Viral Video: ಜೀವದ ಹಂಗು ತೊರೆದು ಕರ್ತವ್ಯ ಪಾಲನೆ! ಇವರು ಮಾಡಿದ ಕೆಲಸವೇನು ನೋಡಿ

ರೈಲ್ವೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಹಗಲು ಇರುಳು ಎನ್ನದೆ ಸದಾ ಕೆಲಸಕ್ಕೆ ಸಿದ್ದರಾಗಿರಬೇಕು. ರೈಲು ಯಾವುದೇ ಸಂದರ್ಭದಲ್ಲಿ ಯಾವುದೇ ಸಮಸ್ಯೆಯಿಂದ ಕೆಟ್ಟು ನಿಂತರೂ ಅಲ್ಲಿ ಹೋಗಿ ಆ ಸಮಸ್ಯೆಯನ್ನು ಪರಿಹರಿಸುವ ಜವಾಬ್ದಾರಿ ಈ ಉದ್ಯೋಗಿಗಳ ಮೇಲೆ ಇರುತ್ತದೆ ಎಂದು ಹೇಳಬಹುದು.

ಸಹಾಯಕ ಲೋಕೋ ಪೈಲಟ್

ಸಹಾಯಕ ಲೋಕೋ ಪೈಲಟ್

  • Share this:
ನಮ್ಮಲ್ಲಿ ಕೆಲವೊಂದು ಕೆಲಸಗಳು (Work) ತುಂಬಾನೇ ಅಪಾಯಗಳಿಂದ ಕೂಡಿದ್ದು, ಉದ್ಯೋಗಿಗಳು ಅದನ್ನು ಮಾಡಬೇಕಾದರೆ ಒಂದು ರೀತಿಯಲ್ಲಿ ಅವರು ತಮ್ಮ ಪ್ರಾಣದ ಹಂಗು ತೊರೆದು ತಮ್ಮ ಕರ್ತವ್ಯವನ್ನು (Duty) ನಿರ್ವಹಿಸಬೇಕಾಗುವಂತಹ ಸಂದರ್ಭಗಳು ಪ್ರತಿದಿನ ಎದುರಾಗುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಉದಾಹರಣೆಗೆ ಈ ವಿದ್ಯುತ್ ಕಂಬವನ್ನು ಹತ್ತಿ ರಿಪೇರಿ ಮಾಡುವ ಲೈನ್‌ಮೆನ್​ಗಳ (Line Man) ಕೆಲಸವಾಗಿರಬಹುದು, ಈ ರೈಲ್ವೆ ಅಡಿಯಲ್ಲಿ ಮಲಗಿಕೊಂಡು ರಿಪೇರಿ (Repair) ಕೆಲಸ ಮಾಡುವುದಾಗಲಿ ಮತ್ತು ಬಹುಮಹಡಿಯ ಕಟ್ಟಡವನ್ನು ಹತ್ತಿ ಅದಕ್ಕೆ ಬಣ್ಣ ಹಚ್ಚುವಂತಹ ಕೆಲಸಗಳಾಗಿರಬಹುದು. ಹೀಗೆ ಅನೇಕ ಕೆಲಸಗಳಲ್ಲಿ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡಬೇಕಾಗುತ್ತದೆ.

ಅದರಲ್ಲೂ ಈ ರೈಲ್ವೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಹಗಲು ಇರುಳು ಎನ್ನದೆ ಸದಾ ಕೆಲಸಕ್ಕೆ ಸಿದ್ದರಾಗಿರಬೇಕು. ರೈಲು ಯಾವುದೇ ಸಂದರ್ಭದಲ್ಲಿ ಯಾವುದೇ ಸಮಸ್ಯೆಯಿಂದ ಕೆಟ್ಟು ನಿಂತರೂ ಅಲ್ಲಿ ಹೋಗಿ ಆ ಸಮಸ್ಯೆಯನ್ನು ಪರಿಹರಿಸುವ ಜವಾಬ್ದಾರಿ ಈ ಉದ್ಯೋಗಿಗಳ ಮೇಲೆ ಇರುತ್ತದೆ ಎಂದು ಹೇಳಬಹುದು.

ರೈಲು ಗಾಳಿಯ ಸೋರಿಕೆ ಸಮಸ್ಯೆ ಸರಿಪಡಿಸಿದ ಸಹಾಯಕ ಲೋಕೋ ಪೈಲಟ್
ಇಲ್ಲೊಂದು ಘಟನೆ ನಡೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಈ ವೀಡಿಯೋ ನೋಡಿದ ನೆಟ್ಟಿಗರು ಮಾತ್ರ ಈ ಸಹಾಯಕ ಲೋಕೋ ಪೈಲಟ್ ಗಣೇಶ್ ಘೋಷ್ ಅವರನ್ನು ಹೊಗಳಿದ್ದೆ, ಹೊಗಳಿದ್ದು ಎಂದು ಹೇಳಬಹುದು.

ಅಷ್ಟಕ್ಕೂ ಇವರು ಮಾಡಿದ್ದಾದರೂ ಏನು ಗೊತ್ತೇ? ಒಂದು ರೈಲು ಗಾಳಿಯ ಸೋರಿಕೆ ಸಮಸ್ಯೆಯನ್ನು ಸರಿಪಡಿಸಲು ಸೇತುವೆಯ ಮೇಲೆ ನಿಂತಿದ್ದಂತಹ ರೈಲಿನ ಕೆಳಗೆ ಧೈರ್ಯದಿಂದ ತೆವಳಿಕೊಂಡು ಹೋಗಿ ಆ ಸಮಸ್ಯೆಯನ್ನು ನೋಡಿ ಪರಿಶೀಲಿಸಿದ್ದಕ್ಕಾಗಿ ನೆಟ್ಟಿಗರು ಅವರನ್ನು ತುಂಬಾನೇ ಶ್ಲಾಘಿಸಿದ್ದಾರೆ. ಘೋಷ್ ಸಮಸ್ಯೆಯನ್ನು ಪರಿಹರಿಸಿದ ನಂತರ ರೈಲು ಪ್ರಯಾಣವನ್ನು ಪುನರಾರಂಭಿಸಿತು. ಘೋಷ್ ಅವರ ಧೈರ್ಯಶಾಲಿ ಕೆಲಸವನ್ನು ತೋರಿಸುವ ಈ ಕ್ಲಿಪ್ ಅನ್ನು ರೈಲ್ವೆ ಸಚಿವಾಲಯವು ಸೋಮವಾರ ತನ್ನ ಅಧಿಕೃತವಾದ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ.

ರೈಲಿನ ಕೆಳಗೆ ತೆವಳುತ್ತಿರುವ ವಿಡಿಯೋ ವೈರಲ್
ಘೋಷ್ ರೈಲಿನ ಕೆಳಗೆ ತೆವಳುತ್ತಿರುವುದನ್ನು ವಿಡಿಯೋ ಕ್ಲಿಪ್ ನಲ್ಲಿ ನೋಡಬಹುದು. ಅಲ್ಲೇ ಇದ್ದಂತಹ ಒಬ್ಬ ವ್ಯಕ್ತಿ ಘೋಷ್ ಅವರಿಗೆ ಜಾಗರೂಕರಾಗಿ ಹೋಗಲು ಹೇಳಿರುವುದನ್ನು ನಾವು ಕೇಳಬಹುದು. ಅವನು ರೈಲಿನ ಕೆಳಗಿನಿಂದ ತೆವಳಿಕೊಂಡು ಹೊರ ಬಂದ ನಂತರ ಪ್ರಯಾಣಿಕರು ಅಧಿಕಾರಿಯನ್ನು ಮೆಚ್ಚುಗೆಯಿಂದ ನೋಡಿದರು. ಏತನ್ಮಧ್ಯೆ, ಸೇತುವೆಯ ಕೆಳಗೆ ನೀರು ವೇಗವಾಗಿ ಹರಿಯುತ್ತಿರುವುದನ್ನು ಈ ವೀಡಿಯೋದಲ್ಲಿ ನಾವು ಕಾಣಬಹುದು.

ಇದನ್ನೂ ಓದಿ: Women Rescue: ನೀರಿಲ್ಲದ ಬಾವಿಗೆ ಬಿದ್ದ ಮಹಿಳೆಯನ್ನು ರಕ್ಷಿಸಿದ ಪೊಲೀಸರು! ವಿಡಿಯೋ ವೈರಲ್

ಘೋಷ್ ಅವರನ್ನು ರೈಲ್ವೆ ಸಚಿವಾಲಯ
ರೈಲ್ವೆ ಸಚಿವಾಲಯವು ಘೋಷ್ ಅವರ ಈ ಧೈರ್ಯದ ಕೆಲಸವನ್ನು ಶ್ಲಾಘಿಸಿದೆ. 24×7 ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ರೈಲ್ವೆ ಸೇವಕರು ಬದ್ಧರಾಗಿದ್ದಾರೆ. ಸೇತುವೆಯ ಮೇಲೆ ನಿಲ್ಲಿಸಿದ ರೈಲಿನ ಬೋಗಿಗಳ ಅಡಿಯಲ್ಲಿ ತೆವಳಿಕೊಂಡು ಬಂದ ಎಎಲ್‌ಪಿ ಗಣೇಶ್ ಘೋಷ್ ಅವರ ಧೈರ್ಯದ ಕೆಲಸವನ್ನು ಮತ್ತು ರೈಲ್ವೆ ಪ್ರಯಾಣವನ್ನು ಪುನರಾರಂಭಿಸಲು ಸಹಾಯ ಮಾಡಿದ ವಾಯು ಸೋರಿಕೆ ಸಮಸ್ಯೆಯನ್ನು ಸರಿಪಡಿಸಿದರು" ಎಂದು ರೈಲ್ವೆ ಸಚಿವಾಲಯ ಟ್ವೀಟ್ ಮಾಡಿದೆ.



ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಲೋಕೋ ಪೈಲಟ್ ಅವರ ಪ್ರಯತ್ನಗಳನ್ನು ಶ್ಲಾಘಿಸಿದರೆ, ಇನ್ನೂ ಕೆಲವರು ರೈಲ್ವೆ ಮೂಲಸೌಕರ್ಯವನ್ನು ಸುಧಾರಿಸುವ ಅಗತ್ಯತೆಯನ್ನು ಎತ್ತಿ ತೋರಿಸಿದ್ದಾರೆ.

ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಜನ
ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಕಾಮೆಂಟ್ ಮಾಡಿ "ಹೀಗೆ ಕೆಲಸ ಮಾಡುವ ಅಗತ್ಯವಿರುವುದಿಲ್ಲ, ಇದು ಹೆಮ್ಮೆಯ ವಿಷಯವಲ್ಲ. ಮೊದಲು ನಿಮ್ಮ ಬೋಗಿಗಳಿಗೆ ರಂಧ್ರಗಳಿಲ್ಲ, ಆದರೆ ಕೊಳಚೆ ನೀರಿಗಾಗಿ ಟ್ಯಾಂಕ್ ಗಳನ್ನು ಹೊಂದಿರಿ ಮತ್ತು ಪ್ರಯಾಣಿಕರ ರೇಟಿಂಗ್ ಆಧಾರದ ಮೇಲೆ ಸೇವೆ ಮತ್ತು ನಿರ್ವಹಣೆಗಾಗಿ ಟೆಂಡರ್ ಗಳನ್ನು ನೀಡಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Earthquake: ಸರ್ದಾರ್ ವಲ್ಲಭಬಾಯಿ ಪಟೇಲ್‌ ಪ್ರತಿಮೆ ಬಳಿ ಕಂಪಿಸಿದ ಭೂಮಿ! ಅಂಡಮಾನ್‌ನಲ್ಲೂ ಕಂಪನದ ಅನುಭವ

ಇನ್ನೊಬ್ಬ ಬಳಕೆದಾರರು "ಈ ರೈಲ್ವೆ ಸಿಬ್ಬಂದಿಗೆ ನನ್ನ ಕಡೆಯಿಂದ ಒಂದು ಸೆಲ್ಯೂಟ್. ಅವರು ದಿನದ 24 ಗಂಟೆಯೂ ಜನರಿಗೆ ಉತ್ತಮ ಸೇವೆಯನ್ನು ನೀಡಬೇಕೆಂದು ಕೆಲಸ ಮಾಡುತ್ತಾರೆ ಮತ್ತು ರಾಷ್ಟ್ರದ ಬೆಳವಣಿಗೆಗೆ ಸಹಾಯ ಮಾಡಲು ಶ್ರಮಿಸುತ್ತಾರೆ" ಎಂದು ಕಾಮೆಂಟ್ ಮಾಡಿದ್ದಾರೆ.
Published by:Ashwini Prabhu
First published: