Viral Video: ಬಬಲ್ ಜೊತೆಗೆ ಈ ರಕೂನ್​ಗಳು ಹೇಗೆ ಆಡಿವೆ ಗೊತ್ತಾ! ಈ ವಿಡಿಯೋ ಒಮ್ಮೆ ನೋಡಿ

ಪ್ರಾಣಿಗಳ ಮುಗ್ಧ ನಡವಳಿಕೆ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಜನರು ನೋಡಿ ಇಷ್ಟ ಸಹ ಪಡುತ್ತಾರೆ. ಆದ್ದರಿಂದಲೇ ಇಂತಹ ವೀಡಿಯೋಗಳು ಕ್ಷಣ ಮಾತ್ರದಲ್ಲಿಯೇ ಜನಪ್ರಿಯವಾಗುತ್ತವೆ ಎಂದರೆ ವೈರಲ್ ಆಗುತ್ತವೆ. ಅದರಲ್ಲೂ ಈ ಚಿಕ್ಕ ಪುಟ್ಟ ಪ್ರಾಣಿಗಳು ಆಟ ಆಡುತ್ತಿರುವುದನ್ನು ನೋಡುವುದು ಇನ್ನೂ ಚೆಂದ ಎಂದು ಹೇಳಬಹುದು.

ರಕೂನ್

ರಕೂನ್

  • Share this:
ಈ ಪ್ರಾಣಿಗಳ (Animal) ತುಂಟಾಟದ ಮತ್ತು ಮುಗ್ದತೆಯ ವೀಡಿಯೋಗಳನ್ನು (Video) ನೋಡುವುದೇ ಒಂದು ಕಣ್ಣಿಗೆ ಹಬ್ಬವಿದ್ದಂತೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇತ್ತೀಚೆಗಂತೂ ಈ ಆನೆಗಳ ವೀಡಿಯೋಗಳು ಮತ್ತು ಸಾಕು ನಾಯಿಗಳ ಮತ್ತು ಬೆಕ್ಕುಗಳ (Cat) ಮುದ್ದಾದ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ಹರಿದಾಡುತ್ತಿವೆ ಎಂದು ಹೇಳಬಹುದು. ಕೆಲವು ವೀಡಿಯೋಗಳಲ್ಲಿ ಈ ಪ್ರಾಣಿಗಳ ಆಟ ನೋಡುತ್ತಿದ್ದರೇ ಹಾಗೆಯೇ ಕಳೆದು ಬಿಡುತ್ತೇವೆ ಮತ್ತು ಪ್ರಾಣಿಗಳ ಮುಗ್ಧ ನಡವಳಿಕೆ ಸಾಮಾಜಿಕ ಮಾಧ್ಯಮದಲ್ಲಿ (Social Media) ತುಂಬಾ ಜನರು ನೋಡಿ ಇಷ್ಟ ಸಹ ಪಡುತ್ತಾರೆ. ಆದ್ದರಿಂದಲೇ ಇಂತಹ ವೀಡಿಯೋಗಳು ಕ್ಷಣ ಮಾತ್ರದಲ್ಲಿಯೇ ಜನಪ್ರಿಯವಾಗುತ್ತವೆ ಎಂದರೆ ವೈರಲ್ ಆಗುತ್ತವೆ. ಅದರಲ್ಲೂ ಈ ಚಿಕ್ಕ ಪುಟ್ಟ ಪ್ರಾಣಿಗಳು ಆಟ ಆಡುತ್ತಿರುವುದನ್ನು ನೋಡುವುದು ಇನ್ನೂ ಚೆಂದ ಎಂದು ಹೇಳಬಹುದು.

ಮತ್ತೊಂದು ಮುದ್ದಾದ ವಿಡಿಯೋ ವೈರಲ್
ನಾವು ಚಿಕ್ಕವರಾಗಿದ್ದಾಗ ಅಡಿದಂತಹ ಮತ್ತು ತುಂಬಾನೇ ಮಜಾ ಕೊಟ್ಟಂತಹ ಒಂದು ಆಟ ಎಂದರೆ ಅದು ಸಾಬೂನಿನಿಂದ ನೊರೆಯನ್ನು ತೆಗೆದು ಅದನ್ನು ಎರಡು ಕೈಗಳಿಗೆ ಉಜ್ಜಿಕೊಂಡು ಕೈಗಳನ್ನು ಒಟ್ಟಿಗೆ ಜೋಡಿಸಿ ಅದರಿಂದ ಗುಳ್ಳೆಗಳನ್ನು ಊದುವುದು ಎಂದು ಹೇಳಬಹುದು. ಈ ಆಟ ಬಹುತೇಕರಿಗೆ ನೆನಪಿರುತ್ತದೆ. ಇವತ್ತಿಗೂ ಮನೆಯಲ್ಲಿ ಮಕ್ಕಳು ಹೀಗೆ ನೊರೆಯಿಂದ ಗುಳ್ಳೆಗಳನ್ನು ಊದಿ ಅವುಗಳನ್ನು ಹಿಡಿಯಲು ಮೇಲೆ ಮೇಲೆ ಎಗರುತ್ತಿರುವುದನ್ನು ನಾವು ನೋಡುತ್ತೇವೆ. ಈ ಗುಳ್ಳೆಗಳು ಗಾಳಿಯಲ್ಲಿ ತೇಲಾಡುವುದನ್ನು ನೋಡುವುದೇ ಒಂದು ಮಜಾ ಅವರಿಗೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇನ್ನೂ ಅವುಗಳನ್ನು ಹಾರಿ ಹಾರಿ ಹಿಡಿಯುವುದು ಮತ್ತು ಆ ಗುಳ್ಳೆಗಳನ್ನು ಒಡೆಯುವುದು ಇನ್ನೂ ಮಜಾ ನೀಡುತ್ತದೆ ಎಂದು ಹೇಳಬಹುದು.

ಇದನ್ನೂ ಓದಿ: Sarus Crane: ಎರಡು ಮೊಟ್ಟೆಯ ಕಥೆ! ಈ ಹಳ್ಳಿಯ ಜನ ಕೊಕ್ಕರೆಗಳಿಗೆ ಹೇಗೆ ಸಹಾಯ ಮಾಡಿದ್ದಾರೆ ಅಂತ ಒಮ್ಮೆ ನೀವೇ ನೋಡಿ

ಈಗೇಕೆ ಈ ಆಟದ ಬಗ್ಗೆ ಹೇಳುತ್ತಿದ್ದೇವೆ ಅಂತ ನಿಮಗೆ ಆಶ್ಚರ್ಯವಾಗಬಹುದಲ್ಲವೇ? ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಲಾದ ಸಣ್ಣ ಕ್ಲಿಪ್ ನೋಡಿ ನಿಮಗೆ ಅರ್ಥವಾಗುತ್ತದೆ. ಇದರಲ್ಲಿ ಎರಡು ರಕೂನ್ ಗಳು ನಾಯಿಯೊಂದಿಗೆ ಸಾಬೂನು ಗುಳ್ಳೆಗಳೊಂದಿಗೆ ಆಡುವುದನ್ನು ನೋಡಬಹುದು.

ಬಬಲ್ ಗಳೊಂದಿಗೆ ಆಟವಾಡುತ್ತಿರುವ ರಕೂನ್ ಗಳು
ಈ ವೀಡಿಯೋವನ್ನು ಬುಟೆಂಗ್ ಬಿಡೆನ್ ಎಂಬ ಖಾತೆಯ ಪುಟದಿಂದ ಮಂಗಳವಾರ ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು "ರಕೂನ್ ಗಳು ಬಬಲ್ ಗಳೊಂದಿಗೆ ಆಟ ಆಡುತ್ತಿವೆ" ಎಂಬ ಶೀರ್ಷಿಕೆಯನ್ನು ಆ ವೀಡಿಯೋಗೆ ಬರೆದಿರುವುದನ್ನು ನಾವು ನೋಡಬಹುದು. ಈ ವೀಡಿಯೋ ಕೆಲವೇ ಗಂಟೆಗಳಲ್ಲಿ ಟ್ವಿಟ್ಟರ್ ನಲ್ಲಿ ಒಂದು ಮಿಲಿಯನ್ ವೀಕ್ಷಣೆ ಮತ್ತು 61,000 ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ ಮತ್ತು 9,000ಕ್ಕೂ ಹೆಚ್ಚು ಬಳಕೆದಾರರು ಈ ಪೋಸ್ಟ್ ಅನ್ನು ಮರು ಟ್ವೀಟ್ ಸಹ ಮಾಡಿದ್ದಾರೆ.

ಕ್ಯೂಟ್ ವಿಡಿಯೋಗೆ ಕಾಮೆಂಟ್ ಗಳು ಹೇಗಿತ್ತು ನೋಡಿ
ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೋ ನೋಡಿ ಆಶ್ಚರ್ಯಚಕಿತರಾಗಿದ್ದಾರೆ ಮತ್ತು ಕಾಮೆಂಟ್ ಗಳ ಸುರಿಮಳೆಯನ್ನೇ ಹರಿಸಿದ್ದಾರೆ. "ಇದು ತುಂಬಾ ಸುಂದರವಾಗಿದೆ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ರಕೂನ್ ಮತ್ತು ನಾಯಿ ಒಟ್ಟಿಗೆ ಸೇರಿಕೊಂಡು ಈ ಸಾಬೂನಿನ ನೊರೆಯಿಂದ ಎದ್ದಿರುವಂತಹ ಗುಳ್ಳೆಗಳನ್ನು ಹಿಡಿಯಲು ಪ್ರಯತ್ನಿಸುತ್ತಿವೆ” ಎಂದು ಕಾಮೆಂಟ್ ಮಾಡಿದ್ದಾರೆ. "ಇದು ತುಂಬಾ ಮುದ್ದಾಗಿದೆ" ಎಂದು ಮೂರನೇ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.ಈ ವರ್ಷದ ಮೇ ತಿಂಗಳಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ಪ್ರಾಣಿ ಆಶ್ರಯ ತಾಣದಿಂದ ಮತ್ತೊಂದು ವೈರಲ್ ವೀಡಿಯೋದಲ್ಲಿ ರಕೂನ್ ಮೇಲ್ಛಾವಣಿಯ ಮೂಲಕ ಒಳ ಹೋಗಲು ಪ್ರಯತ್ನಿಸಿದ್ದಾಗ ಅದರ ತಲೆ ಸಿಕ್ಕಿಹಾಕಿಕೊಂಡಿರುವುದನ್ನು ತೋರಿಸಿತ್ತು.

ಇದನ್ನೂ ಓದಿ:  Viral Video: ನೀರಿನಲ್ಲಿ ಮರಿಗಳೊಂದಿಗೆ ಹೆಣ್ಣು ಹುಲಿ ತುಂಟಾಟ! ಅಮ್ಮ-ಮಕ್ಕಳ ಮುದ್ದಾದ ವಿಡಿಯೋ ನೀವೂ ನೋಡಿ

ವನ್ಯಜೀವಿ ತುರ್ತು ಸೇವೆಗಳು ಪ್ರಾಣಿಯ ಸ್ಥಿತಿಯ ಬಗ್ಗೆ ಕರೆಯೊಂದನ್ನು ಸ್ವೀಕರಿಸಿವೆ ಎಂದು ಸಾಂತಾ ಕ್ರೂಜ್ ಕೌಂಟಿ ಅನಿಮಲ್ ಶೆಲ್ಟರ್ ಫೇಸ್‌ಬುಕ್ ನಲ್ಲಿ ಮಾಹಿತಿ ನೀಡಿದೆ. ಅವರು ಒಂದು ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ, ಅದರಲ್ಲಿ ರಕೂನ್ ನ ದೇಹದ ಅರ್ಧದಷ್ಟು ಭಾಗವು ಸಾಂತಾ ಕ್ರೂಜ್ ಪರ್ವತಗಳಲ್ಲಿರುವ ಮನೆಯ ಮೇಲ್ಛಾವಣಿಯಿಂದ ಹೊರಗೆ ಬಂದಿರುವುದನ್ನು ತೋರಿಸುತ್ತದೆ. ರಕೂನ್ ಅಮೆರಿಕದಲ್ಲಿ ಕಂಡುಬರುವ ಒಂದು ಮಾಂಸಾಹಾರಿ ಹಾಗೂ ನಿಶಾಚರಿ ಜೀವಿಯಾಗಿದೆ.
Published by:Ashwini Prabhu
First published: