ಎಚ್ಚರ : ರೈಲಿನಲ್ಲಿ ಶೌಚಾಲಯದ ನೀರಿಂದ ಟೀ ತಯಾರಿಸುತ್ತಾರೆ !

news18
Updated:May 2, 2018, 7:14 PM IST
ಎಚ್ಚರ : ರೈಲಿನಲ್ಲಿ ಶೌಚಾಲಯದ ನೀರಿಂದ ಟೀ ತಯಾರಿಸುತ್ತಾರೆ !
news18
Updated: May 2, 2018, 7:14 PM IST
ನ್ಯೂಸ್ 18 ಕನ್ನಡ

ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಪೂರೈಸುತ್ತಿರುವ ಆಹಾರ ಸೇವಿಸಲಾಗದಷ್ಟು ಕಳಪೆಯಾಗಿರುತ್ತದೆ ಎಂದು ಕಳೆದ ವರ್ಷ ಸಿಎಜಿ ಸಲ್ಲಿಸಿದ ವರದಿಯಿಂದ ಬಹಿರಂಗವಾಗಿತ್ತು. ಈಗ ಈ ವರದಿಗೆ ಪುಷ್ಠಿ ನೀಡುವಂತೆ ಮತ್ತೊಂದು ವಿಡಿಯೊ ವೈರಲ್ ಆಗಿದೆ.

ನೀವು ರೈಲಿನಲ್ಲಿ ಚಹಾ ಸೇವಿಸುತ್ತೀರಿ ಅಂದರೆ ಈ ವೀಡಿಯೊ ನೋಡಲೇಬೇಕು. ಯಾಕೆಂದರೆ ರೈಲಿನಲ್ಲಿ ಸಿಗುವ ಟೀಗೆ ಶೌಚಾಲಯದಲ್ಲಿ ನೀರು ತುಂಬಿಸುವ ದೃಶ್ಯ ಈ ವೀಡಿಯೊದಲ್ಲಿದೆ. ತೆಲಂಗಾಣದ ಸಿಕಂದರಾಬಾದ್ ರೈಲ್ವೆ ಪ್ರದೇಶದಲ್ಲಿ ಈ ವೀಡಿಯೊವನ್ನು ಚಿತ್ರಿಸಲಾಗಿದೆ. ಕಳೆದ ವರ್ಷ ಚಿತ್ರೀಕರಿಸಲ್ಪಟ್ಟ ಈ ವಿಡಿಯೊ ತುಣುಕು ಸದ್ಯ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

ರೈಲ್ವೆಯಲ್ಲಿ ಇಂತಹ ಪ್ರಕರಣಗಳು ಮೊದಲೇನಲ್ಲ. ಈ ಹಿಂದೆ ದೆಹಲಿಯ ಎಕ್ಸ್​ಪ್ರೆಸ್ ರೈಲಿನಲ್ಲಿ ನೀಡಿದ ಆಹಾರದಲ್ಲಿ ಹಲ್ಲಿಯೊಂದು ಸಿಕ್ಕಿತ್ತು. ಆಹಾರ ಸೇವಿಸಿದ ಜನರು ಅಸ್ವಸ್ಥಗೊಂಡಿದ್ದರು. ಈ ಸುದ್ದಿಯು ವೈರಲ್ ಆಗುತ್ತಿದ್ದಂತೆ ರೈಲ್ವೆ ಒದಗಿಸುವ ಆಹಾರದ ಬಗ್ಗೆ ಸಿಎಜಿ ಸಂಸತ್ತಿನಲ್ಲಿ ವರದಿಯನ್ನು ಮಂಡಿಸಿತ್ತು.ರೈಲಿನಲ್ಲಿ ಕಲುಷಿತ ಆಹಾರ ಪದಾರ್ಥಗಳನ್ನು ಮತ್ತು ಅವಧಿ ಮುಗಿದ ವಸ್ತುಗಳನ್ನು ಬಳಸುತ್ತಾರೆ ಎಂಬ ಸ್ಫೋಟಕ ಸುದ್ದಿಯನ್ನು ಸಿಎಜಿ ಬಹಿರಂಗಪಡಿಸಿತ್ತು. ಸಾಮಾನ್ಯವಾಗಿ ರೈಲಿನಲ್ಲಿ ಸಿಗುವ ಟೀ ಕೂಡ ಕಲುಷಿತ ನೀರಿನಿಂದ ತಯಾರಿಸುತ್ತಾರೆ ಎಂಬ ಸುದ್ದಿಯು ಇದೀಗ ರೈಲು ವ್ಯವಸ್ಥೆಯ ಬಗ್ಗೆ ಅಪನಂಬಿಕೆ ಮೂಡುವಂತೆ ಮಾಡಿದೆ.
First published:May 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ