Rahul Dravid : ಬೆಂಗಳೂರು ಟ್ರಾಫಿಕ್​ನಲ್ಲಿ ತಾಳ್ಮೆ ಕಳೆದುಕೊಂಡ ರಾಹುಲ್​ ದ್ರಾವಿಡ್​; ಶಾಂತಮೂರ್ತಿಯ ಉಗ್ರವಾತಾರಕ್ಕೆ ನೆಟ್ಟಿಗರು ತಂಡಾ

ಐಪಿಎಲ್​ ಸ್ಪಾನ್ಸರ್​ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ರಾಹುಲ್​ ದ್ರಾವಿಡ್​​ ಬೆಂಗಳೂರು ಟ್ರಾಫಿಕ್​ನ ವಾಸ್ತವ ಸ್ವರೂಪ ತೆರೆದಿಟ್ಟಿದ್ದಾರೆ ಎಂದಿದ್ದಾರೆ

ರಾಹುಲ್ ದ್ರಾವಿಡ್ ಜಾಹೀರಾತು

ರಾಹುಲ್ ದ್ರಾವಿಡ್ ಜಾಹೀರಾತು

 • Share this:
  ಟೀಂ ಇಂಡಿಯಾ ಕ್ರಿಕೆಟ್​ನಲ್ಲಿ ರಾಹುಲ್​ ದ್ರಾವಿಡ್​ ಅವರಂತಹ ಶಾಂತ ಸ್ವಭಾವದ ವ್ಯಕ್ತಿ ಮತ್ತೊಬ್ಬರಿಲ್ಲ. ಆದರೆ, ಬೆಂಗಳೂರು ಟ್ರಾಫಿಕ್​ ಅವರ ಸೌಮ್ಯ ಸ್ವಭಾವವನ್ನು ಉಗ್ರವಾತಾರವಾಗಿ ಬದಲಾಯಿಸಿದೆ. ಬೆಂಗಳೂರಿನ ಟ್ರಾಫಿಕ್​ ಕಿರಿಕಿರಿಯಲ್ಲಿ ಬೆಸತ್ತ ರಾಹುಲ್​ ದ್ರಾವಿಡ್​ ರಸ್ತೆಯಲ್ಲಿ ತಮ್ಮನ್ನು ಓವರ್​ ಟೆಕ್​ ಮಾಡುವವರ ವಿರುದ್ಧ ಗುಡುಗಿದ್ದು, ತಾವು ಇಂದಿರ ನಗರದ ಗೂಂಡಾ ಎಂದು ಅಬ್ಬರಿಸಿದ್ದಾರೆ. ಕ್ರೆಡಿಟ್​ ಕಾರ್ಡ್​ವೊಂದರ ಜಾಹೀರಾತಿನ ವಿಡಿಯೋ ಇದಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಈ ವಿಡಿಯೋವನ್ನು ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ರಾಹುಲ್​ ದ್ರಾವಿಡ್​ ಅವರ ಮತ್ತೊಂದು ಮುಖ ನೋಡಿರಲಿಲ್ಲ ಎಂದು ಹುಬ್ಬೇರಿಸಿದ್ದಾರೆ.  ಬೆಂಗಳೂರಿನ ಟ್ರಾಫಿಕ್​ನಲ್ಲಿ ಸಿಲುಕಿದ ರಾಹುಲ್​ ದ್ರಾವಿಡ್​, ಪಕ್ಕದ ಕಾರಿನ ಗಾಜಿನ ಮೇಲೆ ಕಾಫಿ ಕಪ್​ ಚೆಲ್ಲಿದ್ದಾರೆ. ತಮ್ಮನ್ನು ಓವರ್​ಟೇಕ್​ ಮಾಡಿದವರ ವಿರುದ್ಧ ಕೂಗಿದ್ದಾರೆ. ಅಲ್ದೇ ಬ್ಯಾಟ್​ ಮೂಲಕ ಪಕ್ಕದ ಕಾರಿನ ಕನ್ನಡಿ ಹೊಡೆದಿದ್ದಾರೆ.

  ಐಪಿಎಲ್​ ಸ್ಪಾನ್ಸರ್​ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ರಾಹುಲ್​ ದ್ರಾವಿಡ್​​ ಬೆಂಗಳೂರು ಟ್ರಾಫಿಕ್​ನ ವಾಸ್ತವ ಸ್ವರೂಪ ತೆರೆದಿಟ್ಟಿದ್ದಾರೆ ಎಂದು ಕೆಲವರು ತಿಳಿಸಿದ್ದಾರೆ. ತಾಳ್ಮೆಗೆ ಹೆಸರಾಗಿರುವ ರಾಹುಲ್​ ದ್ರಾವಿಡ್​ ಈ ರೀತಿ ಸಿಟ್ಟಿಗೇಳುತ್ತಾರೆ ಎಂದರೇ ಸಿಲಿಕಾನ್​ ಸಿಟಿ ಟ್ರಾಫಿಕ್​ ಕಿರಿಕಿರಿ ನೀವೇ ಅರ್ಥಮಾಡಿಕೊಳ್ಳಿ ಎಂದಿದ್ದಾರೆ ಕೆಲವರು.
  Published by:Seema R
  First published: