• Home
  • »
  • News
  • »
  • trend
  • »
  • Indian Railway: ರೈಲಿನಲ್ಲಿ ಸಿಗುತ್ತಿದೆಯಂತೆ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ!

Indian Railway: ರೈಲಿನಲ್ಲಿ ಸಿಗುತ್ತಿದೆಯಂತೆ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Indian Railway Gives Healthy Food: ಈ ಸಿರಿಧಾನ್ಯಗಳಿಂದ ತಯಾರಿಸಿದ ಊಟದ ಮೆನುವನ್ನು ತೇಜಸ್, ರಾಜಧಾನಿ ಎಕ್ಸ್‌ಪ್ರೆಸ್ ಮತ್ತು ಇತರ ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳಲ್ಲಿಯೂ ಸಹ ಶೀಘ್ರದಲ್ಲಿಯೇ ರೈಲ್ವೇ ಸೇವೆಗಳ ಭಾಗವಾಗಿ ಪರಿಚಯಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಮುಂದೆ ಓದಿ ...
  • Share this:

ಸಾಮಾನ್ಯವಾಗಿ ರೈಲಿನಲ್ಲಿ (Railway) ಪ್ರಯಾಣಿಸುವಾಗ ಬಹುತೇಕರು ರೈಲಿನಲ್ಲಿ ಅಥವಾ ರೈಲ್ವೆ ನಿಲ್ದಾಣಗಳಲ್ಲಿ ಊಟ (Food) ಅಷ್ಟೊಂದು ಸ್ವಾದಿಷ್ಟಕರವಾಗಿ ಇರುವುದಿಲ್ಲ ಮತ್ತು ಬಿಸಿ ಇರುವುದಿಲ್ಲ ಅಂತ ತಮ್ಮ ಮನೆಯಿಂದ (Home) ಅಥವಾ ತಮಗೆ ಗೊತ್ತಿರುವ ಹೊಟೇಲ್ ಗಳಿಂದ ಪಾರ್ಸೆಲ್ ಗಳನ್ನು ತೆಗೆದುಕೊಂಡು ಹೋಗಿ ತಿನ್ನುವುದನ್ನು ನಾವು ನೋಡಿರುತ್ತೇವೆ. ಈಗ ರೈಲಿನಲ್ಲಿ ಬರೀ ಒಳ್ಳೆಯದಲ್ಲ, ಪೌಷ್ಟಿಕಭರಿತ ಆಹಾರ ಸಿಗುತ್ತದೆ ಅಂತ ಹೇಳಿದರೆ ಬಹುತೇಕರು ಸುಲಭವಾಗಿ ನಂಬಲಿಕ್ಕಿಲ್ಲ, ಆದರೆ ಇದು ಸತ್ಯವಾದ ವಿಷಯ. ಈಗ ಗಾಂಧಿನಗರ ಮತ್ತು ಮುಂಬೈ ನಡುವಿನ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪೌಷ್ಠಿಕಾಂಶಯುಕ್ತ ಸಿರಿಧಾನ್ಯಗಳಿಂದ (Millets) ತಯಾರಿಸಿದ ಊಟವನ್ನು ಸವಿಯಲು ಈಗಾಗಲೇ ಶುರು ಮಾಡಿದ್ದಾರೆ ಎಂದು ಹೇಳಲಾಗಿದೆ.


2023 ರ ವರ್ಷವನ್ನು "ಸಿರಿಧಾನ್ಯಗಳ ಅಂತಾರಾಷ್ಟ್ರೀಯ ವರ್ಷ" ಎಂದು ಆಚರಿಸುವ ಭಾಗವಾಗಿ ಸಿರಿಧಾನ್ಯಗಳನ್ನು ಉತ್ತೇಜಿಸುವ ಕೇಂದ್ರ ಸರ್ಕಾರದ ಕ್ರಮದ ಭಾಗವಾಗಿ ಈ ಪೌಷ್ಠಿಕ ಆಹಾರವನ್ನು ಪರಿಚಯಿಸಲಾಗಿದೆ.


ರೈಲಿನಲ್ಲಿ ಸಿಗುತ್ತಿದೆಯಂತೆ ಸಿರಿಧಾನ್ಯಗಳಿಂದ ತಯಾರಿಸಿದ ಪೌಷ್ಠಿಕ ಆಹಾರ


ರೈಲ್ವೆ ಮೂಲಗಳ ಪ್ರಕಾರ, ರೈಲಿನಲ್ಲಿ ಬಡಿಸಲಾಗುತ್ತಿರುವ ಕಡಿಮೆ ಕ್ಯಾಲೋರಿ ರಾಗಿ-ಸಮೃದ್ಧ ಪ್ರಾದೇಶಿಕ ಭಕ್ಷ್ಯಗಳು ಪ್ರಯಾಣಿಕರನ್ನು ತುಂಬಾನೇ ಆಕರ್ಷಿಸುತ್ತಿವೆ ಎಂದು ಹೇಳಲಾಗುತ್ತಿದೆ.


"2023 ಅನ್ನು ಸಿರಿಧಾನ್ಯಗಳ ಅಂತಾರಾಷ್ಟ್ರೀಯ ವರ್ಷವೆಂದು ಆಚರಿಸಲು, ಭಾರತೀಯ ರೈಲ್ವೆಯು ಗಾಂಧಿನಗರ ರಾಜಧಾನಿ -ಮುಂಬೈ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ನಲ್ಲಿ ಗ್ರಾಹಕರ ಬಾಯಿಯ ರುಚಿಗೆ ತಕ್ಕಂತೆ ಸೂಕ್ತವಾದ ಸಿರಿಧಾನ್ಯ-ಸಮೃದ್ಧ ಉನ್ನತ ಮಟ್ಟದ ಭಕ್ಷ್ಯಗಳನ್ನು ಪೂರೈಸುತ್ತಿದೆ" ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಸಿರಿಧಾನ್ಯಗಳಿಂದ ಸಮೃದ್ಧವಾದ ಪ್ರಾದೇಶಿಕ ಭಕ್ಷ್ಯಗಳ ಬಹುತೇಕ ಎಲ್ಲಾ ಪ್ರಕಾರಗಳನ್ನು ಪರಿಚಯಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇತರ ಪ್ರಮುಖ ರೈಲುಗಳು ಮತ್ತು ಐದು ವಂದೇ ಭಾರತ್ ರೈಲುಗಳಲ್ಲಿಯೂ ಸಹ ಇದೇ ರೀತಿಯ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರದ ಮೆನುವನ್ನು ಪರಿಚಯಿಸಲಾಗುವುದು ಎಂದು ಮೂಲಗಳು ತಿಳಿಸಿವೆ.


"ಸಿರಿಧಾನ್ಯದ ಮೆನುವನ್ನು ಪರಿಚಯಿಸುವುದು ದೇಶದ ದೇಶೀಯ ಊಟವನ್ನು ಆಚರಿಸುವ ಪ್ರಯತ್ನವಾಗಿದೆ ಮತ್ತು ಅಂತಹ ಭಕ್ಷ್ಯಗಳಿಗಾಗಿ ಆಗಾಗ್ಗೆ ಹಂಬಲಿಸುವ ಮತ್ತು ಅವುಗಳನ್ನು ಪಡೆಯಲು ಸಾಧ್ಯವಾಗದ ಪ್ರಯಾಣಿಕರಿಗೆ ಇದು ಖಂಡಿತವಾಗಿಯೂ ಒಂದೊಳ್ಳೆಯ ಸೌಲಭ್ಯವಾಗಿದೆ" ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇದನ್ನೂ ಓದಿ: 6 ಸಾವಿರ ಕೊಡವರಿಂದ ವರ್ಲ್ಡ್ ರೆಕಾರ್ಡ್! ಅಷ್ಟಕ್ಕೂ ಅವರೇನು ಮಾಡಿದ್ದಾರೆ ಅಂತ ತಿಳಿದರೆ ನೀವೇ ಸೂಪರ್ ಅಂತೀರಿ


ಬೇರೆ ಬೇರೆ ರೈಲುಗಳಲ್ಲಿಯೂ ಸಹ ಇದೇ ರೀತಿಯ ಮೆನುವನ್ನು ನೀಡಲು ನಿರ್ಧಾರ


ಈ ಸಿರಿಧಾನ್ಯಗಳಿಂದ ತಯಾರಿಸಿದ ಊಟದ ಮೆನುವನ್ನು ತೇಜಸ್, ರಾಜಧಾನಿ ಎಕ್ಸ್‌ಪ್ರೆಸ್ ಮತ್ತು ಇತರ ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳಲ್ಲಿಯೂ ಸಹ ಶೀಘ್ರದಲ್ಲಿಯೇ ರೈಲ್ವೇ ಸೇವೆಗಳ ಭಾಗವಾಗಿ ಪರಿಚಯಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.


ಗಾಂಧಿನಗರ -ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿದ್ದು, ಅವರ ಉಪಕ್ರಮದ ಮೇರೆಗೆ ವಿಶ್ವಸಂಸ್ಥೆಯು 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಿದೆ. ವಂದೇ ಭಾರತ್ ರೈಲಿನ ಈ ರೇಕ್ ಗಾಂಧಿನಗರ ಮತ್ತು ಮುಂಬೈ ನಡುವೆ 519 ಕಿಲೋ ಮೀಟರ್ ದೂರವನ್ನು ಕ್ರಮಿಸುತ್ತದೆ.


ವಂದೇ ಭಾರತ್ ರೈಲುಗಳನ್ನು ಹೊರತುಪಡಿಸಿ, ಭಾರತೀಯ ರೈಲ್ವೆ 24 ಜೋಡಿ ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸುತ್ತದೆ, ಇದು ದೇಶದ ಬಹುತೇಕ ಎಲ್ಲಾ ಪ್ರಮುಖ ನಗರಗಳನ್ನು ರಾಷ್ಟ್ರ ರಾಜಧಾನಿಯೊಂದಿಗೆ ಸಂಪರ್ಕಿಸುತ್ತದೆ.


15-20 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಿರಿಧಾನ್ಯಗಳ ಊಟದ ರುಚಿಯನ್ನು ಸವಿಯಬಹುದು..


ಈ ಎಲ್ಲಾ ರೈಲುಗಳಲ್ಲಿ ಹೊಸ ಮೆನುವನ್ನು ಪರಿಚಯಿಸಿದರೆ, ದೇಶದಲ್ಲಿ ಪ್ರತಿದಿನ 15 ರಿಂದ 20 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಿರಿಧಾನ್ಯಗಳ ಊಟದ ರುಚಿಯನ್ನು ಸವಿಯಲು ಸಾಧ್ಯವಾಗುತ್ತದೆ.


ಇದನ್ನೂ ಓದಿ: ವ್ಯಾಯಾಮದ ವೇಳೆ ಮಾಡುವ ತಪ್ಪುಗಳು ಅನೇಕ ಸಮಸ್ಯೆಗೆ ಕಾರಣವಂತೆ


ಅಧಿಕೃತ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ಇತರ ರೈಲುಗಳು ಸೇರಿದಂತೆ 1,201 ಸೂಪರ್ ಫಾಸ್ಟ್ ರೈಲುಗಳು ಚಲಿಸುತ್ತಿವೆ.

Published by:Sandhya M
First published: