ಇದು ನೀವೆಂದೂ ನೋಡಿರದ ರಾಹುಲ್‌ ದ್ರಾವಿಡ್..! 'ಇಂದಿರಾನಗರದ ಗೂಂಡಾ' ಎಂದು ಬ್ಯಾಟ್‌ ಹಿಡಿದು ಹೊಡೆದಾಡಿದ ಜಂಟಲ್‌ಮ್ಯಾನ್‌‌..!

ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿರುವ ದ್ರಾವಿಡ್ ಕೋಪೋದ್ರಿಕ್ತರಾಗಿದ್ದಾರೆ. ಕೋಪದಿಂದ ಕೆರಳಿದ ಮಾಜಿ ಕ್ರಿಕೆಟಿಗ ತನ್ನ ಬ್ಯಾಟ್‌ನಲ್ಲಿ ವಸ್ತುಗಳನ್ನು ಹೊಡೆದುಹಾಕಿದ್ದು, ಮಾತಿನಲ್ಲೂ ಅರಚಾಡಿದ್ದಾರೆ. ''ಇಂದಿರಾನಗರದ ಗೂಂಡಾ ನಾನು'' ಎಂದೂ ಡೈಲಾಗ್‌ ಹೊಡೆದಿದ್ದಾರೆ.

ರಾಹುಲ್ ದ್ರಾವಿಡ್ ನಟಿಸಿರುವ ಕ್ರೆಡ್ ಜಾಹೀರಾತು

ರಾಹುಲ್ ದ್ರಾವಿಡ್ ನಟಿಸಿರುವ ಕ್ರೆಡ್ ಜಾಹೀರಾತು

  • Share this:
Trending Desk: ಕ್ರಿಕೆಟ್ ಅನ್ನು ಜಂಟಲ್‌ಮ್ಯಾನ್‌ ಗೇಮ್‌ ಎಂದು ಕರೆಯಲಾಗುತ್ತದೆ ಮತ್ತು ಎನ್‌ಸಿಎ ಮುಖ್ಯಸ್ಥ ಹಾಗೂ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಈ ವಿಚಾರದಲ್ಲಿ ಪೋಸ್ಟರ್‌ ಬಾಯ್‌ ಎಂದರೆ ತಪ್ಪಾಗಲಾರದು. ಭಾರತದ ಗೋಡೆ ಎಂಬ ಖ್ಯಾತಿಯ ದ್ರಾವಿಡ್‌, ಕ್ರೀಸ್‌ನ ಮಧ್ಯದಲ್ಲಿದ್ದಾಗ ಕಷ್ಟಪಟ್ಟು ಶ್ರಮಿಸಿದರು, ಬೌಲರ್‌ಗಳ ಎದುರು ಎದೆಗಾರಿಕೆ ತೋರಿ ಅಸಂಖ್ಯಾತ ಸಮಯಗಳಲ್ಲಿ ಬೌಲರ್‌ಗಳ ಎದುರು ತಮ್ಮ ಛಾಪು ಮೂಡಿಸಿದ್ದಾರೆ.

ಇವರಿಗೆ ಬೌಲ್‌ ಮಾಡುವ ಬೌಲರ್‌ಗಳು ಗೋಡೆಗೆ ಬಾಲ್‌ ಹಾಕಿ ಹಾಕಿ ಸುಸ್ತಾಗುತ್ತಿದ್ದರು. ತಮ್ಮ ಬಳಿ ಬಂದ ಬಾಲ್‌ಗಳನ್ನು ಸಿಕ್ಸರ್‌ಗಳನ್ನು ಎತ್ತದೆಯೂ ಹೇಗೆ ಬ್ಲಾಕ್‌ ಮಾಡುವುದು, ಸ್ಲೆಡ್ಜ್‌ ಮಾಡುವುದು ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದರು. ಅವರ ದೃಢ ನಿಶ್ಚಯಗಳಿಂದಲೇ ಭಾರತ ಅನೇಕ ಸ್ಮರಣೀಯ ವಿಜಯಗಳತ್ತ ಹೆಜ್ಜೆ ಹಾಕಿದೆ. ಆದರೆ, ಇಷ್ಟೆಲ್ಲ ಮಾಡುತ್ತಿದ್ದರೂ ಅವರು ಹೆಚ್ಚು ಭಾವನೆಗಳನ್ನು ವ್ಯಕ್ತಪಡಿಸದೆ ಎಲ್ಲವನ್ನೂ ಮಾಡಿದರು. ಮಾತು ಕಡಿಮೆಯಾದರೂ ತನ್ನ ಬ್ಯಾಟ್‌ ಮೂಲಕವೇ ಎಲ್ಲವನ್ನೂ ಮಾತನಾಡುವಂತೆ ಮಾಡಿದರು.

ಇಂತಹ ದ್ರಾವಿಡ್‌ ಈಗ ಕೋಪಗೊಂಡಿದ್ದಾರೆ. ತುಂಬಾ, ತುಂಬಾ ಕೋಪ. ಆದರೆ, ಇದು ಮೈದಾನದಿಂದ ಹೊರಗೆ ಅಂದರೆ ರಸ್ತೆಯಲ್ಲಿ, ಟ್ರಾಫಿಕ್‌ ಜಾಮ್‌ನಲ್ಲಿ. ನಿಮಗೆ ನಂಬಿಕೆ ಬರಲಿಲ್ಲವಾ.. ಹಾಗಾದರೆ.. ಈ ವಿಡಿಯೋ ನೋಡಿ..

ಆದರೆ, ಇದು ಕೇವಲ ಜಾಹೀರಾತಿಗಾಗಿ ಮಾತ್ರ. ಕ್ರೆಡಿಟ್ ಕಾರ್ಡ್ ಪೇಮೆಂಟ್‌ ಅಪ್ಲಿಕೇಶನ್ “CRED” ಗಾಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ದ್ರಾವಿಡ್ ಅನ್ನು ಹಿಂದೆಂದೂ ನೋಡಿರದ ಅವತಾರದಲ್ಲಿ ತೋರಿಸಲಾಗಿದೆ. ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿರುವ ದ್ರಾವಿಡ್ ಕೋಪೋದ್ರಿಕ್ತರಾಗಿದ್ದಾರೆ. ಕೋಪದಿಂದ ಕೆರಳಿದ ಮಾಜಿ ಕ್ರಿಕೆಟಿಗ ತನ್ನ ಬ್ಯಾಟ್‌ನಲ್ಲಿ ವಸ್ತುಗಳನ್ನು ಹೊಡೆದುಹಾಕಿದ್ದು, ಮಾತಿನಲ್ಲೂ ಅರಚಾಡಿದ್ದಾರೆ. ''ಇಂದಿರಾನಗರದ ಗೂಂಡಾ ನಾನು'' ಎಂದೂ ಡೈಲಾಗ್‌ ಹೊಡೆದಿದ್ದಾರೆ.

ಇನ್ನು, ಈ ಜಾಹೀರಾತಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್‌ ಆಗಿದೆ. ಈ ಜಾಹೀರಾತನ್ನು ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಟ್ವೀಟ್‌ ಮೂಲಕ ಹಂಚಿಕೊಂಡಿದ್ದು, ''ರಾಹುಲ್‌ ಭಾಯ್‌ ಅವರ ಈ ಅವತಾರವನ್ನು ಎಂದಿಗೂ ನೋಡಿಲ್ಲ" ಎಂದು ಕೊಹ್ಲಿ ಜಾಹೀರಾತಿಗೆ ಕ್ಯಾಪ್ಷನ್‌ ನೀಡಿದ್ದಾರೆ.

ದ್ರಾವಿಡ್‌ ಶ್ಲಾಘಿಸಿದ ಮೈಕೆಲ್‌ ವಾನ್‌
ಇನ್ನೊಂದೆಡೆ, ಎನ್‌ಸಿಎ ಮುಖ್ಯಸ್ಥರಾಗಿ ರಾಹುಲ್ ದ್ರಾವಿಡ್ ಅವರು ಯುವಕರಲ್ಲಿ ಸರಿಯಾದ ಮನಸ್ಥಿತಿಯನ್ನು ಸ್ಥಾಪಿಸುತ್ತಿದ್ದಾರೆ ಮತ್ತು ಆ ಯುವಕರು ಭವಿಷ್ಯದಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್‌ ಆಡುವಾಗ ಪ್ರದರ್ಶನ ನೀಡಲು ಸಹಾಯ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್‌ ಕಳೆದ ತಿಂಗಳು ಭಾರತದ ಯಶಸ್ಸಿಗೆ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್‌ ಕಳೆದ ತಿಂಗಳು ಭಾರತದ ಯಶಸ್ಸಿಗೆ ಮನ್ನಣೆ ನೀಡಿದರು.

ಭಾರತವು ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಯುವಕರಲ್ಲಿ ಈ ಯಶಸ್ಸು ಮೂಡಿದೆ ಎಂದು ಮನ್ನಣೆ ನೀಡುತ್ತಿರಬಹುದು. ಆದರೆ, ಭಾರತ - ಎ ತಂಡದ ಆಟಗಾರರು ಅಭಿವೃದ್ಧಿ ಹೊಂದುತ್ತಿರುವವರಲ್ಲಿ ದ್ರಾವಿಡ್‌ ನಿಜವಾಗಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದೂ ವಾನ್‌ ದ್ರಾವಿಡ್‌ರನ್ನು ಶ್ಲಾಘಿಸಿದ್ದಾರೆ.

ಭಾರತ ಎ ತಂಡದೊಂದಿಗೆ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಕೆಲಸ ಮಾಡುವ ಮೂಲಕ ಭಾರತದ ಕ್ರಿಕೆಟ್‌ ಉತ್ಪಾದನಾ ಸಾಲಿನಲ್ಲಿ ದ್ರಾವಿಡ್ ಪ್ರಮುಖ ಪಾತ್ರ ವಹಿಸಿದ್ದಾರೆ. ದ್ರಾವಿಡ್ ಅವರ ಶಿಕ್ಷಣದ ಅಡಿಯಲ್ಲಿ ಭಾರತವು ಅಂಡರ್‌ 19 ವಿಶ್ವಕಪ್ ಅನ್ನು ಗೆದ್ದುಕೊಂಡಿತು. ಅಲ್ಲಿಂದ ಪೃಥ್ವಿ ಶಾ ಮತ್ತು ಶುಭಮನ್‌ ಗಿಲ್‌ರಂತಹ ಆಟಗಾರರು ಮೂಡಿದರು. ಅಂಡರ್‌ 19 ಮಾತ್ರವಲ್ಲ, ಭಾರತದ ಮಾಜಿ ನಾಯಕ ದ್ರಾವಿಡ್‌ ಅಡಿಯಲ್ಲಿ ಮೊಹಮ್ಮದ್ ಸಿರಾಜ್, ಮಯಾಂಕ್ ಅಗರ್ವಾಲ್, ಹನುಮ ವಿಹಾರಿ ಅವರೂ ಸಹ ಅಪಾರ ಅನುಭವವನ್ನು ಗಳಿಸಿದರು ಮತ್ತು ಭಾರತ ತಂಡದ ಪರ ಆಡಲು ಅವಕಾಶ ಸಿಕ್ಕಾಗ ಉತ್ತಮವಾಗೇ ಪ್ರದರ್ಶನ ನೀಡಿದ್ದಾರೆ.
Published by:Soumya KN
First published: