಳಿ ಕೊಂಡಾಡಿದರು ಮತ್ತು ಆಕೆಯ ತಂದೆ ಅಂಜಲಿಗೆ ಖಾಲಿ ಚೆಕ್ ಅನ್ನು ನೀಡಿ, ಬಯಸಿದ ಮೊತ್ತವನ್ನು ಬರೆದುಕೊಳ್ಳಲು ಹೇಳಿದರು.

  ಪ್ರಸ್ತುತ ತಾರಾತಾರ ಮಠದ ಮುಖ್ಯಸ್ಥರಾದ ಮಹಂತ್ ಪ್ರತಾಪ್ ಪುರಿ ಅವರು , ಕನ್ಯಾದಾನದ ಸಮಯದಲ್ಲಿ ಸಮಾಜದ ಒಳಿತಿಗಾಗಿ ಹಣವನ್ನು ಮೀಸಲಿಡುವುದು ಮತ್ತು ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಮಾತನಾಡುವುದು ಸ್ಫೂರ್ತಿದಾಯಕ ಕಾರ್ಯವಾಗಿದೆ ಎಂದು ಹೇಳಿದರು. ಎನ್‌ಎಚ್ 68 ನಲ್ಲಿ ಹಾಸ್ಟೆಲ್ ನಿರ್ಮಾಣಕ್ಕಾಗಿ ಕನೋಡ್ ಈಗಾಗಲೇ 1 ಕೋಟಿ ರೂಪಾಯಿ ಅನುದಾನವನ್ನು ಘೋಷಿಸಿದ್ದಾರೆ , ಆದರೆ ನಿರ್ಮಾಣವನ್ನು ಪೂರ್ಣಗೊಳಿಸಲು 50 ರಿಂದ 75 ಲಕ್ಷ ರೂಪಾಯಿಗಳ ಹೆಚ್ಚುವರಿ ಹಣದ ಅಗತ್ಯವಿತ್ತು.

  ಇದನ್ನು ಓದಿ: Bangalore Crime: ಬೆಂಗಳೂರಿನಲ್ಲಿ ವರದಕ್ಷಿಣೆಗಾಗಿ ಹೆಂಡತಿಯ ಹೊಟ್ಟೆ, ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ ಗಂಡ!

  ಕಾನೂನು: 
  ವರದಕ್ಷಿಣೆ ಎಂಬುದು ಸಮಾಜದಲ್ಲಿ ವ್ಯಾಪಕವಾಗಿ ಬೇರೂರಿರುವ ಪಿಡುಗು. ಅತಿ ಹೆಚ್ಚಾಗಿ ಮಹಿಳೆಯರ ಶೋಷಣೆಗೆ ಕಾರಣವಾಗಿರುವ ಪಿಡುಗು. ಇದನ್ನು ನಿಯಂತ್ರಿಸುವುದಕ್ಕಾಗಿ 1961 ರಷ್ಟು ಹಿಂದೆಯೇ ವರದಕ್ಷಿಣೆ ನಿಷೇಧ ಅಧಿನಿಯಮ ಜಾರಿಗೆ ಬಂತು. ಆದರೆ ಇದರಿಂದ ಈ ಪಿಡುಗನ್ನು ನಿವಾರಿಸುವುದಿರಲಿ ನಿಯಂತ್ರಿಸಲೂ ಸಾಧ್ಯವಾಗಲಿಲ್ಲ. ಹೆಚ್ಚುತ್ತಿರುವ ವರದಕ್ಷಿಣೆ ಕಿರುಕುಳ ಮತ್ತು ವರದಕ್ಷಿಣೆ ಸಾವುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು 1984ರಲ್ಲಿ ಈ ಅಧಿನಿಯಮಕ್ಕೆ ತಿದ್ದುಪಡಿ ತರಲಾಯಿತು. ವರದಕ್ಷಿಣೆ ಕೊಡುವುದು, ಕೇಳುವುದು, ತೆಗೆದುಕೊಳ್ಳುವುದು ಮತ್ತು ವರದಕ್ಷಿಣೆ ಕೊಡುವುದಾಗಿ ಜಾಹೀರಾತು ಕೊಡುವುದು ಅಪರಾಧ
  Published by:vanithasanjevani vanithasanjevani
  First published: