• Home
  • »
  • News
  • »
  • trend
  • »
  • Viral Video: ರೈಲು ನಿಲ್ದಾಣದಲ್ಲಿ ನಿಂತಿದ್ದ ಟಿಸಿ ತಲೆ ಮೇಲೆ ಬಿತ್ತು ವಿದ್ಯುತ್ ತಂತಿ, ಕೂದಲೆಳೆ ಅಂತರದಲ್ಲಿ ಪಾರು!

Viral Video: ರೈಲು ನಿಲ್ದಾಣದಲ್ಲಿ ನಿಂತಿದ್ದ ಟಿಸಿ ತಲೆ ಮೇಲೆ ಬಿತ್ತು ವಿದ್ಯುತ್ ತಂತಿ, ಕೂದಲೆಳೆ ಅಂತರದಲ್ಲಿ ಪಾರು!

ರೈಲು ನಿಲ್ದಾಣದಲ್ಲಿ ನಿಂತಿದ್ದ ಟಿಸಿ ತಲೆ ಮೇಲೆ ಬಿತ್ತು ವಿದ್ಯುತ್ ತಂತಿ

ರೈಲು ನಿಲ್ದಾಣದಲ್ಲಿ ನಿಂತಿದ್ದ ಟಿಸಿ ತಲೆ ಮೇಲೆ ಬಿತ್ತು ವಿದ್ಯುತ್ ತಂತಿ

ಇದರ ವಿಡಿಯೋ ವೈರಲ್ ಆಗಿದ್ದು, ಭಯಾನಕವಾಗಿದೆ. ನೋಡುಗರನ್ನು ಬೆಚ್ಚಿ ಬೀಳಿಸಿದೆ. ಟಿಕೆಟ್ ಕಲೆಕ್ಟರ್ ಮೇಲೆ ವಿದ್ಯುತ್ ತಂತಿ ಬಿದ್ದ ತಕ್ಷಣ ಅವರು ಟ್ರ್ಯಾಕ್ ಮೇಲೆ ಉರುಳಿದ್ದಾರೆ.

  • News18 Kannada
  • Last Updated :
  • West Bengal, India
  • Share this:

ಖರಗ್‌ಪುರ(ಡಿ.09): ಪಶ್ಚಿಮ ಬಂಗಾಳದ (West Bengal) ಖರಗ್‌ಪುರದ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಟಿಕೆಟ್ ಕಲೆಕ್ಟರ್ (Ticket Collector) ಮೇಲೆ ವಿದ್ಯುತ್ ತಂತಿ ಬಿದ್ದ ಪರಿಣಾಮ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಟಿಕೆಟ್ ಕಲೆಕ್ಟರ್​ನ್ನು ಸುಜನ್ ಸಿಂಗ್ ಸರ್ದಾರ್ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ (Accident) ವ್ಯಕ್ತಿ ಸುಟ್ಟು ಕರಕಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral) ಆಗುತ್ತಿದೆ. ಪಶ್ಚಿಮ ಬಂಗಾಳದ ಖರಗ್‌ಪುರ ರೈಲು ನಿಲ್ದಾಣದ (Railway Station) ಪ್ಲಾಟ್‌ಫಾರ್ಮ್‌ನಲ್ಲಿ ಇಬ್ಬರು ಟಿಸಿಗಳು ಮಾತನಾಡುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಅಷ್ಟರಲ್ಲಿ ಪ್ಲಾಟ್ ಫಾರಂ ಮೇಲೆ ಬಿದ್ದಿದ್ದ ವಿದ್ಯುತ್ ತಂತಿ ಟಿಕೆಟ್ ಕಲೆಕ್ಟರ್ ತಲೆಗೆ ತಗುಲಿದೆ.


ಇದನ್ನೂ ಓದಿ: ನೋವಾಗದಂತೆ ಇಂಜೆಕ್ಷನ್ ಕೊಡೋ ಡಾಕ್ಟರ್ ಇವರು, ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ


ಕರೆಂಟ್ ಇರುವ ತಂತಿ ಸ್ಪರ್ಶಿಸಿದ ತಕ್ಷಣ ಸುಜನ್ ಸಿಂಗ್ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದು ಕಾಳಮುಂಡಿ ತಿಂದು ನೇರವಾಗಿ ಟ್ರ್ಯಾಕ್ ಮೇಲೆ ಬೀಳುತ್ತಾನೆ. ಅದೃಷ್ಟವಶಾತ್ ಆ ಸಮಯದಲ್ಲಿ ಯಾವುದೇ ರೈಲು ಹಾದು ಹೋಗಿರಲಿಲ್ಲ. ಪ್ರಜ್ಞೆ ತಪ್ಪಿ ಬಿದ್ದ ಸುಜನ್ ಸಿಂಗ್ ನೇರವಾಗಿ ಟ್ರಾಕ್ ಮೇಲೆ ತಲೆ ಹಾಕಿಕೊಂಡು ಬೀಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದಾದ ನಂತರ ಅಧಿಕಾರಿಗಳು ತಕ್ಷಣವೇ ಅಲ್ಲಿಗೆ ಧಾವಿಸಿ ಸುಜನ್ ಸಿಂಗ್ ಅವರನ್ನು ಅಲ್ಲಿಂದ ಹೊರಕ್ಕೆ ಕರೆದೊಯ್ದರು ಮತ್ತು ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.



ಟಿಕೆಟ್ ಕಲೆಕ್ಟರ್​ಗೆ ಕದಲಲೂ ಸಾಧ್ಯವಾಗಲಿಲ್ಲ


ತಂತಿ ಬಿದ್ದ ತಕ್ಷಣ ಬಲಬದಿಯಲ್ಲಿ ನಿಂತಿದ್ದ ಟಿಕೆಟ್ ಕಲೆಕ್ಟರ್ ಗಾಬರಿಗೊಂಡು ಅಲ್ಲಿಂದ ಹಿಂದೆ ಸರಿದರು, ಆದರೆ ಎರಡನೇ ಟಿಕೆಟ್ ಕಲೆಕ್ಟರ್​ಗೆ ಅಲ್ಲಿಂದ ಕದಲಲೂ ಸಾಧ್ಯವಾಗದೆ ಹಿಂದೆ ಹೋಗಿ ರೈಲ್ವೇ ಹಳಿ ಮೇಲೆ ಬಿದ್ದಿದ್ದಾರೆ. ಅವನು ಅಲ್ಲಿಂದ ಮೂರ್ಛೆ ಹೋಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅವರನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ವೈದ್ಯರ ತೀವ್ರ ನಿಗಾದಲ್ಲಿದ್ದಾರೆ.


ಇದನ್ನೂ ಓದಿ: ಯುಎಸ್​ನ ಇತಿಹಾಸದಲ್ಲಿಯೇ ಈ ಹುಡುಗ ಅತ್ಯಂತ ಕಿರಿಯ ವಯಸ್ಸಿನ ಮೇಯರ್ ಅಂತೆ!


ಆಸ್ಪತ್ರೆಗೆ ದಾಖಲು


ತಂತಿಯ ಹಿಡಿತಕ್ಕೆ ಸಿಲುಕಿದ ಟಿಸಿ ಪ್ಲಾಟ್‌ಫಾರ್ಮ್‌ಗೆ ತಲೆಕೆಳಗಾಗಿ ಬಿದ್ದಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಆತನೊಂದಿಗೆ ಮಾತನಾಡುತ್ತಿದ್ದ ವ್ಯಕ್ತಿ ಕೂಡಲೇ ಭಯದಿಂದ ಹಿಂದೆ ಸರಿಯುತ್ತಾನೆ. ರೈಲ್ವೇ ಸಿಬ್ಬಂದಿ ಹಾಗೂ ಪ್ರಯಾಣಿಕರು ವ್ಯಕ್ತಿಯನ್ನು ರಕ್ಷಿಸಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Published by:Precilla Olivia Dias
First published: